ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಿಂದ 60 ನ್ಯಾಯಬೆಲೆ ಅಂಗಡಿಗಳನ್ನು ಜನ ಪೋಷಣ ಕೇಂದ್ರಗಳನ್ನಾಗಿ ಪರಿವರ್ತಿಸುವ ಪ್ರಾಯೋಗಿಕ ಯೋಜನೆಗೆ ಚಾಲನೆ


ಎಫ್‌ ಪಿ ಎಸ್ ಸಹಾಯ್ ಅಪ್ಲಿಕೇಶನ್, ಮೇರಾ ರೇಷನ್ ಅಪ್ಲಿಕೇಶನ್ 2.0, ಗುಣಮಟ್ಟ ನಿರ್ವಹಣಾ ವ್ಯವಸ್ಥೆ, ಗುಣಮಟ್ಟದ ಕೈಪಿಡಿ, ಎಫ್‌ ಸಿ ಐ ಒಪ್ಪಂದ ಕೈಪಿಡಿ  ಮತ್ತು 3 ಪ್ರಯೋಗಾಲಯಗಳ ಎನ್‌ ಎ ಬಿ ಎಲ್‌ ಮಾನ್ಯತೆಗೂ ಚಾಲನೆ

ಜನ ಪೋಷಣ ಕೇಂದ್ರವು ನ್ಯಾಯಬೆಲೆ ಅಂಗಡಿಗಳ ವಿತರಕರಿಗೆ ಉತ್ತಮ ಆದಾಯವನ್ನು ನೀಡುತ್ತದೆ ಮತ್ತು ಗ್ರಾಹಕರಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಒದಗಿಸುತ್ತದೆ: ಶ್ರೀ ಜೋಶಿ

Posted On: 20 AUG 2024 3:45PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ವೆಂಕಟೇಶ್ ಜೋಶಿ ಅವರು 60 ನ್ಯಾಯಬೆಲೆ ಅಂಗಡಿಗಳನ್ನು ಜನ ಪೋಷಣ ಕೇಂದ್ರಗಳನ್ನಾಗಿ ಪರಿವರ್ತಿಸುವ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಇಂದು 3 ಪ್ರಯೋಗಾಲಯಗಳ ಎಫ್‌ಪಿಎಸ್ ಸಹಾಯ್ ಅಪ್ಲಿಕೇಶನ್, ಮೇರಾ ಪಡಿತರ ಅಪ್ಲಿಕೇಶನ್ 2.0, ಗುಣಮಟ್ಟ ನಿರ್ವಹಣಾ ವ್ಯವಸ್ಥೆ, ಗುಣಮಟ್ಟ ಕೈಪಿಡಿ ಎಫ್‌ ಸಿ ಐ ಒಪ್ಪಂದ ಕೈಪಿಡಿ, ಮತ್ತು ಮೂರು ಪ್ರಯೋಗಾಲಯಗಳ ಎನ್‌ ಎ ಬಿ ಎಲ್ ಮಾನ್ಯತೆಗೂ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಪ್ರಾರಂಭಿಸಲಾದ ಎಲ್ಲಾ 6 ಕಾರ್ಯಕ್ರಮಗಳು ಆಹಾರ ಭದ್ರತಾ ಪೂರಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತವೆ ಮತ್ತು ಪಾರದರ್ಶಕತೆಯನ್ನು ತರುತ್ತವೆ, ಕಟ್ಟುನಿಟ್ಟಾದ ಗುಣಮಟ್ಟದ ನಿಯಂತ್ರಣವನ್ನು ಖಚಿತಪಡಿಸುತ್ತವೆ, ಅಪೌಷ್ಟಿಕತೆಯನ್ನು ನಿಗ್ರಹಿಸುತ್ತವೆ ಮತ್ತು ವ್ಯವಸ್ಥೆಯಲ್ಲಿನ ಸೋರಿಕೆಯನ್ನು ತಡೆಯುತ್ತವೆ ಎಂದು ಹೇಳಿದರು.

