ರಾಷ್ಟ್ರಪತಿಗಳ ಕಾರ್ಯಾಲಯ
ಅಮೃತ್ ಉದ್ಯಾನವು ಆಗಸ್ಟ್ 16 ರಿಂದ ಸೆಪ್ಟೆಂಬರ್ 15 , 2024 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ
ಆಗಸ್ಟ್ 29, 2024 ರಂದು ಕ್ರೀಡಾಪಟುಗಳಿಗೆ ಮತ್ತು ಸೆಪ್ಟೆಂಬರ್ 5, 2024 ರಂದು ಶಿಕ್ಷಕರಿಗೆ ಮಾತ್ರ ಮೀಸಲಿಡಲಾಗಿದೆ
Posted On:
06 AUG 2024 7:58PM by PIB Bengaluru
ಆಗಸ್ಟ್ 14, 2024 ರಂದು ನಡೆಯಲಿರುವ ಅಮೃತ್ ಉದ್ಯಾನ್ ವಾರ್ಷಿಕ ಬೇಸಿಗೆ ಕಾಲದ ಆವೃತ್ತಿ 2024 ಇದರ ಉದ್ಘಾಟನಾ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಭಾಗವಹಿಸಲಿದ್ದಾರೆ.
ದಿನಾಂಕ ಆಗಸ್ಟ್ 16 ರಿಂದ ಸೆಪ್ಟೆಂಬರ್ 15, 2024 ರವರೆಗೆ ಬೆಳಗ್ಗೆ 10:00 ರಿಂದ ಸಂಜೆ 6:00 ಗಂಟೆ ವರೆಗೆ ಅಮೃತ್ ಉದ್ಯಾನವು ಸಾರ್ವಜನಿಕರಿಗೆ ತೆರೆದಿರುತ್ತದೆ. ( ಒಳಗೆ ಪ್ರವೇಶಿಸಲು ಸಂಜೆ 05:15 ಗಂಟೆ ಕೊನೆಯ ಸಮಯವಾಗಿರುತ್ತದೆ ).
ಮೊದಲ ಬಾರಿಗೆ, ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸುವ ನಿಟ್ಟಿನಲ್ಲಿ ಆಗಸ್ಟ್ 29, 2024 ರಂದು ಕ್ರೀಡಾಪಟುಗಳಿಗೆ ಪ್ರತ್ಯೇಕ ದಿನವಾಗಿ ಮೀಸಲಿಡಲಾಗಿದೆ. ಹಿಂದಿನ ವರ್ಷದಂತೆ ಸೆಪ್ಟೆಂಬರ್ 5, 2024 ರ ಶಿಕ್ಷಕರ ದಿನದಂದು ಶಿಕ್ಷಕರಿಗೆ ಮಾತ್ರ ವಿಶೇಷವಾಗಿ ಮೀಸಲಿಡಲಾಗಿದೆ.
ಅಮೃತ್ ಉದ್ಯಾನವನ್ನು ನಿರ್ವಹಣೆಗಾಗಿ ಎಲ್ಲಾ ಸೋಮವಾರಗಳಂದು ಮುಚ್ಚಲಾಗುತ್ತದೆ.
ಸಾರ್ವಜನಿಕರಿಗೆ ಪ್ರವೇಶವು ರಾಷ್ಟ್ರಪತಿ ಭವನದ ದ್ವಾರ ನಂ. 35 ರಿಂದ ಉತ್ತರ ಅವೆನ್ಯೂ ರಸ್ತೆಯ ಬಳಿ ಇರುತ್ತದೆ.
