ವಾರ್ತಾ ಮತ್ತು ಪ್ರಸಾರ ಸಚಿವಾಲಯ

2022ನೇ ಸಾಲಿನ 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ; ಆಟಂ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ


ಅತ್ಯುತ್ತಮ ನಾನ್-ಫೀಚರ್ ಚಲನಚಿತ್ರ ಪ್ರಶಸ್ತಿಯನ್ನು ಅಯೆನಾ (ಮಿರರ್); ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ಮರ್ಮರ್ಸ್ ಆಫ್ ದಿ ಜಂಗಲ್ ಪಡೆದಿವೆ

ಕಾಂತಾರ ಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ ಮತ್ತು ತಿರುಚಿತ್ರಾಂಬಲಂ ಚಿತ್ರಕ್ಕಾಗಿ ನಿತ್ಯಾ ಮೆನನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ

ಪವನ್ ರಾಜ್ ಮಲ್ಹೋತ್ರಾ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾದರೆ, ನೀನಾ ಗುಪ್ತಾ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ

ಬ್ರಹ್ಮಾಸ್ತ್ರ-ಭಾಗ 1: ಶಿವ ಎವಿಜಿಸಿ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ ಗೇಮಿಂಗ್ ಮತ್ತು ಕಾಮಿಕ್) ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಎಂದು ಆಯ್ಕೆಯಾಗಿದೆ

ಕಿಶೋರ್ ಕುಮಾರ್: ದಿ ಅಲ್ಟಿಮೇಟ್ ಬಯೋಗ್ರಫಿ, ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ ಎಂದು ಪ್ರಕಟಿಸಲಾಗಿದೆ

Posted On: 16 AUG 2024 4:15PM by PIB Bengaluru

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರರು ಇಂದು 2022ನೇ ಸಾಲಿನ  ವಿಜೇತರನ್ನು ಪ್ರಕಟಿಸಿದ್ದಾರೆ.

ಈ ಘೋಷಣೆಗೂ ಮುನ್ನ, ಫೀಚರ್ ಫಿಲ್ಮ್ ತೀರ್ಪುಗಾರ ಸಮಿತಿ ಅಧ್ಯಕ್ಷ ರಾಹುಲ್ ರಾವೈಲ್, ನಾನ್ ಫೀಚರ್ ಫಿಲ್ಮ್ ತೀರ್ಪುಗಾರ ಸಮಿತಿ ಅಧ್ಯಕ್ಷೆ ನೀಲಾ ಮಾಧಬ್ ಪಾಂಡಾ ಮತ್ತು ಅತ್ಯುತ್ತಮ ಸಿನಿಮಾ ಬರವಣಿಗೆ ತೀರ್ಪುಗಾರ ಸಮಿತಿ ಅಧ್ಯಕ್ಷ ಗಂಗಾಧರ ಮೊದಲಿಯಾರ್‌ 2022 ನೇ ಸಾಲಿನ 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಇಂದು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು ಮತ್ತು ಜಂಟಿ ಕಾರ್ಯದರ್ಶಿ (ಚಲನಚಿತ್ರ) ವೃಂದಾ ದೇಸಾಯಿ ಉಪಸ್ಥಿತರಿದ್ದರು.

 

ತೀರ್ಪುಗಾರರ ಸಮಿತಿಯು ಭಾರತೀಯ ಸಿನಿ-ಜಗತ್ತಿನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು ಮತ್ತು ಚಲನಚಿತ್ರ ವ್ಯಕ್ತಿಗಳನ್ನು ಒಳಗೊಂಡಿತ್ತು. ಫೀಚರ್ ಫಿಲ್ಮ್ಸ್ ತೀರ್ಪುಗಾರರ ಸಮಿತಿಯ ಅಧ್ಯಕ್ಷ ರಾಹುಲ್ ರಾವೈಲ್, ನಾನ್ ಫೀಚರ್ ಫಿಲ್ಮ್ಸ್ ತೀರ್ಪುಗಾರರ ಸಮಿತಿಯ ಅಧ್ಯಕ್ಷೆ ಡಾ.ನೀಲಾ ಮಾಧಬ್ ಪಾಂಡಾ ಮತ್ತು ಅತ್ಯುತ್ತಮ ಸಿನಿಮಾ ಬರವಣಿಗೆ ತೀರ್ಪುಗಾರರ ಸಮಿತಿಯ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಅವರು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ (ಚಲನಚಿತ್ರ) ಶ್ರೀಮತಿ ವೃಂದಾ ದೇಸಾಯಿ ಅವರ ಸಮ್ಮುಖದಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಿದರು.

 

ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಆನಂದ್ ಏಕರ್ಶಿ ನಿರ್ದೇಶನದ ಆಟಂ (ದಿ ಪ್ಲೇ) ಮತ್ತು ಅತ್ಯುತ್ತಮ ನಾನ್-ಫೀಚರ್ ಚಲನಚಿತ್ರ ಪ್ರಶಸ್ತಿಯನ್ನು ಸಿದ್ಧಾಂತ್ ಸರಿನ್ ನಿರ್ದೇಶನದ ಅಯೆನಾ (ಕನ್ನಡಿ) ಪಡೆದುಕೊಂಡಿವೆ.

