ಪ್ರಧಾನ ಮಂತ್ರಿಯವರ ಕಛೇರಿ
ಪೋಲೆಂಡ್ ನ ವಾರ್ಸಾದಲ್ಲಿರುವ ನವನಗರ ಸ್ಮಾರಕದ ಜಾಮ್ ಸಾಹೇಬ್ ಗೆ ಗೌರವ ನಮನ ಸಲ್ಲಿಸಿದ ಪ್ರಧಾನ ಮಂತ್ರಿ
Posted On:
21 AUG 2024 10:27PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪೋಲೆಂಡ್ ನ ವಾರ್ಸಾದಲ್ಲಿರುವ ನವನಗರ ಸ್ಮಾರಕದ ಜಾಮ್ ಸಾಹೇಬ್ ಅವರಿಗೆ ಗೌರವ ನಮನ ಸಲ್ಲಿಸಿದರು. ಜಾಮ್ ಸಾಹೇಬ್ ದಿಗ್ವಿಜಯ್ ಸಿಂಹಜಿ ರಂಜಿತ್ ಸಿಂಹಜಿ ಜಡೇಜಾ ಅವರು ಎರಡನೇ ಮಹಾಯುದ್ಧದಿಂದಾಗಿ ನಿರಾಶ್ರಿತರಾದ ಪೋಲಿಷ್ ಮಕ್ಕಳಿಗೆ ಆಶ್ರಯ ಮತ್ತು ಆರೈಕೆಯನ್ನು ಒದಗಿಸಿ ಮಾಡಿರುವ ಮಾನವೀಯ ಕೊಡುಗೆಯನ್ನು ಪೋಲೆಂಡ್ ನ ವಾರ್ಸಾದಲ್ಲಿರುವ “ನವನಗರ ಸ್ಮಾರಕದ ಜಾಮ್ ಸಾಹೇಬ್” ಎತ್ತಿ ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಪೋಲೆಂಡ್ ನ ವಾರ್ಸಾದಲ್ಲಿರುವ ನವನಗರ ಸ್ಮಾರಕದ ಜಾಮ್ ಸಾಹೇಬ್ ಗೆ ಪುಷ್ಪಾರ್ಚನೆ ಮಾಡುವ ದೃಶ್ಯಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ನೀಡಿದ್ದಾರೆ;
"ಮಾನವೀಯತೆ ಮತ್ತು ಸಹಾನುಭೂತಿಗಳು ನ್ಯಾಯಯುತ ಮತ್ತು ಶಾಂತಿಯುತ ಪ್ರಪಂಚದ ಪ್ರಮುಖ ಅಡಿಪಾಯಗಳಾಗಿವೆ. ಜಾಮ್ ಸಾಹೇಬ್ ದಿಗ್ವಿಜಯ್ಸಿಂಹಜಿ ರಂಜಿತ್ಸಿನ್ಹಜಿ ಜಡೇಜಾ ಅವರ ಮಾನವೀಯ ಕೊಡುಗೆಯನ್ನು ವಾರ್ಸಾದಲ್ಲಿನ ನವನಗರ ಸ್ಮಾರಕದ ಜಾಮ್ ಸಾಹೇಬ್ ಎತ್ತಿ ತೋರಿಸುತ್ತದೆ. ಅವರು ಎರಡನೇ ಮಹಾಯುದ್ಧದ ಕಾರಣ ನಿರಾಶ್ರಿತರಾದ ಪೋಲಿಷ್ ಮಕ್ಕಳಿಗೆ ಆಶ್ರಯ ನೀಡಿ ಮತ್ತು ಆರೈಕೆಯನ್ನು ಖಾತ್ರಿಪಡಿಸಿದರು. ಜಾಮ್ ಸಾಹೇಬ್ ಅವರನ್ನು ಪೋಲೆಂಡ್ ನಲ್ಲಿ ಡೋಬ್ರಿ ಮಹಾರಾಜ ಎಂದು ಪ್ರೀತಿಯಿಂದ ನೆನಪಿಸಿಕೊಳ್ಳಲಾಗುತ್ತದೆ.
ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದೆ. ಕೆಲವು ದೃಶ್ಯನೋಟಗಳು ಇಲ್ಲಿವೆ. ”
*****
(Release ID: 2047625)
Visitor Counter : 35
Read this release in:
English
,
Urdu
,
Marathi
,
Hindi
,
Hindi_MP
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam