ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಎಂಎಸ್ಎಂಇ ವಲಯದ ಅಭಿವೃದ್ಧಿ

Posted On: 01 AUG 2024 5:03PM by PIB Bengaluru

ಎಂಎಸ್ಎಂಇ ವಲಯದ ಅಭಿವೃದ್ಧಿಗೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅವು ಈ ಕೆಳಗಿನಂತಿವೆ:

i.  ಎಂಎಸ್ಎಂಇ ವಲಯದ ವ್ಯಾಪ್ತಿಯನ್ನು ವಿಸ್ತರಿಸಲು, ಹೂಡಿಕೆ ಮತ್ತು ವಹಿವಾಟಿನ ಆಧಾರದ ಮೇಲೆ ಹೆಚ್ಚಿನ ವ್ಯಾಪ್ತಿ-ಮಿತಿಯೊಂದಿಗೆ ಎಂಎಸ್ಎಂಇಗಳ ವರ್ಗೀಕರಣಕ್ಕೆ ಹೊಸ ಮಾನದಂಡಗಳನ್ನು ರೂಪಿಸಲಾಗಿದ್ದು, 26.06.2020 ರಂದು ಅಧಿಸೂಚನೆ ಹೊರಡಿಸಲಾಗಿದೆ.

ii.  200 ಕೋಟಿ ರೂ.ವರೆಗಿನ ಖರೀದಿಗೆ ಜಾಗತಿಕ ಟೆಂಡರ್ ಇಲ್ಲ.

iii. ಸುಗಮ ವ್ಯಾಪಾರಕ್ಕಾಗಿ ಎಂಎಸ್ಎಂಇಗಳಿಗೆ "ಉದ್ಯಮ ನೋಂದಣಿ" ಯನ್ನು 01.07.2020 ರಂದು ಪ್ರಾರಂಭಿಸಲಾಗಿದೆ.

iv. ಅನೌಪಚಾರಿಕ ಸೂಕ್ಷ್ಮ/ಕಿರು ಉದ್ಯಮಗಳನ್ನು ಔಪಚಾರಿಕ ವ್ಯಾಪ್ತಿಗೆ ತರಲು 11.01.2023 ರಂದು ಉದ್ಯಮ್ ಅಸಿಸ್ಟ್ ಪ್ಲಾಟ್ ಫಾರ್ಮ್ ಪ್ರಾರಂಭಿಸಲಾಗಿದೆ.

 v. ಸಾಲ ಉದ್ದೇಶಕ್ಕಾಗಿ 02.07.2021 ರಿಂದ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳನ್ನು ಎಂಎಸ್ಎಂಇಗಳಾಗಿ ಸೇರಿಸಲಾಗಿದೆ.

vi. ಎಂಎಸ್ಎಂಇಗಳ ಸ್ಥಿತಿಗತಿಯಲ್ಲಿ ಮೇಲ್ಮುಖ ಬದಲಾವಣೆಯ ಸಂದರ್ಭದಲ್ಲಿ ತೆರಿಗೆಯೇತರ ಪ್ರಯೋಜನಗಳನ್ನು 3 ವರ್ಷಗಳವರೆಗೆ ವಿಸ್ತರಿಸಲಾಗಿದೆ.

vii. ಸರಕು ಮತ್ತು ಸೇವೆಗಳ ಖರೀದಿದಾರರಿಂದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಬಾಕಿ ಇರುವ ಮೊತ್ತದ ಬಗ್ಗೆ ಮೇಲ್ವಿಚಾರಣೆ ಮಾಡಲು  ಹಾಗು ಕುಂದುಕೊರತೆಗಳನ್ನು ಸಲ್ಲಿಸಲು  ಸಮಧಾನ್ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ.

viii. ಕುಂದುಕೊರತೆಗಳ ಪರಿಹಾರ ಮತ್ತು ಎಂಎಸ್ಎಂಇಗಳನ್ನು ಬಲಪಡಿಸಲು/ ಕೈಹಿಡಿಯುವಿಕೆ ಸೇರಿದಂತೆ ಇ-ಆಡಳಿತದ ಅನೇಕ ಅಂಶಗಳನ್ನು ಒಳಗೊಳ್ಳಲು 2020 ರ ಜೂನ್ ತಿಂಗಳಲ್ಲಿ ಆನ್ಲೈನ್ ಪೋರ್ಟಲ್ "ಚಾಂಪಿಯನ್ಸ್" ಅನ್ನು ಪ್ರಾರಂಭಿಸಲಾಗಿದೆ.

ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಚಿವಾಲಯ ಒದಗಿಸಿದ ಮಾಹಿತಿಯ ಪ್ರಕಾರ, ವ್ಯಾಪಾರ ಸೌಲಭ್ಯ ಉತ್ತೇಜನ ಕ್ರಮವಾಗಿ, ವಹಿವಾಟಿನ ಆಧಾರದ ಮೇಲೆ, ಈ ಕೆಳಗಿನ ಉದ್ಯಮಗಳು ಜಿಎಸ್ಟಿ ನೋಂದಣಿ ಪಡೆಯುವ ಅಗತ್ಯವಿಲ್ಲ:

i. ರಾಜ್ಯದೊಳಗೆ ತೆರಿಗೆಗೆ ಒಳಪಡುವ ಸರಕುಗಳ ಪೂರೈಕೆಯಲ್ಲಿ ತೊಡಗಿರುವ ವ್ಯಕ್ತಿಗಳು ಅವರ ಒಟ್ಟು ವಹಿವಾಟು ಒಂದು ಹಣಕಾಸು ವರ್ಷದಲ್ಲಿ ₹ 40 ಲಕ್ಷವನ್ನು ಮೀರದಿದ್ದರೆ.

ii. ರಾಜ್ಯದೊಳಗೆ  ಅಥವಾ ಅಂತರ-ರಾಜ್ಯ ವ್ಯಾಪ್ತಿಯಲ್ಲಿ ತೆರಿಗೆಗೆ ಒಳಪಡುವ ಸೇವೆಗಳ ಪೂರೈಕೆಯಲ್ಲಿ ತೊಡಗಿರುವ ವ್ಯಕ್ತಿಗಳು, ಒಂದು ಹಣಕಾಸು ವರ್ಷದಲ್ಲಿ ಒಟ್ಟು ವಹಿವಾಟು ₹ 20 ಲಕ್ಷ ಮೀರದಿದ್ದರೆ.

ಮಾಸಿಕ ರಿಟರ್ನ್ಸ್ ಸಲ್ಲಿಸುವಲ್ಲಿ ಒಳಗೊಂಡಿರುವ ಅನುಸರಣೆ ಹೊರೆಯನ್ನು ಸರಾಗಗೊಳಿಸಲು, ಎಂಎಸ್ಎಂಇ ವಲಯಕ್ಕೆ ಹಲವಾರು ಅನುಕೂಲಕರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿಗದಿತ ಮಿತಿಯೊಳಗೆ ವಹಿವಾಟು ಹೊಂದಿರುವ ಸಣ್ಣ ಮತ್ತು ಮಧ್ಯಮ ತೆರಿಗೆದಾರರಿಗೆ ಜಿಎಸ್ಟಿಯಲ್ಲಿ ಸಂಯೋಜನೆ ಲೆವಿ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಒಟ್ಟು 1.5 ಕೋಟಿ ರೂ.ವರೆಗಿನ ವಹಿವಾಟು ಹೊಂದಿರುವ ಸರಕುಗಳ ಪೂರೈಕೆದಾರರು ಮತ್ತು 50 ಲಕ್ಷ ರೂ.ವರೆಗಿನ ವಹಿವಾಟು ಹೊಂದಿರುವ ಸೇವಾ ಪೂರೈಕೆದಾರರು ಸಂಯೋಜನೆ ಯೋಜನೆಯನ್ನು ಆಯ್ಕೆ ಮಾಡಬಹುದು. ಘೋಷಣಾ ಪತ್ರದ ಆಧಾರದ ಮೇಲೆ ತ್ರೈಮಾಸಿಕ ಆಧಾರದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಮತ್ತು ಅಂತಹ ತೆರಿಗೆದಾರರು ವಿಸ್ತಾರವಾದ ಖಾತೆಗಳನ್ನು ನಿರ್ವಹಿಸಬೇಕಾಗಿಲ್ಲ ಮತ್ತು ಕೇವಲ ಒಂದು ವಾರ್ಷಿಕ ರಿಟರ್ನ್ ಅನ್ನು ಮಾತ್ರ ಸಲ್ಲಿಸಬೇಕಾಗುತ್ತದೆ.  

ಇದಲ್ಲದೆ, ಕೇಂದ್ರ ನೇರ ತೆರಿಗೆ ಮಂಡಳಿ, ಕಂದಾಯ ಇಲಾಖೆ, ಹಣಕಾಸು ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ಆದಾಯ ತೆರಿಗೆ ಕಾಯ್ದೆ, 1961ರನ್ವಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಮಾತ್ರ ಯಾವುದೇ ನಿರ್ದಿಷ್ಟ ದಂಡವನ್ನು ವಿಧಿಸುವುದಿಲ್ಲ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಹಾಯಕ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

 

*****


(Release ID: 2040527) Visitor Counter : 47