ಅನಿರುಧಾ ಭಟ್ಟಾಚಾರ್ಜಿ ಮತ್ತು ಪಾರ್ಥಿವ್ ಧರ್ ಬರೆದಿರುವ ಕಿಶೋರ್ ಕುಮಾರ್: ದಿ ಅಲ್ಟಿಮೇಟ್ ಬಯೋಗ್ರಫಿ ಪುಸ್ತಕಕ್ಕೆ ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ ಪ್ರಶಸ್ತಿಯನ್ನು ನೀಡಲಾಗಿದೆ.

ಸಂಪೂರ್ಣ ಮನರಂಜನೆಯ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿಯನ್ನು ಕನ್ನಡದ ಕಾಂತಾರ ಪಡೆದಿದೆ.

ಕಾಂತಾರ ಚಿತ್ರದಲ್ಲಿನ ಅಭಿನಯಕ್ಕಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರೆ, ತಿರುಚಿತ್ರಂಬಲಂ ಚಿತ್ರಕ್ಕಾಗಿ ನಿತ್ಯಾ ಮೆನೆನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ ಪವನ್ ರಾಜ್ ಮಲ್ಹೋತ್ರಾ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದರೆ, ನೀನಾ ಗುಪ್ತಾ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.

ವಿ ಎಫ್‌ ಎಕ್ಸ್ ಮೇಲ್ವಿಚಾರಕರಾದ ಜಯಕರ್ ಆರುದ್ರ, ವೈರಲ್ ಥಕ್ಕರ್ ಮತ್ತು ನೀಲೇಶ್ ಗೋರ್ ಅವರೊಂದಿಗೆ ಅಯನ್ ಮುಖರ್ಜಿ ನಿರ್ದೇಶಿಸಿರಿವ ಬ್ರಹ್ಮಾಸ್ತ್ರ-ಭಾಗ1: ಶಿವ ಎವಿಜಿಸಿ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ ಗೇಮಿಂಗ್ ಮತ್ತು ಕಾಮಿಕ್) ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 2022

ಅತ್ಯುತ್ತಮ ಸಿನಿಮಾ ಬರಹ

ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ ಪ್ರಶಸ್ತಿ:

ಕ್ರ.ಸಂ.

ಪುಸ್ತಕದ ಶೀರ್ಷಿಕೆ

 

ಭಾಷೆ

 

ಲೇಖಕರ ಹೆಸರು

 

ಪ್ರಕಾಶಕರ ಹೆಸರು

 

ಪದಕ ಮತ್ತು ನಗದು ಬಹುಮಾನ

1

ಕಿಶೋರ್ ಕುಮಾರ್: ದಿ ಅಲ್ಟಿಮೇಟ್ ಬಯೋಗ್ರಫಿ

 

ಇಂಗ್ಲೀಷ್

 

ಅನಿರುಧಾ ಭಟ್ಟಾಚಾರ್ಯ & ಪಾರ್ಥಿವ್ ಧರ್

 

ಹಾರ್ಪರ್‌ಕಾಲಿನ್ಸ್ ಪಬ್ಲಿಷರ್ಸ್ ಇಂಡಿಯಾ ಪ್ರೈ. ಲಿಮಿಟೆಡ್

ಸ್ವರ್ಣ ಕಮಲ ಮತ್ತು ರೂ. 1,00,000/- (ತಲಾ)

 

ಅತ್ಯುತ್ತಮ ಚಲನಚಿತ್ರ ವಿಮರ್ಶಕ ಪ್ರಶಸ್ತಿ:

ಕ್ರ.ಸಂ.

ವಿಮರ್ಶಕರ ಹೆಸರು

 

ಭಾಷೆ

 

ಪದಕ ಮತ್ತು ನಗದು ಬಹುಮಾನ

1

ದೀಪಕ್ ದುವಾ

 

ಹಿಂದಿ

 

ಸ್ವರ್ಣ ಕಮಲ ಮತ್ತು ರೂ. 1,00,000/-

 

ನಾನ್-ಫೀಚರ್ ಚಲನಚಿತ್ರ ಫಲಿತಾಂಶಗಳು

ಕ್ರ.ಸಂ.

ಪ್ರಶಸ್ತಿಯ ವರ್ಗ

 

ಚಿತ್ರದ ಶೀರ್ಷಿಕೆ

 

ಪ್ರಶಸ್ತಿ ಪುರಸ್ಕೃತರು

 

ಪದಕ ಮತ್ತು ನಗದು ಬಹುಮಾನ

1

ಅತ್ಯುತ್ತಮ ನಾನ್-ಫೀಚರ್ ಚಲನಚಿತ್ರ

ಆಯೆನಾ (ಮಿರರ್)

(ಹಿಂದಿ/ಉರ್ದು)

 

ನಿರ್ಮಾಪಕ: ತೆಹ್ ಫಿಲ್ಮ್ಸ್

ನಿರ್ದೇಶಕ: ಸಿದ್ಧಾಂತ್ ಸರಿನ್

ಸ್ವರ್ಣ ಕಮಲ

ರೂ. 3,00,000/- (ತಲಾ)

2

ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ

ಮಧ್ಯಂತರ

(ಕನ್ನಡ)

 

ನಿರ್ದೇಶಕ: ಬಸ್ತಿ ದಿನೇಶ್ ಶೆಣೈ

 

ಸ್ವರ್ಣ ಕಮಲ

ರೂ. 3,00,000/-

 

3

ಅತ್ಯುತ್ತಮ ಜೀವನಚರಿತ್ರೆ / ಐತಿಹಾಸಿಕ ಪುನರ್ನಿರ್ಮಾಣ /ಸಂಕಲನ ಚಿತ್ರ

ಅನಾಖಿ ಏಕ್ ಮೊಹೆಂಜೋ ದಾರೋ

(ಯೆಟ್‌ ಅನದರ್‌ ಮೊಹೆಂಜೊ ದಾರೊ)

(ಮರಾಠಿ)

ನಿರ್ಮಾಪಕ:

ಡಿ ಗೋವಾನ್ ಸ್ಟುಡಿಯೋ ಮತ್ತು ಅಶೋಕ್ ರಾಣೆ ಪ್ರೊಡಕ್ಷನ್ಸ್

ನಿರ್ದೇಶಕ: ಅಶೋಕ್ ರಾಣೆ

ರಜತ್ ಕಮಲ

ರೂ 2,00,000/- (ತಲಾ)

 

4

ಅತ್ಯುತ್ತಮ ಕಲೆ/ಸಂಸ್ಕೃತಿಯ ಚಿತ್ರ

(ಎ) ರಂಗ ವೈಭೋಗ

(ದೇವಾಲಯ ನೃತ್ಯ ಸಂಪ್ರದಾಯ)

(ಕನ್ನಡ)

(ಬಿ) ವರ್ಸಾ (ಪರಂಪರೆ)

(ಮರಾಠಿ)

(ಎ) ನಿರ್ಮಾಪಕ ಮತ್ತು ನಿರ್ದೇಶಕ: ಸುನೀಲ್ ನರಸಿಂಹಾಚಾರ್ ಪುರಾಣಿಕ್

(b) ನಿರ್ಮಾಪಕ ಮತ್ತು ನಿರ್ದೇಶಕ: ಸಚಿನ್ ಬಾಳಾಸಾಹೇಬ್ ಸೂರ್ಯವಂಶಿ

ರಜತ ಕಮಲ

 

ರೂ 2,00,000/- (ಹಂಚಿಕೊಳ್ಳಲಾಗಿದೆ)

5

ಅತ್ಯುತ್ತಮ ಸಾಕ್ಷ್ಯಚಿತ್ರ

ಮರ್ಮರ್ಸ್ ಆಫ್ ದಿ ಜಂಗಲ್

(ಮರಾಠಿ)

ನಿರ್ಮಾಪಕ ಮತ್ತು ನಿರ್ದೇಶಕ: ಸೋಹಿಲ್ ವೈದ್ಯ

ರಜತ ಕಮಲ

ರೂ 2,00,000/- (ತಲಾ)

6

ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ನಾನ್ ಫೀಚರ್ ಚಿತ್ರ

ಆನ್‌ ದ ಬ್ರಿಂಕ್ ಸೀಸನ್ 2 - ಘರಿಯಾಲ್

(ಇಂಗ್ಲಿಷ್)

ನಿರ್ಮಾಣ: ದಿ ಗಯಾ ಪೀಪಲ್

ನಿರ್ದೇಶಕರು: ಆಕಾಂಕ್ಷಾ ಸೂದ್ ಸಿಂಗ್

ರಜತ ಕಮಲ

ರೂ 2,00,000/- (ತಲಾ)

7

ಅತ್ಯುತ್ತಮ ಅನಿಮೇಷನ್ ಚಿತ್ರ

ಎ ಕೋಕನಟ್‌ ಟ್ರೀ

(ಮೂಕಿ)

ನಿರ್ಮಾಣ: ಜೆಬಿ ಪ್ರೊಡಕ್ಷನ್ಸ್

ನಿರ್ದೇಶಕ ಮತ್ತು ಆನಿಮೇಟರ್: ಜೋಶಿ ಬೆನೆಡಿಕ್ಟ್

ರಜತ ಕಮಲ

ರೂ 2,00,000/- (ತಲಾ)

8

ಅತ್ಯುತ್ತಮ ಕಿರುಚಿತ್ರ (30 ನಿಮಿಷಗಳವರೆಗೆ)

XUNYOTA (ವಾಯ್ಡ್)

(ಅಸ್ಸಾಮಿ)

ನಿರ್ಮಾಣ: ಎಚ್‌ ಎಂ ಪ್ರೊಡಕ್ಷನ್

ನಿರ್ದೇಶಕ: ನಬಪನ್ ದೇಕಾ

ರಜತ ಕಮಲ

ರೂ 2,00,000/- (ತಲಾ)

9

ಅತ್ಯುತ್ತಮ ನಿರ್ದೇಶನ

ಫ್ರಂ ದ ಶ್ಯಾಡೋಸ್‌

(ಬಂಗಾಳಿ/ಹಿಂದಿ/ಇಂಗ್ಲಿಷ್)

ನಿರ್ದೇಶಕ: ಮಿರಿಯಮ್ ಚಾಂಡಿ ಮೆನಚೆರಿ

ಸ್ವರ್ಣ ಕಮಲ

ರೂ. 3,00,000/-

10

ಅತ್ಯುತ್ತಮ ಛಾಯಾಗ್ರಹಣ

ಮೋನೋ ನೋ ಅವೇರ್

 