ಗುಜರಾತ್, ರಾಜಸ್ಥಾನ, ತೆಲಂಗಾಣ ಮತ್ತು ಉತ್ತರ ಪ್ರದೇಶದ 60 ನ್ಯಾಯಬೆಲೆ ಅಂಗಡಿಗಳನ್ನು ಜನ ಪೋಷಣ ಕೇಂದ್ರಗಳನ್ನಾಗಿ ಪರಿವರ್ತಿಸುವ ಪ್ರಾಯೋಗಿಕ ಯೋಜನೆಯು ಭಾರತದಾದ್ಯಂತ ನ್ಯಾಯ ಬೆಲೆ ಅಂಗಡಿ (ಎಫ್‌ ಪಿ ಎಸ್) ವಿತರಕರ ಬೇಡಿಕೆಗೆ ಜನ ಪೋಷಣ ಕೇಂದ್ರವು ಪರಿಹಾರವನ್ನು ಒದಗಿಸುತ್ತದೆ, ಅವರ ಆದಾಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಶ್ರೀ ಜೋಶಿ ಹೇಳಿದರು. ಈ ಕೇಂದ್ರಗಳು ಪೌಷ್ಠಿಕಾಂಶ-ಭರಿತ ಆಹಾರ ಪದಾರ್ಥಗಳ ವೈವಿಧ್ಯಮಯ ಶ್ರೇಣಿಯನ್ನು ಗ್ರಾಹಕರಿಗೆ ನೀಡುತ್ತವೆ ಮತ್ತು ಎಫ್‌ ಪಿ ಎಸ್ ವಿತರಕರಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸುತ್ತವೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಮೊದಲ 100 ದಿನಗಳ ಕಾರ್ಯಕ್ರಮದ ಅಂಗವಾಗಿ ಕೈಗೆತ್ತಿಕೊಂಡ ಜನ ಪೋಷಣ ಕೇಂದ್ರ ಯೋಜನೆಯು ಪೌಷ್ಠಿಕಾಂಶದ ವರ್ಗದಡಿಯಲ್ಲಿ ಶೇ.50 ರಷ್ಟು ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ಇಡಲು ಅವಕಾಶವನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು. ನ್ಯಾಯಬೆಲೆ ಅಂಗಡಿ ವಿತರಕರೊಂದಿಗೂ ಕೇಂದ್ರ ಸಚಿವರು ಸಂವಾದ ನಡೆಸಿದರು.

ಗೌರವಾನ್ವಿತ ಪ್ರಧಾನ ಮಂತ್ರಿಯವರ ಮಾರ್ಗದರ್ಶನದಲ್ಲಿ, ದೇಶವು ವಿಕಸಿತ ಭಾರತ 2047ರ ಗುರಿಯತ್ತ ಸಾಗುತ್ತಿದೆ ಎಂದು ಶ್ರೀ ಜೋಶಿ ಹೇಳಿದರು. ಭಾರತ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಉಪಕ್ರಮಗಳು ಅಂತಹ ಪರಿವರ್ತನೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತವೆ. ದೇಶದಲ್ಲಿ ಆಹಾರ ಭದ್ರತೆಯ ವ್ಯಾಪ್ತಿಯನ್ನು ಹೆಚ್ಚಿಸಲು ಸುಮಾರು 12 ಲಕ್ಷ ಕೋಟಿ ರೂಪಾಯಿಗಳ ಅಂದಾಜು ಆರ್ಥಿಕ ವೆಚ್ಚದೊಂದಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು. ಒಂದು ದೇಶ, ಒಂದು ಪಡಿತರ ಚೀಟಿ ಈಗಾಗಲೇ ದೇಶದಾದ್ಯಂತ ತಡೆರಹಿತ ವಹಿವಾಟುಗಳನ್ನು ಸುಗಮಗೊಳಿಸುತ್ತಿದೆ ಎಂದು ಅವರು ತಿಳಿಸಿದರು.

