ಕೃಷಿ ಸಚಿವಾಲಯ
azadi ka amrit mahotsav

ಪ್ರಧಾನ ಮಂತ್ರಿಯವರು 109 ವಿಧದ ಅಧಿಕ ಇಳುವರಿ, ಹವಾಮಾನ ಸ್ನೇಹಿ ಮತ್ತು ಸಾವಯವ ಬೆಳೆ ತಳಿಗಳನ್ನು ಬಿಡುಗಡೆ ಮಾಡಿದರು


ಕೃಷಿಯಲ್ಲಿ ಮೌಲ್ಯವರ್ಧನೆಯ ಅಗತ್ಯತೆಗೆ ಒತ್ತು ನೀಡಿದ ಪ್ರಧಾನಮಂತ್ರಿಗಳು

ಈ ಬೆಳೆ ಬೀಜಗಳು ಹವಾಮಾನ ಸ್ನೇಹಿ ಮತ್ತು ಕೆಟ್ಟ ಹವಾಮಾನದಲ್ಲೂಉತ್ತಮ ಬೆಳೆಗಳನ್ನು ಉತ್ಪಾದಿಸಬಲ್ಲವು: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಇಂದಿನ ಕಾರ್ಯಕ್ರಮವು ಲ್ಯಾಬ್ ಟು ಲ್ಯಾಂಡ್ ಕಾರ್ಯಕ್ರಮಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ: ಶ್ರೀ ಚೌಹಾಣ್

Posted On: 11 AUG 2024 5:40PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ 109 ವಿಧದ ಹೆಚ್ಚು ಇಳುವರಿ, ಹವಾಮಾನ ಸಹಿಷ್ಣು ಮತ್ತು ಜೈವಿಕ ಬಲವರ್ಧಿತ ಬೆಳೆ ತಳಿಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು. ಈ ಹೊಸ ಬೆಳೆ ಪ್ರಭೇದಗಳ ಪ್ರಾಮುಖ್ಯತೆಯ ಕುರಿತು ಚರ್ಚಿಸಿದ ಪ್ರಧಾನಮಂತ್ರಿಗಳು ಕೃಷಿಯಲ್ಲಿ ಮೌಲ್ಯವರ್ಧನೆಯ ಅಗತ್ಯತೆಗೆ ಒತ್ತು ನೀಡಿದರು. ಈ ಹೊಸ ಪ್ರಭೇದಗಳು ತಮ್ಮ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ರೈತರು ಹೇಳಿದರು.

ಪ್ರಧಾನ ಮಂತ್ರಿಯವರು ಸಿರಿಧಾನ್ಯಗಳ ಮಹತ್ವವನ್ನು ಚರ್ಚಿಸಿ, ಜನರು ಹೇಗೆ ಪೌಷ್ಟಿಕ ಆಹಾರದತ್ತ ಸಾಗುತ್ತಿದ್ದಾರೆ ಎಂಬುದನ್ನು ಒತ್ತಿ ಹೇಳಿದರು. ಸಾವಯವ ಕೃಷಿಯನ್ನು ಉತ್ತೇಜಿಸಲು ಸರ್ಕಾರ ಕೈಗೊಂಡ ಪ್ರಯತ್ನಗಳನ್ನು ರೈತರು ಶ್ಲಾಘಿಸಿದರು.

KVK ಗಳು ಪ್ರತಿ ತಿಂಗಳು ಅಭಿವೃದ್ಧಿಪಡಿಸಿದ ಹೊಸ ತಳಿಗಳ ಪ್ರಯೋಜನಗಳ ಬಗ್ಗೆ ರೈತರಿಗೆ ಸಕ್ರಿಯವಾಗಿ ತಿಳಿಸಬೇಕು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಪ್ರಧಾನಮಂತ್ರಿಯವರು ಸಲಹೆ ನೀಡಿದರು.

ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದ 61 ಬೆಳೆಗಳ 109 ವಿಧಗಳಲ್ಲಿ 34 ಹೊಲ ಬೆಳೆಗಳು ಮತ್ತು 27 ತೋಟಗಾರಿಕಾ ಬೆಳೆಗಳು ಸೇರಿವೆ . ಹೊಲ ಬೆಳೆಗಳಲ್ಲಿ, ರಾಗಿ , ಮೇವಿನ ಬೆಳೆಗಳು , ಎಣ್ಣೆಕಾಳುಗಳು , ದ್ವಿದಳ ಧಾನ್ಯಗಳು , ಕಬ್ಬು , ಹತ್ತಿ , ನಾರು ಮತ್ತು ಇತರ ಸಂಭಾವ್ಯ ಬೆಳೆಗಳು ಸೇರಿದಂತೆ ವಿವಿಧ ಧಾನ್ಯಗಳ ಬೀಜಗಳನ್ನು ಬಿಡುಗಡೆ ಮಾಡಲಾಯಿತು . ತೋಟಗಾರಿಕಾ ಬೆಳೆಗಳಲ್ಲಿ, ವಿವಿಧ ಹಣ್ಣುಗಳು , ತರಕಾರಿ ಬೆಳೆಗಳು , ತೋಟದ ಬೆಳೆಗಳು , ಗೆಡ್ಡೆ ಬೆಳೆಗಳು , ಸಾಂಬಾರು ಪದಾರ್ಥಗಳು , ಹೂವುಗಳು ಮತ್ತು ಔಷಧೀಯ ಬೆಳೆಗಳು ಸೇರಿವೆ .