(ಹಿಂದಿ ಮತ್ತು ಇಂಗ್ಲಿಷ್)

ಛಾಯಾಗ್ರಾಹಕ: ಸಿದ್ಧಾರ್ಥ್ ದಿವಾನ್

ರಜತ ಕಮಲ

ರೂ 2,00,000/-‌

11

ಅತ್ಯುತ್ತಮ ಧ್ವನಿ ವಿನ್ಯಾಸ

ಯಾನ್ (ವೆಹಿಕಲ್)

 

(ಹಿಂದಿ/ಮಾಲ್ವಿ)

ಧ್ವನಿ ವಿನ್ಯಾಸಕರು: ಮಾನಸ್ ಚೌಧರಿ

ರಜತ ಕಮಲ

ರೂ 2,00,000/-‌

12

ಅತ್ಯುತ್ತಮ ಸಂಕಲನ

ಮಧ್ಯಂತರ

 (ಕನ್ನಡ)

ಸಂಕಲನಕಾರ: ಸುರೇಶ್ ಅರಸ್

ರಜತ ಕಮಲ

ರೂ 2,00,000/-

13

ಅತ್ಯುತ್ತಮ ಸಂಗೀತ ನಿರ್ದೇಶನ

ಫುರ್ಸತ್‌ (ವಿರಾಮ)

(ಹಿಂದಿ)

ಸಂಗೀತ ನಿರ್ದೇಶಕ: ವಿಶಾಲ್ ಭಾರದ್ವಾಜ್

ರಜತ ಕಮಲ

ರೂ 2,00,000/-

14

ಅತ್ಯುತ್ತಮ ನಿರೂಪಣೆ/ ಹಿನ್ನೆಲೆ ಧ್ವನಿ

ಮರ್ಮರ್ಸ್‌ ಆಫ್‌ ದ ಜಂಗಲ್‌

(ಮರಾಠಿ)

ನಿರೂಪಕ/ ಹಿನ್ನೆಲೆ ಧ್ವನಿ: ಸುಮಂತ್ ಶಿಂಧೆ

ರಜತ ಕಮಲ

ರೂ 2,00,000/-

15

ಅತ್ಯುತ್ತಮ ಚಿತ್ರಕಥೆ

ಮೋನೋ ನೋ ಅವೇರ್

 

(ಹಿಂದಿ ಮತ್ತು ಇಂಗ್ಲಿಷ್)

ಚಿತ್ರಕಥೆಗಾರ: ಕೌಶಿಕ್ ಸರ್ಕಾರ್

ರಜತ ಕಮಲ

ರೂ 2,00,000/-

16

ವಿಶೇಷ ಉಲ್ಲೇಖ

ಬಿರುಬಾಲಾ "ವಿಚ್‌ ಟು ಪದ್ಮಶ್ರೀ"

(ಅಸ್ಸಾಮಿ)

ನಿರ್ಮಾಣ: ಐಮೀ ಬರುವಾ ಪ್ರೊಡಕ್ಷನ್ ಸೊಸೈಟಿ

 

ನಿರ್ದೇಶಕ: ಐಮೀ ಬರುವಾ

ಪ್ರಮಾಣಪತ್ರ

ಹರ್ಗಿಲಾ - ದಿ ಗ್ರೇಟರ್ ಅಡ್ಜಟಂಟ್ ಸ್ಟೋರ್ಕ್

(ಅಸ್ಸಾಮಿ)

ನಿರ್ಮಾಣ: ಪಿಐ ಎಂಟರ್ಟೈನ್ಮೆಂಟ್

 

ನಿರ್ದೇಶಕ: ಪಾರ್ಥಸಾರಥಿ ಮಹಂತ

ಪ್ರಮಾಣಪತ್ರ

 

ಫೀಚರ್ಚಲನಚಿತ್ರಗಳು-ಫಲಿತಾಂಶಗಳು

ಕ್ರ.ಸಂ.

ಪ್ರಶಸ್ತಿಯ ವರ್ಗ

 

ಚಿತ್ರದ ಶೀರ್ಷಿಕೆ

 

ಪ್ರಶಸ್ತಿ ಪುರಸ್ಕೃತರು

 

ಪದಕ ಮತ್ತು ನಗದು ಬಹುಮಾನ

1

ಅತ್ಯುತ್ತಮ ಚಲನಚಿತ್ರ

ಆಟ್ಟಂ (ಆಟ)

 

(ಮಲಯಾಳಂ)

ನಿರ್ಮಾಣ: ಜಾಯ್ ಮೂವಿ ಪ್ರೊಡಕ್ಷನ್ಸ್ ಎಲ್ ಎಲ್ ಪಿ

 

ನಿರ್ದೇಶಕ: ಆನಂದ್ ಏಕರ್ಶಿ

ಸ್ವರ್ಣ ಕಮಲ

 

ರೂ. 3,00,000/- (ತಲಾ)

2

ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ

ಫೌಜಾ

 

(ಹರ್ಯಾಣ್ವಿ)

ನಿರ್ದೇಶಕ: ಪ್ರಮೋದ್ ಕುಮಾರ್

ಸ್ವರ್ಣ ಕಮಲ

 