ಇಲಾಖೆಯ ಡಿಜಿಟಲೀಕರಣದ ಸಕ್ರಿಯ ಪ್ರಯತ್ನಗಳು ಫಲಾನುಭವಿಗಳಿಗೆ ಬಳಕೆದಾರ ಕೇಂದ್ರಿತ ಸೇವೆಗಳನ್ನು ಸುಧಾರಿಸಲು ಕಾರಣವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಮೇರಾ ರೇಷನ್ ಅಪ್ಲಿಕೇಶನ್ 2.0, ಗುಣಮಟ್ಟ ನಿರ್ವಹಣಾ ವ್ಯವಸ್ಥೆ, ಗುಣಮಟ್ಟ ಕೈಪಿಡಿ, ಒಪ್ಪಂದ ಕೈಪಿಡಿ, ಎಫ್‌ ಪಿ ಎಸ್ ಸಹಾಯ ಅಪ್ಲಿಕೇಶನ್ ಮತ್ತು ಎನ್‌ ಎ ಬಿ ಎಲ್‌ ಮಾನ್ಯತೆ ಪ್ರಯೋಗಾಲಯಗಳ ಆರಂಭವು ಡಿಜಿಟಲೀಕರಣದ ಪ್ರಯತ್ನಗಳಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಮತ್ತಷ್ಟು ನಾವೀನ್ಯತೆ ಮತ್ತು ಒಟ್ಟಾರೆ ಸುಧಾರಣೆಯನ್ನು ತರಲು ಪಾಲುದಾರರ ಸಲಹೆಗಳಿಗೆ ಇಲಾಖೆ ಮುಕ್ತವಾಗಿದೆ ಎಂದು ಶ್ರೀ ಜೋಶಿ ಹೇಳಿದರು.

SIDBI ಅಭಿವೃದ್ಧಿಪಡಿಸಿದ, "FPS-Sahay," ಒಂದು ಬೇಡಿಕೆಯ ಇನ್‌ವಾಯ್ಸ್ ಆಧಾರಿತ ಹಣಕಾಸು (ಐಬಿಎಫ್) ಅಪ್ಲಿಕೇಶನ್‌ ಆಗಿದ್ದು, ಇದನ್ನು ಎಫ್ ಪಿ ಎಸ್‌ ಡೀಲರ್‌ಗಳಿಗೆ ಸಂಪೂರ್ಣವಾಗಿ ಕಾಗದರಹಿತ, ಕಡಿಮೆ ಉಪಸ್ಥಿತಿ, ಮೇಲಾಧಾರ ಮುಕ್ತ, ನಗದು ಹರಿವು ಆಧಾರಿತ ಹಣಕಾಸು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಮೇರಾ ರೇಷನ್ ಅಪ್ಲಿಕೇಶನ್ 2.0 ಮೊಬೈಲ್ ಅಪ್ಲಿಕೇಶನ್ ಅನ್ನು ರಾಷ್ಟ್ರದಾದ್ಯಂತ ಫಲಾನುಭವಿಗಳಿಗೆ ಹೆಚ್ಚಿನ ಮೌಲ್ಯವರ್ಧಿತ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಇಲಾಖಾ ಅಧಿಕಾರಿಗಳು (ಕೇಂದ್ರ ಮತ್ತು ರಾಜ್ಯ ಎರಡೂ) ತಮ್ಮ ಕಡೆಯಿಂದ ಪಡಿತರ ಚೀಟಿಗಳು ಮತ್ತು ಪಿ ಡಿ ಎಸ್ ಗೆ ಸಂಬಂಧಿಸಿದ ಪ್ರಮುಖ ಮಾಹಿತಿಗೆ ಇದರಲ್ಲಿ ಪ್ರವೇಶವನ್ನು ಹೊಂದಿರುತ್ತಾರೆ.

