ಉಪರಾಷ್ಟ್ರಪತಿಗಳ ಕಾರ್ಯಾಲಯ

19ನೇ ಸಿಐಐ  ಭಾರತ-ಆಫ್ರಿಕಾ ವ್ಯಾಪಾರ ಸಮ್ಮೇಳನದಲ್ಲಿ ಉಪರಾಷ್ಟ್ರಪತಿಗಳ ಭಾಷಣ

Posted On: 21 AUG 2024 12:59PM by PIB Bengaluru

ಆಫ್ರಿಕಾ ಮತ್ತು ಭಾರತದ ಈ ಪ್ರತಿಷ್ಠಿತ ಪ್ರತಿನಿಧಿಯ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದು ನನ್ನ ಸೌಭಾಗ್ಯ. ಎರಡೂ ಸ್ಥಳಗಳು 1.4 ಶತಕೋಟಿ ಜನಸಂಖ್ಯೆಯನ್ನು ಹೊಂದಿವೆ. ಎಲ್ಲಾ ಗಣ್ಯರಿಗೆ ಭಾರತಕ್ಕೆ ಸುಸ್ವಾಗತ.

ನಿಮಗೆಲ್ಲರಿಗೂ ನನ್ನ ಮತ್ತು ಭಾರತದ ಜನರ ಹೃತ್ಪೂರ್ವಕ ಶುಭ ಹಾರೈಕೆಗಳು. 

ಈ ಭಾರತ ಆಫ್ರಿಕಾ ವ್ಯಾಪಾರ ಸಮ್ಮೇಳನದ  'ಒಂದೇ ಭವಿಷ್ಯವನ್ನು ರಚಿಸುವುದು' ಎನ್ನುವ ವಿಷಯವು, ನಮ್ಮ ನಾಗರಿಕತೆಯ ನೈತಿಕತೆಯಲ್ಲಿ ಆಳವಾಗಿ ಹುದುಗಿದೆ ಮತ್ತು 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎನ್ನುವ ಭಾರತದ ಜಿ20 ಅಧ್ಯಕ್ಷೀಯ ಧ್ಯೇಯವಾಕ್ಯದಲ್ಲಿ ಇದೆ.

ಗೌರವಾನ್ವಿತರೇ, ಸಮಕಾಲೀನ ಸಮಸ್ಯೆಯನ್ನು ಚರ್ಚಿಸಲು ಮತ್ತು ಎಲ್ಲರ ಯೋಗಕ್ಷೇಮಕ್ಕಾಗಿ ಸಾಮಾನ್ಯ ಭವಿಷ್ಯವನ್ನು ನಿರ್ಮಿಸಲು ನಮ್ಮ ಪ್ರಯತ್ನಗಳನ್ನು ಸಂಘಟಿಸಲು ನಾವು ಒಟ್ಟಾಗಿ ಸೇರಲು ಈ  ಸಮ್ಮೇಳನವು ಒಂದು ಅವಕಾಶವಾಗಿದೆ.

'ಒಂದೇ ಭವಿಷ್ಯದ ರಚನೆ' ಮಾನವಕುಲದ ಸುಸ್ಥಿರತೆಗೆ ಅತ್ಯಗತ್ಯವಾಗಿದೆ, ಮತ್ತು ಈ ಸವಾಲನ್ನು ಇನ್ನು ವಿಳಂಬ ಮಾಡಲಾಗುವುದಿಲ್ಲ, ಜನರ ಭಾಗವಹಿಸುವಿಕೆ ಅದರ ವಿಶಿಷ್ಟ ಲಕ್ಷಣವಾಗಿದೆ - ಈ ಮಾರ್ಗದ ಬಗ್ಗೆ  ಚರ್ಚೆಗಳು ಆಗುತ್ತವೆ ಎಂದು ನನಗೆ ವಿಶ್ವಾಸವಿದೆ.

