ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
azadi ka amrit mahotsav

4.1 ಕೋಟಿ ಯುವಕರಿಗೆ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಪ್ರಧಾನ ಮಂತ್ರಿಯವರ 2 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್


ಕಾರ್ಮಿಕರ ಖಚಿತ ಕಲ್ಯಾಣಕ್ಕಾಗಿ ಇ-ಶ್ರಮ್ ಪೋರ್ಟಲ್ನ ಕ್ರೋಡೀಕರಣ ಮತ್ತು ಶ್ರಮ ಸುವಿಧಾ ಮತ್ತು ಸಮಾಧಾನ್ ಪೋರ್ಟಲ್ನ ಪುನರುಜ್ಜೀವನ  

ಉದ್ಯೋಗ ಮತ್ತು ಕೌಶಲ್ಯದ ವರ್ಧನೆ: ಬಜೆಟ್ 2024-25 ರ ಪ್ರಮುಖ ಮುಖ್ಯಾಂಶಗಳು

Posted On: 25 JUL 2024 10:47AM by PIB Bengaluru

ಗೌರವಾನ್ವಿತ ಹಣಕಾಸು ಸಚಿವರು ಮಂಡಿಸಿದ ಕೇಂದ್ರ ಬಜೆಟ್ 2024-25ರಲ್ಲಿ  ಉದ್ಯೋಗ ಮತ್ತು ಕೌಶಲ್ಯವು ಅದರ ಆದ್ಯತೆಗಳಲ್ಲಿ ಒಂದಾಗಿರುವುದರಿಂದ ದೇಶದಲ್ಲಿ ಉದ್ಯೋಗವನ್ನು ಹೆಚ್ಚಿಸಲು ಮಹತ್ವದ ಪ್ರಯತ್ನಗಳನ್ನು ವಿವರಿಸುತ್ತದೆ.

ಪ್ರಧಾನಮಂತ್ರಿಯವರ ಪ್ಯಾಕೇಜ್ನ ಭಾಗವಾಗಿ, ಐದು ಪ್ರಮುಖ ಯೋಜನೆಗಳು ಮತ್ತು ಉಪಕ್ರಮಗಳನ್ನು ಘೋಷಿಸಲಾಗಿದ್ದು, ಇದಕ್ಕಾಗಿ ಬೃಹತ್ ಕೇಂದ್ರ ನಿಧಿ  ರೂ. 2 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ. ಈ ಪ್ಯಾಕೇಜ್ 5 ವರ್ಷಗಳ ಅವಧಿಯಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ್ಯ ಮತ್ತು ಇತರ ಅವಕಾಶಗಳನ್ನು ಒದಗಿಸುತ್ತದೆ. ಈ ಉಪಕ್ರಮಗಳು ಕೌಶಲ್ಯ, ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ, ಅತಿಸಣ್ಣ, ಸಣ್ಣ, ಮಧ್ಯಮ  ಉದ್ದಿಮೆ (ಎಂಎಸ್ಎಂಇ) ಗಳಿಗೆ ಬೆಂಬಲ ಮತ್ತು ಬಂಡವಾಳದ ಮೂಲಸೌಕರ್ಯವನ್ನು ಬಲಪಡಿಸುವುದರ ಜೊತೆಗೆ ಉದ್ಯೋಗ ಸಂಬಂಧಿತ ಪ್ರೋತ್ಸಾಹಗಳ ಗುರಿಯನ್ನು ಹೊಂದಿವೆ.  ಇದು ದೇಶದ ಉದ್ಯೋಗ ಪರಿಸ್ಥಿತಿಯ ಮೇಲೆ ಗಮನಾರ್ಹ ಧನಾತ್ಮಕ ಪರಿಣಾಮ ಬೀರುತ್ತವೆ.
ಈ ಐದು ಯೋಜನೆಗಳಲ್ಲಿ ಮೂರನ್ನು ಕಾರ್ಮಿಕ / ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಮೂಲಕ ಕಾರ್ಯಗತಗೊಳಿಸಲಾಗುವುದು, ಉದ್ಯೋಗದಾತರು ಮತ್ತು ಉದ್ಯೋಗಿಗಳನ್ನು ಪ್ರೋತ್ಸಾಹಿಸುವ ಮೂಲಕ ಉದ್ಯೋಗಿಗಳ ಔಪಚಾರಿಕತೆಯನ್ನು ಉತ್ತೇಜಿಸುತ್ತದೆ. ಈ ಉದ್ಯೋಗ-ಸಂಯೋಜಿತ ಪ್ರೋತ್ಸಾಹ ಯೋಜನೆ (ಎಂಪ್ಲಾಯ್ಮೆಂಟ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್)ಗಳನ್ನು ಮೊದಲ ಬಾರಿಗೆ ಉದ್ಯೋಗಿಗಳನ್ನು ಗುರುತಿಸಲು ಮತ್ತು ಉದ್ಯೋಗಿಗಳು ಮತ್ತು ಉದ್ಯೋಗದಾತರಿಗೆ ಸಮಗ್ರ ಬೆಂಬಲವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ಯೋಜನೆ ಎ: ಇಪಿಎಫ್ಒ ನಲ್ಲಿ ನೋಂದಾಯಿಸಲಾದ ಔಪಚಾರಿಕ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು, ಈ ಯೋಜನೆಯು ಮೂರು ಕಂತುಗಳಲ್ಲಿ ಒಂದು ತಿಂಗಳ ವೇತನವನ್ನು (ರೂ. 15,000 ವರೆಗೆ) ನೀಡುತ್ತದೆ.

