ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಟೆಸ್ಟಿಂಗ್ ಫೆಸಿಲಿಟಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು
ಉದ್ಯಮಕ್ಕೆ ಪ್ರಮುಖ ಬೆಂಬಲವನ್ನು ಒದಗಿಸಲು ಎಲೆಕ್ಟ್ರಿಕ್ ವಾಹನ ಪರೀಕ್ಷಾ ಸೌಲಭ್ಯ
Posted On:
21 AUG 2024 1:43PM by PIB Bengaluru
ನ್ಯಾಷನಲ್ ಟೆಸ್ಟ್ ಹೌಸ್ (ಎನ್ ಟಿ ಎಚ್ ) ಬೆಂಗಳೂರಿನ ತನ್ನ ಕ್ಯಾಂಪಸ್‌ನಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಪರೀಕ್ಷಾ ಸೌಲಭ್ಯದ ಶಂಕುಸ್ಥಾಪನೆ ಸಮಾರಂಭದ ಬಗ್ಗೆ ಘೋಷಿಸಲು ಹೆಮ್ಮೆಪಡುತ್ತದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, ಆಹಾರ ಮತ್ತು ಸಾರ್ವಜನಿಕ ಪಡಿತರ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಅವರ ಘನಉಪಸ್ಥಿತಿಯಲ್ಲಿ ಸಮಾರಂಭವು ನಡೆಯಲಿದೆ. ಅವರು 22ನೇ ಆಗಸ್ಟ್ 2024 ರಂದು ಬೆಂಗಳೂರಿನಲ್ಲಿರುವ ಎನ್ ಟಿಎಚ್-ಆರ್ ಆರ್ ಎಸ್ ಎಲ್ ಕ್ಯಾಂಪಸ್ ನಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಗ್ರಾಹಕ ವ್ಯವಹಾರಗಳ ಇಲಾಖೆಯ ಅಧೀನದಲ್ಲಿರುವ ನ್ಯಾಷನಲ್ ಟೆಸ್ಟ್ ಹೌಸ್, ವಿವಿಧ ಕ್ಷೇತ್ರಗಳಲ್ಲಿ ಪರೀಕ್ಷೆ ಮತ್ತು ಗುಣಮಟ್ಟದ ಭರವಸೆಯ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಪ್ರಮುಖ ವೈಜ್ಞಾನಿಕ ಸಂಸ್ಥೆಯಾಗಿದೆ. ನಾವು ಪ್ರತಿಷ್ಠಿತ ರಾಷ್ಟ್ರೀಯ ಯೋಜನೆಗಳಾದ ಜಲ ಜೀವನ್ ಮಿಷನ್, ಬುಲೆಟ್ ರೈಲು ಯೋಜನೆ, ಮೆಟ್ರೋ ಯೋಜನೆಗಳು, ರಸಗೊಬ್ಬರ ಪರೀಕ್ಷೆ, ವಿದ್ಯುತ್ ಯೋಜನೆಗಳು ಮತ್ತಿತರ ರಾಷ್ಟ್ರೀಯ ಯೋಜನೆಗಳಿಗೆ ನೋಂದಾಯಿತ (ಎಂಪನೆಲ್ಡ್) ಪರೀಕ್ಷೆ ಮತ್ತು ಗುಣಮಟ್ಟ ಖಾತ್ರಿ ಸಂಸ್ಥೆಯಾಗಿದೆ. ಭಾರತದಲ್ಲಿ ಡ್ರೋಣ್ ಪ್ರಮಾಣೀಕರಣವನ್ನು ಒದಗಿಸುವ ಸರ್ಕಾರಿ ಸಂಸ್ಥೆಯೂ ಆಗಿದೆ. ಎನ್ ಟಿ ಎಚ್ ಕೋಲ್ಕತ್ತಾ, ಮುಂಬೈ, ಚೆನ್ನೈ, ಗಾಜಿಯಾಬಾದ್, ಗುವಾಹಟಿ, ಜೈಪುರ ಮತ್ತು ವಾರಣಾಸಿಗಳಲ್ಲಿ ತನ್ನ ಅತ್ಯಾಧುನಿಕ ಪರೀಕ್ಷಾ ಪ್ರಯೋಗಾಲಯಗಳನ್ನು ಹೊಂದಿದೆ.