ರೂ. 3,00,000/-

3

ಸಂಪೂರ್ಣ ಮನರಂಜನೆಯ ಅತ್ಯುತ್ತಮ ಜನಪ್ರಿಯ ಚಲನಚಿತ್ರ

ಕಾಂತಾರ

 

(ಕನ್ನಡ)

ನಿರ್ಮಾಣ: ಹೊಂಬಾಳೆ ಫಿಲ್ಮ್ಸ್ ಎಲ್ ಎಲ್ ಪಿ

 

ನಿರ್ದೇಶಕ: ರಿಷಬ್ ಶೆಟ್ಟಿ

ಸ್ವರ್ಣ ಕಮಲ

 

ರೂ. 3,00,000/-

(ತಲಾ)

4

ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ

ಕಚ್ ಎಕ್ಸ್‌ಪ್ರೆಸ್

 

(ಗುಜರಾತಿ)

ನಿರ್ಮಾಣ: ಸೋಲ್ ಸೂತ್ರ ಎಲ್ ಎಲ್ ಪಿ

 

ನಿರ್ದೇಶಕ: ವಿರಲ್ ಶಾ

ರಜತ ಕಮಲ

 

ರೂ. 2,00,000/- (ತಲಾ)

5

ಎವಿಜಿಸಿಯಲ್ಲಿ ಅತ್ಯುತ್ತಮ ಚಿತ್ರ

(ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ ಗೇಮಿಂಗ್ ಮತ್ತು ಕಾಮಿಕ್)

ಬ್ರಹ್ಮಾಸ್ತ್ರ-

ಭಾಗ 1: ಶಿವ

 

(ಹಿಂದಿ)

ನಿರ್ಮಾಣ: ಧರ್ಮ ಪ್ರೊಡಕ್ಷನ್ಸ್,

ಪ್ರೈಮ್‌ ಫೋಕಸ್,

ಸ್ಟಾರ್ಲೈಟ್ ಪಿಕ್ಚರ್ಸ್

 

ನಿರ್ದೇಶಕ: ಅಯನ್ ಮುಖರ್ಜಿ

 

 

ವಿ ಎಫ್‌ ಎಕ್ಸ್ ಮೇಲ್ವಿಚಾರಕರು: ಜಯಕರ್ ಆರುದ್ರ, ವೈರಲ್ ಠಕ್ಕರ್, ನೀಲೇಶ್ ಗೋರ್

ಸ್ವರ್ಣ ಕಮಲ

ರೂ. 3,00,000/- (ತಲಾ)

 

 

 

 

 

 

ರಜತ ಕಮಲ

ರೂ. 2,00,000/- (ಹಂಚಿಕೊಳ್ಳಲಾಗಿದೆ)

6

ಅತ್ಯುತ್ತಮ ನಿರ್ದೇಶನ

ಉಂಚೈ (ಜೆನಿತ್)

 

(ಹಿಂದಿ)

ನಿರ್ದೇಶಕ: ಸೂರಜ್ ಆರ್. ಬರ್ಜಾತ್ಯ

ಸ್ವರ್ಣ ಕಮಲ

 

ರೂ. 3,00,000/-

7

ಅತ್ಯುತ್ತಮ ನಟ

ಕಾಂತಾರ

 

(ಕನ್ನಡ)

ನಟ: ರಿಷಬ್ ಶೆಟ್ಟಿ

ರಜತ ಕಮಲ

 

ರೂ. 2,00,000/-

8

ಅತ್ಯುತ್ತಮ ನಟಿ

ತಿರುಚಿತ್ರಾಂಬಲಂ

 

(ತಮಿಳು)

 

ಕಚ್ ಎಕ್ಸ್‌ಪ್ರೆಸ್

 

(ಗುಜರಾತಿ)

ನಟಿ: ನಿತ್ಯಾ ಮೆನನ್

 

 

ನಟಿ: ಮಾನಸಿ ಪಾರೇಖ್

ರಜತ ಕಮಲ

 

ರೂ. 2,00,000/-

ರಜತ ಕಮಲ

 

ರೂ. 2,00,000/-

9

ಅತ್ಯುತ್ತಮ ಪೋಷಕ ನಟ

ಫೌಜಾ

 

(ಹರ್ಯಾನ್ವಿ)

ಪೋಷಕ ನಟ: ಪವನ್ ರಾಜ್ ಮಲ್ಹೋತ್ರಾ

ರಜತ ಕಮಲ

 

ರೂ. 2,00,000/-

10

ಅತ್ಯುತ್ತಮ ಪೋಷಕ ನಟಿ

ಉಂಚೈ (ಜೆನಿತ್)

 

(ಹಿಂದಿ)

ಪೋಷಕ ನಟಿ: ನೀನಾ ಗುಪ್ತಾ

ರಜತ ಕಮಲ

 

ರೂ. 2,00,000/-

11

ಅತ್ಯುತ್ತಮ ಬಾಲ ಕಲಾವಿದ

ಮಲಿಕಪ್ಪುರಂ

(ಮಲಯಾಳಂ)

ಬಾಲ ಕಲಾವಿದ: ಶ್ರೀಪತ್

ರಜತ ಕಮಲ

 