ಯೋಜನೆ ಬಿ: ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯ ಮೇಲೆ ಕೇಂದ್ರೀಕರಿಸುವ ಈ ಯೋಜನೆಯು ಉದ್ಯೋಗಿಗಳು ಮತ್ತು ಉದ್ಯೋಗದಾತರನ್ನು ಮೊದಲ ಬಾರಿಗೆ ಉದ್ಯೋಗಿಗಳ ಹೆಚ್ಚುವರಿ ಉದ್ಯೋಗಕ್ಕಾಗಿ ಉತ್ತೇಜಿಸುತ್ತದೆ, ಉದ್ಯೋಗದ ಮೊದಲ ನಾಲ್ಕು ವರ್ಷಗಳಲ್ಲಿ ಅವರ ಇಪಿಎಫ್ಒ ಗೆ ಪಾವತಿಸಿರುವುದರ ಆಧಾರದ ಮೇಲೆ ಪ್ರಯೋಜನಗಳನ್ನು ನೀಡುತ್ತದೆ. 1 ಲಕ್ಷದವರೆಗೆ ವೇತನ ಹೊಂದಿರುವ ಉದ್ಯೋಗಿಗಳು ಇದಕ್ಕೆ ಅರ್ಹರಾಗಿರುತ್ತಾರೆ.

ಯೋಜನೆ ಸಿ:  ತಿಂಗಳಿಗೆ 1 ಲಕ್ಷ ರೂಪಾಯಿಗಳವರೆಗೆ ವೇತನ  ಪಡೆಯುವ ಪ್ರತಿ ಹೆಚ್ಚುವರಿ ಉದ್ಯೋಗಿಯ ಪರವಾಗಿ ಇಪಿಎಫ್ಒ ಮೊತ್ತ ಪಾವತಿಸುವ  ಉದ್ಯೋಗದಾತರಿಗೆ ಎರಡು ವರ್ಷಗಳವರೆಗೆ ತಿಂಗಳಿಗೆ 3,000 ರೂಪಾಯಿಗಳನ್ನು ಮರುಪಾವತಿ ಮಾಡುವ ಮೂಲಕ ಉದ್ಯೋಗದಾತರಿಗೆ ಬೆಂಬಲವನ್ನು ಒದಗಿಸುವುದು.

