ಗ್ರಾಮೀಣಾಭಿವೃದ್ಧಿ ಸಚಿವಾಲಯ
ಗ್ರಾಮೀಣಾಭಿವೃದ್ಧಿ ಸಚಿವಾಲಯವು ಕರ್ನಾಟಕ ರಾಜ್ಯಕ್ಕೆ ಪ್ರಮುಖ ಮೂಲಸೌಕರ್ಯ ಉತ್ತೇಜನವನ್ನು ಪ್ರಕಟಿಸಿದೆ
Posted On:
29 JUL 2024 12:08PM by PIB Bengaluru
ಗ್ರಾಮೀಣ ಸಂಪರ್ಕವನ್ನು ಬಲಪಡಿಸಲು ಮತ್ತು ಕರ್ನಾಟಕದಲ್ಲಿ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು, ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪಿಎಂ-ಜನ್‌ಮನ್ ಯೋಜನೆಯಡಿಯಲ್ಲಿ 23.766 ಕಿಮೀಯ 18 ರಸ್ತೆಗಳು ಮತ್ತು 2 ಸೇತುವೆಗಳನ್ನು ಮಂಜೂರು ಮಾಡಿದೆ, ಇದರ ವೆಚ್ಚ ಅಂದಾಜು ರೂ. 25.1796 ಕೋಟಿ ರೂ.ಗಳಾಗಿದೆ.
ಈ ಮಹತ್ವದ ಯೋಜನೆಯ ಉಪಕ್ರಮ ಹೀಗಿದೆ:
- ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕವನ್ನು ಹೆಚ್ಚಿಸುವ ಮೂಲಕ, ದೂರದ ಹಳ್ಳಿಗಳು ಮತ್ತು ನಗರ ಕೇಂದ್ರಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ PVTG ಕುಟುಂಬಗಳು ಮತ್ತು ವಸತಿಗಳನ್ನು ಸ್ಯಾಚುರೇಟ್ ಮಾಡುವ ಮೂಲಕ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳ (PVTGs) ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಬಹುದಾಗಿದೆ.
- ಈ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿ, ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸಲಾಗುವುದು
- ಆರೋಗ್ಯ, ಶಿಕ್ಷಣ ಮತ್ತು ಮಾರುಕಟ್ಟೆಗಳಂತಹ ಅಗತ್ಯ ಸೇವೆಗಳಿಗೆ ಪ್ರವೇಶ ಸುಧಾರಿಸಬಹುದು.
- ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸಬಹುದು.
- ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ (ವಿಕಸಿತ ಭಾರತ) ಅಭಿಯಾನದೊಂದಿಗೆ ಹೊಂದಾಣಿಕೆ ಮಾಡಬಹುದಾಗಿದೆ.
*****
(Release ID: 2038404)
Visitor Counter : 94