ಸಹಕಾರ ಸಚಿವಾಲಯ
ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆ
प्रविष्टि तिथि:
30 JUL 2024 4:35PM by PIB Bengaluru
ಸಹಕಾರಿ ಕ್ಷೇತ್ರದಲ್ಲಿ ತಾಂತ್ರಿಕ ಮತ್ತು ನಿರ್ವಹಣಾ ಶಿಕ್ಷಣ ಮತ್ತು ತರಬೇತಿ ನೀಡಲು, ಸಹಕಾರಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಸಂಯೋಜಿತ ಸಂಸ್ಥೆಗಳ ಜಾಲದ ಮೂಲಕ ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು ರಾಷ್ಟ್ರೀಯ ಮಟ್ಟದ ಸಹಕಾರಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಪ್ರಸ್ತಾಪದ ಮೇಲೆ ಸಹಕಾರ ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ.
ಮೇಲಿನ ಉದ್ದೇಶವನ್ನು ಸಾಧಿಸಲು, ಉದ್ದೇಶಿತ ವಿಶ್ವವಿದ್ಯಾಲಯದ ರೂಪುರೇಖೆಗಳನ್ನು ತಯಾರಿಸಲು ಕೇಂದ್ರ ಸಚಿವಾಲಯಗಳು / ಇಲಾಖೆಗಳು, ರಾಜ್ಯ ಸರ್ಕಾರಗಳು, ರಾಷ್ಟ್ರೀಯ ಸಹಕಾರಿಗಳು / ಒಕ್ಕೂಟಗಳು, ಸಹಕಾರಿ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಸೇರಿದಂತೆ ವಿವಿಧ ಭಾಗೀದಾರರು/ಮಧ್ಯಸ್ಥಗಾರರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಲಾಗಿದೆ. ವಿಶ್ವವಿದ್ಯಾಲಯವು ತನ್ನ ವೆಚ್ಚಗಳನ್ನು ಪೂರೈಸಿಕೊಳ್ಳುವಂತೆ ಕಾರ್ಯಾಚರಣೆಯಲ್ಲಿ ಸ್ವಾವಲಂಬಿಯಾಗುವ ಗುರಿಯನ್ನು ಹೊಂದಿದೆ.
ಪ್ರಸ್ತಾವಿತ/ಉದ್ದೇಶಿತ ವಿಶ್ವವಿದ್ಯಾಲಯವು ಸಹಕಾರಿ ಕ್ಷೇತ್ರದೊಂದಿಗೆ ನಿಕಟ ಸಮನ್ವಯದೊಂದಿಗೆ ಕೆಲಸ ಮಾಡುವ ಸಾಧ್ಯತೆಯಿದೆ ಮತ್ತು ಸಚಿವಾಲಯ ಕೈಗೊಂಡ ವಿವಿಧ ಉಪಕ್ರಮಗಳ ಯಶಸ್ವಿ ಅನುಷ್ಠಾನಕ್ಕಾಗಿ ಸಹಕಾರಿ ವಲಯದಲ್ಲಿ ತರಬೇತಿ ಪಡೆದ ಮಾನವಶಕ್ತಿಯ ಸ್ಥಿರ, ಸಮರ್ಪಕ ಮತ್ತು ಗುಣಮಟ್ಟದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಶಿಕ್ಷಣ ಮತ್ತು ತರಬೇತಿಗಾಗಿ ಸಮಗ್ರ, ಸಂಯೋಜಿತ ಮತ್ತು ಪ್ರಮಾಣೀಕೃತ ರಚನೆಯನ್ನು ಹೊಂದಿರುತ್ತದೆ. ವೃತ್ತಿಪರ ಮಾನವಶಕ್ತಿಯ ಪೂರೈಕೆ ಮತ್ತು ಅಸ್ತಿತ್ವದಲ್ಲಿರುವ ಉದ್ಯೋಗಿಗಳ ಸಾಮರ್ಥ್ಯ ವರ್ಧನೆಯು ಆರ್ಥಿಕತೆಯ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಕೊಡುಗೆ ನೀಡಲು ಸಹಕಾರಿ ವಲಯಕ್ಕೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದರು.
*****
(रिलीज़ आईडी: 2039440)
आगंतुक पटल : 61