ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಇ- ವಾಣಿಜ್ಯ ಬೆಳವಣಿಗೆ ನಾಗರಿಕ ಕೇಂದ್ರಿತವಾಗಬೇಕು: ಕೇಂದ್ರ ಸಚಿವರಾದ ಶ್ರೀ ಪಿಯೂಶ್ ಗೋಯಲ್ 


ದೇಶದ 100 ದಶಲಕ್ಷ ಸಣ್ಣ ವ್ಯಾಪಾರಿಗಳಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು – ಶ್ರೀ ಗೋಯಲ್ 

ಭಾರತದ ಅಭಿವೃದ್ಧಿಶೀಲ ಆರ್ಥಿಕತೆಯನ್ನು ರಕ್ಷಿಸುವುದು ನಮ್ಮ  ಪ್ರಾಮುಖ್ಯತೆ ಮತ್ತು ಇನ್ನೂ ದೃಢೀಕರಣದ ಅಗತ್ಯವಿರುವವರಿಗೆ ಬೆಂಬಲ ನೀಡುತ್ತೇವೆ ; ಶ್ರೀ ಗೋಯಲ್

ಭಾರತದಲ್ಲಿ ಇ-ವಾಣಿಜ್ಯ ಬೆಳವಣಿಗೆಯಲ್ಲಿ ಸಮತೋಲನದ ವಿಧಾನ ಅಗತ್ಯ – ಶ್ರೀ ಗೋಯಲ್ 

Posted On: 21 AUG 2024 1:29PM by PIB Bengaluru

ಇ- ವಾಣಿಜ್ಯ ಬೆಳವಣಿಗೆ ನಾಗರಿಕ ಕೇಂದ್ರಿತವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಶ್ ಗೋಯಲ್ ಹೇಳಿದ್ದಾರೆ. ನವದೆಹಲಿಯಲ್ಲಿಂದು ಪಹ್ಲೆ ಇಂಡಿಯಾ ಫೌಂಡೇಶನ್‌ನ 'ಭಾರತದಲ್ಲಿ ಉದ್ಯೋಗ ಮತ್ತು ಗ್ರಾಹಕರ ಕಲ್ಯಾಣದ ಮೇಲೆ ಇ-ಕಾಮರ್ಸ್‌ನ ನಿವ್ವಳ ಪರಿಣಾಮ' ಕುರಿತಾದ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಚಿವರು, ಇ-ಕಾಮರ್ಸ್‌ನ ಬೆಳವಣಿಗೆಯ ಪ್ರಸರಣವನ್ನು ಪ್ರಜಾಪ್ರಭುತ್ವಗೊಳಿಸಬೇಕು. ಇದು ಸಮಾಜದ ದೊಡ್ಡ ವರ್ಗದ ನಡುವೆ ಪ್ರಯೋಜನಗಳನ್ನು ತಂದುಕೊಡಲಿದೆ ಎಂದು ಸಚಿವರು ಹೇಳಿದರು. 

ತಂತ್ರಜ್ಞಾನದ ಅರ್ಥ ಸಬಲೀಕರಣಗೊಳಿಸುವುದು. ನಾವೀನ್ಯತೆ ಅರ್ಥವೆಂದರೆ ಅದು ಗ್ರಾಹಕರ ಅಗತ್ಯಗಳನ್ನು ಪೂರೈಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇವು ಇನ್ನಷ್ಟು ಸಮರ್ಥವಾಗಿರಬೇಕಾಗುತ್ತದೆ. ಆದರೆ ಈ ಬೆಳವಣಿಗೆ ಕ್ರಮಬದ್ಧವಾದ ಶೈಲಿಯಲ್ಲಿರಬೇಕು. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ 100 ದಶಲಕ್ಷ ಚಿಲ್ಲರೆ ವ್ಯಾಪಾರಿಗಳಿಗೆ ನಾವು ಅಡ್ಡಿಪಡಿಸಬಾರದು ಎಂದು ಅವರು ಹೇಳಿದರು. 

ಭಾರತದ ಬೆಳವಣಿಗೆಯಾಗುತ್ತಿರುವ ಆರ್ಥಿಕತೆಯನ್ನು ರಕ್ಷಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಒತ್ತಿ ಹೇಳಿದ ಶ್ರೀ ಗೋಯಲ್, ಇನ್ನೂ ದೃಢವಾದ ಕ್ರಿಯೆಯ ಅಗತ್ಯವಿರುವವರನ್ನು ಬೆಂಬಲಿಸಬೇಕಾಗಿದೆ. “ಇನ್ನೂ ದೊಡ್ಡ ಪ್ರಮಾಣದ ವರ್ಗ ನೆರವು ಪಡೆಯಲು ಅರ್ಹವಾಗಿದೆ. ಇದು ಉದ್ಯೋಗದ ವಿಚಾರಕ್ಕೆ ಬಂದಲ್ಲಿ ಮತ್ತು ಅದು ಭಾರತದ ಭವಿಷ್ಯದ ಅವಕಾಶವೂ ಸಹ ಆಗಲಿದೆ. ತಮ್ಮ ಪ್ರಕಾರ ನಾವೆಲ್ಲರೂ ನಮ್ಮ ಪಾತ್ರವನ್ನು ನಿರ್ವಹಿಸಬೇಕಾಗಿದೆ” ಎಂದು ಹೇಳಿದರು. 

