ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಬಿಐಎಂಎಸ್‌ಟಿಇಸಿ  ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ತ್ವರಿತ ಸಮಾಲೋಚನೆಗಳನ್ನು ನಡೆಸುವಂತೆ ಶ್ರೀ ಪಿಯೂಷ್‌ ಗೋಯಲ್ ಕರೆ 


ಶ್ರೀ ಗೋಯಲ್ ಅವರು ಉದ್ದೇಶಿತ ಎಫ್ ಟಿ ಎ ಆದ್ಯತೆಗಳ ಬಗ್ಗೆ ಸದಸ್ಯ ದೇಶಗಳು, ವಾಣಿಜ್ಯ ನಾಯಕರು ಮರು ಮೌಲ್ಯಮಾಪನ ನಡೆಸಬೇಕು

ಪೂರೈಕೆ ಸರಣಿ, ಇ-ವಾಣಿಜ್ಯ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಆಹಾರ ಭದ್ರತೆ ವಿಚಾರಗಳಲ್ಲಿ ಪಾಲುದಾರಿಕೆಗೆ ಬಿಮ್ ಸ್ಟೆಕ್ ರಾಷ್ಟ್ರಗಳು ಹೆಚ್ಚಿನ ಗಮನ ಹರಿಸಬೇಕು: ಶ್ರೀ ಗೋಯಲ್

ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಶ್ರೀ ಗೋಯಲ್, ಆದರೆ ಸುಗಮವಾಗಿ ಅಧಿಕಾರಿ ಹಸ್ತಾಂತರವಾಗಲಿದೆ ಎಂದು ಭರವಸೆ 

Posted On: 07 AUG 2024 1:45PM by PIB Bengaluru

ವ್ಯಾಪಾರ ಮಾತುಕತೆಗಳಿಗೆ ಸಂಬಂಧ ಬಿಐಎಂಎಸ್‌ಟಿಇಸಿ ಸದಸ್ಯರು, ಸದಸ್ಯ ರಾಷ್ಟ್ರಗಳ ಆದ್ಯತೆಗಳನ್ನು ಮರು-ಪರಿಶೀಲಿಸಬೇಕು, ಇದರಿಂದ ಈಗಾಗಲೇ ವಿಳಂಬವಾಗಿರುವ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಬಹುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಹೇಳಿದ್ದಾರೆ. ಅವರು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದಲ್ಲಿ  ಆಯೋಜಿಸಿದ್ದ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ (ಬಿಮ್ ಸ್ಟೆಕ್ ) ಬಂಗಾಳ ಕೊಲ್ಲಿ ಉಪಕ್ರಮದ ವ್ಯಾಪಾರ ಶೃಂಗಸಭೆಯ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ  ಭಾಷಣ ಮಾತನಾಡಿದರು.

ಶ್ರೀ ಗೋಯಲ್ ಅವರು ತಮ್ಮ ಭಾಷಣದಲ್ಲಿ ಬಿಐಎಂಎಸ್‌ಟಿಇಸಿ ಮುಕ್ತ ವ್ಯಾಪಾರ ಒಪ್ಪಂದದ ವಿಳಂಬದ ಹಿಂದಿನ ಕಾರಣಗಳನ್ನು ಮರು ಮೌಲ್ಯಮಾಪನ ಮಾಡುವ ಅಗತ್ಯತೆ ಎಂದು ಹೇಳಿದರು. ಎಲ್ಲಾ ಏಳು ದೇಶಗಳಿಗೆ ಸ್ವೀಕಾರಾರ್ಹವಾದ ಶಿಫಾರಸುಗಳ ಗುಂಪನ್ನು ಸದಸ್ಯರು ಮಂಡಿಸಬೇಕಾಗಿದೆ ಎಂದು ಅವರು ಹೇಳಿದರು. ಆಂತರಿಕ-ಪ್ರಾದೇಶಿಕ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸಲು ಮತ್ತು ಪ್ರಾದೇಶಿಕ ಸ್ಪರ್ಧಾತ್ಮಕತೆಯನ್ನು ವೃದ್ಧಿಸಲು ವ್ಯಾಪಾರ ಸಮಾಲೋಚನಾ ಸಮಿತಿ ಮತ್ತು ವ್ಯಾಪಾರ ಸಮುದಾಯವು ಆದ್ಯತೆಯ ವ್ಯಾಪಾರ ಒಪ್ಪಂದವನ್ನು ಪರಿಗಣಿಸಲು ಶ್ರೀ ಗೋಯಲ್ ಕರೆ ನೀಡಿದರು.

