ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

ಗ್ರಾಮೀಣ-ನಗರ ಜನಸಂಖ್ಯೆಯ ಆರ್ಥಿಕ ಸಮೀಕ್ಷೆ

Posted On: 07 AUG 2024 1:58PM by PIB Bengaluru

ಇತ್ತೀಚಿನ ಆರ್ಥಿಕ ಸಮೀಕ್ಷೆ 2023-24 ರಲ್ಲಿ ಉಲ್ಲೇಖಿಸಿರುವಂತೆ, 2030 ರ ವೇಳೆಗೆ ಭಾರತದ ಜನಸಂಖ್ಯೆಯ ಶೇಕಡಾ 40 ಕ್ಕಿಂತ ಹೆಚ್ಚು ಮಂದಿ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ನೀತಿ ಆಯೋಗದ ಅಧ್ಯಯನಗಳು ಮತ್ತು ವರದಿಗಳ ಆಧಾರದ ಮೇಲೆ ಈ ಅಂದಾಜನ್ನು ಮಾಡಲಾಗಿದೆ.

ಇದಲ್ಲದೆ, ವಲಸೆಯ ಕುರಿತಾದ ಮಾಹಿತಿಗೆ ಸಂಬಂಧಿಸಿದಂತೆ, ಜುಲೈ 2020 - ಜೂನ್ 2021 ರ ಅವಧಿಯಲ್ಲಿ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ನಡೆಸಿದ ನಿರದಿಷ್ಟ ಸಮಯದ ಕಾರ್ಮಿಕ ಬಲ ಸಮೀಕ್ಷೆಯಲ್ಲಿ (ಪಿ ಎಲ್‌ ಎಫ್‌ ಎಸ್) ಮನೆಯ ಸದಸ್ಯರ ವಲಸೆ ವಿವರಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಗಿದೆ. ನಾಲ್ಕು ವಿಧದ ಗ್ರಾಮೀಣ-ನಗರ ವಲಸೆ ಹರಿವುಗಳಿಂದ ಆಂತರಿಕ ವಲಸಿಗರ ಶೇಕಡಾವಾರು (ಅಂದರೆ ಗ್ರಾಮೀಣ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳು, ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳು, ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳು ಮತ್ತು ನಗರ ಪ್ರದೇಶಗಳಿಂದ ನಗರ ಪ್ರದೇಶಗಳು) ಅಂಕಿಅಂಶವನ್ನು ಕೆಳಗಿನಂತೆ ಕೋಷ್ಟಕದಲ್ಲಿ ನೀಡಲಾಗಿದೆ:

ಅಖಿಲ ಭಾರತ

 

ಗ್ರಾಮೀಣದಿಂದ ಗ್ರಾಮೀಣಕ್ಕೆ

 

ನಗರದಿಂದ ಗ್ರಾಮೀಣಕ್ಕೆ

 

ಗ್ರಾಮೀಣದಿಂದ ನಗರಕ್ಕೆ

 

ನಗರದಿಂದ ನಗರಕ್ಕೆ

 

ಎಲ್ಲಾ

 

ವ್ಯಕ್ತಿ

55.0

10.2

18.9

15.9

100.0

 

ಈ ಮಾಹಿತಿಯನ್ನು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) ಶ್ರೀ ರಾವ್ ಇಂದರಜಿತ್ ಸಿಂಗ್ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.

 

*****


(Release ID: 2042707) Visitor Counter : 59