ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಕೇರಳದ ಭೂಕುಸಿತ ಪೀಡಿತ ವಯನಾಡಿನಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರಿಂದ ಟೆಲಿಕಾಂ ಸಂಪರ್ಕದ ಮರುಸ್ಥಾಪನೆ ಮತ್ತು ಸಂಯೋಜನೆ
ಇವು ರಕ್ಷಣಾ ತಂಡಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಅಗತ್ಯ ಸಂವಹನವನ್ನು ನಿರ್ವಹಿಸುತ್ತವೆ
ನಿವಾಸಿಗಳನ್ನು ಬೆಂಬಲಿಸಲು ನಿಯಂತ್ರಣ ಕೊಠಡಿಗಳು ಮತ್ತು ಪರಿಹಾರ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ
Posted On:
01 AUG 2024 8:56PM by PIB Bengaluru
ಭಾರಿ ಭೂಕುಸಿತದಿಂದ ಹಾನಿಗೊಳಗಾದ ವಯನಾಡಿನಲ್ಲಿ ರಕ್ಷಣಾ ತಂಡಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಅಗತ್ಯ ಸಂವಹನ/ಸಂಪರ್ಕ ಮಾರ್ಗಗಳನ್ನು ನಿರ್ವಹಿಸಲು ಮತ್ತು ಸ್ಥಾಪಿಸಲು, ಟೆಲಿಕಾಂ ಸೇವಾ ಪೂರೈಕೆದಾರರು ದೂರಸಂಪರ್ಕವನ್ನು ಯುದ್ಧೋಪಾದಿಯಲ್ಲಿ ಹೆಚ್ಚಿಸುತ್ತಿದ್ದಾರೆ ಮತ್ತು ಪುನಃಸ್ಥಾಪಿಸುತ್ತಿದ್ದಾರೆ. ಬಿಎಸ್ಎನ್ಎಲ್, ಏರ್ಟೆಲ್, ರಿಲಯನ್ಸ್ ಜಿಯೋ ಮತ್ತು ವಿಐ ಸೇರಿದಂತೆ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರು ವಯನಾಡಿನಲ್ಲಿ ನಿರಂತರ ವ್ಯಾಪ್ತಿಯನ್ನು ಒದಗಿಸಲು ಟೆಲಿಕಾಂ ಮೂಲಸೌಕರ್ಯವನ್ನು ಹೆಚ್ಚಿಸಿದ್ದಾರೆ ಮತ್ತು ಮರುಸ್ಥಾಪನೆ ಮಾಡಿದ್ದಾರೆ.
ವಯನಾಡ್ ನಿವಾಸಿಗಳನ್ನು ಬೆಂಬಲಿಸಲು ನಿಯಂತ್ರಣ ಕೊಠಡಿಗಳು, ಪರಿಹಾರ ವಿತರಣಾ ಕೇಂದ್ರಗಳು ಮತ್ತು ತುರ್ತು ಪ್ರತಿಕ್ರಿಯೆ ತಂಡಗಳನ್ನು ಸಕ್ರಿಯಗೊಳಿಸಲಾಗಿದೆ. ಸಂಕಷ್ಟದಲ್ಲಿರುವ ಸಮುದಾಯಗಳನ್ನು ಬೆಂಬಲಿಸಲು ಮತ್ತು ನಿರಂತರ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಟೆಲಿಕಾಂ ಸಂಪರ್ಕವನ್ನು ಹೆಚ್ಚಿಸಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಟೆಲಿಕಾಂ ಸೇವಾ ಪೂರೈಕೆದಾರರು ಕೈಗೊಂಡ ಕ್ರಮಗಳು:
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್):
- ವಯನಾಡ್ ಜಿಲ್ಲೆಯ ಭೂಕುಸಿತ ಪೀಡಿತ ಚೂರಲ್ಮಾಲಾ ಮತ್ತು ಮುಂಡಕ್ಕೈ ಪ್ರದೇಶಗಳಲ್ಲಿ 4 ಜಿ ಸೇವೆಗಳನ್ನು ಒದಗಿಸಲಾಗಿದೆ. ವಿದ್ಯುತ್ ಇಲ್ಲದಿದ್ದರೂ ಟವರ್ ಗಳು ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಡೀಸೆಲ್ ಎಂಜಿನ್ ಗಳನ್ನು ಒದಗಿಸಲಾಗಿದೆ.
