ಇಂಧನ ಸಚಿವಾಲಯ

ಎರಡು ಹೈಡ್ರೋ ಪಂಪ್ಡ್ ಸ್ಟೋರೇಜ್ ಸ್ಥಾವರಗಳಿಗೆ ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಇಎ) ಒಪ್ಪಿಗೆ


ದೇಶದಲ್ಲಿ ಜಲವಿದ್ಯುತ್ ಪಂಪ್ಡ್ ಶೇಖರಣಾ ಘಟಕಗಳ ಅಭಿವೃದ್ಧಿಗೆ ವೇಗ ತುಂಬಲು ಕೇಂದ್ರ ವಿದ್ಯುತ್ ಪ್ರಾಧಿಕಾರದ (ಸಿಇಎ) ಅನುಮೋದನೆ ಪ್ರಕ್ರಿಯೆ  ಪರಿಷ್ಕರಣೆ

Posted On: 02 AUG 2024 12:24PM by PIB Bengaluru

ದೇಶದಲ್ಲಿ ನವೀಕರಿಸಬಹುದಾದ ಸಾಮರ್ಥ್ಯದ ದೊಡ್ಡ ಪ್ರಮಾಣದ ಏಕೀಕರಣದೊಂದಿಗೆ ವೇಗದ ಇಂಧನ ಪರಿವರ್ತನೆಯನ್ನು ಬೆಂಬಲಿಸಲು ಮತ್ತು ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತಕ್ಕೆ ಜಲ ಪಂಪ್ಡ್ ಸ್ಟೋರೇಜ್ ಯೋಜನೆಗಳು (ಪಿಎಸ್ಪಿ) ಅಗತ್ಯವಿವೆ.(ಹೈಡ್ರೋ ಪಂಪ್ ಡ್ ಸ್ಟೋರೇಜ್ ಸ್ಥಾವರಗಳು ಎಂದು ಕರೆಯಲ್ಪಡುವ ಈ ತಂತ್ರಜ್ಞಾನದಲ್ಲಿ ಬೇರೆ ಬೇರೆ ಎತ್ತರಗಳಲ್ಲಿ ಇರುವ  ಜಲಾಶಯಗಳಿಂದ ಟರ್ಬೈನ್ ಮೂಲಕ ನೀರು ಹಾಯಿಸಿ ವಿದ್ಯ್ಯುತ್ ಉತ್ಪಾದನೆ ಮಾಡಲಾಗುತ್ತದೆ)

ಭಾರತದ ನವೀಕರಿಸಬಹುದಾದ ಇಂಧನ ಮತ್ತು ಇಂಧನ ಶೇಖರಣಾ ಸಾಮರ್ಥ್ಯದ ಬೆಳವಣಿಗೆಯನ್ನು ತ್ವರಿತಗೊಳಿಸಲು, ಜಲವಿದ್ಯುತ್ ಪಿಎಸ್ಪಿಗಳು ತ್ವರಿತಗತಿಯಲ್ಲಿ ಕಾರ್ಯಾರಂಭ ಮಾಡುವುದನ್ನು ಖಚಿತಪಡಿಸಿಕೊಳ್ಳಲು, ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಇಎ) ಎರಡು ಜಲ ಪಿಎಸ್ಪಿಗಳಿಗೆ ಒಪ್ಪಿಗೆ ನೀಡಿದೆ, ಅವುಗಳೆಂದರೆ ಒಡಿಶಾದ 600 ಮೆಗಾವ್ಯಾಟ್ ಸಾಮರ್ಥ್ಯದ  ಇಂದ್ರಾವತಿ ಮೇಲ್ದಂಡೆ ಯೋಜನೆ, ಇದನ್ನು ಒಎಚ್ಪಿಸಿ ಲಿಮಿಟೆಡ್ (ಒಡಿಶಾ ಸರ್ಕಾರದ ಸಂಸ್ಥೆ) ಅಭಿವೃದ್ಧಿಪಡಿಸುತ್ತಿದೆ ಮತ್ತು ಕರ್ನಾಟಕದಲ್ಲಿ 2000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿಯನ್ನು ಕೆಪಿಸಿಎಲ್ (ಕರ್ನಾಟಕ ಸರ್ಕಾರದ ಉದ್ಯಮ) ದಾಖಲೆಯ ಸಮಯದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಸಿಡಬ್ಲ್ಯೂಸಿ, ಜಿಎಸ್ಐ, ಸಿಎಸ್ಎಂಆರ್ಎಸ್ ಮತ್ತು ಭಾಗೀದಾರರು/ಮಧ್ಯಸ್ಥಗಾರರು ಜಂಟಿಯಾಗಿ ಮಿಷನ್ ಮೋಡ್ ನಲ್ಲಿ  ಸಿಇಎಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.

