ಜವಳಿ ಸಚಿವಾಲಯ
azadi ka amrit mahotsav

ಸ್ಥಳೀಯ ಆರ್ಥಿಕತೆ ಮತ್ತು ಜವಳಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದನ್ನು ಖಚಿತಪಡಿಸಲು PM ಮಿತ್ರ ಯೋಜನೆ

Posted On: 09 AUG 2024 6:16PM by PIB Bengaluru

ಗ್ರೀನ್‌ಫೀಲ್ಡ್/ಬ್ರೌನ್‌ಫೀಲ್ಡ್ ಸೈಟ್‌ಗಳಲ್ಲಿ ಪ್ಲಗ್ ಮತ್ತು ಪ್ಲೇ ಸೌಲಭ್ಯ ಸೇರಿದಂತೆ ವಿಶ್ವದರ್ಜೆಯ ಮೂಲ ಸೌಕರ್ಯದೊಂದಿಗೆ 7 (ಏಳು) PM ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ಪ್ರದೇಶ ಮತ್ತು ಅಪಾರಲ್ (PM MITRA) ಪಾರ್ಕ್‌ಗಳನ್ನು ಸ್ಥಾಪಿಸಲು ಸರ್ಕಾರವು ಅನುಮೋದನೆ ನೀಡಿದೆ. 

2027-28 ರವರೆಗಿನ ಏಳು ವರ್ಷಗಳ ಅವಧಿಗೆ 4,445 ಕೋಟಿ ರೂ. ಮೊತ್ತ ವೆಚ್ಚದಲ್ಲಿ 7 ಪಾರ್ಕ್ ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ತಮಿಳುನಾಡು (ವಿರುಧನಗರ), ತೆಲಂಗಾಣ (ವಾರಂಗಲ್), ಗುಜರಾತ್ (ನವಸಾರಿ), ಕರ್ನಾಟಕ (ಕಲಬುರಗಿ), ಮಧ್ಯಪ್ರದೇಶ (ಧಾರ್), ಉತ್ತರ ಪ್ರದೇಶ (ಲಖನೌ), ಮಹಾರಾಷ್ಟ್ರ (ಅಮರಾವತಿ)ದಲ್ಲಿ ಪಿಎಂ ಮಿತ್ರ ಪಾರ್ಕ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಒಮ್ಮೆ ಪೂರ್ಣಗೊಂಡ ನಂತರ, ಪ್ರತಿ ಉದ್ಯಾನವನವು ಸುಮಾರು ಹತ್ತು ಸಾವಿರ  ಕೋಟಿ ರೂ.ಗಳ ಹೂಡಿಕೆ ಆಕರ್ಷಿಸಬಹುದಾಗಿದೆ. (ವಿದೇಶಿ ಮತ್ತು ದೇಶೀಯ ಎರಡೂ) ಇದರಿಂದ ಸ್ಥಳೀಯ ಆರ್ಥಿಕತೆ ಮತ್ತು ಜವಳಿ ಪರಿಸರ ವ್ಯವಸ್ಥೆಗೆ ಲಾಭವಾಗಲಿದೆ.

ಎಲ್ಲಾ 5 ಗ್ರೀನ್‌ಫೀಲ್ಡ್ ಸೈಟ್‌ಗಳಿಗೆ ಸಂಬಂಧಿಸಿದಂತೆ ವಿಶೇಷ ಉದ್ದೇಶದ ವಾಹನಗಳ (SPV) ತಯಾರಿಕೆಗೆ ಆದ್ಯತೆ ನೀಡಲಾಗುವುದು. ಗುಜರಾತ್, ತಮಿಳುನಾಡು, ಕರ್ನಾಟಕ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶವನ್ನು ವಿಶೇಷವಾಗಿ ಆಯ್ಕೆ ಮಾಡಲಾಗಿದೆ.

ಬ್ರೌನ್‌ಫೀಲ್ಡ್ ಸೈಟ್‌ಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ತೆಲಂಗಾಣ, ಮಾರ್ಗಸೂಚಿಗಳ ಪ್ರಕಾರ ಅಸ್ತಿತ್ವದಲ್ಲಿರುವ ಅನುಷ್ಠಾನ ವ್ಯವಸ್ಥೆಗಳನ್ನು ಮುಂದುವರಿಸಲು ಅನುಮತಿಸಲಾಗಿದೆ.

PM MITRA ಪಾರ್ಕ್ ಯೋಜನೆಯಡಿ, ಗ್ರೀನ್‌ಫೀಲ್ಡ್ PM MITRA ಮತ್ತು ಬ್ರೌನ್‌ಫೀಲ್ಡ್ PM ಪಾರ್ಕ್‌ಗಳ ಅಭಿವೃದ್ಧಿಗಾಗಿ, 500 ಕೋಟಿ ರೂ.ಗಳ ಗರಿಷ್ಠ ಬೆಂಬಲದೊಂದಿಗೆ ಯೋಜನಾ ವೆಚ್ಚದ 30% ಕೋರ್ ಮೂಲಸೌಕರ್ಯವನ್ನು ರಚಿಸಲು ಡೆವಲಪ್‌ಮೆಂಟ್ ಕ್ಯಾಪಿಟಲ್ ಸಪೋರ್ಟ್ (DCS) ಅನ್ನು ಒದಗಿಸಲಾಗಿದೆ ಮತ್ತು ಕೇಂದ್ರ ಸರ್ಕಾರದಿಂದ ಗ್ರೀನ್‌ಫೀಲ್ಡ್ ಮತ್ತು ಬ್ರೌನ್‌ಫೀಲ್ಡ್ PM MITRA ಗಾಗಿ ಪ್ರತಿ ಟೆಕ್ಸ್ ಟೈಲ್ ಪಾರ್ಕ್ ಗಾಗಿ ರೂ.200 ಕೋಟಿ ಅನುದಾನ ನೀಡಲಾಗುವುದು. ಹೆಚ್ಚುವರಿಯಾಗಿ, ಸ್ಪರ್ಧಾತ್ಮಕ ಪ್ರೋತ್ಸಾಹಕ ಬೆಂಬಲ (CIS) ವೈಯಕ್ತಿಕ ಘಟಕಗಳಿಗೆ, ಪ್ರತಿ ಪಾರ್ಕ್ ಗೆ  300 ಕೋಟಿಗಳು ಮತ್ತು ಸ್ಕೀಮ್ ಮಾರ್ಗಸೂಚಿಗಳಿಗೆ ಒಳಪಟ್ಟು ಪಿಎಂ-ಮಿತ್ರಾ ಅಡಿಯಲ್ಲಿ ಉತ್ಪಾದನಾ ಘಟಕಗಳನ್ನು ಪಿಎಂ ಮಿತ್ರ ಪಾರ್ಕ್‌ಗಳಲ್ಲಿ  ಶೀಘ್ರವಾಗಿ ಸ್ಥಾಪಿಸಲು ಪ್ರೋತ್ಸಾಹಿಸಲು ಸಹ ಒದಗಿಸಲಾಗಿದೆ.

ಈ ಮಾಹಿತಿಯನ್ನು ಕೇಂದ್ರ ಜವಳಿ ಖಾತೆ ರಾಜ್ಯ ಸಚಿವರಾದ ಶ್ರೀ ಪಬಿತ್ರಾ ಮಾರ್ಗರಿಟಾ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

 

*****


(Release ID: 2044137) Visitor Counter : 46