ಸಹಕಾರ ಸಚಿವಾಲಯ
azadi ka amrit mahotsav

ಸಿ ಎಸ್ ಸಿ ಇ-ಆಡಳಿತ ಸೇವೆಯೊಂದಿಗೆ ಎಂಒಯು

Posted On: 30 JUL 2024 4:35PM by PIB Bengaluru

ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್, ವಿಮೆ, ಆಧಾರ್ ನೋಂದಣಿ / ನವೀಕರಣ, ಆರೋಗ್ಯ ಸೇವೆಗಳು, ಕೃಷಿ ಸೇವೆಗಳು ಸೇರಿದಂತೆ ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ಸಿ) ತಲುಪಿಸುವ 300 ಕ್ಕೂ ಹೆಚ್ಚು ಇ-ಸೇವೆಗಳನ್ನು ಒದಗಿಸಲು ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಗಳಿಗೆ (ಪಿಎಸಿಎಸ್) ಅನುವು ಮಾಡಿಕೊಡಲು ಸಹಕಾರ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ನಬಾರ್ಡ್ ಮತ್ತು ಸಿಎಸ್ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ನಡುವೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಗಿದೆ.

ಸಿ.ಎಸ್.ಸಿ.ಗಳಂತೆ ಕಾರ್ಯ ನಿರ್ವಹಿಸುವ ಪಿ.ಎ.ಸಿ.ಎಸ್.ಗಳು ಸಿ.ಎಸ್.ಸಿ. ಪೋರ್ಟಲ್ ಮೂಲಕ ಈ ಕೆಳಗಿನ ಸೇವೆಗಳು ಸಹಿತ ನಾಗರಿಕರಿಗೆ ವಿವಿಧ ಇ -ಸೇವೆಗಳನ್ನು  ಒದಗಿಸಬಲ್ಲವು:

a. ಪ್ರಧಾನ ಮಂತ್ರಿ ಕಲ್ಯಾಣ ಯೋಜನೆಗಳು: ಆಯುಷ್ಮಾನ್ ಭಾರತ್ ಯೋಜನೆ, ಪಿಎಂ ಕಿಸಾನ್ ಮಾನ್ಧನ್ ಯೋಜನೆ, ಪಿಎಂ ಫಸಲ್ ಬಿಮಾ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ಇ-ಶ್ರಮ್ ನೋಂದಣಿ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಇತ್ಯಾದಿ.

b. ಕೇಂದ್ರ ಸರ್ಕಾರಿ ಸೇವೆಗಳು: ಆಧಾರ್, ಪ್ಯಾನ್ ಕಾರ್ಡ್, ಜೀವನ್ ಪ್ರಮಾಣ್, ಪಾಸ್ಪೋರ್ಟ್, ನೀರು ಮತ್ತು ವಿದ್ಯುತ್ ಬಿಲ್ ಪಾವತಿ ಸೇವೆಗಳು, ಐಟಿಆರ್ ಸಲ್ಲಿಕೆ, ಇ-ಸ್ಟಾಂಪ್, ಇತ್ಯಾದಿ.

iii. ರಾಜ್ಯ ಸರ್ಕಾರಿ ಸೇವೆಗಳು: ಇ-ಜಿಲ್ಲಾ ಸೇವೆಗಳು, ಪಿಡಿಎಸ್ ಸೇವೆಗಳು, ಪುರಸಭೆ ಸೇವೆಗಳು, ಇತ್ಯಾದಿ.

iv. ಹಣಕಾಸು ಸೇರ್ಪಡೆ ಸೇವೆಗಳು: ಬ್ಯಾಂಕಿಂಗ್, ಸಾಲ, ವಿಮೆ, ಪಿಂಚಣಿ, ಡಿಜಿಪೇ, ಫಾಸ್ಟ್ಯಾಗ್, ಇತ್ಯಾದಿ.

v. ಆಧಾರ್ ಸಂಬಂಧಿತ ಸೇವೆಗಳು: ನೋಂದಣಿ, ನವೀಕರಣ, ಇ-ಕೆವೈಸಿ;.

vi. ಕೃಷಿ ಸೇವೆಗಳು: ಸಿಎಸ್ಸಿ ಇ-ಅಗ್ರಿ ಪೋರ್ಟಲ್, ಕೃಷಿ ಟೆಲಿ-ಕನ್ಸಲ್ಟೇಶನ್ ಮತ್ತು ಇ -ಪಶು ಚಿಕಿತ್ಸಾ, ಮಣ್ಣು ಪರೀಕ್ಷಾ ಕೇಂದ್ರ, ಕಿಸಾನ್ ಇ-ಮಾರ್ಟ್, ಕಿಸಾನ್ ಕ್ರೆಡಿಟ್ ಕಾರ್ಡ್, ಇತ್ಯಾದಿ.

vii. ಇ-ಮೊಬಿಲಿಟಿ ಮತ್ತು ಸ್ಮಾರ್ಟ್ ಉತ್ಪನ್ನಗಳು: ಗ್ರಾಮೀಣ ಇ-ಮೊಬಿಲಿಟಿ ಡೀಲರ್ ಶಿಪ್, ಸ್ಮಾರ್ಟ್ ಉತ್ಪನ್ನಗಳು, ಇತ್ಯಾದಿ.

viii. ಬಿ 2 ಸಿ (ವ್ಯಾಪಾರ ವಲಯದಿಂದ ಗ್ರಾಹಕರಿಗೆ) ಸೇವೆಗಳು:  ಐಆರ್ಸಿಟಿಸಿ / ಬಸ್ / ವಿಮಾನ ಟಿಕೆಟ್ ಬುಕಿಂಗ್, ಮೊಬೈಲ್ / ಡಿಟಿಎಚ್ ರೀಚಾರ್ಜ್, ಇ-ಕಾಮರ್ಸ್ ಇತ್ಯಾದಿ.

ix. ಇತರ ಸೇವೆಗಳು: ಸ್ತ್ರೀ ಸ್ವಾಭಿಮಾನ್ ಉಪಕ್ರಮ, ಸ್ಪರ್ಶ ರಕ್ಷಣಾ ಪಿಂಚಣಿ, ಇತ್ಯಾದಿ.

ರೈಲ್ವೆ ಮತ್ತು ವಿಮಾನ ಟಿಕೆಟ್ಗಳನ್ನು ಕಾಯ್ದಿರಿಸಲು ಸಿಎಸ್ಸಿಯ ಡಿಜಿಟಲ್ ಸೇವಾ ಪೋರ್ಟಲ್ನಲ್ಲಿ ಅವಕಾಶವಿದೆ, ಇದರ ಮೂಲಕ ಸಿಎಸ್ಸಿಯಾಗಿ ಕಾರ್ಯನಿರ್ವಹಿಸುವ ಪಿಎಸಿಎಸ್ ಗ್ರಾಮೀಣ ಪ್ರದೇಶದ ನಾಗರಿಕರಿಗೆ ಈ ಸೇವೆಗಳನ್ನು ವಿಸ್ತರಿಸಬಹುದು.

ಈ ಉಪಕ್ರಮದ ಮೂಲಕ, ಸಾಮಾನ್ಯ ನಾಗರಿಕರು, ವಿಶೇಷವಾಗಿ ದೇಶದ ಗ್ರಾಮೀಣ ಪ್ರದೇಶಗಳಲ್ಲಿ, ಮೇಲೆ ತಿಳಿಸಿದ ಸೇವೆಗಳು ಸೇರಿದಂತೆ 300 ಕ್ಕೂ ಹೆಚ್ಚು ಇ-ಸೇವೆಗಳನ್ನು ತಮ್ಮ ವಾಸಸ್ಥಳಕ್ಕೆ ಹತ್ತಿರದಲ್ಲಿ ಪಡೆಯಬಹುದು, ಆ ಮೂಲಕ ಅವರ ಜೀವನ ಮತ್ತು ವ್ಯವಹಾರವನ್ನು ಸುಲಭಗೊಳಿಸಬಹುದು. ಇದಲ್ಲದೆ, ಇದು ಪಿಎಸಿಎಸ್ ಗಳಿಗೆ ಹೆಚ್ಚುವರಿ ಆದಾಯದ ಮೂಲಗಳನ್ನು ಒದಗಿಸುತ್ತದೆ, ಅಂತಿಮವಾಗಿ ಅದರೊಂದಿಗೆ ಸಂಬಂಧ ಹೊಂದಿರುವ ಕೋಟ್ಯಂತರ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಪಿಎಸಿಎಸ್ ಅನ್ನು ವಿವಿಧ ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸುವ ನೋಡಲ್ ಕೇಂದ್ರಗಳಾಗಿ ಪರಿವರ್ತಿಸುವುದಲ್ಲದೆ, ಸ್ವಯಂ-ಸುಸ್ಥಿರ ಆರ್ಥಿಕ ಘಟಕಗಳಾಗಲು ಸಹಾಯ ಮಾಡುತ್ತದೆ, ಆ ಮೂಲಕ ಗ್ರಾಮೀಣ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದರು. 

 

*****
 


(Release ID: 2039437) Visitor Counter : 46