ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಪಿಎಂಇಜಿಪಿ ಘಟಕಗಳ ಭೌತಿಕ ಪರಿಶೀಲನೆಗಾಗಿ ಕೆವಿಐಸಿ ಮತ್ತು ಅಂಚೆ ಇಲಾಖೆ ನಡುವೆ ತಿಳುವಳಿಕಾ ಒಡಂಬಡಿಕೆ


ಹೊಸದಿಲ್ಲಿಯ ರಾಜ್ ಘಾಟ್ ನ ಕೆವಿಐಸಿ ಕಚೇರಿಯಲ್ಲಿ ಎರಡೂ ಇಲಾಖೆಗಳ ಅಧಿಕಾರಿಗಳು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು

ಪ್ರಧಾನ ಮಂತ್ರಿಯವರ ದೂರದೃಷ್ಟಿಯ ಚಿಂತನೆಯಂತೆ, ಕೆವಿಐಸಿ 'ಸರ್ಕಾರದಿಂದ ಸರ್ಕಾರಕ್ಕೆ' ಎಂಬ ಕೆಲಸದ ಸಂಸ್ಕೃತಿಯನ್ನು ಉತ್ತೇಜಿಸುತ್ತಿದೆ ಎಂದು ಕೆವಿಐಸಿ ಅಧ್ಯಕ್ಷ ಶ್ರೀ ಮನೋಜ್ ಕುಮಾರ್ ಹೇಳಿದರು

Posted On: 21 AUG 2024 4:12PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಲು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ (ಎಂಎಸ್ ಎಂಇ) ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಮಂಗಳವಾರ ಹೊಸದಿಲ್ಲಿಯ ರಾಜ್ ಘಾಟ್ ಕೆವಿಐಸಿಯಲ್ಲಿ ಸಂವಹನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಇಲಾಖೆಯೊಂದಿಗೆ ಮಹತ್ವದ ತಿಳಿವಳಿಕೆ ಒಡಂಬಡಿಕೆಗೆ  ಸಹಿ ಹಾಕಿತು. ಇದರ ಅಡಿಯಲ್ಲಿ, ದೇಶಾದ್ಯಂತ ಕೆಲಸ ಮಾಡುವ ಅಂಚೆ ಇಲಾಖೆಯ ನೌಕರರು ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದ (ಪಿಎಂಇಜಿಪಿ) ಅಡಿಯಲ್ಲಿ ದೇಶಾದ್ಯಂತ ಸ್ಥಾಪಿಸಲಾಗುತ್ತಿರುವ ಹೊಸ ಘಟಕಗಳ ಭೌತಿಕ ಪರಿಶೀಲನೆ ನಡೆಸಲಿದ್ದಾರೆ. ಕೆವಿಐಸಿಯು ಅಂಚೆ ಇಲಾಖೆ ನೌಕರರಿಗೆ ಭೌತಿಕ ಪರಿಶೀಲನೆಗಾಗಿ ತರಬೇತಿ ನೀಡುತ್ತದೆ.

DSC_0756.JPG

ಕೆವಿಐಸಿ ಅಧ್ಯಕ್ಷ ಶ್ರೀ ಮನೋಜ್ ಕುಮಾರ್, ಎಂಎಸ್ಎಂಇ ಜಂಟಿ ಕಾರ್ಯದರ್ಶಿ ಶ್ರೀ ವಿಪುಲ್ ಗೋಯಲ್, ಕೆವಿಐಸಿ ಸಿಇಒ ಶ್ರೀ ವಾತ್ಸಲ್ಯ ಸಕ್ಸೇನಾ ಮತ್ತು ಅಂಚೆ ಇಲಾಖೆಯ ಜನರಲ್ ಮ್ಯಾನೇಜರ್ ಶ್ರೀಮತಿ ಮನೀಷಾ ಬನ್ಸಾಲ್ ಬಾದಲ್ ಅವರ ಉಪಸ್ಥಿತಿಯಲ್ಲಿ, ಅಂಚೆ ಇಲಾಖೆಯ ಪರವಾಗಿ ಉಪ ಪ್ರಧಾನ ವ್ಯವಸ್ಥಾಪಕ ಡಾ.ಅಮನ್ಪ್ರೀತ್ ಸಿಂಗ್ ಮತ್ತು ಕೆವಿಐಸಿ ಪರವಾಗಿ ಪಿಎಂಇಜಿಪಿಯ ಉಪ ಸಿಇಒ ಶ್ರೀ ರಾಜನ್ ಬಾಬು ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಈ ಮೂಲಕ, ಕೆವಿಐಸಿ ದೇಶಾದ್ಯಂತ ಹರಡಿರುವ 1,65,000 ಅಂಚೆ ಕಚೇರಿಗಳ ಸೇವೆಗಳ ಪ್ರಯೋಜನವನ್ನು ಪಡೆಯುತ್ತದೆ, ಅದರಲ್ಲಿ 139,067 ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

