ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಕಾರ್ಗಿಲ್ ವಿಜಯ ದಿವಸದ 25ನೇ ವಾರ್ಷಿಕೋತ್ಸವದಂದು ರಾಜ್ಯಸಭಾ ಅಧ್ಯಕ್ಷರ ಭಾಷಣ

Posted On: 26 JUL 2024 11:28AM by PIB Bengaluru

ಗೌರವಾನ್ವಿತ ಸದಸ್ಯರೇ, ರಾಷ್ಟ್ರವು ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಅದಮ್ಯ ಧೈರ್ಯ ಮತ್ತು ಶೌರ್ಯವನ್ನು ಶ್ಲಾಘಿಸಿ, ಕಾರ್ಗಿಲ್ ವಿಜಯ ದಿವಸದ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಕಾರ್ಗಿಲ್‌ ನ ಕಠಿಣವಾದ ಪ್ರದೇಶದ ಹೊರತಾಗಿಯೂ ಶತ್ರುಗಳ ವಿರುದ್ಧ ಅದ್ಭುತವಾದ ವಿಜಯಕ್ಕೆ ಕಾರಣವಾದ  ನಮ್ಮ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯ, ಸಂಕಲ್ಪ ಮತ್ತು ಬದ್ಧತೆಗೆ ಈ ಸದನವು ವಂದಿಸುತ್ತದೆ.

ಕಾರ್ಗಿಲ್ ಯುದ್ಧದ ಸಮಯದಲ್ಲಿ ನಮ್ಮ ದೇಶವನ್ನು ರಕ್ಷಿಸಲು ಮತ್ತು ದೇಶದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಸೈನಿಕರಿಗೆ ಈ ಸದನವು ಗೌರವ ಸಲ್ಲಿಸುತ್ತದೆ.

ಈಗ, ನಾನು ಗೌರವಾನ್ವಿತ ಸದಸ್ಯರನ್ನು ಎದ್ದುನಿಂತು ಯುದ್ಧದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ನಮ್ಮ ವೀರ ಸೈನಿಕರ ಗೌರವಾರ್ಥ ಮೌನವನ್ನು ಆಚರಿಸಲು ವಿನಂತಿಸುತ್ತೇನೆ.

 

*****
 


(Release ID: 2037458) Visitor Counter : 52