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್, , ಬಿಡುಗಡೆ ಮಾಡಲಾದ 61 ಬೆಳೆಗಳ 109 ಪ್ರಭೇದಗಳು ರೈತರಿಗೆ ಹೆಚ್ಚು ಉತ್ಪಾದನೆ, ಹೆಚ್ಚು ಆದಾಯ ಮತ್ತು ಕಡಿಮೆ ವೆಚ್ಚಕ್ಕೆ ಸಹಾಯ ಮಾಡುವ ಕಾರಣ ಇಂದು ರೈತರಿಗೆ ಮಹತ್ವದ ದಿನ ಎಂದು ಹೇಳಿದರು. ಈ ಬೆಳೆಗಳ ಬೀಜಗಳು ಹವಾಮಾನ ಸ್ನೇಹಿಯಾಗಿದ್ದು ಪ್ರತಿಕೂಲ ವಾತಾವರಣದಲ್ಲೂ ಉತ್ತಮ ಬೆಳೆ ನೀಡಬಲ್ಲವು ಎಂದು ಶ್ರೀ ಚೌಹಾಣ್ ಹೇಳಿದರು. ಈ ಪ್ರಭೇದಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ ಎಂದು ಅವರು ಮಾಹಿತಿ ನೀಡಿದರು. ಇಂದಿನ ಕಾರ್ಯಕ್ರಮವು ಲ್ಯಾಬ್ ಟು ಲ್ಯಾಂಡ್ (ಪ್ರಯೋಗಾಲಯದಿಂದ ಹೊಲಕ್ಕೆ) ಯೋಜನೆಗೆ ಅತ್ಯುತ್ತಮ ಉದಾಹರಣೆಯಾಗಿದೆ  ಎಂದರು.  

ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಮುಂದಿನ ಮೂರು ವರ್ಷಗಳಲ್ಲಿ ರೈತರಿಗೆ 109 ವಿಧದ ಬೀಜಗಳನ್ನು ವಿತರಿಸುವ ಗುರಿಯನ್ನು ಹೊಂದಿರುವುದಾಗಿ ಘೋಷಿಸಿದರು. ಇದಲ್ಲದೆ, ನಮ್ಮದೇ ದೇಶೀಯ ಮಾವುಗಳು ಹೆಚ್ಚು ಇಳುವರಿ ನೀಡುವುದು, ಹೆಚ್ಚು ಆಕರ್ಷಕವಾಗಿರುವುದು ಮತ್ತು ಹೆಚ್ಚು ಕಾಲ ಉಳಿಯುವ ಗುಣಗಳನ್ನು ಹೊಂದಿರುವುದರಿಂದ ವಿದೇಶಿ ಮಾವುಗಳ ಆಮದು ಅಗತ್ಯವಿಲ್ಲ ಎಂದು ಅವರು ಹೇಳಿದರು. ಇವೆಲ್ಲವೂ ರೈತರ ಆದಾಯವನ್ನು ಹೆಚ್ಚಿಸುತ್ತವೆ. ಈ ಎಲ್ಲ ತಳಿಗಳು ಸಾವಯವ ಕೃಷಿಗೆ ಸೂಕ್ತವಾಗಿದ್ದು , ಈ ಕುರಿತು ಸಂಶೋಧನೆಗಳು ನಡೆಯುತ್ತಿವೆ ಎಂದರು.

ಪ್ರತಿ ತಿಂಗಳಲ್ಲಿ ಒಂದು ದಿನ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ ತಜ್ಞರು ರೈತರೊಂದಿಗೆ ಸಂವಾದ ನಡೆಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಕೃಷಿಗೆ ಸಂಬಂಧಿಸಿದ ಪ್ರಸ್ತುತ ಸಮಸ್ಯೆಯನ್ನು ನಿಭಾಯಿಸುವುದು ಮತ್ತು ಪರಸ್ಪರ ಕಲಿಕೆಯ ಮೂಲಕ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುವುದು ಈ ಸಂವಾದದ ಉದ್ದೇಶವಾಗಿರಬೇಕು ಎಂದು ಅವರು ಕೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಭಗೀರಥ ಚೌಧರಿ ಮತ್ತು ಶ್ರೀ ರಾಮನಾಥ್ ಠಾಕೂರ್ ಮತ್ತು ICAR ನ ಡಿಜಿ ಮತ್ತು DARE ನ ಕಾರ್ಯದರ್ಶಿ ಡಾ. ಹಿಮಾಂಶು ಪಾಠಕ್ ಸಹ ಉಪಸ್ಥಿತರಿದ್ದರು ಮತ್ತು ಅವರೊಂದಿಗೆ ಹತ್ತಿರದ ರಾಜ್ಯಗಳ 30 ರೈತರು ಮತ್ತು ಎಲ್ಲಾ DDG ಗಳು ಮತ್ತು ICAR ನ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

*****


(Release ID: 2044417) Visitor Counter : 63