ಇ-ಶ್ರಮ್ ಪೋರ್ಟಲ್ಗಳನ್ನು ಇತರ ಪ್ಲಾಟ್ಫಾರ್ಮ್ಗಳೊಂದಿಗೆ ಸಮಗ್ರ  ಸಂಯೋಜನೆಯಿಂದ, ಕೌಶಲ್ಯ ಅಗತ್ಯತೆಗಳು, ಉದ್ಯೋಗದ ಪಾತ್ರಗಳು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಸಂಭಾವ್ಯ ಉದ್ಯೋಗದಾತರು ಮತ್ತು ಕೌಶಲ್ಯ ಪೂರೈಕೆದಾರರೊಂದಿಗೆ ಸಂಪರ್ಕಿಸುವುದು ಸೇರಿದಂತೆ ಕಾರ್ಮಿಕ ಕಲ್ಯಾಣಕ್ಕಾಗಿ ಪ್ರಮುಖ ಸುಧಾರಣೆಗಳನ್ನು ಬಜೆಟ್ ಒದಗಿಸಿದೆ. ಕಾರ್ಮಿಕ ಕಲ್ಯಾಣ, ಉದ್ಯೋಗ, ಕೌಶಲ್ಯ ಇತ್ಯಾದಿಗಳಿಗೆ ಒಂದೇ ಕಡೆ ಸಿಗುವ ಪರಿಹಾರವಾಗಿ ಇ-ಶ್ರಮ್ ಅನ್ನು ಸ್ಥಾಪಿಸಲು ಇದು ಹೆಚ್ಚು ಅನುಕೂಲವಾಗುತ್ತದೆ.

ಉದ್ಯಮದ ಅನುಸರಣೆ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ಕಾರ್ಮಿಕರಿಗೆ ಅನುಕ್ರಮವಾಗಿ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಹೆಚ್ಚಿಸಲು ಶ್ರಮ ಸುವಿಧಾ ಮತ್ತು ಸಮಾಧಾನ್ ಪೋರ್ಟಲ್ ಗಳನ್ನು ನವೀಕರಿಸುವುದು ಮತ್ತೊಂದು ಮಹತ್ವದ ಪ್ರಕಟಣೆಯಾಗಿದೆ.

ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅಡಿಯಲ್ಲಿ ಉಳಿದಿರುವ ಎರಡು ಯೋಜನೆಗಳು ಕೌಶಲ್ಯ ಮತ್ತು ಇಂಟರ್ನ್ಶಿಪ್ಗಳಿಗೆ ಅವಕಾಶಗಳನ್ನು ಹೆಚ್ಚಿಸುವ ಕಡೆಗೆ ಸಜ್ಜಾಗಿದೆ, ಆ ಮೂಲಕ ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ.

ಯೋಜನೆ ಡಿ: ರಾಜ್ಯ ಸರ್ಕಾರಗಳು ಮತ್ತು ಉದ್ಯಮದ ಸಹಯೋಗದೊಂದಿಗೆ ಐದು ವರ್ಷಗಳಲ್ಲಿ 20 ಲಕ್ಷ ಯುವಕರನ್ನು ಕೌಶಲ್ಯವಂತರನ್ನಾಗಿಸಲು ಹೊಸ ಕೇಂದ್ರ ಪ್ರಾಯೋಜಿತ ಯೋಜನೆ ಘೋಷಿಸಲಾಗಿದೆ, ಜೊತೆಗೆ 1,000 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉದ್ಯಮದ ಕೌಶಲ್ಯ ಅಗತ್ಯಗಳಿಗೆ ಹೊಂದಿಸಲು ನವೀಕರಿಸಲಾಗಿದೆ.

ಯೋಜನೆ ಇ: ತಿಂಗಳಿಗೆ ರೂ. 5,000 ಇಂಟರ್ನ್ಶಿಪ್ ಭತ್ಯೆ ಮತ್ತು ರೂ 6,000 ಒಂದು ಬಾರಿ ನೆರವು ಸೇರಿದಂತೆ ಮುಂದಿನ ಐದು ವರ್ಷಗಳಲ್ಲಿ 500 ಉನ್ನತ ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್ಶಿಪ್ ಅವಕಾಶಗಳನ್ನು ಒದಗಿಸುವುದು. ಇದು ಅವರಿಗೆ ನಿಜವಾದ ವ್ಯಾಪಾರ ಪರಿಸರದೊಂದಿಗೆ ಪರಿಚಿತರಾಗಲು ಅವಕಾಶವನ್ನು ನೀಡುತ್ತದೆ.