ಡಿಪಿಆರ್ ತಯಾರಿಕೆಯ ವಿವಿಧ ಹಂತಗಳಲ್ಲಿ, ಸಮೀಕ್ಷೆ ಮತ್ತು ತನಿಖೆಯ ಅಡಿಯಲ್ಲಿ ಹೈಡ್ರೋ ಪಿಎಸ್ಪಿಗಳ (ಸುಮಾರು 60 ಗಿಗಾವ್ಯಾಟ್ ಮೌಲ್ಯದ) ಬೃಹತ್ ಸಂಖ್ಯೆಯ ಪ್ರಸ್ತಾಪಗಳನ್ನು ಸಿಇಎ ಸ್ವೀಕರಿಸಿದೆ. ಡಿಪಿಆರ್ ಗಳನ್ನು ಸಿದ್ಧಪಡಿಸಿದ ನಂತರ, ಈ ಪಿಎಸ್ ಪಿಗಳನ್ನು ಡೆವಲಪರ್ ಗಳು ವಿದ್ಯುತ್ ಕಾಯ್ದೆ, 2003 ರ ಸೆಕ್ಷನ್ 8 ರ ಅಡಿಯಲ್ಲಿ ಸಿಇಎ ಒಪ್ಪಿಗೆಗಾಗಿ ಆನ್ ಲೈನ್ ಪೋರ್ಟಲ್ (https://ceaclearance.gov.in/hydro/) ನಲ್ಲಿ ಅಪ್ ಲೋಡ್ ಮಾಡುತ್ತಾರೆ. ದೇಶದ ಇಂಧನ ಶೇಖರಣಾ/ದಾಸ್ತಾನು ಬೇಡಿಕೆಯನ್ನು ಪೂರೈಸುವುದು ಈ ಕ್ಷಣದ ಆದ್ಯತೆಯಾಗಿರುವುದರಿಂದ ಪಿಎಸ್ಪಿಗಳ ತ್ವರಿತ ಒಪ್ಪಿಗೆಗೆ ಸಿಇಎ ಭರವಸೆ ನೀಡುತ್ತದೆ.

ಭಾರತ ಸರ್ಕಾರದ ಸುಗಮ ವ್ಯಾಪಾರ ಅನುಕೂಲತೆ ಸೃಷ್ಟಿಯ ಭಾಗವಾಗಿ ಪಿಎಸ್ಪಿಗಳ ಒಪ್ಪಿಗೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು, ಪಿಎಸ್ಪಿಗಳ ಡಿಪಿಆರ್ಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ಸಿಇಎ ಮಾರ್ಗಸೂಚಿಗಳನ್ನು ಮತ್ತಷ್ಟು ಪರಿಷ್ಕರಿಸಿದೆ.

ಪರಿಷ್ಕೃತ ಮಾರ್ಗಸೂಚಿಗಳ ಪ್ರಮುಖ ಅಂಶಗಳು ಹೀಗಿವೆ:

1. ಡಿಪಿಆರ್ ಗಳ ವಿವಿಧ ಅಂಶಗಳ ಪರಿಶೀಲನೆಗೆ ಅಗತ್ಯವಾದ ದಾಖಲೆಗಳ ಚೆಕ್ ಲಿಸ್ಟ್ ಸೇರ್ಪಡೆ. ಹಿಂದಿನ ಚೆಕ್ ಲಿಸ್ಟ್ ಅನ್ನು ಸಂಕ್ಷಿಪ್ತಗೊಳಿಸಲಾಗಿದೆ.