ರೂ. 2,00,000/-

12

ಅತ್ಯುತ್ತಮ ಹಿನ್ನೆಲೆ ಗಾಯಕ

ಬ್ರಹ್ಮಾಸ್ತ್ರ-

ಭಾಗ 1: ಶಿವ

 

(ಹಿಂದಿ)

ಗಾಯಕ: ಅರಿಜಿತ್ ಸಿಂಗ್

 

(ಕೇಸರಿಯಾ)

ರಜತ ಕಮಲ

 

ರೂ. 2,00,000/-

13

ಅತ್ಯುತ್ತಮ ಹಿನ್ನೆಲೆ ಗಾಯಕಿ

ಸೌದಿ ವೆಲ್ಲಕ್ಕ CC.225/2009

(ಸೌದಿ ಬೇಬಿ ಕೋಕನಟ್ CC.225/2009)

 

(ಮಲಯಾಳಂ)

ಗಾಯಕಿ: ಬಾಂಬೆ ಜಯಶ್ರೀ

 

(ಚಾಯುಮ್ ವೆಯಿಲ್)

ರಜತ ಕಮಲ

 

ರೂ. 2,00,000/-‌

14

ಅತ್ಯುತ್ತಮ ಛಾಯಾಗ್ರಹಣ

ಪೊನ್ನಿಯಿನ್ ಸೆಲ್ವನ್-ಭಾಗ I

 

(ತಮಿಳು)

ಛಾಯಾಗ್ರಾಹಕ: ರವಿವರ್ಮನ್

ರಜತ ಕಮಲ

 

ರೂ. 2,00,000/-‌

15

ಅತ್ಯುತ್ತಮ ಕಥೆ

ಆಟ್ಟಂ (ಆಟ)

(ಮಲಯಾಳಂ)

 

ಚಿತ್ರಕಥೆ

(ಮೂಲ): ಆನಂದ್ ಏಕರ್ಶಿ

ರಜತ ಕಮಲ

 

ರೂ. 2,00,000/-‌

 

ಗುಲ್ಮೊಹರ್

(ಹಿಂದಿ)

 

ಸಂಭಾಷಣೆ: ಅರ್ಪಿತಾ ಮುಖರ್ಜಿ ಮತ್ತು ರಾಹುಲ್ ವಿ ಚಿತ್ತೆಲ್ಲಾ

 

ರಜತ ಕಮಲ

 

ರೂ. 2,00,000/-‌

16

ಅತ್ಯುತ್ತಮ ಧ್ವನಿ ವಿನ್ಯಾಸ

ಪೊನ್ನಿಯಿನ್ ಸೆಲ್ವನ್-ಭಾಗ I

 

(ತಮಿಳು)

ಧ್ವನಿ ವಿನ್ಯಾಸ: ಆನಂದ್ ಕೃಷ್ಣಮೂರ್ತಿ

ರಜತ ಕಮಲ

 

ರೂ. 2,00,000/-‌

17

ಅತ್ಯುತ್ತಮ ಸಂಕಲನ

ಆಟ್ಟಂ (ಆಟ)

 

(ಮಲಯಾಳಂ)

ಸಂಕಲನ: ಮಹೇಶ್ ಭುವನೇಂದ್ರ

ರಜತ ಕಮಲ

 

ರೂ. 2,00,000/-‌

18

ಅತ್ಯುತ್ತಮ ನಿರ್ಮಾಣ ವಿನ್ಯಾಸ

ಅಪರಾಜಿತೋ

(ಅಜೇಯ)

 

(ಬಂಗಾಳಿ)

ನಿರ್ಮಾಣ ವಿನ್ಯಾಸ: ಆನಂದ ಅಧ್ಯಾ

ರಜತ ಕಮಲ

 

ರೂ. 2,00,000/-‌

19

ಅತ್ಯುತ್ತಮ ವಸ್ತ್ರ ವಿನ್ಯಾಸ

ಕಚ್ ಎಕ್ಸ್‌ಪ್ರೆಸ್

(ಗುಜರಾತಿ)

ವಸ್ತ್ರ ವಿನ್ಯಾಸ: ನಿಕಿ ಜೋಶಿ

ರಜತ ಕಮಲ

 

ರೂ. 2,00,000/-‌

20

ಅತ್ಯುತ್ತಮ ಪ್ರಸಾದನ

ಅಪರಾಜಿತೋ

(ಅಜೇಯ)

 

(ಬಂಗಾಳಿ)

ಪ್ರಸಾದನ ಕಲಾವಿದ: ಸೋಮನಾಥ ಕುಂಡು

ರಜತ ಕಮಲ

 

ರೂ. 2,00,000/-‌

21

ಅತ್ಯುತ್ತಮ ಸಂಗೀತ ನಿರ್ದೇಶನ

ಬ್ರಹ್ಮಾಸ್ತ್ರ-

ಭಾಗ 1: ಶಿವ

 

(ಹಿಂದಿ)

ಸಂಗೀತ ನಿರ್ದೇಶಕ (ಹಾಡುಗಳು): ಪ್ರೀತಮ್

ರಜತ ಕಮಲ

 

ರೂ. 2,00,000/-‌

 

 

ಪೊನ್ನಿಯಿನ್ ಸೆಲ್ವನ್-ಭಾಗ I

 

(ತಮಿಳು)

 