ಗುಣಮಟ್ಟ ನಿರ್ವಹಣಾ ವ್ಯವಸ್ಥೆಯು ಡಿ ಎಫ್‌ ಪಿ ಡಿ ಮತ್ತು ಎಫ್‌ ಸಿ ಐ ನಲ್ಲಿ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳ ಸಂಯೋಜನೆಗಾಗಿ ಇರುವ ಡಿಜಿಟಲ್ ಅಪ್ಲಿಕೇಶನ್ ಆಗಿದೆ. ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳಿಗೆ ಡಿಜಿಟಲ್ ಕ್ಯೂಎಂಎಸ್ ಒಂದು ಪ್ರಮುಖ ಸಾಧನವಾಗಿದ್ದು, ಖರೀದಿ, ಸಂಗ್ರಹಣೆ ಮತ್ತು ವಿತರಣೆಯ ಹಂತಗಳಲ್ಲಿ ನೈಜ ಸಮಯದಲ್ಲಿ ಎಲ್ಲಾ ಪ್ರಮುಖ ವಹಿವಾಟುಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರದ ಆಹಾರ ಧಾನ್ಯಗಳ ಕಟ್ಟುನಿಟ್ಟಾದ ಗುಣಮಟ್ಟದ ಮಾನದಂಡಗಳನ್ನು ಖಾತ್ರಿಪಡಿಸಿಕೊಳ್ಳಲು ಅಳವಡಿಸಿಕೊಳ್ಳಬೇಕಾದ ವಿವಿಧ ಕಾರ್ಯವಿಧಾನಗಳು, ಮಾನದಂಡಗಳು, ಮಾರ್ಗಸೂಚಿ ಮತ್ತು ನೀತಿಗಳ ನಿಖರವಾದ ವಿವರಣೆಯನ್ನು ನೀಡುವ ಗುಣಮಟ್ಟ ನಿಯಂತ್ರಣದ ಸಮಗ್ರ ಕೈಪಿಡಿಯನ್ನು ಡಿ ಎಫ್‌ ಪಿ ಡಿ ರೂಪಿಸಿದೆ.

ಭಾರತೀಯ ಆಹಾರ ನಿಗಮದ (ಎಫ್‌ ಸಿ ಐ) ಒಪ್ಪಂದದ ಕೈಪಿಡಿಯನ್ನು ಸಹ ಬಿಡುಗಡೆ ಮಾಡಲಾಯಿತು. ಎಫ್‌ ಸಿ ಐ ನ ಒಪ್ಪಂದದ ಕೈಪಿಡಿಯನ್ನು ಎಲ್ಲಾ ಅಸ್ಪಷ್ಟತೆಗಳನ್ನು ತೆಗೆದುಹಾಕಲು, ಸ್ಪರ್ಧಾತ್ಮಕತೆಯನ್ನು ಖಾತ್ರಿಪಡಿಸಲು ಮತ್ತು ಒಪ್ಪಂದಗಳಲ್ಲಿ ಅತ್ಯಂತ ಪಾರದರ್ಶಕತೆಯನ್ನು ತರಲು ಮಾರ್ಗದರ್ಶಿ ತತ್ವವಾಗಿ ರೂಪಿಸಲಾಗಿದೆ. ಎಫ್‌ ಸಿ ಐ ಟೆಂಡರ್‌ಗಳಲ್ಲಿ ಭಾಗವಹಿಸುವಿಕೆಯನ್ನು ಗರಿಷ್ಠಗೊಳಿಸುವುದು ಆದ್ಯತೆಯಾಗಿದೆ. ಎನ್‌ ಎ ಬಿ ಲ್ ಪ್ರಯೋಗಾಲಯಗಳ ಮಾನ್ಯತೆ ಅಂತಾರಾಷ್ಟ್ರೀಯ ಮಾನದಂಡಗಳ ಅನುಸರಣೆಗಾಗಿ ಇಲಾಖೆಯ ಪ್ರಯೋಗಾಲಯಗಳಿಗೆ ನಿರ್ಣಾಯಕವಾಗಿದೆ, ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಸೇವೆಗಳಲ್ಲಿ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸುತ್ತದೆ ಜೊತೆಗೆ ಗ್ರಾಹಕರ ವಿಶ್ವಾಸ ಮತ್ತು ತೃಪ್ತಿಯನ್ನು ಹೆಚ್ಚಿಸುತ್ತದೆ.

 

*****

 

 



(Release ID: 2046973) Visitor Counter : 36