ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ರಾಜ್ಯಗಳು ಭಾರತೀಯ ಆಹಾರ ನಿಗಮದಿಂದ ಇ-ಹರಾಜಿನಲ್ಲಿ ಭಾಗವಹಿಸದೆ ಅಕ್ಕಿಯನ್ನು ಕ್ವಿಂಟಲ್ ಗೆ 2,800 ರೂಪಾಯಿಯಂತೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) ಅಡಿಯಲ್ಲಿ ಖರೀದಿಸಬಹುದು: ಶ್ರೀ ಪ್ರಲ್ಹಾದ್ ಜೋಶಿ
ಗುಣಮಟ್ಟ ಮತ್ತು ಪೌಷ್ಠಿಕ ಆಹಾರ ಮೋದಿ ಸರ್ಕಾರದ ಪ್ರಮುಖ ಆದ್ಯತೆ, ಭಾರತ್ ಬ್ರಾಂಡ್ ಅಡಿಯಲ್ಲಿ ಅಕ್ಕಿ, ಗೋದಿ ಹಿಟ್ಟು ಮಾರಾಟ ಮುಂದುವರಿಯುತ್ತದೆ: ಶ್ರೀ ಜೋಶಿ
प्रविष्टि तिथि:
01 AUG 2024 3:08PM by PIB Bengaluru
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಇಲ್ಲಿ ಧಾನ್ಯ ಕೊರತೆಯಿರುವ ರಾಜ್ಯಗಳು ಆಗಸ್ಟ್ 1, 2024 ರಿಂದ ಇ-ಹರಾಜಿನಲ್ಲಿ ಭಾಗವಹಿಸದೆ ಭಾರತೀಯ ಆಹಾರ ನಿಗಮದಿಂದ (ಎಫ್ ಸಿ ಐ) ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್ಎಸ್) (ಒಎಂಎಸ್ಎಸ್ [ಡಿ]) ಅಡಿಯಲ್ಲಿ ನೇರವಾಗಿ ಖರೀದಿಸಬಹುದು ಎಂದು ಘೋಷಿಸಿದರು. ಹೊಸ ಸಂಗ್ರಹಣಾ ಋತುವಿನ ಪ್ರಾರಂಭದ ಮೊದಲು ಸಂಗ್ರಹಣೆಯ ಬೃಹತ್ ಹೆಚ್ಚುವರಿಯನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಒಎಂಎಸ್ಎಸ್ [ಡಿ] ಅಡಿಯಲ್ಲಿ, ಭಾರತ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ನೇರವಾಗಿ ರಾಜ್ಯಗಳಿಗೆ ಧಾನ್ಯವನ್ನು ಪ್ರತಿ ಕ್ವಿಂಟಲ್ಗೆ 2,800 ರೂಪಾಯಿಯಂತೆ (ಸಾರಿಗೆ ವೆಚ್ಚವನ್ನು ಹೊರತುಪಡಿಸಿ) ನೀಡುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿ ವ್ಯಕ್ತಿಗೆ ನಿಗದಿತ 5 ಕೆಜಿ ಉಚಿತ ಧಾನ್ಯಕ್ಕಿಂತ ಹೆಚ್ಚಿನದನ್ನು ಖರೀದಿಸಲು ಬಯಸಿದರೆ, ಅವರು ಕ್ವಿಂಟಲ್ಗೆ ಹಿಂದಿನ 2,900 ರೂಗಳ ಬದಲಿಗೆ ಕ್ವಿಂಟಲ್ ಗೆ ಅದೇ ಬೆಲೆಯಾದ ರೂ 2,800 ಕ್ಕೆ ಖರೀದಿಸಬಹುದು ಎಂದು ಶ್ರೀ ಜೋಶಿ ಹೇಳಿದರು. ಜೂನ್ 30, 2024 ರವರೆಗೆ ನಡೆಯುತ್ತಿದ್ದ ‘ಭಾರತ್’ ಬ್ರಾಂಡ್ ಅಡಿಯಲ್ಲಿ ಗೋದಿಪುಡಿ ಮತ್ತು ಅಕ್ಕಿ ಮಾರಾಟವನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಕುರಿತು ಮಾತನಾಡಿದ ಕೇಂದ್ರ ಸಚಿವರು, ಸುಮಾರು 81.35 ಕೋಟಿ ಫಲಾನುಭವಿಗಳಿಗೆ (ಅಂದರೆ ಅಂತ್ಯೋದಯ ಅನ್ನ ಯೋಜನೆ (ಎಎವೈ) ಕುಟುಂಬಗಳು ಮತ್ತು ಆದ್ಯತಾ ಕುಟುಂಬಗಳ (ಪಿ ಎಚ್ ಎಚ್) ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲು ಕೇಂದ್ರ ನಿರ್ಧರಿಸಿದೆ ಎಂದು ಹೇಳಿದರು. ಪಿಎಂಜಿಕೆಎವೈ ಯೋಜನೆಯಡಿಯಲ್ಲಿ ಐದು ವರ್ಷಗಳ ಅವಧಿಗೆ ಜನವರಿ 1, 2024 ರಿಂದ ಜಾರಿಗೆ ಬರುವಂತೆ ಅಂದಾಜು ಹಣಕಾಸಿನ ವೆಚ್ಚ ರೂ. 11.80 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರ ಭರಿಸಲಿದೆ. "ಇದು ಸಾರ್ವಕಾಲಿಕ ಅತಿದೊಡ್ಡ ಮತ್ತು ಅತಿ ವಿಶಾಲವಾದ ಆಹಾರ ಭದ್ರತಾ ಕಾರ್ಯಕ್ರಮವಾಗಿದೆ" ಎಂದು ಶ್ರೀ ಜೋಶಿ ಹೇಳಿದರು. 2023-2024 ರಲ್ಲಿ ವಿತರಿಸಲಾದ ಆಹಾರ ಧಾನ್ಯವು 497 ಎಲ್.ಎಂ.ಟಿಯಾಗಿದ್ದು ಜೂನ್ 2024 ರವರೆಗೆ ಕೇಂದ್ರವು 125 ಲಕ್ಷ ಮೆಟ್ರೆಕ್ ಟನ್ ಅಷ್ಟು ವಿತರಿಸಿದೆ.

ದೇಶದಲ್ಲಿ ರಕ್ತಹೀನತೆ ಮತ್ತು ಪೌಷ್ಠಿಕಾಂಶದ ಕೊರತೆಯನ್ನು ಪರಿಹರಿಸಲು, ಪಿಎಂಜಿಕೆಎವೈ ಯೋಜನೆಯಡಿಯಲ್ಲಿ ಸರ್ಕಾರವು ಎಲ್ಲಾ ಮೂರು ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಮತ್ತು ಸರ್ಕಾರದ ಪ್ರತಿಯೊಂದು ಯೋಜನೆಯಲ್ಲಿ ಕಸ್ಟಮ್-ಮಿಲ್ಡ್ ಅಕ್ಕಿಯನ್ನು ಫೋರ್ಟಿಫೈಡ್ ಅಕ್ಕಿಯೊಂದಿಗೆ ಬದಲಾಯಿಸಲಾಗಿದ್ದು 2024ರ ಮಾರ್ಚ್ ವೇಳೆಗೆ ಬಲವರ್ಧಿತ (ಫೋರ್ಟಿಫೈಡ್) ಅಕ್ಕಿ 100% ವಿತರಣೆಯನ್ನು ಸಾಧಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. "ಗುಣಮಟ್ಟದ ಆಹಾರ ಮತ್ತು ಪೌಷ್ಟಿಕ ಆಹಾರವು ಪಿಎಂ ಮೋದಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ" ಎಂದು ಅವರು ಹೇಳಿದರು.
ಹೆಚ್ಚಿನ ಆಹಾರ ಹಣದುಬ್ಬರದ ಬಗ್ಗೆ, ಕೇಂದ್ರ ಸಚಿವರು ಟೊಮೆಟೊ ಮತ್ತು ಇತರ ತರಕಾರಿಗಳು ಋತುವಿಗೆ ತಕ್ಕನಾಗಿವೆ ಎಂದು ಹೇಳಿದರು. ಟೊಮೇಟೊ ಬೆಲೆ ಸ್ಥಿರಗೊಳ್ಳುತ್ತಿದ್ದು, ಪಿಎಸ್ಎಫ್ ಬಳಸದೆಯೇ 60 ಕೆಜಿಗೆ ಸಬ್ಸಿಡಿ ದರದಲ್ಲಿ ಟೊಮೆಟೊ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಅವರು ಹೇಳಿದರು. ಬೇಳೆಕಾಳುಗಳ ಬಿತ್ತನೆ ಪ್ರದೇಶ ಹೆಚ್ಚಿದ್ದು, ರೈತರಿಂದ ಶೇ.100ರಷ್ಟು ಬೇಳೆಕಾಳು ಖರೀದಿಯಾಗಲಿದೆ ಎಂದು ಶ್ರೀ ಜೋಶಿ ಹೇಳಿದರು.
