ವಾರ್ತಾ ಮತ್ತು ಪ್ರಸಾರ ಸಚಿವಾಲಯ

'ಕಾರ್ಗಿಲ್ ವಿಜಯ ದಿನ'ದ ರಜತ ಮಹೋತ್ಸವದ ಅಂಗವಾಗಿ ದೆಹಲಿಯ ಸಿರಿ ಫೋರ್ಟ್ ಸಭಾಂಗಣದಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಿದ ʻಸಿಬಿಸಿʼ


ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೈನಿಕರ ಅಸಾಧಾರಣ ಧೈರ್ಯ ಮತ್ತು ಶೌರ್ಯವನ್ನು ಅನಾವರಣಗೊಳಿಸಿದ ಪ್ರದರ್ಶನ

ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಪಡೆಗಳ ವಿವಿಧ ಕ್ಷಣಗಳ ಅಪರೂಪದ ಛಾಯಾಚಿತ್ರಗಳು ನೋಡುಗರಲ್ಲಿ ಅತೀವ ಹೆಮ್ಮೆ ಮೂಡಿಸುತ್ತವೆ

Posted On: 26 JUL 2024 4:05PM by PIB Bengaluru

'ಕಾರ್ಗಿಲ್ ವಿಜಯ ದಿನ'ದ ರಜತ ಮಹೋತ್ಸವದ ಸಂದರ್ಭದಲ್ಲಿ, "ಕಾರ್ಗಿಲ್ ವಿಜಯ ದಿನ: ರಜತ ಜಯಂತಿ" ಎಂಬ ವಸ್ತುಪ್ರದರ್ಶನವನ್ನು ಇಂದು ನವದೆಹಲಿಯ ಸಿರಿ ಫೋರ್ಟ್ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ʻಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ʼ (ಸಿಬಿಸಿ) ಆಯೋಜಿಸಿರುವ ಈ ಪ್ರದರ್ಶನವು ಜುಲೈ 26, 2024 ರಿಂದ ಜುಲೈ 31, 2024 ರವರೆಗೆ ಬೆಳಿಗ್ಗೆ 10.00ರಿಂದ ಸಂಜೆ 6.00ರವರೆಗೆ ನವದೆಹಲಿಯ ʻಆಗಸ್ಟ್ ಕ್ರಾಂತಿʼ ಮಾರ್ಗದ ಸಿರಿ ಫೋರ್ಟ್ ಸಭಾಂಗಣದಲ್ಲಿ(ಮುಖ್ಯ ಫಾಯರ್) ನಡೆಯಲಿದೆ. ಇತರ ಸಂದರ್ಶಕರ ಜೊತೆಗೆ, ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಅಸಾಧಾರಣ ಶೌರ್ಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ ಆ ಮೂಲಕ ನಮ್ಮ ರಾಷ್ಟ್ರದ ಸಾರ್ವಭೌಮತ್ವವನ್ನು ರಕ್ಷಿಸಿದ ವೀರ ಸೈನಿಕರಿಗೆ ಗೌರವ ಸಲ್ಲಿಸುವ ಗುರಿಯನ್ನು ಈ ಪ್ರದರ್ಶನ ಹೊಂದಿದೆ. ಐತಿಹಾಸಿಕ ಛಾಯಾಚಿತ್ರಗಳು, ವೀಡಿಯೊಗಳು, ಸಂವಾದಾತ್ಮಕ ಪ್ರದರ್ಶನಗಳನ್ನು ಇದು ಒಳಗೊಂಡಿದೆ. ಜೊತೆಗೆ, ಶಾಲಾ ಮಕ್ಕಳಿಗಾಗಿ ರಸಪ್ರಶ್ನೆ ಸ್ಪರ್ಧೆ ಮತ್ತು ವಿವಿಧ ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆಗಳೂ ಇದರ ಭಾಗವಾಗಿದ್ದು, ನಮ್ಮ ಸಶಸ್ತ್ರ ಪಡೆಗಳು ಮಾಡಿದ ತ್ಯಾಗದ ಒಳನೋಟಗಳನ್ನು ಒದಗಿಸುತ್ತವೆ.

ಈ ಪ್ರದರ್ಶನವು ದೇಶಭಕ್ತಿಯನ್ನು ಉತ್ತೇಜಿಸತ್ತದೆ ಮತ್ತು ನಮ್ಮ ಸಶಸ್ತ್ರ ಪಡೆಗಳ ಕೊಡುಗೆಗಳ ಬಗ್ಗೆ ಆಳವಾದ ತಿಳಿವಳಿಕೆಯನ್ನು ನೀಡುತ್ತದೆ. ಇದು ಶಾಲಾ ಪಠ್ಯಕ್ರಮ ಮತ್ತು ಮೌಲ್ಯಗಳೊಂದಿಗೆ ಹೊಂದಿಕೆಯಾಗುವ ಮೌಲ್ಯಯುತ ಶೈಕ್ಷಣಿಕ ಅನುಭವವನ್ನು ನೀಡುತ್ತದೆ. ಈ ಮಹತ್ವದ ಅವಕಾಶವು ಸಂದರ್ಶಕರ ಜ್ಞಾನವನ್ನು ಹೆಚ್ಚಿಸುವುದಲ್ಲದೆ, ಶೌರ್ಯ ಮತ್ತು ಸದೃಢತೆಯ ಕಥೆಗಳೊಂದಿಗೆ ಅವರನ್ನು ಪ್ರೇರೇಪಿಸುತ್ತದೆ.

 

*****

 

 



(Release ID: 2037781) Visitor Counter : 6