ಮಾನವಕುಲಕ್ಕೆ ದೊಡ್ಡ ಬೆದರಿಕೆಯಾದ ಹವಾಮಾನ ಬದಲಾವಣೆ –  ಒಂದು ಟಿಕ್ಕಿಂಗ್ ಬಾಂಬ್ ಆಗಿದೆ, ಸಂಘಟಿತ ಪ್ರಯತ್ನಗಳು ಮತ್ತು ಸಾಮೂಹಿಕ ಒಳಗೊಳ್ಳುವಿಕೆ ಮತ್ತು ಸಂಪನ್ಮೂಲಗಳ ಅತ್ಯುತ್ತಮ ಬಳಕೆಯ ಮೂಲಕ ಎದುರಿಸಲು ಎಲ್ಲಾ ದೇಶಗಳು ಒಟ್ಟಾಗಿ ತಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸುವುದು ಬಹು ಮುಖ್ಯವಾಗಿದೆ, ಏಕೆಂದರೆ ನಾವು  ವಾಸಿಸಲು ಇನ್ನು ಬೇರೆ ಯಾವುದೇ ಗ್ರಹವನ್ನು ಹೊಂದಿಲ್ಲದ ಕಾರಣ ನಾವು ಕಾಯಲು ಸಾಧ್ಯವಿಲ್ಲ.

ಭಾರತ ಆಫ್ರಿಕಾ ಬೆಳವಣಿಗೆಯ ಪಾಲುದಾರಿಕೆಯ 19 ನೇ ಸಿಐಐ  ಭಾರತ-ಆಫ್ರಿಕಾ ವ್ಯಾಪಾರ ಸಮ್ಮೇಳನದ ಮತ್ತೊಂದು ಗಮನವು ಬಲವಾದ ಆರ್ಥಿಕ ಪಾಲುದಾರಿಕೆಗಳನ್ನು ನಿರ್ಮಿಸುವುದು, ಮೂಲಸೌಕರ್ಯ ರೂಪಾಂತರ ಮತ್ತು ಬಾಹ್ಯಾಕಾಶ ವಲಯದ ಸಹಕಾರ ಅಥವಾ ಮೌಲ್ಯವನ್ನು ಬೆಳೆಸುವುದು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಬೆಳವಣಿಗೆ ಮತ್ತು ಭಾಗವಹಿಸುವಿಕೆಯ ಮಾರ್ಗಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಅವಕಾಶಗಳನ್ನು ಖಂಡಿತವಾಗಿಯೂ ನೀಡುತ್ತದೆ.  ಉದಾಹರಣೆಗೆ ಕೃಷಿ, ಗಣಿಗಾರಿಕೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿನ ಸರಪಳಿಗಳು,  ಇನ್ನೂ ಕೆಲವು.

ಗೌರವಾನ್ವಿತರೇ,   ಕಳೆದ ದಶಕದಲ್ಲಿಂದ ತನ್ನ ಅಭೂತಪೂರ್ವ ಬೆಳವಣಿಗೆ, ಬೃಹತ್ ಡಿಜಿಟಲೀಕರಣ ಮತ್ತು ತಾಂತ್ರಿಕ ಪ್ರಗತಿಯೊಂದಿಗೆ ಭಾರತವು ಸಹಕಾರಕ್ಕಾಗಿ ಹಲವಾರು ಮಾರ್ಗಗಳನ್ನು ಒದಗಿಸುತ್ತದೆ ಮತ್ತು ಪರಸ್ಪರ ಲಾಭ ಮತ್ತು ಹಂಚಿಕೆಯ ಯಶಸ್ಸಿಗೆ ಅವಕಾಶಗಳನ್ನು ಒದಗಿಸುತ್ತದೆ.

ಭಾರತ ಮತ್ತು ಆಫ್ರಿಕಾ ನಡುವಿನ ಆಳವಾದ ಬೇರೂರಿರುವ ಸಂಬಂಧಗಳು, ಒಂದೇ ತೆರನಾದ ಇತಿಹಾಸಗಳು, ಒಂದೇ ರೀತಿಯ ಹೋರಾಟಗಳು ಮತ್ತು ನ್ಯಾಯಯುತ ಮತ್ತು ಪ್ರಗತಿಪರ ಭವಿಷ್ಯಕ್ಕಾಗಿ ಇರುವ ಪರಸ್ಪರ ಆಕಾಂಕ್ಷೆಗಳು, ಸಮಾನವಾದ  ಜಾಗತಿಕ ಸನ್ನಿವೇಶಗಳು ಈ ಪಾಲುದಾರಿಕೆಯನ್ನು ಎಂದಿಗಿಂತಲೂ ಸಹಜ ಮತ್ತು ಪ್ರಬಲವಾಗಿಸಿದೆ.

