ಸಂಸ್ಕೃತಿ ಸಚಿವಾಲಯ
ಪಾರಿ ಯೋಜನೆ
Posted On:
08 AUG 2024 2:01PM by PIB Bengaluru
“ಪಾರಿ” ಯೋಜನೆ (ಪ್ರಾಜೆಕ್ಟ್ ಪಾರಿ - ಪಬ್ಲಿಕ್ ಆರ್ಟ್ ಆಫ್ ಇಂಡಿಯಾ) ಎಂಬುದು ಭಾರತದಲ್ಲಿ ಸಾರ್ವಜನಿಕ ಕಲಾ ದೃಶ್ಯವನ್ನು ಆಚರಿಸಲು ಮತ್ತು ಹೆಚ್ಚಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯವು ಪ್ರಾರಂಭಿಸಿದ ಉಪಕ್ರಮವಾಗಿದೆ. ಲಲಿತ ಕಲಾ ಅಕಾಡೆಮಿ ಮತ್ತು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಿಂದ ಕಾರ್ಯಗತಗೊಂಡ ಈ ಯೋಜನೆಯು ಜುಲೈ 21-31, 2024 ರಿಂದ ನವದೆಹಲಿಯಲ್ಲಿ ನಡೆಯಲಿರುವ 46ನೇ ವಿಶ್ವ ಪರಂಪರೆ ಸಮಿತಿಯ ಸಭೆಯೊಂದಿಗೆ ಸೇರಿಕೊಳ್ಳುತ್ತದೆ. ಭಾರತದ ಶ್ರೀಮಂತಿಕೆಯನ್ನು ಸಾರ್ವಜನಿಕ ಕಲೆಯ ಸಮಕಾಲೀನ ವಿಷಯಗಳೊಂದಿಗೆ ಸಾಂಸ್ಕೃತಿಕ ಪರಂಪರೆ ಮೂಲಕ ಸಂಯೋಜಿಸುವ ಸಂವಾದ ಮತ್ತು ಪ್ರತಿಬಿಂಬವನ್ನು ಉತ್ತೇಜಿಸುವ ಗುರಿಯನ್ನು “ಪಾರಿ” ಹೊಂದಿದೆ.
ವಿವಿಧ ಸಾಂಪ್ರದಾಯಿಕ ಕಲಾ ಪ್ರಕಾರಗಳು, ಗೋಡೆ ವರ್ಣಚಿತ್ರಗಳು, ಭಿತ್ತಿಚಿತ್ರಗಳು, ಶಿಲ್ಪಗಳು ಮತ್ತು ಸ್ಥಾಪನೆಗಳಾದ ಫಾಡ್ ಪೇಂಟಿಂಗ್ ಗಳು, ತಂಗ್ಕಾ ಪೇಂಟಿಂಗ್ ಗಳು, ವರ್ಲಿ ಆರ್ಟ್, ಗೊಂಡ ಆರ್ಟ್, ಆಲ್ಪೋನಾ ಆರ್ಟ್, ಚೆರಿಯಾಲ್ ಪೇಂಟಿಂಗ್, ತಂಜಾವೂರ್ ಪೇಂಟಿಂಗ್ಸ್, ಕಲಾಂಕಾರಿ, ಪಿಥೋರ ಆರ್ಟ್, ಕೇರಳದ ಭಿತ್ತಿಚಿತ್ರಗಳು, ಇತ್ಯಾದಿ ವಿವಿಧ ವಿಷಯಗಳ ಆಧಾರದಲ್ಲಿ ದೇಶದಾದ್ಯಾಂತ 200 ಕ್ಕೂ ಹೆಚ್ಚು ದೃಶ್ಯ ಕಲಾವಿದರು ಒಟ್ಟಾಗಿ ಭಾಗವಹಿಸಲಿದ್ದಾರೆ. ಈ ಯೋಜನೆಯು ಭಾರತದ ಸೌಂದರ್ಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತದೆ ಮಾತ್ರವಲ್ಲದೆ ದೆಹಲಿಯ ದೃಶ್ಯ ಮತ್ತು ಸಾಂಸ್ಕೃತಿಕ ಭೂದೃಶ್ಯವನ್ನು ಹೆಚ್ಚಿಸುವ ಹಾಗೂ ಹೆಮ್ಮೆಯ ಭಾವನೆ ಮತ್ತು ಸಮುದಾಯದೊಳಗೆ ಸೇರಿಸುವ ಗುರಿಯನ್ನು ಕೂಡಾ ಹೊಂದಿದೆ.
“ಪಾರಿ” ಯೋಜನೆ (ಪ್ರಾಜೆಕ್ಟ್ ಪಾರಿ - ಪಬ್ಲಿಕ್ ಆರ್ಟ್ ಆಫ್ ಇಂಡಿಯಾ) ಪ್ರತಿಭಾವಂತ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಸಾರ್ವಜನಿಕ ಕಲೆಯಲ್ಲಿ ಸಮಕಾಲೀನ ವಿಷಯಗಳೊಂದಿಗೆ ಭಾರತದ ಶ್ರೀಮಂತ ಸಾಂಸ್ಕೃತಿಕ ಇತಿಹಾಸವನ್ನು ಸಂಮಿಶ್ರಣ ಮಾಡಿ ಪ್ರಚಾರ, ಪ್ರೋತ್ಸಾಹ ನೀಡುವ ಸರ್ಕಾರದ ನಿರಂತರ ಪ್ರಯತ್ನದ ಒಂದು ಭಾಗವಾಗಿದೆ.
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
*****
(Release ID: 2043059)
Visitor Counter : 56