2. ಮೊದಲ 12 ವಿನ್ಯಾಸ ಅಧ್ಯಾಯಗಳನ್ನು ಪೂರ್ಣಗೊಳಿಸುವುದರೊಂದಿಗೆ ಡೆವಲಪರ್ಗಳಿಗೆ ಈಗ ಡಿಪಿಆರ್ ಸಲ್ಲಿಸಲು ಆನ್ ಲೈನ್ ನಲ್ಲಿ ಅವಕಾಶವಿದೆ. ಇದರಲ್ಲಿ ಕೆಲವು ಅಧ್ಯಾಯಗಳನ್ನು ಕೈಬಿಡಲಾಗಿದೆ. ಹೀಗೆ ಡಿಪಿಆರ್ ಅನ್ನು ಸಂಕ್ಷಿಪ್ತ ಮಾಡಲಾಗಿದೆ.

3. ವೆಚ್ಚ ಮತ್ತು ಹಣಕಾಸು ಅಧ್ಯಾಯಗಳ ಅನುಮೋದನೆಯು ಕಡ್ಡಾಯವಲ್ಲ.   ಅಧ್ಯಾಯಗಳನ್ನು ಕಾಯಿದೆಯ ಅಗತ್ಯವನ್ನು ಪೂರೈಸಲು ಉಲ್ಲೇಖ ಮತ್ತು ದಾಖಲೆಗಾಗಿ ಮಾತ್ರ ಸಲ್ಲಿಸಬೇಕು.

4. ಆಫ್ ಸ್ಟ್ರೀಮ್ ಹೈಡ್ರೋ ಪಿಎಸ್ಪಿಗಾಗಿ, ಜಲಾಶಯಗಳಿಗೆ ಪರ್ಯಾಯ ಸ್ಥಳ ಯೋಜನೆಯನ್ನು ಸಲ್ಲಿಸುವ ಅಗತ್ಯವಿಲ್ಲ.

5. ಸಲ್ಲಿಸಿದ ಡಿಪಿಆರ್ ಜೊತೆ  ಸಿಇಎ, ಸಿಡಬ್ಲ್ಯೂಸಿ, ಜಿಎಸ್ಐ, ಸಿಎಸ್ಎಂಆರ್.ಎಸ್. ಮೌಲ್ಯಮಾಪನ ಗುಂಪುಗಳು ನೀಡಿದ  ಪ್ರಾಥಮಿಕ/ಪೂರ್ವ ಡಿಪಿಆರ್ ಅನುಮತಿಗಳಿಗೆ ಅನುಗುಣವಾಗಿದೆ ಎಂದು ಡೆವಲಪರ್  ಮುಚ್ಚಳಿಕೆಯನ್ನು ನೀಡಬೇಕಾಗುತ್ತದೆ. ಇದು ಡಿಪಿಆರ್ ನ್ನು ಮತ್ತೆ ಮರುಪರಿಶೀಲನೆಗೆ ಕಳುಹಿಸುವ ಅಗತ್ಯವನ್ನು ನಿವಾರಿಸುತ್ತದೆ. ಇದು ಒಪ್ಪಿಗೆ ಪ್ರಕ್ರಿಯೆಯಲ್ಲಿ ಸುಮಾರು 4 ರಿಂದ 5 ತಿಂಗಳ ಸಮಯವನ್ನು ಉಳಿಸುವ ನಿರೀಕ್ಷೆಯಿದೆ.

6. ಡೆವಲಪರ್ ಗಳ ಸಂಭಾವ್ಯ ಅಪಾಯ ಮತ್ತು ವೆಚ್ಚದಲ್ಲಿ ಆರಂಭಿಕ ಉತ್ಖನನ ಅನುಮತಿ ನೀಡುವ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲಾಗಿದೆ, ಇದರಿಂದ ಡೆವಲಪರ್ ಗಳು ನಿವೇಶನಗಳಲ್ಲಿ (ಸೈಟ್ ನಲ್ಲಿ) ಕೆಲಸವನ್ನು ಪ್ರಾರಂಭಿಸಲು ಮುಂಗಡ ಕ್ರಮ ತೆಗೆದುಕೊಳ್ಳಬಹುದು. ಇದು ಯೋಜನೆಯ ಅನುಷ್ಠಾನದಲ್ಲಿ ಸುಮಾರು 6 ರಿಂದ 8 ತಿಂಗಳ ಸಮಯವನ್ನು ಉಳಿಸುವ ನಿರೀಕ್ಷೆಯಿದೆ.