ಭಾರತವು 43 ಆಫ್ರಿಕದ ದೇಶಗಳಲ್ಲಿ 206 ಮೂಲಸೌಕರ್ಯ ಯೋಜನೆಗಳಲ್ಲಿ $12.37 ಶತಕೋಟಿ ಹೂಡಿಕೆ ಮಾಡಿದೆ, ಇದು ಜನರ ಜೀವನದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಭಾರತವು ಸಾಮರ್ಥ್ಯ ನಿರ್ಮಾಣ, ತರಬೇತಿ ಮತ್ತು ಶೈಕ್ಷಣಿಕ ಅವಕಾಶಗಳನ್ನು ಒದಗಿಸುತ್ತದೆ, ಆಫ್ರಿಕನ್ ಯೂನಿಯನ್ ಆದ್ಯತೆಗಳಿಗೆ ಅದರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಆಫ್ರಿಕನ್ ಯೂನಿಯನ್ ಈ ವರ್ಷದ 'ಎಜುಕೇಟ್ ಎನ್ ಆಫ್ರಿಕನ್ ಫಿಟ್ ಫಾರ್ ದಿ 21ಸ್ಟ್ ಸೆಂಚುರಿ'  ವಿಷಯದ ಮೇಲೆ ಕೇಂದ್ರೀಕರಿಸಿದೆ.

ಗೌರವಾನ್ವಿತರೇ, ದ್ವಿಪಕ್ಷೀಯ ವ್ಯಾಪಾರದಲ್ಲಿ $85 ಶತಕೋಟಿ ಮತ್ತು ಹೂಡಿಕೆಯಲ್ಲಿ $75 ಶತಕೋಟಿ ಭಾರತವು ಆಫ್ರಿಕಾದ 4ನೇ ಅತಿದೊಡ್ಡ ವ್ಯಾಪಾರ ವಹಿವಾಟಿನ ಪಾಲುದಾರ ದೇಶವಾಗಿದೆ.  ಎಎಫ್.ಸಿಎಫ್.ಟಿಎ ಮತ್ತು ಭಾರತದ ಡಿಎಫ್.ಟಿಪಿ ಯೋಜನೆಯು ಬಲವಾದ ಆರ್ಥಿಕ ಸಮನ್ವಯ  ಮತ್ತು ಪರಸ್ಪರ ಅಭಿವೃದ್ಧಿಗೆ ಅಗಾಧ ಅವಕಾಶಗಳನ್ನು ನೀಡುತ್ತದೆ.

ಭಾರತವು, ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಅತ್ಯಂತ ಸ್ಪಂದನ ಶೀಲ ಮತ್ತು ಮಾನವಜನಾಂಗದ ಆರನೇ ಒಂದು ಭಾಗಕ್ಕೆ ನೆಲೆಯಾಗಿದೆ, 33 ಆಫ್ರಿಕನ್ ದೇಶಗಳಿಗೆ ಇ-ವೀಸಾ ಸೌಲಭ್ಯಗಳನ್ನು ವಿಸ್ತರಿಸುವುದರೊಂದಿಗೆ ಪರಸ್ಪರ ಜನರ ಸಂಬಂಧಗಳಲ್ಲಿ ಆಫ್ರಿಕಾದೊಂದಿಗೆ ತನ್ನ ಬಾಂಧವ್ಯವನ್ನು ಪೋಷಿಸಿದೆ.

16 ಹೊಸ ರಾಜತಾಂತ್ರಿಕ ನಿಯೋಗಗಳ ಕಾರ್ಯಾರಂಭದೊಂದಿಗೆ ಆಫ್ರಿಕಾದಲ್ಲಿ ರಾಜತಾಂತ್ರಿಕ ಹೆಜ್ಜೆಗುರುತನ್ನು ಹೆಚ್ಚಿಸುವುದು, ಆಫ್ರಿಕಾ ಖಂಡದಲ್ಲಿ ಒಟ್ಟು ಭಾರತೀಯ ಮಿಷನ್ ಗಳ ಸಂಖ್ಯೆಯನ್ನು 46 ಕ್ಕೆ ಕೊಂಡೊಯ್ಯುವುದು ನಮ್ಮ ಬೆಳವಣಿಗೆಯ  ಪಥದ ಸೂಚನೆಯಾಗಿದೆ.