ಬೆಳವಣಿಗೆಯಾಗುತ್ತಿರುವ ಇ -ವಾಣಿಜ್ಯದಿಂದ ಭಾರತದ ಸಾಂಪ್ರದಾಯಿಕ ಚಿಲ್ಲರೆ ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಶ್ರೀ ಗೋಯಲ್, ಇದರಿಂದ ಉದ್ಯೋಗದ ಮೇಲೆ ಸಂಭವನೀಯ ಪರಿಣಾಮ ಬೀರಲಿದೆ. ಮುಂದಿನ ದಶಕದಲ್ಲಿ ಭಾರತದ ಅರ್ಧದಷ್ಟು ಮಾರುಕಟ್ಟೆಯು ಇ-ವಾಣಿಜ್ಯ ಸಂಪರ್ಕ ಜಾಲದ ಭಾಗವಾಗುವ ಸಾಧ್ಯತೆಯಿದೆ ಎಂದು ಸಚಿವರು ಹೇಳಿದರು. ಈ ಬೆಳವಣಿಗೆಯನ್ನು ಅವರು "ಕಳವಳಕಾರಿ ವಿಷಯ" ಎಂದು ವಿವರಿಸಿದರು.

ಇ-ಕಾಮರ್ಸ್‌ನ ವಿಶಾಲವಾದ ಪರಿಣಾಮಗಳನ್ನು ಪ್ರತಿಬಿಂಬಿಸಿದ ಶ್ರೀ ಗೋಯಲ್ ಅದರ ಪ್ರಭಾವದ ನಿರ್ಲಿಪ್ತ ಮತ್ತು ದತ್ತಾಂಶ-ಚಾಲಿತ ವಿಶ್ಲೇಷಣೆ ಅಗತ್ಯವಾಗಿದೆ.  ಪಾಶ್ಚಿಮಾತ್ಯ ದೇಶಗಳೊಂದಿಗೆ ಹೋಲಿಕೆಗಳನ್ನು ಮಾಡಿದ ಸಚಿವರು, ಇ-ವಾಣಿಜ್ಯ ವಲಯದ ಏರಿಕೆಯಿಂದಾಗಿ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ "ಮಾಮ್ ಮತ್ತು ಪಾಪ್" ಮಳಿಗೆಗಳ ಕುಸಿತವನ್ನು ಉಲ್ಲೇಖಿಸಿದರು. ಇ-ಕಾಮರ್ಸ್‌ಗೆ ಸ್ವಿಟ್ಜರ್ಲೆಂಡ್ ಎಚ್ಚರಿಕೆಯ ವಿಧಾನವನ್ನು ಹೊಂದಿದೆ ಎಂದು ಅವರು ಹೇಳಿದರು. 

“ನಾನು ಇ-ವಾಣಿಜ್ಯ ವಲಯಕ್ಕೆ ಶುಭ ಕೋರುತ್ತಿಲ್ಲ. ಬದಲಿಗೆ ಇದು ಇಲ್ಲಿ ಉಳಿಯಬೇಕು”. “ಆದರೆ ನಾವು ಅತ್ಯಂತ ಎಚ್ಚರಿಕೆಯಿಂದ ಆಲೋಚಿಸಬೇಕು ಮತ್ತು ಅದರ ಪಾತ್ರದ ಬಗ್ಗೆ ಎಚ್ಚರವಾಗಿರಬೇಕು. ಪರಭಕ್ಷಕ ದರ ದೇಶಕ್ಕೆ ಒಳ್ಳೆಯದು?” ಎಂದು ಹೇಳಿದರು.  

ಇ-ವಾಣಿಜ್ಯದಿಂದ ಸ್ಥಳೀಯ ವ್ಯಾಪಾರ ಮತ್ತು ಉದ್ಯೋಗದ ಮೇಲೆ ಉಂಟಾಗಿರುವ ಪರಿಣಾಮ ಕಳವಳಕ್ಕೆ ಕಾರಣವಾಗಿದ್ದು, ಇದು ನಿರ್ದಿಷ್ಟವಾಗಿ ಔಷಧ ಮತ್ತು ಮೊಬೈಲ್ ದುರಸ್ತಿ ಅಂಗಡಿಗಳ ಮೇಲೆ ಪರಿಣಾಮ ಬೀರುವಂತಾಗಿದೆ. ವ್ಯಾಪಾರ ವಲಯ ಮತ್ತು ತಜ್ಞರು ಎಚ್ಚರಿಕೆಯಿಂದ ಈ ಕುರಿತು ಅಧ್ಯಯನ ನಡೆಸಬೇಕು. ದೇಶದ ಅಗತ್ಯಗಳ ಸಂದರ್ಭದಲ್ಲಿ ಇ-ವಾಣಿಜ್ಯದ ಪರಿಣಾಮವನ್ನು ವಿವರವಾಗಿ ಮತ್ತು ವೈಜ್ಞಾನಿಕ ರೀತಿಯಲ್ಲಿ ಮೌಲ್ಯಮಾಪನ ಮಾಡಬೇಕು ಎಂದು ಹೇಳಿದರು.  
 

*****



(Release ID: 2047422) Visitor Counter : 18