ಆಯುಷ್
ಪ್ರಧಾನ ಮಂತ್ರಿ - ಜನ ಆರೋಗ್ಯ ಯೋಜನೆ (ಪಿ.ಎಂ.-ಜೆ.ಎ.ವೈ) ಅಡಿಯಲ್ಲಿ ಆಯುಷ್
Posted On:
09 AUG 2024 5:36PM by PIB Bengaluru
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ - ಜನ ಆರೋಗ್ಯ ಯೋಜನೆಯು (ಎ.ಬಿ. ಪಿ.ಎಂ.-ಜೆ.ಎ.ವೈ) ಭಾರತದ ಜನಸಂಖ್ಯೆಯ ಆರ್ಥಿಕವಾಗಿ ಕೆಳವರ್ಗದ ಸರಿಸುಮಾರು 40% ರಷ್ಟಿರುವ 12.34 ಕೋಟಿ ಕುಟುಂಬಗಳಿಗೆ, ಅಂದರೆ ಸರಿಸುಮಾರು 55 ಕೋಟಿ ಫಲಾನುಭವಿಗಳಿಗೆ ಅನುಗುಣವಾಗಿ ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆಗೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ರೂ.5 ಲಕ್ಷಗಳ ಆರೋಗ್ಯ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ - ಜನ ಆರೋಗ್ಯ ಯೋಜನೆಯು (ಎ.ಬಿ. ಪಿ.ಎಂ.-ಜೆ.ಎ.ವೈ) ಆಯುಷ್ ಪ್ಯಾಕೇಜ್ ಗಳನ್ನು ಸೇರಿಸಲು ಪ್ರಸ್ತಾಪಿಸಲಾಗಿದೆ. ಈ ನಿಟ್ಟಿನಲ್ಲಿ, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ - ಜನ ಆರೋಗ್ಯ ಯೋಜನೆಯು (ಎ.ಬಿ. ಪಿ.ಎಂ.-ಜೆ.ಎ.ವೈ) ಜೊತೆಗೆ ಆಯುಷ್ ಪ್ಯಾಕೇಜ್ ಗಳ ಪ್ರಸ್ತಾವಿತ ಒಟ್ಟಾಗಿ ಅನುಷ್ಠಾನದ ಮಾದರಿಯ ಕುರಿತು ಅಗತ್ಯ ಚರ್ಚೆಗಾಗಿ ಎನ್.ಹೆಚ್.ಎ. ಮತ್ತು ಭಾರತ ಸರ್ಕಾರದ ಆಯುಷ್ ಸಚಿವಾಲಯ, ನಡುವಿನ ಸಭೆಗಳನ್ನು ನಡೆಸಲಾಗಿದೆ. ಇದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ವ್ಯಾಪಕ ಮಧ್ಯಸ್ಥಗಾರರ ಸಮಾಲೋಚನೆಗಳನ್ನು ನಡೆಸಲಾಗಿದೆ. ಇದಲ್ಲದೆ, ಪ್ಯಾಕೇಜ್ ವಿನ್ಯಾಸ, ಪ್ಯಾಕೇಜ್ ವೆಚ್ಚ, ಆಯುಷ್ ಆಸ್ಪತ್ರೆಯ ಆನ್-ಬೋರ್ಡಿಂಗ್, ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿಗಳು (ಎಸ್.ಟಿ.ಜಿ.ಗಳು), ವಸ್ತುನಿಷ್ಠವಾಗಿ ವ್ಯಾಖ್ಯಾನಿಸಲಾದ ಚಿಕಿತ್ಸಾ ಫಲಿತಾಂಶಗಳು, ಆರ್ಥಿಕ ಪರಿಣಾಮಗಳು ಇತ್ಯಾದಿ ಸೇರಿದಂತೆ ಆಯುಷ್ ಪ್ಯಾಕೇಜ್ ಏಕೀಕರಣದ ವಿವಿಧ ಅಂಶಗಳ ಕುರಿತು ಚರ್ಚೆಗಳು ನಡೆಯುತ್ತಿವೆ.