ಬಿಐಎಂಎಸ್‌ಟಿಇಸಿ ದೇಶಗಳ ನಡುವಿನ ವ್ಯಾಪಾರವು ಚಿಕ್ಕ ಪ್ರಮಾಣದಲ್ಲಿದೆ ಎಂಬುದನ್ನು ಉಲ್ಲೇಖಿಸಿದ ಅವರು ಸದ್ಯದ ವ್ಯಾಪಾರ ಸಂಬಂಧಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಶ್ರೀ ಗೋಯಲ್ ಬಿಮ್ ಸ್ಟೆಕ್ ಸದಸ್ಯರಿಗೆ ಕರೆ ನೀಡಿದರು. ನಾವು ಅದರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಬಹಳ ದೂರ ಸಾಗಬೇಕಾಗಿದೆ ಎಂದು ಅವರು ಹೇಳಿದರು. ಸದಸ್ಯ ರಾಷ್ಟ್ರಗಳ ನಡುವೆ ಪ್ರಾಮಾಣಿಕ ಪ್ರತಿಕ್ರಿಯೆ ನೀಡಲು ಆಳವಾದ ಸಂಬಂಧಗಳು ಒಂದುಗೂಡಬೇಕು ಮತ್ತು ವ್ಯಾಪಾರ ಅನುಕೂಲ ಮತ್ತು ಸರಕುಗಳ ಗಡಿಯಾಚೆಗಿನ ಸಾಗಾಣೆಯನ್ನು ಬಲವರ್ಧನೆಗೆ ಸಹಾಯ ನೀಡಬೇಕೆಂದು ಕೇಂದ್ರ ಸಚಿವರು ಕರೆ ನೀಡಿದರು. ವ್ಯಾಪಾರ ಕೊರತೆಯನ್ನು ತಗ್ಗಿಸುವುದು, ಇ-ಕಾಮರ್ಸ್‌ನಲ್ಲಿ ಪಾಲುದಾರಿಕೆಯನ್ನು ಬಲವರ್ಧನೆಗೊಳಿಸಲು ವ್ಯಾಪಾರಕ್ಕೆ ಸಹಾಯಕವಾಗುವ ಕ್ರಮಗಳನ್ನು ಸದೃಢಪಡಿಸುವುದು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ತಂತ್ರಜ್ಞಾನದ ಸಹಾಯದಿಂದ ಸೀಮಾ ಸುಂಕ (ಕಸ್ಟಮ್) ಗಡಿಗಳ ಉತ್ತಮ ಏಕೀಕರಣದತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು. ಗಡಿ ನಿಯಂತ್ರಣ ರೇಖೆಗಳ ಬಳಿ ಗಣಕೀಕರಣದ ಅವಶ್ಯಕತೆಯಿದೆ, ಆಮದು-ರಫ್ತು ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಗಳ ತ್ವರಿತ ವಿಲೇವಾರಿ ಮಾಡುವ ಅಗತ್ಯವಿದೆ, ಇದು ವ್ಯವಹಾರವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು. 

ಬಿಐಎಂಎಸ್‌ಟಿಇಸಿ ಸದಸ್ಯ ರಾಷ್ಟ್ರಗಳ ನಡುವೆ ಪೂರೈಕೆ ಸರಣಿ ಬಲವರ್ಧನೆಗೊಳಿಸುವುದು, ಸುಂಕ ಮತ್ತು ಸುಂಕ ರಹಿತ ಅಡೆತಡೆಗಳನ್ನು ನಿವಾರಿಸುವುದು, ಅಂತಾರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಮೂಲಕ ವ್ಯಾಪಾರ ಅನುಕೂಲ ಕ್ರಮಗಳನ್ನು ಬಲಪಡಿಸುವುದು ಮತ್ತು ತಡೆರಹಿತ ಸಾರಿಗೆ ಸಂಪರ್ಕವನ್ನು ಬಲಪಡಿಸುವುದು, ವ್ಯಾಪಾರ ಮತ್ತು ಹೂಡಿಕೆ ಸಹಕಾರದ ಮೂಲಕ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಅಗತ್ಯವಾಗಿದೆ ಎಂದು ಸಚಿವರು ಹೇಳಿದರು. ಹೂಡಿಕೆ, ವ್ಯಾಪಾರ ಮತ್ತು ಪ್ರವಾಸೋದ್ಯಮದಲ್ಲಿ ನೆರವು ನೀಡಲು ಏಳು ಸದಸ್ಯ ರಾಷ್ಟ್ರಗಳ ನವೋದ್ಯಮಗಳು ಮತ್ತು ಉದ್ಯಮಿಗಳ ಹೆಚ್ಚಿನ ರೀತಿಯಲ್ಲಿ ಒಗ್ಗೂಡಬೇಕಾದ ಅಗತ್ಯವಿದೆ ಎಂಬ ಭರವಸೆಯನ್ನು ಶ್ರೀ ಗೋಯಲ್ ವ್ಯಕ್ತಪಡಿಸಿದರು. ಸದಸ್ಯ ರಾಷ್ಟ್ರಗಳು ತಂತ್ರಜ್ಞಾನವನ್ನು ಪ್ರೋತ್ಸಾಹಿಸಬೇಕು ಮತ್ತು ಆಹಾರ ಭದ್ರತೆ, ಆರೋಗ್ಯ ರಕ್ಷಣೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಪರಸ್ಪರ ಭದ್ರಪಡಿಸಿಕೊಳ್ಳಲು ಕೃಷಿ ಸಹಕಾರವನ್ನು ಉತ್ತೇಜಿಸಬೇಕು ಎಂದು ಅವರು ಆಗ್ರಹಿಸಿದರು.