ಗೌರವಾನ್ವಿತರೇ, ಕೋವಿಡ್-19 ಸಮಯದಲ್ಲಿ ಆಫ್ರಿಕಾಕ್ಕೆ ವೈದ್ಯಕೀಯ ಸರಬರಾಜು ಮತ್ತು ಲಸಿಕೆಗಳನ್ನು ಒದಗಿಸಲು ಭಾರತವು ಸಹಾಯ ಮಾಡಿದೆ. ಭಾರತ ಮತ್ತು ಆಫ್ರಿಕಾವು ಭಾರತೀಯ ಮಿಲಿಟರಿ ತರಬೇತಿ ಮತ್ತು ವಿಶ್ವಸಂಸ್ಥೆಗೆ ಮೂರನೇ ಅತಿದೊಡ್ಡ ಶಾಂತಿಪಾಲನಾ ಪಡೆಯ ಕೊಡುಗೆ ಸೇರಿದಂತೆ ಬಲವಾದ ರಕ್ಷಣಾ ಸಂಬಂಧಗಳನ್ನು ಹೊಂದಿದೆ.  ಭಾರತವು ಕಡಲ ಭದ್ರತೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತದೆ ಮತ್ತು ಆಫ್ರಿಕಾದ ಪ್ರದೇಶಗಳಲ್ಲಿ ಈ ನಿಟ್ಟಿನಲ್ಲಿ ಉಪಕ್ರಮಗಳನ್ನು ತೆಗೆದುಕೊಂಡಿದೆ.

ಗೌರವಾನ್ವಿತರೇ, ಭಾರತ ಮತ್ತು ಆಫ್ರಿಕಾ ಸಂಕೀರ್ಣ ಸವಾಲುಗಳನ್ನು ಎದುರಿಸಲು ನಿರ್ಣಾಯಕ ಜಾಗತಿಕ ಪಾಲುದಾರಿಕೆಗಳನ್ನು ರೂಪಿಸುತ್ತವೆ. ಭಾರತದ ಬೆಳವಣಿಗೆ ಮತ್ತು ಅಂತರ್ಗತ ಬಹುಪಕ್ಷೀಯತೆಯು ಜಾಗತಿಕ ದಕ್ಷಿಣಕ್ಕೆ ಪ್ರಗತಿಯನ್ನು ಹೆಚ್ಚಿಸುತ್ತದೆ.

ಗೌರವಾನ್ವಿತರೇ, 2023 ರಲ್ಲಿ ನಮ್ಮ ಅಧ್ಯಕ್ಷತೆಯಲ್ಲಿ ಈಗಾಗಲೇ ಇದ್ದ ಯುರೋಪಿಯನ್ ಯೂನಿಯನ್ ಜೊತೆಗೆ ಆಫ್ರಿಕನ್ ಯೂನಿಯನ್ ಅನ್ನು ಜಿ20 ರ ಖಾಯಂ ಸದಸ್ಯರನ್ನಾಗಿ ಸೇರಿಸಿರುವುದು ಬಹಳ ಹೆಮ್ಮೆಯ ವಿಷಯ ಮತ್ತು ಬಹಳ ಮಹತ್ವದ ಭೌಗೋಳಿಕ ರಾಜಕೀಯ ಬೆಳವಣಿಗೆಯಾಗಿದೆ. ವಿಶ್ವ ಸಂಸ್ಥೆಯಲ್ಲಿ ಆಫ್ರಿಕಾಕ್ಕೆ ಮತ್ತಷ್ಟು ಧ್ವನಿಯನ್ನು ಒದಗಿಸಲು, ನಾವು ಆಫ್ರಿಕನ್ ಯೂನಿಯನ್ನ 'ಎಜುಲ್ವಿನಿ ಒಮ್ಮತ' ಮತ್ತು 'ಸಿರ್ಟೆ ಘೋಷಣೆ' ಗೆ  ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ.