(i) ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿ.ಜಿ.ಹೆಚ್.ಎಸ್.) ನಲ್ಲಿ ದಾಖಲಾಗಿರುವ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಅಲೋಪತಿ ಮತ್ತು ಆಯುಷ್ ಅಂದರೆ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಔಷಧಗಳ ಮೂಲಕ ಆರೋಗ್ಯ ಸೇವೆಗಳನ್ನು ಪಡೆಯಲು ಅವಕಾಶವನ್ನು ಹೊಂದಿದ್ದಾರೆ. ಪ್ರಸ್ತುತ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿ.ಜಿ.ಹೆಚ್.ಎಸ್.) ಈಗಾಗಲೇ ಒಂದು ಆಯುರ್ವೇದ ಆಸ್ಪತ್ರೆ ಜೊತೆಗೆ 110 ಆಯುಷ್ ಸ್ವಾಸ್ಥ್ಯ ಕೇಂದ್ರಗಳನ್ನು ನಡೆಸುತ್ತಿದೆ. ಹೆಚ್ಚುವರಿಯಾಗಿ, ಕೇಂದ್ರ ಆಯುಷ್ ಸಚಿವಾಲಯದ ಅಡಿಯಲ್ಲಿ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ (ಎಂ.ಡಿ.ಎನ್.ಐ.ವೈ.) ಸಹಯೋಗದೊಂದಿಗೆ 20 ಯೋಗ ಇಂಟರ್ನಿಗಳು ವಿವಿಧ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿ.ಜಿ.ಹೆಚ್.ಎಸ್.) ಇದರ ಸ್ವಾಸ್ಥ್ಯ ಕೇಂದ್ರ (ವೆಲ್‌ನೆಸ್ ಸೆಂಟರ್) ಗಳಲ್ಲಿ ಫಲಾನುಭವಿಗಳಿಗೆ ಯೋಗ ಸಮಾಲೋಚನೆ, ತರಬೇತಿ, ಅಭ್ಯಾಸಗಳನ್ನು ಒದಗಿಸುತ್ತಾರೆ.
ಪ್ರಸ್ತುತ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿ.ಜಿ.ಹೆಚ್.ಎಸ್.) ದೆಹಲಿ/ಎನ್.ಸಿಆರ್. ನಲ್ಲಿ 54 ಎಂಪನೆಲ್ಡ್ ಆಯುಷ್ ಡೇ ಕೇರ್ ಥೆರಪಿ ಸೆಂಟರ್‌ಗಳನ್ನು ಹೊಂದಿದೆ ಮತ್ತು 45 ಎಂಪನೆಲ್ಡ್ ಐಪಿಡಿ (ಇನ್-ಪೇಷಂಟ್ ಡಿಪಾರ್ಟ್‌ಮೆಂಟ್) ಆಯುಷ್ ಹೆಲ್ತ್ ಕೇರ್ ಸಂಸ್ಥೆಗಳನ್ನು ದೇಶಾದ್ಯಂತ ಹೊಂದಿದೆ. ಈ ಸೌಲಭ್ಯಗಳು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿ.ಜಿ.ಹೆಚ್.ಎಸ್.) ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿ.ಜಿ.ಹೆಚ್.ಎಸ್.) - ಅನುಮೋದಿತ ಕಾರ್ಯವಿಧಾನಗಳು ಮತ್ತು ದರಗಳಿಗೆ ಅನುಗುಣವಾಗಿ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಮತ್ತು ಸಿದ್ಧ ಔಷಧಿಗಳನ್ನು ಜೊತೆಗೆ ಸಮಗ್ರ ಆರೋಗ್ಯ ರಕ್ಷಣೆಯನ್ನು ಕೂಡಾ ನೀಡುತ್ತವೆ.
ಈ ನೆಟ್‌ವರ್ಕ್ ಆಯುಷ್ ವ್ಯವಸ್ಥೆಗಳನ್ನು ಒಳಗೊಂಡಿರುವ ವೈವಿಧ್ಯಮಯ ಆರೋಗ್ಯ ಸೇವೆಗಳನ್ನು ಒದಗಿಸುವ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ. ಇದರಿಂದಾಗಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿ.ಜಿ.ಹೆಚ್.ಎಸ್.) ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಫಲಾನುಭವಿಗಳಿಗೆ ಸಮಗ್ರ ಆರೋಗ್ಯ ಅಗತ್ಯಗಳನ್ನು ಪೂರೈಸುತ್ತದೆ.