ಅವಧಿ ಮುಂಗಡವಾಗಿ ಕಾದಿರಿಸುವಿಕೆ ಮತ್ತು ಉದ್ಯಾನಕ್ಕೆ ಪ್ರವೇಶ ಉಚಿತವಾಗಿದೆ. ರಾಷ್ಟ್ರಪತಿ ಭವನದ ಜಾಲತಾಣ (https://visit.rashtrapatibhavan.gov.in/) ನಲ್ಲಿ ಮುಂಗಡವಾಗಿ ಕಾದಿರಿಸಬಹುದು ಮತ್ತು "ವಾಕ್-ಇನ್ ವಿಸಿಟರ್ಸ್" ಗಳಿಗೆ ದ್ವಾರ ಸಂಖ್ಯೆ 35 ಮೂಲಕ ಪ್ರವೇಶ ಲಭ್ಯವಿರುತ್ತದೆ.
ಸಂದರ್ಶಕರ ಅನುಕೂಲಕ್ಕಾಗಿ ಸೆಂಟ್ರಲ್ ಸೆಕ್ರೆಟರಿಯೇಟ್ ಮೆಟ್ರೋ ನಿಲ್ದಾಣದಿಂದ ದ್ವಾರ ಸಂಖ್ಯೆ.35 (ಉದ್ಯಾನದ ಪ್ರವೇಶ ದ್ವಾರ) ವರೆಗೆ ಉಚಿತ ಬಸ್ ಸೇವೆಯೂ ಲಭ್ಯವಿರುತ್ತದೆ.
ಸಂದರ್ಶಕರು ತಮ್ಮ ಅವಧಿಯನ್ನು ಅನ್ನು ಜಾಲತಾಣ (https://visit.rashtrapatibhavan.gov. in/ )
ಮೂಲಕ ಮುಂಗಡವಾಗಿ ಕಾದಿರಿಸುವ ಮೂಲಕ ರಾಷ್ಟ್ರಪತಿ ಭವನ ಮತ್ತು ರಾಷ್ಟ್ರಪತಿ ಭವನದ ಮ್ಯೂಸಿಯಂಗೆ ಕೂಡಾ ಭೇಟಿ ನೀಡಬಹುದು, ಮತ್ತು ನವದೆಹಲಿಯಲ್ಲಿ ನಡೆಯುವ ಸೈನಿಕರ ಬದಲಾವಣೆ ಸಮಾರಂಭಕ್ಕೆ ಸಹ ಭೇಟಿ ನೀಡಬಹುದು, ಶಿಮ್ಲಾದ ರಾಷ್ಟ್ರಪತಿ ನಿವಾಸ್ ಮಶೋಬ್ರಾ ಮತ್ತು ಹೈದರಾಬಾದ್ ನ ರಾಷ್ಟ್ರಪತಿ ನಿಲಯಮ್ ಗಳಿಗೆ ಕೂಡಾ ಭೇಟಿ ನೀಡಬಹುದು
ಅಮೃತ್ ಉದ್ಯಾನ್ ವಾರ್ಷಿಕ ಬೇಸಿಗೆ ಆವೃತ್ತಿ, 2024 ರ ಉದ್ಘಾಟನೆಯ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ರಾಷ್ಟ್ರಪತಿ ಭವನದ ವಸ್ತು ಸಂಗ್ರಹಾಲಯಕ್ಕೆ ಪ್ರವೇಶವು ಉಚಿತವಾಗಿರುತ್ತದೆ. ತಮ್ಮ ವಿಶೇಷ ದಿನಗಳಲ್ಲಿ ಅಂದರೆ, ಕ್ರೀಡಾಪಟುಗಳು ಆಗಸ್ಟ್ 29, 2024 ರಂದು ಮತ್ತು ಶಿಕ್ಷಕರು ಸೆಪ್ಟೆಂಬರ್ 5, 2024 ರಂದು ಕ್ರಮವಾಗಿ ಯಾವುದೇ ಶುಲ್ಕವಿಲ್ಲದೆ ಮ್ಯೂಸಿಯಂಗೆ ಭೇಟಿ ನೀಡಬಹುದು.
*****
(Release ID: 2042562)
Visitor Counter : 68