ನೀಲಿ ಆರ್ಥಿಕತೆಯ ಕುರಿತು ಕೇಂದ್ರ ಸಚಿವರು, ಸದಸ್ಯ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ನೀಲಿ ಆರ್ಥಿಕತೆ ಅಥವಾ ಸಾಗರ ಉತ್ಪನ್ನಗಳ ಬೇಡಿಕೆಯನ್ನು ಹೊಂದಿವೆ ಎಂದು ಹೇಳಿದರು, ಸಾಗರ ಮತ್ತು ಕರಾವಳಿ ಪೂರಕ ವ್ಯವಸ್ಥೆಗಳನ್ನು ಸಂರಕ್ಷಿಸುವ ಮೂಲಕ ಜೀವನೋಪಾಯವನ್ನು ಮತ್ತು ಉದ್ಯೋಗ ಸೃಷ್ಟಿಯನ್ನು ವೃದ್ಧಿಸುತ್ತದೆ. ಪ್ರಾದೇಶಿಕ ಮೌಲ್ಯ ಸರಣಿಗೆ ಕೃಷಿ ಮತ್ತು ಖನಿಜ ಉತ್ಪನ್ನಗಳಿಗೆ ಸೇರಿಸಿ ಅಭಿವೃದ್ಧಿ ಹೊಂದಿದ ಪ್ರದೇಶವಾಗಲು ಸಾಧ್ಯ ಎಂದು ಅವರು ಹೇಳಿದರು.

ಬಾಂಗ್ಲಾದೇಶದ ಸ್ಥಿತಿಗತಿ ಕುರಿತು ಮಾತನಾಡಿದ ಕೇಂದ್ರ ಸಚಿವರು,ಅಲ್ಲಿನ ಬೆಳವಣಿಗೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು ಮತ್ತು ಉಜ್ವಲ ಭವಿಷ್ಯಕ್ಕಾಗಿ ಮತ್ತು ರಾಷ್ಟ್ರದ ಆಡಳಿತದ ಸುಗಮ ಹಸ್ತಾಂತರವಾಗಲಿದೆ ಎಂದು ಆಶಿಸಿದರು. ತಮ್ಮ ಭಾಷಣದ ಕೊನೆಯಲ್ಲಿ ಸಚಿವ ಶ್ರೀ ಗೋಯಲ್ ಅವರು ಕವಿ ರವೀಂದ್ರನಾಥ ಟ್ಯಾಗೋರ್ ಅವರನ್ನು ಉಲ್ಲೇಖಿಸಿದರು  ”ನನಗೆ ಒಂದು ಬಾಗಿಲಿನ ಮೂಲಕ ಹೋಗಲು ಸಾಧ್ಯವಾಗದಿದ್ದರೆ, ನಾನು ಇನ್ನೊಂದು ಬಾಗಿಲಿನ ಮೂಲಕ ಹೋಗುತ್ತೇನೆ ಅಥವಾ ನಾನು ಬಾಗಿಲು ಮಾಡುತ್ತೇನೆ’’  ಹೀಗೆ ಒಂದು ಸಮೃದ್ಧ ಪ್ರದೇಶ ನಿರ್ಮಾಣಕ್ಕೆ ಹೊಸ ಪರ್ಯಾಯಗಳನ್ನು ಸೃಷ್ಟಿಸಲು ಬಿಮ್ ಸ್ಟೆಕ್ ದೇಶಗಳು ಭಾರತದ ವ್ಯಾಪಾರ ಸಮುದಾಯದೊಂದಿಗೆ ಸಹಕರಿಸುವಂತೆ ಆಗ್ರಹಿಸಿದರು. 

ಬಿಐಎಂಎಸ್‌ಟಿಇಸಿ ಅಥವಾ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮವು ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ದೇಶಗಳ ಒಂದು ಗುಂಪು - ಇದರಲ್ಲಿ ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್, ಶ್ರೀಲಂಕಾ, ಥೈಲ್ಯಾಂಡ್, ಭೂತಾನ್ ಮತ್ತು ನೇಪಾಳ ಸದಸ್ಯ ರಾಷ್ಟ್ರಗಳಾಗಿವೆ. 

 

*****



(Release ID: 2042695) Visitor Counter : 13