ಗೌರವಾನ್ವಿತರೇ, ಭಾರತದಲ್ಲಿ ಪ್ರಧಾನ ಕಛೇರಿ ಹೊಂದಿರುವ ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ (ಐಎಸ್ಎ), ಜಾಗತಿಕ ಜೈವಿಕ ಇಂಧನ ಒಕ್ಕೂಟ ಮತ್ತು ವಿಪತ್ತು ಚೇತರಿಕೆ ಮೂಲಸೌಕರ್ಯ (ಸಿಡಿಆರ್ಐ) ಒಕ್ಕೂಟದಲ್ಲಿ ಆಫ್ರಿಕದ ದೇಶಗಳ ಭಾಗವಹಿಸುವಿಕೆಯನ್ನು ನಾವು ಬಹಳವಾಗಿ ಗೌರವಿಸುತ್ತೇವೆ.

ಗೌರವಾನ್ವಿತರೇ, ನಮಗೆ ಚೀತಾಗಳನ್ನು ಒದಗಿಸುವ ಮೂಲಕ ನಮ್ಮ ಜೈವಿಕ ವೈವಿಧ್ಯತೆಯನ್ನು ಮರುಸೃಷ್ಟಿಸಲು ಸಹಾಯ ಮಾಡಿದ್ದಕ್ಕಾಗಿ ಭಾರತವು ಆಫ್ರಿಕಾಕ್ಕೆ ಧನ್ಯವಾದ ಸಲ್ಲಿಸುತ್ತದೆ ಮತ್ತು ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್ ಗೆ ಸೇರಲು ಆಫ್ರಿಕದ ದೇಶಗಳನ್ನು ಆಹ್ವಾನಿಸುತ್ತದೆ. ಈ ಬೆಳವಣಿಗೆಯು ರಾಷ್ಟ್ರವನ್ನು ಹುರಿದುಂಬಿಸಿತು ಮತ್ತು ಭಾರತ ಮತ್ತು ಆಫ್ರಿಕಾ ನಡುವೆ ಭಾವನಾತ್ಮಕ ಸಂಪರ್ಕವನ್ನು ತಂದಿತು.

ಸ್ನೇಹಿತರೇ, ಸಾರ್ವಜನಿಕ ಸೇವೆಗಳನ್ನು ಕ್ರಾಂತಿಗೊಳಿಸಲು ಡಿಜಿಟಲ್ ತಂತ್ರಜ್ಞಾನದ ಭಾರತದ ಬಳಕೆಯು ಜಾಗತಿಕ ಮೆಚ್ಚುಗೆಯನ್ನು ಗಳಿಸಿದೆ. "ಇಂಡಿಯಾ ಸ್ಟಾಕ್" ನಂತಹ ಉಪಕ್ರಮಗಳಲ್ಲಿ ಆಫ್ರಿಕಾದೊಂದಿಗೆ ಈ ಪರಿಣತಿಯನ್ನು ಜೋಡಿಸುವ ಮಾಡುವ ಮೂಲಕ ಇದು ಜಗತ್ತು ಕಂಡ ಅತ್ಯುನ್ನತ ಕ್ರಮವಾಗಿದೆ.. ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಅಂತರವನ್ನು ತುಂಬಲು ತಂತ್ರಜ್ಞಾನ ಆಧಾರಿತ ಪರಿಹಾರಗಳೊಂದಿಗೆ ಆಫ್ರಿಕಾವನ್ನು ಒದಗಿಸುತ್ತದೆ. ಇದು ಪ್ರಚಂಡ ಅವಕಾಶಗಳನ್ನು ಒದಗಿಸುವ ಕ್ಷೇತ್ರವಾಗಿದೆ ಮತ್ತು ಭಾರತವು ಈಗ ಈ ದಿಕ್ಕಿನಲ್ಲಿ ಜಾಗತಿಕ ನಾಯಕರಲ್ಲಿ ಒಂದಾಗಿದೆ.

ಗೌರವಾನ್ವಿತರೇ, ಕಚ್ಚಾ ವಸ್ತುಗಳ ರಫ್ತಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಜಾಗತಿಕ ಆರ್ಥಿಕತೆಗೆ ಅದರ ಉತ್ಪಾದನೆ ಮತ್ತು ವ್ಯಾಪಾರ ಚಟುವಟಿಕೆಗಳನ್ನು ಉತ್ತಮವಾಗಿ ಸಂಯೋಜಿಸಲು ಆಫ್ರಿಕಾದ ಉದ್ದೇಶದೊಂದಿಗೆ ಭಾರತವು ಸ್ವಾಭಾವಿಕವಾಗಿ ಹೊಂದಿಕೊಂಡಿದೆ. ಇಲ್ಲಿ ಉಪಸ್ಥಿತರಿರುವ ಗಣ್ಯರ ಸಮಾಲೋಚನೆಯಿಂದ ಈ ದಿಕ್ಕಿನಲ್ಲಿ ಉಪಕ್ರಮಗಳು ಖಂಡಿತವಾಗಿಯೂ ನವೀನ ಶೈಲಿಯಲ್ಲಿ ಹೊರಹೊಮ್ಮುತ್ತವೆ ಎಂದು ನನಗೆ ಖಾತ್ರಿಯಿದೆ.