(ii) ಕೇಂದ್ರ ಆಯುಷ್ ಸಚಿವಾಲಯವು ಹಣಕಾಸು ವರ್ಷ 2021-22 ರಿಂದ ಕೇಂದ್ರ ವಲಯದ ಆಯುರ್ಸ್ವಾಸ್ಥ್ಯ ಯೋಜನೆಯನ್ನು ಜಾರಿಗೊಳಿಸಿದೆ. ಯೋಜನೆಯು 02 ಘಟಕಗಳನ್ನು ಹೊಂದಿದೆ ಅವುಗಳೆಂದರೆ-
(ಎ) ಆಯುಷ್ ಮತ್ತು ಸಾರ್ವಜನಿಕ ಆರೋಗ್ಯ
(ಬಿ) ಉತ್ಕೃಷ್ಟತೆಯ ಕೇಂದ್ರ (ಸಿಒಇ)
ಆಯುಷ್ ಮತ್ತು ಆಯುರ್ವಾಸ್ಥ್ಯ ಯೋಜನೆಯ ಸಾರ್ವಜನಿಕ ಆರೋಗ್ಯ ಘಟಕದ ಅಡಿಯಲ್ಲಿ, ಆಯುಷ್ ಔಷಧಿಗಳ ವಿತರಣೆಯನ್ನು ಒದಗಿಸಲಾಗಿದೆ ಮತ್ತು ಗ್ರಾಮೀಣ, ಬುಡಕಟ್ಟು ಜನಸಂಖ್ಯೆ ಮತ್ತು ನಗರಗಳಲ್ಲಿನ ಕೊಳೆಗೇರಿಗಳಂತಹ ಪ್ರದೇಶಗಳಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತದೆ. ಈ ಘಟಕದ ಅಡಿಯಲ್ಲಿ ಒಳಗೊಳ್ಳುವ 1.5 ಲಕ್ಷ ಜನಸಂಖ್ಯೆಯು ಕನಿಷ್ಠವಾಗಿರುತ್ತದೆ. ಯೋಜನೆಯಡಿ ವೈದ್ಯಕೀಯ ಮಧ್ಯಸ್ಥಿಕೆಯಿಂದ ಕನಿಷ್ಠ 1000 ಜನರು ಪ್ರಯೋಜನ ಪಡೆಯಬೇಕು.
(iii) ಸಾರ್ವಜನಿಕ ಆರೋಗ್ಯವು ರಾಜ್ಯದ ವಿಷಯವಾಗಿರುವುದರಿಂದ, ಆಯುಷ್ ಚಿಕಿತ್ಸೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಪ್ರಾಥಮಿಕ ಜವಾಬ್ದಾರಿಯು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಮೇಲಿದೆ. ಆದಾಗ್ಯೂ, ಆಯುಷ್ ಸಚಿವಾಲಯವು ಆಯುಷ್ ವ್ಯವಸ್ಥೆಯ ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಮೂಲಕ ರಾಷ್ಟ್ರೀಯ ಆಯುಷ್ ಮಿಷನ್ (ಎನ್.ಎ.ಎಂ.) ನ ಕೇಂದ್ರೀಯ ಪ್ರಾಯೋಜಿತ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಮತ್ತು ವಿವಿಧ ಚಟುವಟಿಕೆಗಳ ಅಡಿಯಲ್ಲಿ ಆಯುಷ್ ವ್ಯವಸ್ಥೆಯ ಔಷಧಿಗಳ ಮೂಲಕ ಸಮುದಾಯಕ್ಕೆ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಅವರ ಪ್ರಯತ್ನಗಳನ್ನು ರಾಷ್ಟ್ರೀಯ ಆಯುಷ್ ಮಿಷನ್ (ಎನ್.ಎ.ಎಂ.) ನ ಮಾರ್ಗಸೂಚಿಗಳ ನಿಬಂಧನೆಗಳ ಪ್ರಕಾರ ಬೆಂಬಲಿಸುತ್ತದೆ. ಮಿಷನ್ ಇತರ ವಿಷಯಗಳ ಪೈಕಿ (ಇಂಟರ್-ಅಲಿಯಾ) ಈ ಕೆಳಗಿನವುಗಳಿಗಾಗಿ ನಿಬಂಧನೆಗಳನ್ನು ಮಾಡುತ್ತದೆ: -
(i) ಅಸ್ತಿತ್ವದಲ್ಲಿರುವ ಆಯುಷ್ ಔಷಧಾಲಯಗಳು ಮತ್ತು ಆರೋಗ್ಯ ಉಪ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್) ಕಾರ್ಯನಿರ್ವಹಣೆ
