ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಡಾ. ಮನ್ಸುಖ್ ಮಾಂಡವಿಯಾ ಮತ್ತು ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಪ್ಯಾರಿಸ್ ನಲ್ಲಿ ನಡೆಯುತ್ತಿರುವ XXXIII ಒಲಿಂಪಿಕ್ಸ್ ಕ್ರೀಡೆಗಳ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು


"ಈ ಅಂಚೆ ಚೀಟಿಗಳ ಬಿಡುಗಡೆಯು ಕ್ರೀಡೆಗಳ ಬಗೆಗಿನ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ನಮ್ಮ ರಾಷ್ಟ್ರದ ಹೆಮ್ಮೆಯ ಸಂಕೇತವಾಗಿ ಕ್ರೀಡಾಪಟುಗಳಿಗೆ ಉತ್ತೇಜನವನ್ನೂ ನೀಡುತ್ತವೆ." - ಡಾ. ಮಾಂಡವೀಯ

Posted On: 05 AUG 2024 5:01PM by PIB Bengaluru

ಕೇಂದ್ರ ಯುವ ಜನ ವ್ಯವಹಾರ, ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ  ಖಾತೆ ಸಚಿವರಾದ ಡಾ ಮನ್ಸುಖ್ ಮಾಂಡವಿಯಾ ಮತ್ತು ಈಶಾನ್ಯ ಪ್ರದೇಶದ ಸಂವಹನ ಮತ್ತು ಅಭಿವೃದ್ಧಿ ಇಲ್ಲಖೆಯ ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರು ಜಂಟಿಯಾಗಿ ಪ್ಯಾರಿಸ್ ನಲ್ಲಿ ನಡೆಯುತ್ತಿರುವ XXXIII ಒಲಂಪಿಕ್ಸ್ ಕ್ರೀಡೆಗಳ ಸ್ಮರಣಾರ್ಥ ವಿಶೇಷ ಅಂಚೆ ಚೀಟಿಗಳನ್ನು ಇಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದರು.

ಈ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತರಾಗಿರುವ ಶ್ರೀ ಸರಬ್ಜೋತ್ ಸಿಂಗ್, ಮಾಜಿ ಕ್ರಿಕೆಟಿಗ ಶ್ರೀ ಆಕಾಶ್ ಚೋಪ್ರಾ ಮತ್ತು ಸ್ಟೀಪಲ್‌ಚೇಸ್ ಅಥ್ಲೀಟ್ ಶ್ರೀಮತಿ ಸುಧಾ ಸಿಂಗ್  ಸೇರಿದಂತೆ  ಹಲವಾರು ಕ್ರೀಡಾಪಟುಗಳು, ಅಂಚೆ ಚೀಟಿ ಸಂಗ್ರಹಕಾರರು ಮತ್ತು ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮನ್ಸುಖ್ ಮಾಂಡವಿಯಾ, ಕ್ರೀಡೆ ಕೇವಲ ಸ್ಪರ್ಧೆಯಲ್ಲ. ಅದೊಂದು ಜೀವನ ವಿಧಾನ. ಈ ಅಂಚೆ ಚೀಟಿಗಳ ಬಿಡುಗಡೆಯು ಕ್ರೀಡೆಗಳ ಬಗೆಗಿನ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ನಮ್ಮ ರಾಷ್ಟ್ರದ ಹೆಮ್ಮೆಯ ಸಂಕೇತವಾಗಿ ಕ್ರೀಡಾಪಟುಗಳಿಗೆ ಉತ್ತೇಜನವನ್ನೂ ನೀಡುತ್ತವೆ," ಎಂದರು. ಮುಂದುವರೆದು ಅವರು ಕ್ರೀಡೆಗಳು ಆರೋಗ್ಯವಂತ ರಾಷ್ಟ್ರವನ್ನು ಕಟ್ಟಲು ಸಹಾಯ ಮಾಡುವುದರ ಜೊತೆಗೆ ಸಂಪತ್ತು ಮತ್ತು ಸಮೃದ್ಧಿಗೆ ಅವಶ್ಯಕವಾಗಿವೆ. ಜೊತೆಗೆ ವೈಯಕ್ತಿಕ  ಫಿಟ್ನೆಸ್ ಮತ್ತು ರಾಷ್ಟ್ರೀಯ ಯೋಗಕ್ಷೇಮವನ್ನೂ ಹೆಚ್ಚಿಸುತ್ತವೆ.

ಕ್ರೀಡಾಪಟುಗಳು ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಬೆಂಬಲ ಮತ್ತು ಸೌಲಭ್ಯಗಳನ್ನು ದೊರಕಿಸುವ ಮೂಲಕ ಸರ್ಕಾರ ತನ್ನ ಪ್ರಾಥಮಿಕ ಗಮನವನ್ನು ಆಟಗಾರರರ  ಮೇಲೆ ಕೇಂದ್ರೀಕೃತಗೊಳಿಸಿದೆ ಎಂದು ಡಾ. ಮಾಂಡವೀಯ ಹೇಳಿದರು. ಸಂಪನ್ಮೂಲಗಳ ಕೊರತೆಯನ್ನು ನಿವಾರಿಸಲು ಶ್ರದ್ಧೆಯಿಂದ ಕೆಲಸ ಮಾಡುವ ಮೂಲಕ ಕೇಂದ್ರ ಸರಕಾರ ಕ್ರೀಡಾಪಟುಗಳು ಯಾವುದೇ ನಿರ್ಬಂಧಗಳಿಲ್ಲದೆ ಉತ್ತಮ ಸಾಧನೆ ಮಾಡಲು ಅನುವು ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.