ಸಂಗೀತ ನಿರ್ದೇಶಕ (ಹಿನ್ನೆಲೆ ಸಂಗೀತ): ಎ ಆರ್ ರೆಹಮಾನ್

 

ರಜತ ಕಮಲ

 

ರೂ. 2,00,000/-

22

ಅತ್ಯುತ್ತಮ ಸಾಹಿತ್ಯ

ಫೌಜಾ

 

(ಹರ್ಯಾನ್ವಿ)

ಸಾಹಿತ್ಯ: ನೌಶಾದ್ ಸದರ್ ಖಾನ್

(ಸಲಾಮಿ)

ರಜತ ಕಮಲ

 

ರೂ. 2,00,000/-

23

ಅತ್ಯುತ್ತಮ ನೃತ್ಯ ಸಂಯೋಜನೆ

ತಿರುಚಿತ್ರಾಂಬಲಂ

 

(ತಮಿಳು)

ನೃತ್ಯ ನಿರ್ದೇಶಕ: ಜಾನಿ ಮಾಸ್ಟರ್ ಮತ್ತು ಸತೀಶ್ ಕೃಷ್ಣನ್

 

(ಮೇಘಂ ಕರುಕಥಾ)

ರಜತ ಕಮಲ

 

ರೂ. 2,00,000/-

(ಹಂಚಿಕೊಳ್ಳಲಾಗಿದೆ)

24

ಅತ್ಯುತ್ತಮ ಸಾಹಸ ನಿರ್ದೇಶನ (ಸ್ಟಂಟ್ ಕೊರಿಯೋಗ್ರಫಿ)

ಕೆಜಿಎಫ್ ಚಾಪ್ಟರ್-2

 

(ಕನ್ನಡ)

ಸ್ಟಂಟ್ ಕೊರಿಯೋಗ್ರಾಫರ್: ಅನ್ಬರಿವ್

ರಜತ ಕಮಲ

 

ರೂ. 2,00,000/-

25

ಸಂವಿಧಾನದ ಶೆಡ್ಯೂಲ್‌ VIII ರಲ್ಲಿ ನಿರ್ದಿಷ್ಟಪಡಿಸಿದ  ಪ್ರತಿ ಭಾಷೆಯ ಅತ್ಯುತ್ತಮ ಚಲನಚಿತ್ರ

ಅತ್ಯುತ್ತಮ ಅಸ್ಸಾಮಿ ಚಿತ್ರ

ಈಮುತಿ ಪುತಿ

(ಎ ವೆರಿ ಫಿಶಿ ಟ್ರಿಪ್)

ನಿರ್ಮಾಣ: ಮೆಟಾನಾರ್ಮಲ್ ಮೋಷನ್ ಪಿಕ್ಚರ್ಸ್ ಪ್ರೈ. ಲಿ

 

ನಿರ್ದೇಶಕರು: ಕುಲನಂದಿನಿ ಮಹಂತ

ರಜತ ಕಮಲ

 

ರೂ. 2,00,000/-

(ತಲಾ)

ಬಿ

ಅತ್ಯುತ್ತಮ ಬಂಗಾಳಿ ಚಿತ್ರ

ಕಬೇರಿ ಅಂತರಧನ

(ಕಬೇರಿ ವನಿಶೇಸ್)

ನಿರ್ಮಾಣ: ಸುರಿಂದರ್ ಫಿಲ್ಮ್ಸ್ ಪ್ರೈ. ಲಿಮಿಟೆಡ್

 

ನಿರ್ದೇಶಕ: ಕೌಶಿಕ್ ಗಂಗೂಲಿ

ರಜತ ಕಮಲ

 

ರೂ. 2,00,000/-

(ತಲಾ)

ಸಿ

ಅತ್ಯುತ್ತಮ ಹಿಂದಿ ಚಿತ್ರ

ಗುಲ್ಮೊಹರ್

ನಿರ್ಮಾಣ: ಸ್ಟಾರ್ ಇಂಡಿಯಾ ಪ್ರೈ. ಲಿಮಿಟೆಡ್

 

ನಿರ್ದೇಶಕ: ರಾಹುಲ್ ವಿ. ಚಿತ್ತೆಲ್ಲಾ

ರಜತ ಕಮಲ

 

ರೂ. 2,00,000/-

(ತಲಾ)

ಡಿ

ಅತ್ಯುತ್ತಮ ಕನ್ನಡ ಚಿತ್ರ

ಕೆಜಿಎಫ್-ಚಾಪ್ಟರ್-2

ನಿರ್ಮಾಣ: ಹೊಂಬಾಳೆ ಫಿಲ್ಮ್ಸ್ ಎಲ್ ಎಲ್‌ ಪಿ

 

ನಿರ್ದೇಶಕ: ಪ್ರಶಾಂತ್ ನೀಲ್

ರಜತ ಕಮಲ

 

ರೂ. 2,00,000/-

(ತಲಾ)

ಅತ್ಯುತ್ತಮ ಮಲಯಾಳಂ ಚಿತ್ರ

ಸೌದಿ ವೆಲ್ಲಕ್ಕ CC.225/2009

(ಸೌದಿ ಬೇಬಿ ಕೊಕೊನಟ್ CC.225/2009)

ನಿರ್ಮಾಣ: ಊರ್ವಸಿ ಥಿಯೇಟರ್ಸ್

 

ನಿರ್ದೇಶಕ: ತರುಣ್ ಮೂರ್ತಿ

ರಜತ ಕಮಲ

 

ರೂ. 2,00,000/-

(ತಲಾ)

ಎಫ್‌

ಅತ್ಯುತ್ತಮ ಮರಾಠಿ ಚಿತ್ರ

ವಾಲ್ವಿ

(ದಿ ಟರ್ಮೈಟ್)

ನಿರ್ಮಾಣ: ಮಯಸಭಾ ಕರಮಾನುಕ್ ಮಂಡಳಿ, ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್.