DSC_0740.JPG

ಸಂದರ್ಭದಲ್ಲಿ ಮಾತನಾಡಿದ ಕೆವಿಐಸಿ ಅಧ್ಯಕ್ಷ ಶ್ರೀ ಮನೋಜ್ ಕುಮಾರ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ಚಿಂತನೆಯ ಪ್ರಕಾರ, ಎರಡೂ ಸರ್ಕಾರಿ ಇಲಾಖೆಗಳ ನಡುವೆ ಸಹಕಾರ ಕಾರ್ಯ ಸಂಸ್ಕೃತಿಯನ್ನು ಉತ್ತೇಜಿಸಲು ಕೆವಿಐಸಿ ಅಂಚೆ ಇಲಾಖೆಯೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ, ಕೆವಿಐಸಿ ದೇಶಾದ್ಯಂತ ಹರಡಿರುವ ಅಂಚೆ ಇಲಾಖೆಯ 150 ವರ್ಷಗಳಿಗಿಂತಲೂ ಹಳೆಯ ಸಂವಹನ ಜಾಲದ ಪ್ರಯೋಜನವನ್ನು ಪಡೆಯುತ್ತದೆ. ಇದರ ಮೂಲಕ, ಪಿಎಂಇಜಿಪಿ ಘಟಕಗಳ ಭೌತಿಕ ಪರಿಶೀಲನೆಯ ಜೊತೆಗೆ, ಮಾರ್ಜಿನ್ ಮನಿ ಸಬ್ಸಿಡಿಯನ್ನು ಸಹ ತ್ವರಿತವಾಗಿ ಇತ್ಯರ್ಥಪಡಿಸಲಾಗುತ್ತದೆ. ಪಿಎಂಇಜಿಪಿ ದೇಶಾದ್ಯಂತ ಉದ್ಯಮಶೀಲತೆಯನ್ನು ಉತ್ತೇಜಿಸಿದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದರು.  ಯೋಜನೆಯ ಪ್ರಾರಂಭದಿಂದಲೂ, ಪಿಎಂಇಜಿಪಿ 9.69 ಲಕ್ಷಕ್ಕೂ ಹೆಚ್ಚು ಹೊಸ ಯೋಜನೆಗಳ ಸ್ಥಾಪನೆಗೆ ಬೆಂಬಲ ನೀಡಿದೆ ಮತ್ತು 84.64 ಲಕ್ಷಕ್ಕೂ ಹೆಚ್ಚು ಉದ್ಯಮಿಗಳಿಗೆ ಉದ್ಯೋಗವನ್ನು ಸೃಷ್ಟಿಸಿದೆ. ಇಲ್ಲಿಯವರೆಗೆ, 69021.29 ಕೋಟಿ ರೂ.ಗಳ ಸಾಲಕ್ಕೆ ಸಂಬಂಧಿಸಿ 25563.44 ಕೋಟಿ ರೂ.ಗಳ ಮಾರ್ಜಿನ್ ಮನಿ ಸಬ್ಸಿಡಿಯನ್ನು ಯೋಜನೆಯ ಮೂಲಕ ವಿತರಿಸಲಾಗಿದೆ. ಕಳೆದ 2023-24ರ ಹಣಕಾಸು ವರ್ಷದಲ್ಲಿಯೇ ಪಿಎಂಇಜಿಪಿ 9.80 ಲಕ್ಷ ರೂ.ಗಳಿಗೂ ಅಧಿಕ  ಉದ್ಯಮಿಗಳಿಗೆ ಉದ್ಯೋಗ ಸೃಷ್ಟಿ ಮಾಡಿದೆ ಮತ್ತು  3093 ಕೋಟಿ ರೂ.ಗಳಿಗೂ ಅಧಿಕ ಮಾರ್ಜಿನ್ ಮನಿ ಸಹಾಯಧನವನ್ನು (ಸಬ್ಸಿಡಿ) ವಿತರಿಸಿದೆ.

DSC_0770.JPG

ಕಳೆದ 10 ವರ್ಷಗಳಲ್ಲಿ, ಪೂಜ್ಯ ಬಾಪೂ ಅವರ ಪರಂಪರೆಯಾದ ಖಾದಿ ಅಭಿವೃದ್ಧಿ ಹೊಂದಿದ ಭಾರತದ ಖಾತರಿಯಾಗಿದೆ ಎಂದು ಕೆವಿಐಸಿ ಅಧ್ಯಕ್ಷರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಎಂಎಸ್ಎಂಇ ಸಚಿವಾಲಯದ ಮಾರ್ಗದರ್ಶನದಲ್ಲಿ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಖಾದಿ ಮತ್ತು ಗ್ರಾಮೋದ್ಯೋಗಗಳ ವಹಿವಾಟು 1 ಲಕ್ಷ 55 ಸಾವಿರ ಕೋಟಿ ದಾಟಿದೆ. ಪ್ರಧಾನ ಮಂತ್ರಿಯವರ ಬ್ರಾಂಡ್ ಶಕ್ತಿಯು ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟದಲ್ಲಿ ಐದು ಪಟ್ಟು ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಕಳೆದ 10 ವರ್ಷಗಳಲ್ಲಿ ಉತ್ಪಾದನೆಯಲ್ಲಿ ನಾಲ್ಕು ಪಟ್ಟು ಹೆಚ್ಚಳಕ್ಕೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ವಲಯದಲ್ಲಿ 10.17 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದವರು ವಿವರಿಸಿದರು. ಈ ಸಂದರ್ಭದಲ್ಲಿ ಅಂಚೆ ಇಲಾಖೆ ಮತ್ತು ಕೆವಿಐಸಿಯ ಅಧಿಕಾರಿಗಳು ಹಾಗು  ನೌಕರರು ಉಪಸ್ಥಿತರಿದ್ದರು.

DSC_0792.JPG

 

*****


(Release ID: 2047586) Visitor Counter : 66