ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ದೇಶದಲ್ಲಿ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿ
Posted On:
05 AUG 2024 4:30PM by PIB Bengaluru
ಭಾರತದಲ್ಲಿ ‘ಕ್ರೀಡೆ’ಯು ರಾಜ್ಯದ ವಿಷಯವಾಗಿರುವುದರಿಂದ, ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಕ್ರೀಡೆಗಳ ಅಭಿವೃದ್ಧಿಯ ಜವಾಬ್ದಾರಿಯು ಪ್ರಾಥಮಿಕವಾಗಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಮೇಲಿದೆ.
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಕ್ರೀಡಾ ಪ್ರೋತ್ಸಾಹದ ಪ್ರಯತ್ನಗಳಿಗೆ ಕೇಂದ್ರ ಸರ್ಕಾರದ ವಿವಿಧ ಉಪಕ್ರಮಗಳು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಈ ನಿಟ್ಟಿನಲ್ಲಿ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 'ಖೇಲೋ ಇಂಡಿಯಾ' ಯೋಜನೆಯ “ಕ್ರೀಡಾ ಮೂಲಸೌಕರ್ಯಗಳ ರಚನೆ ಮತ್ತು ಉನ್ನತೀಕರಣ” ಉಪಕ್ರಮದ ಅಡಿಯಲ್ಲಿ, ಕ್ರೀಡಾ ಸಂಕೀರ್ಣ, ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್‌ಗಳು, ಸಿಂಥೆಟಿಕ್ ಹಾಕಿ ಮೈದಾನಗಳು, ಸಿಂಥೆಟಿಕ್ ಟರ್ಫ್ ಫುಟ್‌ಬಾಲ್ ಮೈದಾನಗಳು, ಈಜುಕೊಳಗಳು, ಇತ್ಯಾದಿ ಕ್ರೀಡಾ ಸಲಕರಣೆಗಳ ರಚನೆ ಜೊತೆಗೆ ವಿವಿಧೋದ್ದೇಶ ಸಭಾಂಗಣಗಳಂತಹ ಮೂಲಭೂತ ಕ್ರೀಡಾ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಹಣಕಾಸಿನ ನೆರವು ನೀಡುತ್ತದೆ.
ಇದಲ್ಲದೆ, ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಗಳ ಅಡಿಯಲ್ಲಿ (ಎನ್.ಎಸ್.ಡಿ.ಎಫ್.), ದೇಶಾದ್ಯಂತ ಕ್ರೀಡಾ ಸೌಲಭ್ಯಗಳ ಸೃಷ್ಟಿ ಮತ್ತು ಉನ್ನತೀಕರಣಕ್ಕಾಗಿ ಸರ್ಕಾರವು ವಿವಿಧ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಆರ್ಥಿಕವಾಗಿ ಬೆಂಬಲಿಸುತ್ತದೆ.
ಇಲ್ಲಿಯವರೆಗೆ, ಕೇಂದ್ರ ಸರ್ಕಾರವು ದೇಶಾದ್ಯಂತ ವಿವಿಧ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿವಿಧ ವರ್ಗಗಳ 343 ಕ್ರೀಡಾ ಮೂಲಸೌಕರ್ಯ ಯೋಜನೆಗಳನ್ನು ಮಂಜೂರು ಮಾಡಿದೆ.
ಇಂದು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಈ ವಿಷಯವನ್ನು ತಿಳಿಸಿದ್ದಾರೆ.
*****
(Release ID: 2042055)
Visitor Counter : 47