ಸ್ನೇಹಿತರೇ, ಆಫ್ರಿಕಾದ ನೈಸರ್ಗಿಕ ಸಂಪನ್ಮೂಲಗಳು ಮತ್ತು ನಾನು ಪ್ರತಿಯೊಬ್ಬ ಗೌರವಾನ್ವಿತ ಉಪಾಧ್ಯಕ್ಷರ ಮಾತುಗಳನ್ನು ಕೇಳಲು ಉತ್ತಮ ಸಂದರ್ಭವನ್ನು ಹೊಂದಿದ್ದೆನು. ಜನಸಂಖ್ಯೆಯ ಪ್ರಯೋಜನ, ಮತ್ತು ಆಫ್ರಿಕನ್ ಕಾಂಟಿನೆಂಟಲ್ ಫ್ರೀ ಟ್ರೇಡ್ ಏರಿಯಾ ಒಪ್ಪಂದದ ಮೂಲಕ ಬೆಳೆಯುತ್ತಿರುವ ಆರ್ಥಿಕ ಏಕೀಕರಣವು ಎಎಫ್ ಸಿಎಫ್ ಟಿಎ ಹೂಡಿಕೆಗಳು ಮತ್ತು ಪಾಲುದಾರಿಕೆಗಳಿಗೆ ಆಕರ್ಷಕ ತಾಣವಾಗಿದೆ. ಯಾವುದೂ ಆರೋಗ್ಯಕರ, ಆಹ್ಲಾದಕರ ಮತ್ತು ಸ್ಥಿರವಾಗಿಯೇ ಇರಲು ಸಾಧ್ಯವಿಲ್ಲ ಆದರೆ  ನಂತರ ಈ ಪಾಲುದಾರಿಕೆಯನ್ನು ಗುಣಾತ್ಮಕವಾಗಿ ಚರ್ಚಿಸುವ ಸಮಯದಲ್ಲಿ   ಮೂಲಕ ಮುಂದಿನ ಹಂತಕ್ಕೆ ಕೊಂಡೊಯ್ಯಬಹುದು.

ಗೌರವಾನ್ವಿತರೇ, ಪುನರುತ್ಥಾನದ ಆಫ್ರಿಕಾ ಮತ್ತು ಉದಯೋನ್ಮುಖ ಭಾರತ, ಈ ಸನ್ನಿವೇಶವನ್ನು ಊಹಿಸಿಕೊಳ್ಳಿ, ಪುನರುಜ್ಜೀವನಗೊಳ್ಳುತ್ತಿರುವ ಆಫ್ರಿಕಾ ಮತ್ತು ಉದಯೋನ್ಮುಖ ಭಾರತವು ದಕ್ಷಿಣ-ದಕ್ಷಿಣ ಸಹಕಾರಕ್ಕೆ ಬಲವಾದ ಪ್ರಚೋದನೆಯನ್ನು ವಿಶೇಷವಾಗಿ ಸ್ವಚ್ಛ ತಂತ್ರಜ್ಞಾನ, ಹವಾಮಾನ ನಿರೋಧಕ ಕೃಷಿ, ಕಡಲ ಭದ್ರತೆ, ಸಂಪರ್ಕ, ಮತ್ತು ನೀಲಿ ಆರ್ಥಿಕತೆಗೆ ನೀಡುತ್ತದೆ, ಉಭಯ ಪಕ್ಷಗಳ ನಡುವಿನ ಸಹಕಾರಕ್ಕಾಗಿ ಹೆಚ್ಚು ಸಮಕಾಲೀನ ಕಾರ್ಯಸೂಚಿಯನ್ನು ಒದಗಿಸಲು ಭಾರತ ಆಫ್ರಿಕಾ ವೇದಿಕೆ ಶೃಂಗಸಭೆ 4 ಅನ್ನು ಆಯೋಜಿಸಲು ಭಾರತ ಎದುರು ನೋಡುತ್ತಿದೆ.