7. ಸಕಾಲದಲ್ಲಿ ಪರಿವೀಕ್ಷಣೆ/ತನಿಖೆಗಳನ್ನು ನಡೆಸಲು ಮತ್ತು ತನಿಖಾ ವರದಿಗಳನ್ನು ಎಲ್ಲಾ ಮೌಲ್ಯಮಾಪನ ಸಂಸ್ಥೆಗಳಿಗೆ ಸಲ್ಲಿಸುವಂತೆ ಡೆವಲಪರ್ಗಳಿಗೆ ಸೂಚಿಸಲಾಗಿದೆ, ಇದರಿಂದ ಮೌಲ್ಯಮಾಪನ ಸಂಸ್ಥೆಗಳು ಸಮಾನಾಂತರ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿರುತ್ತದೆ. ಇದು ಸುಮಾರು 1 ರಿಂದ 2 ತಿಂಗಳ ಸಮಯವನ್ನು ಉಳಿಸುವ ನಿರೀಕ್ಷೆಯಿದೆ.

ದೇಶದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಇಂಧನ ಶೇಖರಣಾ ವ್ಯವಸ್ಥೆಗಳ, ವಿಶೇಷವಾಗಿ ಪಿಎಸ್ಪಿಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ. ರಾಷ್ಟ್ರೀಯ ವಿದ್ಯುಚ್ಛಕ್ತಿ ಯೋಜನೆ (ಉತ್ಪಾದನೆ) ಪ್ರಕಾರ, 2031-32ರ ವೇಳೆಗೆ ಬಿಇಎಸ್ಎಸ್ ಸೇರಿದಂತೆ ಇಂಧನ ಶೇಖರಣಾ ವ್ಯವಸ್ಥೆಗಳ ಸ್ಥಾಪಿತ ಸಾಮರ್ಥ್ಯವನ್ನು 74 ಗಿಗಾವ್ಯಾಟ್ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಸುಮಾರು 176 ಗಿಗಾವ್ಯಾಟ್ ಜಲ ಪಿಎಸ್ಪಿಗಳ ಸಾಮರ್ಥ್ಯವಿದೆ, ಅವುಗಳಲ್ಲಿ 4.7 ಗಿಗಾವ್ಯಾಟ್ ಕಾರ್ಯಾಚರಣೆಯಲ್ಲಿದೆ, 4 ಗಿಗಾವ್ಯಾಟ್ ನಿರ್ಮಾಣ ಹಂತದಲ್ಲಿದೆ, 3.6 ಗಿಗಾವ್ಯಾಟ್ ಗೆ ಒಪ್ಪಿಗೆ ನೀಡಲಾಗಿದೆ.(ನಿರ್ಮಾಣವನ್ನು ಪ್ರಾರಂಭಿಸಬೇಕಾಗಿದೆ) ಮತ್ತು ಸುಮಾರು 60 ಗಿಗಾವ್ಯಾಟ್ ಸಮೀಕ್ಷೆ ಮತ್ತು ತನಿಖೆಯಲ್ಲಿದೆ.

ಸಿಡಬ್ಲ್ಯೂಸಿ, ಜಿಎಸ್ಐ, ಸಿಎಸ್ಎಂಆರ್ಎಸ್, ಎಂಒಇಎಫ್ ಮತ್ತು ಸಿಸಿ ಮತ್ತು ಹೈಡ್ರೋ ಪಿಎಸ್ಪಿ ಡೆವಲಪರ್ಗಳ ಬೆಂಬಲದೊಂದಿಗೆ ಸಿಇಎ ಮಿಷನ್ ಮೋಡ್ನಲ್ಲಿ ಅವಶ್ಯಕತೆಯನ್ನು ಸಾಧಿಸಲು ಪ್ರಯತ್ನಿಸುತ್ತದೆ.

 

*****



(Release ID: 2041348) Visitor Counter : 5