ಉದ್ಯೋಗಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು, ಉದ್ಯಮದ ಸಹಯೋಗದೊಂದಿಗೆ ಉದ್ಯೋಗಿ ಮಹಿಳೆಯರಿಗಾಗಿ ಹಾಸ್ಟೆಲ್ಗಳು ಮತ್ತು ಶಿಶುವಿಹಾರಗಳನ್ನು ಸ್ಥಾಪಿಸಲು ಬಜೆಟ್ ಪ್ರಸ್ತಾಪಿಸುತ್ತದೆ. ಹೆಚ್ಚುವರಿಯಾಗಿ ಮಹಿಳೆಯರಿಗಾಗಿ ವಿಶೇಷ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ಮಹಿಳಾ ಸ್ವಸಹಾಯ ಗುಂಪು (ಎಸ್ಎಚ್ ಜಿ) ಉದ್ಯಮಗಳಿಗೆ ಮಾರುಕಟ್ಟೆ ಸುಲಭ ಲಭ್ಯತೆಯನ್ನು ಉತ್ತೇಜಿಸಲು ಪ್ರಸ್ತಾಪಿಸಲಾಗಿದೆ.

ಬಜೆಟ್ನಲ್ಲಿ ಘೋಷಿಸಲಾದ ಇತರ ಉಪಕ್ರಮಗಳು ವೈವಿಧ್ಯಮಯ ಮತ್ತು ದೃಢವಾದ ಉದ್ಯೋಗ ಮಾರುಕಟ್ಟೆಯನ್ನು ಉತ್ತೇಜಿಸಲು ಕೊಡುಗೆ ನೀಡುತ್ತವೆ:

ಮೂಲಸೌಕರ್ಯ ಯೋಜನೆಗಳ ಮೂಲಕ ಉದ್ಯೋಗ ಸೃಷ್ಟಿ: 

ಬಂಡವಾಳ ವೆಚ್ಚವನ್ನು ಶೇ.11 ರಿಂದ 11.11 ಲಕ್ಷ ಕೋಟಿಗೆ ಹೆಚ್ಚಿಸುವುದರಿಂದ ನಿರ್ಮಾಣ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ನಂತಹ ಕ್ಷೇತ್ರಗಳಲ್ಲಿ ಅನೇಕ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಈ ಕ್ರಮವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಮತ್ತು ಕಡಿಮೆ ನಿರುದ್ಯೋಗವನ್ನು ಪರಿಹರಿಸುವ ನಿರೀಕ್ಷೆಯಿದೆ.

ಉದ್ಯಮಶೀಲತೆಯನ್ನು ಉತ್ತೇಜಿಸುವುದು: ನವೋದ್ಯಮಗಳು ಮತ್ತು ಎಂಎಸ್ಎಂಇಗಳಿಗೆ ಹಣಕಾಸಿನ ನೆರವು ಮತ್ತು ತೆರಿಗೆ ಪ್ರಯೋಜನಗಳು ಉದ್ಯಮಶೀಲತೆಯ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ಇದರಿಂದ ವೈವಿಧ್ಯಮಯ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯಗಳು: 

ಎಮ್-ನರೇಗಾ (MNREGA) ಗಾಗಿ ಹೆಚ್ಚಿಸಿದ ನಿಧಿಯು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಖಚಿತಪಡಿಸುವುದಲ್ಲದೆ ಗ್ರಾಮೀಣ ಸಮುದಾಯಗಳನ್ನು ಬೆಂಬಲಿಸುತ್ತದೆ ಮತ್ತು ನಗರಗಳಿಗೆ ವಲಸೆ ಹೋಗುವುದನ್ನು ಕಡಿಮೆ ಮಾಡುತ್ತದೆ.

ಉತ್ಪಾದನೆ ಮತ್ತು ಸೇವೆಗಳನ್ನು ಉತ್ತೇಜಿಸುವುದು: ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹನ್ನೆರಡು ಕೈಗಾರಿಕಾ ಪಾರ್ಕ್ಗಳೊಂದಿಗೆ 100 ನಗರಗಳಲ್ಲಿ ಸಂಪೂರ್ಣ ಮೂಲಸೌಕರ್ಯದೊಂದಿಗೆ "ಪ್ಲಗ್ ಮತ್ತು ಪ್ಲೇ" ಕೈಗಾರಿಕಾ ಪಾರ್ಕ್ಗಳನ್ನು ಸ್ಥಾಪಿಸುವುದು ಹೊಸ ಕೈಗಾರಿಕೆಗಳನ್ನು ಉತ್ತೇಜಿಸುತ್ತದೆ. ಇದರಿಂದಾಗಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಯಾಗುತ್ತವೆ.

2024-25 ರ ