ಕಾನೂನು ಮತ್ತು ನ್ಯಾಯ ಸಚಿವಾಲಯ

ನ್ಯಾಯಾಂಗದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ

Posted On: 09 AUG 2024 12:39PM by PIB Bengaluru

ಭಾರತದ ಸರ್ವೋಚ್ಚ ನ್ಯಾಯಾಲಯವು ವಿಶೇಷವಾಗಿ ಫೆಬ್ರವರಿಯಿಂದ ಸಂವಿಧಾನ ಪೀಠದ 2023 ವಿಷಯಗಳಲ್ಲಿ, ನ್ಯಾಯಾಂಗ ದಾಖಲೆಗಳ ಭಾಷಾಂತರದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ - ಎ.ಐ.) ಭಾಷಾ ತಂತ್ರಜ್ಞಾನದ ಬಳಕೆಯನ್ನು ಅಳವಡಿಸಿಕೊಂಡಿದೆ. ಅದೇರೀತಿಯಲ್ಲಿ, ಕಾನೂನು ಸಂಶೋಧನೆ ಮತ್ತು ಪ್ರಕ್ರಿಯೆ ಯಾಂತ್ರೀಕೃತಗೊಳಿಸುವಿಕೆ, ಮೌಖಿಕ ವಾದಗಳನ್ನು ಲಿಪ್ಯಂತರ ಮಾಡಲು ಇತ್ಯಾದಿ ಕೆಲಸಗಳಲ್ಲಿ ಸಹ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ - ಎ.ಐ.) ವ್ಯವಸ್ಥೆಯನ್ನು ನಿಯೋಜಿಸಲಾಗಿದೆ.

ಪ್ರಮುಖ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳನ್ನು ಸ್ಥಳೀಯ ಭಾಷೆಗಳಿಗೆ ಭಾಷಾಂತರಿಸಲು ಮೇಲ್ವಿಚಾರಣೆ ಮಾಡಲು ಭಾರತದ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ.  ಭಾಷಾಂತರ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಗೌರವಾನ್ವಿತ ನ್ಯಾಯಾಧೀಶರನ್ನು ಒಳಗೊಂಡಿರುವ ಹೈಕೋರ್ಟ್‌ಗಳ ಉಪಸಮಿತಿಗಳೊಂದಿಗೆ ಸಮಿತಿಯು ನಿಯಮಿತ ಸಭೆಗಳನ್ನು ನಡೆಸುತ್ತಿದೆ.

ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ತೀರ್ಪುಗಳನ್ನು ಸ್ಥಳೀಯ ಭಾಷೆಗೆ ಭಾಷಾಂತರಿಸಲು ಸಂಬಂಧಿಸಿದ ಸಂಪೂರ್ಣ ಕೆಲಸವನ್ನು ಉಚ್ಚ ನ್ಯಾಯಾಲಯಗಳ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ - ಎ.ಐ.) ಭಾಷಾಂತರ ಸಮಿತಿಗಳು ಮೇಲ್ವಿಚಾರಣೆ ಮಾಡುತ್ತಿವೆ. ಈ  ದಿನಾಂಕದ ವರೇಗೆ, ದೇಶದಾದ್ಯಂತ 8 ಹೈಕೋರ್ಟ್‌ಗಳು ಈಗಾಗಲೇ ಇ-ಹೈಕೋರ್ಟ್ ವರದಿಗಳನ್ನು (ಇ-ಎಚ್‌ಸಿಆರ್) ಪ್ರಾರಂಭಿಸಿವೆ ಮತ್ತು ಇತರ ಹೈಕೋರ್ಟ್‌ಗಳು ಇ-ಎಚ್‌ಸಿಆರ್ ಅನ್ನು ಸದ್ಯದಲ್ಲೇ ಪ್ರಾರಂಭಿಸುವ ಪ್ರಕ್ರಿಯೆಯಲ್ಲಿವೆ.

ಕೇಂದ್ರ ಮತ್ತು ರಾಜ್ಯಗಳ ಎಲ್ಲಾ ಶಾಸನಗಳು, ನಿಯಮಗಳು, ನಿಬಂಧನೆಗಳು ಇತ್ಯಾದಿಗಳನ್ನು ಪ್ರಾದೇಶಿಕ ಭಾಷೆಗೆ ಭಾಷಾಂತರಿಸಲು ಮತ್ತು ಸಾಮಾನ್ಯ ಜನರಿಗೆ ಓದಲು ಸಹಾಯ ಮಾಡಲು ರಾಜ್ಯ ಜಾಲತಾಣದಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಹಾಕಲು ಆಯಾ ರಾಜ್ಯ ಸರ್ಕಾರಗಳನ್ನು ವಿನಂತಿಸಲು ಹೈಕೋರ್ಟ್‌ಗಳ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ - ಎ.ಐ.) ಸಮಿತಿಗಳಿಗೆ ತಿಳಿಸಲಾಗಿದೆ.  ತೀರ್ಪುಗಳ ಅನುವಾದದ ಪ್ರಕ್ರಿಯೆಗಳಲ್ಲಿ ಆಯಾ ಹೈಕೋರ್ಟ್‌ಗಳಿಗೆ ಸಂಪೂರ್ಣ ಬೆಂಬಲವನ್ನು ನೀಡಲು ಎಲ್ಲಾ ರಾಜ್ಯ ಸರ್ಕಾರಗಳ ಮೇಲೆ ಪ್ರಭಾವ ಬೀರಿದೆ, ಏಕೆಂದರೆ ಇದು ಭಾರತದ ಸಂವಿಧಾನದ ಅಡಿಯಲ್ಲಿ ಕಲ್ಪಿಸಲಾದ 'ನ್ಯಾಯಕ್ಕೆ ಪ್ರವೇಶ ಅವಕಾಶ'ಗಳ ಭಾಗವಾಗಿದೆ.

ದಿನಾಂಕ 05.08.2024 ರಂತೆ, 36,271 ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಹಿಂದಿ ಭಾಷೆಯಲ್ಲಿ ಅನುವಾದಿಸಲಾಗಿದೆ ಮತ್ತು ಸುಪ್ರೀಂ ಕೋರ್ಟ್‌ನ 17,142 ತೀರ್ಪುಗಳನ್ನು ಇತರ 16 ಪ್ರಾದೇಶಿಕ ಭಾಷೆಗಳಲ್ಲಿ ಅನುವಾದಿಸಲಾಗಿದೆ ಮತ್ತು ಇವುಗಳು ಇ-ಎಸ್.ಸಿ.ಆರ್. ಜಾಲತಾಣದಲ್ಲಿ ಲಭ್ಯವಿದೆ.

ಈ ಅನುವಾದ ಯೋಜನೆಗೆ ಯಾವುದೇ ಪ್ರತ್ಯೇಕ ನಿಧಿಯನ್ನು ಸುಪ್ರೀಂ ಕೋರ್ಟ್‌ಗೆ ಮಂಜೂರು ಮಾಡಿಲ್ಲ.

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರಾದ ( ಸ್ವತಂತ್ರ ಅಧಿಕಾರ );  ಮತ್ತು ಪಾರ್ಲಿಮೆಂಟರಿ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ

 

 *****



(Release ID: 2043642) Visitor Counter : 8


Read this release in: Tamil , English , Urdu , Hindi