ತಳಮಟ್ಟದಿಂದ ಕ್ರೀಡೆಗೆ ಉತ್ತೇಜನ ನೀಡುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದ ಕೇಂದ್ರ ಸಚಿವರು,  ಖೇಲೋ ಇಂಡಿಯಾ ಯೋಜನೆಯ ಅಡಿ ಬರುವ KIRTI ಮತ್ತು TOPS ಕಾರ್ಯಕ್ರಮಗಳು ಯುವ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವುದರ ಜೊತೆಗೆ ಅವರು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಸಾಧಿಸಲು ಅನೂವು ಮಾಡಿಕೊಡುತ್ತವೆ. ಪ್ಯಾರಿಸ್‌ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ 117 ಕ್ರೀಡಾಪಟುಗಳಲ್ಲಿ 28  ಕ್ರೀಡಾಪುಟುಗಳು ಖೇಲೋ ಇಂಡಿಯಾ ಯೋಜನೆಯ ಉತ್ಪನ್ನಗಳಾಗಿದ್ದಾರೆ ಎಂದು ಅವರು ಹೇಳಿದರು.

ತಮ್ಮ ಭಾಷಣದ ಕೊನೆಗೆ ಡಾ. ಮಾಂಡವೀಯ ಅವರು "ಈ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವ ಮೂಲಕ ನಾವು ನಮ್ಮ ರಾಷ್ಟ್ರ ಮತ್ತು ನಮ್ಮ ಕ್ರೀಡಾಪಟುಗಳನ್ನು ಗೌರವಿಸಿದ್ದೇವೆ. ನಾವೆಲ್ಲರೂ ಭಾರತಕ್ಕೆ ಚೀರ್ಸ್ ಮಾಡೋಣ ಮತ್ತು ನಮ್ಮ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸೋಣ," ಎಂದರು. 

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಸಿಂಧಿಯಾ ಅವರು, “ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಪ್ಯಾರಿಸ್ ನಲ್ಲಿ ನಡೆಯುತ್ತಿರುವ XXXIII ನೇ  ಒಲಿಂಪಿಕ್ಸ್ ಕ್ರೀಡೆಗಳ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿರುವುದು ಭಾರತದ ಐತಿಹಾಸಿಕ ಕ್ರೀಡಾ ಪರಂಪರೆಗೆ ನೀಡಿದ ಗೌರವವಾಗಿದೆ. ಈ ಅಂಚೆ ಚೀಟಿಯೊಂದಿಗೆ ನಾವು ನಮ್ಮ ಕ್ರೀಡಾ ಆಟಗಾರರ ಕಠಿಣ ಪರಿಶ್ರಮವನ್ನು ಸಂಭ್ರಮಿಸಿ, ಗುರುತಿಸಿದ್ದೇವೆ, ಎಂದರು. 

ಮುಂದುವರೆದು ಅವರು “ಪ್ರಧಾನ ಮಂತ್ರಿಗಳ ದೃಷ್ಟಿಯಂತೆ,  ಭಾರತದಲ್ಲಿ ಇಂದು ಕ್ರೀಡೆ ಮತ್ತು ಕ್ರೀಡಾ ಮೂಲಸೌಕರ್ಯಗಳು ಕೊನೆಯ ಮೈಲಿಯನ್ನು ತಲುಪುತ್ತಿವೆ. ನಮ್ಮ ಅಂಚೆ ಇಲಾಖೆಯ ನೌಕರರು ಸಹ ಕ್ರೀಡಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ತೋರಿಸುತ್ತಿದ್ದಾರೆ. ಈ ಅಂಚೆ ಚೀಟಿ ಮೂಲಕ, ನಾವು ನಮ್ಮ ಅಂಚೆಚೀಟಿಗಳ ಸಂಗ್ರಹದ ಶ್ರೀಮಂತ ಇತಿಹಾಸವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿದ್ದೇವೆ. ಜೊತೆಗೆ ಆಟಗಾರರು ತಮ್ಮ ಕ್ರೀಡಾ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ಜಾಗತಿಕ ಮಟ್ಟದಲ್ಲಿ ಭಾರತ ಹೆಮ್ಮೆಪಡುವಂತೆ ಮಾಡಲು ಯುವ ಆಟಗಾರರನ್ನು ಇವು ಪ್ರೇರೇಪಿಸುತ್ತೇವೆ ಎಂದು ಹೇಳಿದರು. 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತೀಯ ತಂಡಕ್ಕೆ  ಶುಭಾಶಯಗಳನ್ನು ತಿಳಿಸಿದರು.

 

 

https://www.youtube.com/live/Hm98C0sNgLk

*****


(Release ID: 2042004) Visitor Counter : 59