(ii) ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿ.ಹೆಚ್.ಸಿ.ಗಳು), ಸಮುದಾಯ ಆರೋಗ್ಯ ಕೇಂದ್ರಗಳು (ಸಿ.ಹೆಚ್.ಸಿ.ಗಳು) ಮತ್ತು ಜಿಲ್ಲಾ ಆಸ್ಪತ್ರೆಗಳು (ಡಿ.ಹೆಚ್) ನಲ್ಲಿ ಆಯುಷ್ ಸೌಲಭ್ಯಗಳ ಸಹ-ಸ್ಥಳ ನಿರ್ಮಾಣ
(iii) ಸರ್ಕಾರಿ ಆಯುಷ್ ಆಸ್ಪತ್ರೆಗಳು, ಸರ್ಕಾರಿ ಡಿಸ್ಪೆನ್ಸರಿಗಳು ಮತ್ತು ಸರ್ಕಾರಿ/ಸರ್ಕಾರಿ ಅನುದಾನಿತ ಬೋಧನಾ ಸಾಂಸ್ಥಿಕ ಆಯುಷ್ ಆಸ್ಪತ್ರೆಗಳಿಗೆ ಅಗತ್ಯ ಔಷಧಗಳ ಪೂರೈಕೆ
(iv) ಅಸ್ತಿತ್ವದಲ್ಲಿರುವ ಸ್ವತಂತ್ರ ಸರ್ಕಾರಿ ಆಯುಷ್ ಆಸ್ಪತ್ರೆಗಳ ಉನ್ನತೀಕರಣ
(v) ಅಸ್ತಿತ್ವದಲ್ಲಿರುವ ಸರ್ಕಾರ/ಪಂಚಾಯತ್/ಸರ್ಕಾರದ ನೆರವಿನ ಆಯುಷ್ ದವಾಖಾನೆಗಳ ಉನ್ನತೀಕರಣ/ ಅಸ್ತಿತ್ವದಲ್ಲಿರುವ ಆಯುಷ್ ಡಿಸ್ಪೆನ್ಸರಿಗೆ ಕಟ್ಟಡ ನಿರ್ಮಾಣ (ಬಾಡಿಗೆ/ಶಿಥಿಲವಾದ ವಸತಿ)/ ಹೊಸ ಆಯುಷ್ ಡಿಸ್ಪೆನ್ಸರಿ ಸ್ಥಾಪಿಸಲು ಕಟ್ಟಡ ನಿರ್ಮಾಣ
(vi) 50/30/10 ಹಾಸಿಗೆಗಳ ಸಮಗ್ರ ಆಯುಷ್ ಆಸ್ಪತ್ರೆಗಳನ್ನು ಸ್ಥಾಪಿಸುವುದು
(vii) ಆಯುಷ್ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳು
(viii) ಸರ್ಕಾರಿ ವಲಯದಲ್ಲಿ ಆಯುಷ್ ಬೋಧನಾ ಸಂಸ್ಥೆಗಳ ಲಭ್ಯತೆ ಅಸಮರ್ಪಕವಾಗಿರುವ ರಾಜ್ಯಗಳಲ್ಲಿ ಹೊಸ ಆಯುಷ್ ಕಾಲೇಜುಗಳ ಸ್ಥಾಪನೆ
(ix) ಆಯುಷ್ ಪದವಿಪೂರ್ವ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ
(x) ಆಯುಷ್ ಸ್ನಾತಕೋತ್ತರ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ/ಪಿಜಿ/ಫಾರ್ಮಸಿ/ಪ್ಯಾರಾ ಮೆಡಿಕಲ್ ಕೋರ್ಸ್‌ಗಳಲ್ಲಿ ಸೇರ್ಪಡೆ.
ಎನ್.ಎ.ಎಂ ಮಾರ್ಗಸೂಚಿಯ ನಿಬಂಧನೆಗಳ ಪ್ರಕಾರ ರಾಜ್ಯ ವಾರ್ಷಿಕ ಕ್ರಿಯಾ ಯೋಜನೆಗಳಡಿಯಲ್ಲಿ (ಎಸ್.ಎ.ಎ.ಪಿ) ಪ್ರಸ್ತಾವನೆಗಳನ್ನು ಸಲ್ಲಿಸುವ ಮೂಲಕ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಹಣಕಾಸಿನ ಸಹಾಯವನ್ನು ಪಡೆಯಬಹುದು.
ಲೋಕಸಭೆಯಲ್ಲಿ ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವರಾದ (ಸ್ವತಂತ್ರ ಅಧಿಕಾರ) ಶ್ರೀ ಪ್ರತಾಪ್ ರಾವ್ ಜಾಧವ್ ಅವರು ಇಂದು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
*****
(Release ID: 2044134)
Visitor Counter : 82