ಗೃಹ ವ್ಯವಹಾರಗಳ ಸಚಿವಾಲಯ

ಶ್ರೀ ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು‌ ನೆರವಾದ ಎಲ್ಲಾ ಭದ್ರತಾ ಸಿಬ್ಬಂದಿ, ಶ್ರೀ ಅಮರನಾಥ ಜೀ ದೇಗುಲ ಮಂಡಳಿ, ಜಮ್ಮು- ಕಾಶ್ಮೀರ ಆಡಳಿತ ಮತ್ತು ಸ್ವಯಂಸೇವಾ ಸಂಸ್ಥೆಗಳನ್ನು ಅಭಿನಂದಿಸಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ


ಯಾತ್ರಾರ್ಥಿಗಳಿಗೆ ಯಾತ್ರೆಯನ್ನು ಸುರಕ್ಷಿತವಾಗಿ ಮತ್ತು ಸುಗಮವಾಗಿಸಲು ಎಲ್ಲರೂ ಅನನ್ಯ ಕೊಡುಗೆ ನೀಡಿದ್ದಾರೆ - ಕೇಂದ್ರ ಗೃಹ ಸಚಿವರು

ಈ ವರ್ಷದ 52 ದಿನಗಳ ಸುದೀರ್ಘ ಪವಿತ್ರ ಯಾತ್ರೆಯಲ್ಲಿ, 5.12 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಪವಿತ್ರ ಗುಹೆಗೆ ಭೇಟಿ ನೀಡಿರುವುದು ದಾಖಲೆಯಾಗಿದೆ, ಇದು ಕಳೆದ 12 ವರ್ಷಗಳಲ್ಲೇ ಅತ್ಯಧಿಕವಾಗಿದೆ

Posted On: 21 AUG 2024 8:16PM by PIB Bengaluru

ಶ್ರೀ ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಶ್ರಮಿಸಿದ ಎಲ್ಲಾ ಭದ್ರತಾ ಸಿಬ್ಬಂದಿ, ಶ್ರೀ ಅಮರನಾಥ ಜೀ ದೇಗುಲ ಮಂಡಳಿ, ಜಮ್ಮು-ಕಾಶ್ಮೀರ ಆಡಳಿತ ಮತ್ತು ಸ್ವಯಂಸೇವಾ ಸಂಸ್ಥೆಗಳನ್ನು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಅಭಿನಂದಿಸಿದ್ದಾರೆ.

"ಎಕ್ಸ್" ಖಾತೆಯಲ್ಲಿ ಸಂದೇಶ ನೀಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, "ಶ್ರೀ ಅಮರನಾಥ ಯಾತ್ರೆ ಯಶಸ್ವಿಯಾಗಿ ಪೂರ್ಣಗೊಂಡಿದೆ" ಎಂದು ಹೇಳಿದ್ದಾರೆ.  "ಈ ವರ್ಷದ 52 ದಿನಗಳ ಪವಿತ್ರ ಯಾತ್ರೆಯಲ್ಲಿ, 5.12 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಪವಿತ್ರ ಗುಹೆಗೆ ಭೇಟಿ ನೀಡಿರುವುದು ದಾಖಲೆಯಾಗಿದೆ, ಕಳೆದ 12 ವರ್ಷಗಳಲ್ಲಿ ಇದು ಅತಿ ಹೆಚ್ಚಾಗಿದೆ" ಎಂದು ಅವರು ಹೇಳಿದರು.  ಈ ಯಾತ್ರೆಯನ್ನು ಯಶಸ್ವಿಗೊಳಿಸಿದ ಎಲ್ಲಾ ಭದ್ರತಾ ಸಿಬ್ಬಂದಿ, ಶ್ರೀ ಅಮರನಾಥ ಜೀ ದೇಗುಲ ಮಂಡಳಿ, ಜಮ್ಮು-ಕಾಶ್ಮೀರ ಆಡಳಿತ ಮತ್ತು ಸ್ವಯಂಸೇವಾ ಸಂಸ್ಥೆಗಳನ್ನು ಶ್ರೀ ಅಮಿತ್ ಶಾ ಅವರು ಅಭಿನಂದಿಸಿದ್ದಾರೆ. 

"ಯಾತ್ರಾರ್ಥಿಗಳಿಗೆ ಯಾತ್ರೆ ಸುರಕ್ಷಿತ ಮತ್ತು ಸುಗಮವಾಗಿಸುವಲ್ಲಿ ಎಲ್ಲರೂ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಶ್ರೀ ಬಾಬಾ ಅವರ ಆಶೀರ್ವಾದ ಎಲ್ಲರ‌ ಮೇಲೆ ಇರಲಿ.  ಜೈ ಬಾಬಾ ಬರ್ಫಾನಿ! " ಎಂದು ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

 

 

*****



(Release ID: 2047449) Visitor Counter : 17