ಎಥೆನಾಲ್ ಉತ್ಪಾದನಾ ಸಾಮರ್ಥ್ಯವು ವಾರ್ಷಿಕ 1589 ಕೋಟಿ ಲೀಟರ್ ಗೆ ಏರಿದೆ ಎಂದು ಶ್ರೀ ಜೋಶಿ ಮಾಹಿತಿ ನೀಡಿದರು, ಇದು ಇಲ್ಲಿಯವರೆಗೆ ದೇಶದ ದೇಶೀಯ ಎಥೆನಾಲ್ ಅಗತ್ಯವನ್ನು ಪೂರೈಸಲು ಸಾಕಾಗುತ್ತದೆ. ಸುಮಾರು ₹ 1.05 ಲಕ್ಷ ಕೋಟಿ ಪಾವತಿಯೊಂದಿಗೆ, ಪ್ರಸಕ್ತ ಸಕ್ಕರೆ 94.8% ಕ್ಕಿಂತ ಹೆಚ್ಚು ಕಬ್ಬಿನ ಬಾಕಿಯ ಹೊರೆಯನ್ನು ಕಡಿಮೆ ಮಾಡಿ ಕಬ್ಬಿನ ಬಾಕಿಯನ್ನು ಪಾವತಿಸಲಾಗಿದೆ ಎಂದು ಅವರು ಹೇಳಿದರು. ರೈತರ ಹಿತದೃಷ್ಟಿಯಿಂದ 2021-22 ರ ಸಕ್ಕರೆ ಋತುವಿನ ಸುಮಾರು 99.9% ಕಬ್ಬಿನ ಬಾಕಿಯನ್ನು ಪಾವತಿಸಲಾಗಿದೆ ಎಂದು ಅವರು ಹೇಳಿದರು. ಹಿಂದಿನ ಸಕ್ಕರೆ ಋತುವಿನಲ್ಲಿ 2022-23ಕ್ಕೆ, ಕಬ್ಬಿನ ಬಾಕಿಯ ರೂ. 1,14,494 ಕೋಟಿ ಯಲ್ಲಿ, ಸುಮಾರು ₹ 1,14,235 ಕೋಟಿ ಪಾವತಿಸಲಾಗಿದೆ ಮತ್ತು ಕೇವಲ ರೂ. 259 ಕೋಟಿ ಬಾಕಿ ಪಾವತಿಸಬೇಕಿದೆ. ಹೀಗಾಗಿ ರೈತರಿಗೆ ಶೇ.99.8ರಷ್ಟು ಕಬ್ಬಿನ ಬಾಕಿ ಪಾವತಿಸಲಾಗಿದೆ ಎಂದು ಜೋಶಿ ಹೇಳಿದರು.

ಒನ್ ನೇಷನ್ ಒನ್ ಪಡಿತರ (ಒಂದು ದೇಶ ಒಂದು ಪಡಿತರ ಚೀಟಿ) ಅಡಿಯಲ್ಲಿ, ಇಲ್ಲಿಯವರೆಗೆ 145 ಕೋಟಿ ರೂಪಾಯಿ ಪೋರ್ಟ್ ಅಬಿಲಿಟಿ ವಹಿವಾಟುಗಳನ್ನು ದೇಶಾದ್ಯಂತ ನಡೆಸಲಾಗಿದೆ ಎಂದು ಶ್ರೀ ಜೋಶಿ ತಿಳಿಸಿದರು. ಎನ್ಎಫ್ಎಸ್ಎ ಫಲಾನುಭವಿಗಳಿಗೆ ಒಟ್ಟು 293 ಲಕ್ಷ ಮೆಟ್ರೆಕ್ ಟನ್ ಆಹಾರ ಧಾನ್ಯಗಳನ್ನು ಅಂತರ-ರಾಜ್ಯ ಅಥವಾ ರಾಜ್ಯದೊಳಗೆ ನೀಡಲಾಗಿದೆ.
*****
(रिलीज़ आईडी: 2040461)
आगंतुक पटल : 116