 

ನಿರ್ದೇಶಕ: ಪರೇಶ್ ಮೊಕಾಶಿ

ರಜತ ಕಮಲ

 

ರೂ. 2,00,000/-

(ತಲಾ)

ಜಿ

ಅತ್ಯುತ್ತಮ ಒಡಿಯಾ ಚಿತ್ರ

ದಮನ್

ನಿರ್ಮಾಣ: ಜೆಪಿ ಮೋಷನ್ ಪಿಕ್ಚರ್ಸ್

 

ನಿರ್ದೇಶಕ: ವಿಶಾಲ್ ಮೌರ್ಯ ಮತ್ತು ದೇಬಿ ಪ್ರಸಾದ್ ಲೆಂಕಾ

ರಜತ ಕಮಲ

 

ರೂ. 2,00,000/-

(ತಲಾ)

ಎಚ್‌

ಅತ್ಯುತ್ತಮ ಪಂಜಾಬಿ ಚಿತ್ರ

ಬಾಘಿ ಡಿ ಧೀ

(ದಿ ಡಾಟರ್‌ ಆಫ್‌ ಎ ರೆಬೆಲ್)

ನಿರ್ಮಾಣ: ಜಿ-ನೆಕ್ಸ್ಟ್ ಮೀಡಿಯಾ ಪ್ರೈ. ಲಿಮಿಟೆಡ್

 

ನಿರ್ದೇಶಕ: ಮುಖೇಶ್ ಗೌತಮ್

ರಜತ ಕಮಲ

 

ರೂ. 2,00,000/-

(ತಲಾ)

ಅತ್ಯುತ್ತಮ ತಮಿಳು ಚಿತ್ರ

ಪೊನ್ನಿಯಿನ್ ಸೆಲ್ವನ್-ಭಾಗ I

ನಿರ್ಮಾಣ: ಮದ್ರಾಸ್ ಟಾಕೀಸ್

 

ನಿರ್ದೇಶಕ: ಮಣಿರತ್ನಂ

ರಜತ ಕಮಲ

 

ರೂ. 2,00,000/-

(ತಲಾ)

ಜೆ

ಅತ್ಯುತ್ತಮ ತೆಲುಗು ಚಿತ್ರ

ಕಾರ್ತಿಕೇಯ-2 - (ದೈವಂ ಮನುಷ್ಯ ರೂಪೇನಾ)

ನಿರ್ಮಾಣ: ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಎಲ್ ಎಲ್ ಪಿ, ಪೀಪಲ್ ಮೀಡಿಯಾ ಫ್ಯಾಕ್ಟರಿ

 

ನಿರ್ದೇಶಕ: ಚಂದೂ ಮೊಂಡೇಟಿ

ರಜತ ಕಮಲ

 

ರೂ. 2,00,000/-

(ತಲಾ)

26

ಸಂವಿಧಾನದ ಶೆಡ್ಯೂಲ್‌ VIII ರಲ್ಲಿ ನಿರ್ದಿಷ್ಟಪಡಿಸಿದ  ಭಾಷೆಗಳನ್ನು ಹೊರತುಪಡಿಸಿದ ಭಾಷೆಗಳ ಅತ್ಯುತ್ತಮ ಚಲನಚಿತ್ರ

ಅತ್ಯುತ್ತಮ ತಿವಾ ಚಿತ್ರ

ಸಿಕೈಸಲ್

(ಇಫ್‌ ಓನ್ಲಿ ಟ್ರೀಸ್‌ ಕುಡ್‌ ಟಾಕ್)

 

(ತಿವಾ)

ನಿರ್ಮಾಣ: ಇಮೇಜಿಂಗ್ ಮೀಡಿಯಾ

 

ನಿರ್ದೇಶಕ: ಡಾ. ಬಾಬಿ ಶರ್ಮಾ ಬರುವಾ

ರಜತ ಕಮಲ

 

ರೂ. 2,00,000/-

(ತಲಾ)

27

ವಿಶೇಷ ಉಲ್ಲೇಖ

ಗುಲ್ಮೊಹರ್

(ಹಿಂದಿ)

 

 

ಕದಿಕನ್

(ಮಲಯಾಳಂ)

ನಟ: ಮನೋಜ್ ಬಾಜಪೇಯಿ

 

 

ಸಂಗೀತ ನಿರ್ದೇಶಕ: ಸಂಜಯ್ ಸಲೀಲ್ ಚೌಧರಿ

ಪ್ರಮಾಣಪತ್ರ

 

 

 

ಪ್ರಮಾಣಪತ್ರ

 

 

 

*****



(Release ID: 2046171) Visitor Counter : 10