ರೈಲ್ವೇ ಸಚಿವಾಲಯ

2019-20 ರಿಂದ 2023-24ರ ಅವಧಿಯಲ್ಲಿ ಭಾರತೀಯ ರೈಲ್ವೆಗೆ 6511 ಹೊಸ ಸಾಮಾನ್ಯ ಬೋಗಿಗಳನ್ನು ಸೇರಿಸಲಾಗಿದೆ


ಜನರಲ್ ಕ್ಲಾಸ್ ಮತ್ತು ಸ್ಲೀಪರ್ ಕ್ಲಾಸ್ ಬೋಗಿಗಳು ಸೇರಿದಂತೆ 10,000 ಎಸಿ (ಹವಾನಿಯಂತ್ರಣ) ರಹಿತ ಬೋಗಿಗಳ ತಯಾರಿಕೆಗೆ ಭಾರತೀಯ ರೈಲ್ವೆ ಯೋಜನೆ ರೂಪಿಸಿದೆ

Posted On: 26 JUL 2024 7:14PM by PIB Bengaluru

ಕಳೆದ ಐದು ವರ್ಷಗಳಲ್ಲಿ ಅಂದರೆ 2019-20 ರಿಂದ 2023-24 ರವರೆಗೆ ಒಟ್ಟು 6511 ಹೊಸ ಸಾಮಾನ್ಯ ಬೋಗಿಗಳನ್ನು ಭಾರತೀಯ ರೈಲ್ವೆ ಗೆ ಸೇರಿಸಲಾಗಿದೆ.

ಅಮೃತ ಭಾರತ ಸೇವೆಗಳು

ಭಾರತೀಯ ರೈಲ್ವೆ (ಐಆರ್)ಯು  ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಅಮೃತ್ ಭಾರತ್ ಸೇವೆಗಳನ್ನು ಜರ್ಕ್ ಫ್ರೀ ಪ್ರಯಾಣಕ್ಕಾಗಿ ಅರೆ-ಶಾಶ್ವತ ಜೋಡಣೆಗಳು, ಸಮತಲ ಸ್ಲೈಡಿಂಗ್ ಕಿಟಕಿಗಳು, ಮಡಚಬಹುದಾದ ತಿಂಡಿ ಟೇಬಲ್ ಮತ್ತು ಬಾಟಲ್ ಹೋಲ್ಡರ್ ಗಳು, ಮೊಬೈಲ್ ಹೋಲ್ಡರ್ ಗಳು ಮುಂತಾದ ಸುಧಾರಿತ ವೈಶಿಷ್ಟ್ಯಗಳೊಂದಿಗೆ  ಒದಗಿಸುತ್ತಿದೆ.  ಪ್ರಸ್ತುತ, 4 ಅಮೃತ್ ಭಾರತ್ ಎಕ್ಸ್ಪ್ರೆಸ್ ಸೇವೆಗಳಾದ 15557/58 ದರ್ಭಂಗಾ-ಆನಂದ್ ವಿಹಾರ್ (ಟಿ) ಎಕ್ಸ್ಪ್ರೆಸ್ ಮತ್ತು 13433/13434 ಮಾಲ್ಡಾ ಟೌನ್ - ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ಭಾರತೀಯ ರೈಲ್ವೆ ಜಾಲದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ, ಅಮೃತ್ ಭಾರತ್ ಸೇವೆಗಳು ಸೇರಿದಂತೆ ರೈಲು ಸೇವೆಗಳನ್ನು ಒದಗಿಸುವುದು ಸಂಚಾರ ಸಮರ್ಥನೆ, ಕಾರ್ಯಾಚರಣೆಯ ಹಣಕಾಸು ಕಾರ್ಯಸಾಧ್ಯತೆ, ಸಂಪನ್ಮೂಲಗಳ ಲಭ್ಯತೆ ಇತ್ಯಾದಿಗಳಿಗೆ ಒಳಪಟ್ಟು ಐಆರ್ನಲ್ಲಿ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ.

ಮೇಲ್ / ಎಕ್ಸ್ಪ್ರೆಸ್ ರೈಲುಗಳ ಸಂಯೋಜನೆಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ನೀತಿಯು 22 ಬೋಗಿಗಳ ರೈಲಿನಲ್ಲಿ 12 (ಹನ್ನೆರಡು) ಸಾಮಾನ್ಯ ದರ್ಜೆ ಮತ್ತು ಸ್ಲೀಪರ್ ಕ್ಲಾಸ್ ಎಸಿ ರಹಿತ ಬೋಗಿಗಳು ಹಾಗು  08 (ಎಂಟು) ಎಸಿ-ಬೋಗಿಗಳನ್ನು ಒದಗಿಸುತ್ತದೆ, ಆ ಮೂಲಕ ಸಾಮಾನ್ಯ ಮತ್ತು ಎಸಿ ಅಲ್ಲದ ಸ್ಲೀಪರ್ ಬೋಗಿಗಳನ್ನು ಬಳಸುವ ಪ್ರಯಾಣಿಕರಿಗೆ ಹೆಚ್ಚಿನ ಅವಕಾಶ ಸೌಕರ್ಯವನ್ನು ಒದಗಿಸುತ್ತದೆ. ರೈಲು ಸೇವೆಗಳನ್ನು ನಡೆಸಲು ಪ್ರಸ್ತುತ ಬಳಸಲಾಗುತ್ತಿರುವ ಒಟ್ಟು ಬೋಗಿಗಳಲ್ಲಿ, ಮೂರನೇ ಎರಡರಷ್ಟು ಎಸಿ ಅಲ್ಲದ ಮತ್ತು ಮೂರನೇ ಒಂದು ಭಾಗದಷ್ಟು ಎಸಿ ಬೋಗಿಗಳಾಗಿರುತ್ತವೆ. ಹೆಚ್ಚಿದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಐಆರ್ ಸಾಮಾನ್ಯ ದರ್ಜೆ (ಜನರಲ್ ಕ್ಲಾಸ್) ಮತ್ತು ಸ್ಲೀಪರ್ ಕ್ಲಾಸ್ ಬೋಗಿಗಳು ಸೇರಿದಂತೆ 10,000 ಎಸಿ ಅಲ್ಲದ ಬೋಗಿಗಳನ್ನು ತಯಾರಿಸಲು ಯೋಜಿಸಿದೆ.

ಇದರಿಂದ ಉಂಟಾಗುವ  ಸಾಗಿಸುವ ಸಾಮರ್ಥ್ಯವು ಮಾರ್ಗ, ಸೇವೆಯ ಆವರ್ತನ ಇತ್ಯಾದಿಗಳನ್ನು ಒಳಗೊಂಡಿರುವ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.

ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ವಿದ್ಯುನ್ಮಾನ ಹಾಗು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಮಾಹಿತಿಯನ್ನು ನೀಡಿದರು.

 

*****



(Release ID: 2037828) Visitor Counter : 4


Read this release in: Hindi , Tamil , Urdu , English