ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಷ್ಟ್ರಪತಿಗಳು ಸ್ವೀಕರಿಸಿದ ಆಯ್ದ ಉಡುಗೊರೆಗಳನ್ನು ಇ-ಉಪಹಾರ್ ಪೋರ್ಟಲ್ ಮೂಲಕ ಹರಾಜು ಮಾಡಲಿರುವ ರಾಷ್ಟ್ರಪತಿ ಭವನ

Posted On: 26 JUL 2024 7:25PM by PIB Bengaluru

ಪ್ರಸ್ತುತ ಮತ್ತು ಮಾಜಿ ರಾಷ್ಟ್ರಪತಿಗಳು ವಿವಿಧ ಸಂದರ್ಭಗಳಲ್ಲಿ ಸ್ವೀಕರಿಸಿದ ಆಯ್ದ ಉಡುಗೊರೆ ವಸ್ತುಗಳನ್ನು ಇ-ಉಪಹಾರ್ ಎಂಬ ಆನ್ಲೈನ್ ಪೋರ್ಟಲ್ ಮೂಲಕ ರಾಷ್ಟ್ರಪತಿ ಭವನವು ಹರಾಜು ಮಾಡಲಿದೆ. ಈ ಪೋರ್ಟಲ್ ಅನ್ನು ಭಾರತದ ರಾಷ್ಟ್ರಪತಿಯವರಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಜುಲೈ 25, 2024ರಂದು ತಮ್ಮ ಅಧ್ಯಕ್ಷೀಯ ಎರಡು ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಉದ್ಘಾಟಿಸಿದರು.

ಮೊದಲ ಹಂತದಲ್ಲಿ ಸುಮಾರು 250 ಸೊಗಸಾದ ಉಡುಗೊರೆಗಳನ್ನು ಹರಾಜು ಮಾಡಲಾಗುವುದು. ಹರಾಜು ಪ್ರಕ್ರಿಯೆಯ ಪೋರ್ಟಲ್ ಆಗಸ್ಟ್ 5 ರಿಂದ ಆಗಸ್ಟ್ 26, 2024ರವರೆಗೆ ತೆರೆದಿರುತ್ತದೆ. ಹರಾಜು ಪ್ರಕ್ರಿಯೆಯ ಅವಧಿ ಮುಗಿದ ನಂತರ, ವಸ್ತುಗಳನ್ನು ಹೆಚ್ಚಿನ ಹರಾಜುದಾರರಿಗೆ ತಲುಪಿಸಲಾಗುವುದು.

ಆಸಕ್ತರು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ತಮ್ಮ ಬಿಡ್ ಗಳನ್ನು ಸಲ್ಲಿಸಬಹುದು: https://upahaar.rashtrapatibhavan.gov.in/

* ನಿಮ್ಮ ಪ್ರೊಫೈಲ್ ವಿವರಗಳನ್ನು ನಮೂದಿಸುವುದು
* ಆಧಾರ್ ಪರಿಶೀಲನೆಯನ್ನು ಮಾಡುವುದು
* ನಿಮ್ಮ ನೆಚ್ಚಿನ ಐಟಂಗಳಿಗಾಗಿ ಬಿಡ್ ಮಾಡುವುದು
* ನಿಮ್ಮ ಹರಾಜಿನ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸುವುದು
* ನಿಮ್ಮ ಅಪೇಕ್ಷಿತ ವಸ್ತುವಿಗೆ ಅತಿ ಹೆಚ್ಚು ಬಿಡ್ ಮಾಡುವುದು
* ಆನ್ ಲೈನ್ ಮೋಡ್ ನಲ್ಲಿ ಹಣ ಪಾವತಿಸುವುದು

ಈ ಉಪಕ್ರಮದ ಉದ್ದೇಶ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಉದಾತ್ತವಾದ ಶ್ರೇಷ್ಠ ಉದ್ದೇಶವನ್ನು ಬೆಂಬಲಿಸುವುದಾಗಿದೆ. ಹರಾಜಿನಿಂದ ಬರುವ ಎಲ್ಲಾ ಆದಾಯವನ್ನು ಅಗತ್ಯವಿರುವ ಮಕ್ಕಳಿಗೆ ಸಹಾಯಧನವಾಗಿ ದಾನ ಮಾಡಲಾಗುವುದು.

ಹರಾಜಿಗಿಟ್ಟಿರುವ ಉಡುಗೊರೆ ವಸ್ತುಗಳು ರಾಷ್ಟ್ರಪತಿ ಭವನದ ವಸ್ತುಸಂಗ್ರಹಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತವೆ. ಸಂದರ್ಶಕರು https://visit.rashtrapatibhavan.gov.in/ ಮೂಲಕ ವಸ್ತುಸಂಗ್ರಹಾಲಯಕ್ಕೆ ಟಿಕೆಟ್ ಬುಕ್ ಮಾಡಬಹುದು. ಮಂಗಳವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 9:30ರಿಂದ ಸಂಜೆ 5:00ರವರೆಗೆ ಪ್ರದರ್ಶನಗಳನ್ನು ವೀಕ್ಷಿಸುವ ಅವಕಾಶವಿದೆ.

 

*****


(Release ID: 2037822) Visitor Counter : 86