ಸದ್ಯ ದಕ್ಷಿಣ ಭಾರತದಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನದಲ್ಲಿ ತೊಡಗಿದೆ ಮತ್ತು ಬೆಳವಣಿಗೆ ಹೊಂದುತ್ತಿರುವ ಕ್ಷೇತ್ರಗಳಲ್ಲಿ ಇವಿ ಬ್ಯಾಟರಿ ಮತ್ತು ಚಾರ್ಜರ್ ಪರೀಕ್ಷೆಯಂತಹ ಪರೀಕ್ಷಾ ಸೌಲಭ್ಯಗಳನ್ನು ಕರ್ನಾಟಕದ ಬೆಂಗಳೂರಿನಲ್ಲಿ ಆರ್‌ಆರ್‌ಎಸ್‌ಎಲ್ ಜಕ್ಕೂರು ಕ್ಯಾಂಪಸ್ ನಲ್ಲಿ ತೆರೆಯಲಾಗುತ್ತಿದೆ. ಈ ಹೊಸ ಇವಿ ಪರೀಕ್ಷಾ ಸೌಲಭ್ಯವು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಶೀಲ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ವರ್ಧಿಸುತ್ತದೆ ಮತ್ತು ಇವಿ ಉದ್ಯಮಕ್ಕೆ ಪ್ರಮುಖ ಬೆಂಬಲವನ್ನು ನೀಡುತ್ತದೆ ಮತ್ತು ಪರಿಸರ ಸುಸ್ಥಿರತೆ ಮತ್ತು ವಾಹನ ತಂತ್ರಜ್ಞಾನದಲ್ಲಿ ನಾವೀನ್ಯತೆಗಳನ್ನು ಹೊಂದುವ ವಿಶಾಲ ಗುರಿಗಳಿಗೆ ಕೊಡುಗೆ ನೀಡುತ್ತದೆ. ಪ್ರಯೋಗಾಲಯವು ವಿದ್ಯುತ್ ಸುರಕ್ಷತೆ, ಇಎಂಸಿ/ಇಎಂಎಫ್, ಎಫ್ ಸಿಸಿ/ಐಎಸ್ ಇಡಿ, ಕ್ರಿಯಾತ್ಮಕ ಸುರಕ್ಷತೆ, ದೀರ್ಘ ಕಾಲ ಬಾಳಿಕೆ (ಲೈಫ್ ಸೈಕಲ್), ಹವಾಮಾನ (ಐಪಿ ಪರೀಕ್ಷೆ, ಯುವಿ, ವಿಕಿರಣ, ತುಕ್ಕು), ಮತ್ತು ಯಾಂತ್ರಿಕ ಮತ್ತು ವಸ್ತು ಪರೀಕ್ಷೆಗಳು (ದಹನಶೀಲತೆ, ಗ್ಲೋ ವೈರ್). ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವಿರುವ ಅತ್ಯಾಧುನಿಕ ತಂತ್ರಜ್ಞಾನದ ಇವಿ ಬ್ಯಾಟರಿ ಪರೀಕ್ಷಾ ಸಾಧನಗಳೊಂದಿಗೆ ಸುಸಜ್ಜಿತವಾಗಿರಲಿದೆ. ಇದು ದಕ್ಷಿಣ ಭಾರತದ ಇವಿ ತಯಾರಕರಿಗೆ ಉತ್ತಮ ವರದಾನವಾಗುತ್ತದೆ ಮತ್ತು ಉದ್ಯಮದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಈ ಅತ್ಯಾಧುನಿಕ ಇವಿ ಪರೀಕ್ಷಾ ಸೌಲಭ್ಯದ ಸ್ಥಾಪನೆಯು ಎಲೆಕ್ಟ್ರಿಕ್ ವಾಹನಗಳಿಗೆ ಭಾರತದ ಮೂಲಸೌಕರ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದ್ದು, ಇದು ಸುಸ್ಥಿರ ಮತ್ತು ಹಸಿರು ಇಂಧನ ಪರಿಹಾರಗಳಿಗೆ ರಾಷ್ಟ್ರದ ಬದ್ಧತೆಗೆ ಅನುಗುಣವಾಗಿರುತ್ತದೆ. ಈ ಸೌಲಭ್ಯವು ಬ್ಯಾಟರಿ ದಕ್ಷತೆ, ಸುರಕ್ಷತಾ ಮಾನದಂಡಗಳು ಮತ್ತು ಕಾರ್ಯಕ್ಷಮತೆಯ ಮೆಟ್ರಿಕ್‌ಗಳು ಸೇರಿದಂತೆ ಇವಿ ಗಳ ವಿವಿಧ ಅಂಶಗಳನ್ನು ಪರೀಕ್ಷಿಸಲು ಸಮಗ್ರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ, ಗ್ರಾಹಕರನ್ನು ತಲುಪುವ ಮೊದಲು ವಾಹನಗಳು ಕಠಿಣ ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತದೆ ಎಂಬುದನ್ನು ಖಾತ್ರಿಪಡಿಸುತ್ತದೆ.
ಈ ಸಂದರ್ಭದಲ್ಲಿ, ಇತರ ಗೌರವಾನ್ವಿತ ಅತಿಥಿಗಳೊಂದಿಗೆ ಗೌರವಾನ್ವಿತ ಸಚಿವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಉಪಕ್ರಮದ ಪ್ರಾಮುಖ್ಯತೆಯನ್ನು ಮತ್ತು ಇದು ಇವಿ ವಲಯ ಮತ್ತು ಪೂರಕ ಪರಿಸರದ ಮೇಲೆ ಬೀರುವ ನಿರೀಕ್ಷಿತ ಧನಾತ್ಮಕ ಪರಿಣಾಮದ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಲಿದ್ದಾರೆ.
ಆರ್ ಆರ್ ಎಸ್ ಎಲ್, ಬೆಂಗಳೂರು, ತೂಕ ಮತ್ತು ಅಳತೆ ಉಪಕರಣದ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯಕ್ಕಾಗಿ ಕಾನೂನು ಮಾಪನಶಾಸ್ತ್ರದ (ತೂಕಗಳು ಮತ್ತು ಅಳತೆಗಳು) ಪ್ರಾದೇಶಿಕ ಮಾನದಂಡಗಳ ಉಲ್ಲೇಖ ಮಾನದಂಡಗಳ ಪ್ರಯೋಗಾಲಯಗಳಲ್ಲಿ ಒಂದಾಗಿದೆ. ವಿಶ್ವಾದ್ಯಂತ ಅಂಗೀಕರಿಸಲ್ಪಟ್ಟ ಒಐಎಂಎಲ್ ಅನುಮೋದಿತ ಪ್ರಮಾಣಪತ್ರವನ್ನು ಇದೇ ವೇಳೆ ಗೌರವಾನ್ವಿತ ಸಚಿವರು ಮುಂಬೈ ಮೂಲದ ಡಿಸ್ಪೆನ್ಸಿಂಗ್ ಯೂನಿಟ್ ಉತ್ಪಾದಿಸುವ ಮೆಸರ್ಸ್ M/S Tatsuno India Pvt ಲಿಮಿಟೆಡ್ ಗೆ ಭೇಟಿ ನೀಡುವರು.
*****
(Release ID: 2047412)
Visitor Counter : 40