ಗೌರವಾನ್ವಿತರೇ, ಆಫ್ರಿಕಾ ನಮ್ಮ ಆದ್ಯತೆಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದು ನಾವು ಹೆಚ್ಚಿನ ಭರವಸೆಯನ್ನು ನೀಡುತ್ತೇವೆ. ವಿಶ್ವ ಬಂಧು ಎನ್ನುವ  ನಿಜವಾದ ಚೇತನದಲ್ಲಿ ನಾವು ಪರಸ್ಪರ ಪ್ರಯೋಜನಕಾರಿ ಮತ್ತು ಪರಸ್ಪರ ಗೌರವಾನ್ವಿತ ಸಂಬಂಧವನ್ನು ಎದುರು ನೋಡುತ್ತಿದ್ದೇವೆ.

ಗೌರವಾನ್ವಿತ ಉಪಾಧ್ಯಕ್ಷರುಗಳ ಉತ್ಕೃಷ್ಟ ಭಾಷಣಗಳನ್ನು ಆಲಿಸಿದಾಗ,  ಪ್ರತಿಯೊಬ್ಬರೂ ನನಗೆ ಸ್ಫೂರ್ತಿ ನೀಡಿದರು, ನನಗೆ ಶಕ್ತಿ ತುಂಬಿದರು ಮತ್ತು ಎರಡು ದೇಶಗಳ ನಡುವೆ ಲಭ್ಯವಿರುವ ಸಾಮರ್ಥ್ಯವನ್ನು ಪ್ರತಿಬಿಂಬಿಸಿದರು.

ಭಾರತವು ಉದಯೋನ್ಮುಖ ಆರ್ಥಿಕತೆಯಾಗಿದೆ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿದೆ. ಕಳೆದ ದಶಕದಲ್ಲಿನ ಬೆಳವಣಿಗೆಯು ಕ್ಷಿಪ್ರ ಮತ್ತು ಐತಿಹಾಸಿಕವಾಗಿದೆ, ವಿಶ್ವಕ್ಕೆ ಮತ್ತು ನಿರ್ದಿಷ್ಟವಾಗಿ ಆಫ್ರಿಕಾಕ್ಕೆ ಹೆಚ್ಚಿನದನ್ನು ನೀಡಲು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ ಮತ್ತು ಇಲ್ಲಿ ಚರ್ಚೆಗಳು ಖಂಡಿತವಾಗಿಯೂ ಮುಂದಕ್ಕೆ ತೆಗೆದುಕೊಂಡು ಹೋಗುತ್ತವೆ ಮತ್ತು ಶೀಘ್ರದಲ್ಲೇ  ವಾಸ್ತವದಲ್ಲಿ  ಕಾರ್ಯರೂಪಕ್ಕೆ ಬರುತ್ತವೆ ಎಂದು ನನಗೆ ಖಾತ್ರಿಯಿದೆ.

ಭಾರತ ಮತ್ತು ಆಫ್ರಿಕಾದ ಅಭಿವೃದ್ಧಿ ಪಾಲುದಾರಿಕೆಯು ಜಾಗತಿಕ ಶಾಂತಿ ಮತ್ತು ಸೌಹಾರ್ದತೆಗೆ ಉತ್ತಮವಾದ ಮುನ್ಸೂಚನೆಯನ್ನು ನೀಡುವ ಜಾಗತಿಕ ದಕ್ಷಿಣವನ್ನು ಜಾಗತಿಕ ಮರುಸಮತೋಲನ ಮತ್ತು ಬಲಪಡಿಸುವಿಕೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ  ಎಂದು ನನಗೆ ವಿಶ್ವಾಸವಿದೆ.