- ಜಿಲ್ಲಾಡಳಿತಕ್ಕೆ ತ್ವರಿತ ಇಂಟರ್ನೆಟ್ ಸಂಪರ್ಕಗಳನ್ನು ಮತ್ತು ಕೇರಳ ಸರ್ಕಾರದ ಆರೋಗ್ಯ ಇಲಾಖೆಗೆ ಟೋಲ್ ಫ್ರೀ ಸಂಖ್ಯೆಗಳನ್ನು ನೀಡಲಾಗಿದೆ.
ರಿಲಯನ್ಸ್ ಜಿಯೋ:
- ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳ ವಿನಂತಿಯ ಆಧಾರದ ಮೇಲೆ ಮತ್ತು ಈ ಸಮಯದಲ್ಲಿ ವಿಶ್ವಾಸಾರ್ಹ ಸಂಪರ್ಕದ ನಿರ್ಣಾಯಕ ಅಗತ್ಯವನ್ನು ಗುರುತಿಸಿದ ಬಳಿಕ, ಭೂಕುಸಿತ ಪೀಡಿತ ಪ್ರದೇಶದಲ್ಲಿ ಹೆಚ್ಚಿನ ಬೆಂಬಲವನ್ನು ಒದಗಿಸಲು ಜಿಯೋ ಇದಕ್ಕಾಗಿಯೇ ಮೀಸಲಾದ ಎರಡನೇ ಟವರ್ ಸ್ಥಾಪಿಸಿದೆ. ನೆಟ್ವರ್ಕ್ ಸಾಮರ್ಥ್ಯ ಮತ್ತು ವ್ಯಾಪ್ತಿಯ ಹೆಚ್ಚಳವು, ತೊಂದರೆಗೀಡಾದ ನಿವಾಸಿಗಳು ಮತ್ತು ರಕ್ಷಣಾ ಕಾರ್ಯಕರ್ತರು ಮತ್ತು ವಿಪತ್ತು ನಿರ್ವಹಣಾ ತಂಡಗಳಿಗೆ ಹೆಚ್ಚಿನ ಸಹಾಯ ಮಾಡುತ್ತದೆ.
- ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಉತ್ತಮ ಸಮನ್ವಯಕ್ಕೆ ಅನುಕೂಲವಾಗುವಂತೆ ನಿಯಂತ್ರಣ ಕೊಠಡಿ ಮತ್ತು ವಿವಿಧ ಪರಿಹಾರ ಶಿಬಿರಗಳನ್ನು ಜೋಡಿಸಲು ನೆಟ್ವರ್ಕ್ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.
ಏರ್ ಟೆಲ್:
- ವ್ಯಾಲಿಡಿಟಿ ಅವಧಿ ಮುಗಿದು ರೀಚಾರ್ಜ್ ಮಾಡಲು ಸಾಧ್ಯವಾಗದ ಪ್ರಿಪೇಯ್ಡ್ ಗ್ರಾಹಕರಿಗೆ ದಿನಕ್ಕೆ 1 ಜಿಬಿ ಉಚಿತ ಮೊಬೈಲ್ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ನೀಡಲಾಗುವುದು. ಇದು 3 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
- ಪೋಸ್ಟ್ಪೇಯ್ಡ್ – ಏರ್ ಟೆಲ್ ಗ್ರಾಹಕರಿಗೆ ಮೊಬೈಲ್ ಸೇವೆಯ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಏರ್ಟೆಲ್ ಎಲ್ಲಾ ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಬಿಲ್ ಪಾವತಿ ದಿನಾಂಕಗಳನ್ನು 30 ದಿನಗಳವರೆಗೆ ವಿಸ್ತರಿಸಿದೆ.
- ಪರಿಹಾರ ಸಾಮಗ್ರಿಗಳೊಂದಿಗೆ ಸ್ಥಳೀಯ ಆಡಳಿತಕ್ಕೆ ಬೆಂಬಲ - ಏರ್ಟೆಲ್ ಕೇರಳದ ತನ್ನ ಎಲ್ಲಾ 52 ಚಿಲ್ಲರೆ ಅಂಗಡಿಗಳನ್ನು ಪರಿಹಾರ ಸಂಗ್ರಹ ಕೇಂದ್ರಗಳಾಗಿ ಪರಿವರ್ತಿಸಿದೆ, ಅಲ್ಲಿ ಜನರು ಪರಿಹಾರ ಸಾಮಗ್ರಿಗಳನ್ನು ಕೊಡಬಹುದು, ಅವುಗಳನ್ನು ವಯನಾಡಿನ ಪೀಡಿತ ಸಮುದಾಯಗಳಿಗೆ ಕಳುಹಿಸಲು ಸ್ಥಳೀಯ ಆಡಳಿತಕ್ಕೆ ಹಸ್ತಾಂತರಿಸಲಾಗುವುದು.
ವೊಡಾಫೋನ್ ಐಡಿಯಾ (ವಿಐ):
- ಪ್ರಿಪೇಯ್ಡ್ ಗ್ರಾಹಕರು: ಏಳು ದಿನಗಳವರೆಗೆ ದಿನಕ್ಕೆ 1 ಜಿಬಿ ಮೊಬೈಲ್ ಡೇಟಾ ಉಚಿತ. ಈ ಹೆಚ್ಚುವರಿ ಡೇಟಾವನ್ನು ಬಳಕೆದಾರರ ಖಾತೆಗಳಿಗೆ ಸ್ವಯಂ ಕ್ರೆಡಿಟ್ ಮಾಡಲಾಗುತ್ತದೆ, ಇದು ಅವರಿಗೆ ಪ್ರೀತಿಪಾತ್ರರೊಂದಿಗೆ ಸಂಪರ್ಕದಲ್ಲಿರಲು ಮತ್ತು ಯಾವುದೇ ಅಡೆತಡೆಯಿಲ್ಲದೆ ಮಾಹಿತಿಯನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ.
- ಪೋಸ್ಟ್ ಪೇಯ್ಡ್ ಗ್ರಾಹಕರಿಗೆ, ವೊಡಾಫೋನ್ ಐಡಿಯಾ ಬಿಲ್ ಪಾವತಿಯ ಕೊನೆಯ ದಿನಾಂಕವನ್ನು 10 ದಿನಗಳವರೆಗೆ ವಿಸ್ತರಿಸಿದೆ. ಈ ವಿಸ್ತರಣೆಯು ವಿಪತ್ತಿನ ತಕ್ಷಣದ ಪರಿಣಾಮಗಳನ್ನು ನಿರ್ವಹಿಸುತ್ತಿರುವವರಿಗೆ ಸ್ವಲ್ಪ ಪರಿಹಾರವನ್ನು ನೀಡುವ ಗುರಿಯನ್ನು ಹೊಂದಿದೆ.
- ನಡೆಯುತ್ತಿರುವ ಪರಿಹಾರ ಪ್ರಯತ್ನಗಳಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ, ವಿಐ ಕೇರಳದಾದ್ಯಂತ ತನ್ನ ಎಲ್ಲಾ ಮಳಿಗೆಗಳನ್ನು ಪರಿಹಾರ ಸಾಮಗ್ರಿಗಳ ಸಂಗ್ರಹ ಕೇಂದ್ರಗಳಾಗಿ ಪರಿವರ್ತಿಸುತ್ತಿದೆ. ವಯನಾಡ್ ನಲ್ಲಿನ ಪರಿಹಾರ ಕಾರ್ಯಾಚರಣೆಗಳನ್ನು ಬೆಂಬಲಿಸಲು ಸಾರ್ವಜನಿಕರು ಯಾವುದೇ ವಿಐ ಸ್ಟೋರ್ ನಲ್ಲಿ ಅಗತ್ಯ ವಸ್ತುಗಳನ್ನು ದಾನ ಮಾಡಬಹುದು
- ವಿಐ ಜಿಲ್ಲೆಯ ಎಲ್ಲಾ 263 ತಾಣಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿದೆ, ಇದರಲ್ಲಿ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ಪ್ರದೇಶಗಳಲ್ಲಿನ 17 ತಾಣಗಳು ಸೇರಿವೆ.
ವಯನಾಡ್ ನಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರು (ಟಿಎಸ್ ಪಿಗಳು) ನಡೆಸಿದ ಕಾರ್ಯಾಚರಣೆಗಳ ಛಾಯಾಚಿತ್ರಗಳು.
*****
(Release ID: 2040657)
Visitor Counter : 43