ಸಮಾಲೋಚನೆಗಳು ಅತ್ಯಂತ ಫಲಪ್ರದ, ಉತ್ಪಾದಕ ಮತ್ತು ನಮ್ಮ ಪ್ರಯಾಣದಲ್ಲಿ ಅಭಿವೃದ್ಧಿಯ ಮುಂದಿನ ಹಂತಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆಯಾದರೂ, ನಾವು ವಿವಿಧ ಶೈಲಿಯಲ್ಲಿ ಸ್ನೇಹದ ಬಂಧಗಳನ್ನು ಬಲಪಡಿಸುವುದನ್ನು ಮುಂದುವರಿಸೋಣ, ಎಲ್ಲಾ ಹಂತಗಳಲ್ಲಿ ನಮ್ಮ ಸಹಕಾರವನ್ನು ಹೆಚ್ಚಿಸುತ್ತೇವೆ ಮತ್ತು ಕಲ್ಯಾಣಕ್ಕಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಒಟ್ಟಾಗಿ ಕೆಲಸ ಮಾಡೋಣ. ಮಾನವೀಯತೆ ಮತ್ತು ಪ್ರಾಥಮಿಕವಾಗಿ ಮಾನವ ಸಂಪನ್ಮೂಲ, ಶ್ರೀಮಂತ ಖನಿಜ ಸಂಪತ್ತು, ಶ್ರೀಮಂತ ನೈಸರ್ಗಿಕ ಸಂಪನ್ಮೂಲಗಳ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವುದರ ಮೇಲೆ ಕೇಂದ್ರೀಕರಿಸುವುದು ಮತ್ತು ಈಗಾಗಲೇ ಸ್ಪಂದನಶೀಲವಾಗಿರುವ ಈ ಪಾಲುದಾರಿಕೆಯನ್ನು ಕ್ರಾಂತಿಕಾರಿ, ಪರಿವರ್ತಕವಾಗಿ ಪರಿವರ್ತಿಸಿ ಇದರಿಂದ ಜಗತ್ತಿನ ಈ ಭಾಗವು ಜಾಗತಿಕ ಸ್ಥಿರತೆ ಮತ್ತು ಜಾಗತಿಕ ಸಾಮರಸ್ಯಕ್ಕೆ ಕೊಡುಗೆ ನೀಡುವಂತೆ ಮಾಡೋಣ. 

ಜಾಗತಿಕ ಸ್ಥಿರತೆ ಮತ್ತು ಶಾಂತಿಯನ್ನು ಸೂಚಿಸುವ ಎಲ್ಲಾ ಹಂತಗಳಲ್ಲಿ ಸಾಂವಿಧಾನಿಕವಾಗಿ ರಚನಾತ್ಮಕವಾಗಿರುವ ಪ್ರಜಾಪ್ರಭುತ್ವ,  ಜನಸಂಖ್ಯೆಯ ಆರನೇ ಒಂದು ಭಾಗವನ್ನು ಹೊಂದಿರುವ ಭಾರತದ ಉದಯ, ಭಾರತದ ಬೆಳವಣಿಗೆಯನ್ನು ನಾನು ಗಮನಿಸುವುದರೊಂದಿಗೆ ಮಾತನ್ನು ಮುಗಿಸುತ್ತೇನೆ.

ಭಾರತದ ಪಾಲ್ಗೊಳ್ಳುವಿಕೆ, ಭಾರತದ ಹೆಜ್ಜೆ, ಭಾರತದ ಕೈ ಜೋಡಿಸುವಿಕೆ, ಭಾರತವು ಒಗ್ಗಟ್ಟಿನಿಂದ ಕೆಲಸ ಮಾಡಲು ಬಯಸುವುದು ವಿಸ್ತರಣಾ ಮನೋಭಾವಕ್ಕೆ ವಿರುದ್ಧವಾಗಿದೆ. ಐತಿಹಾಸಿಕವಾಗಿ, ಈ ದೇಶವು ವಿಸ್ತರಣೆಯನ್ನು ಎಂದಿಗೂ ನಂಬಲಿಲ್ಲ. ಆದ್ದರಿಂದ, ನಮ್ಮ ಪಾಲುದಾರಿಕೆ, ಇತಿಹಾಸದಲ್ಲಿ ಆಳವಾಗಿ ರಚನೆಯಾಗಿರುವ ಈ ಪಾಲುದಾರಿಕೆಯು ಮಾನವಕುಲದ ಸುಧಾರಣೆಗಾಗಿ ದೊಡ್ಡ ಜಾಗತಿಕ ಬದಲಾವಣೆಗೆ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಧನ್ಯವಾದಗಳು.

 

*****



(Release ID: 2047360) Visitor Counter : 18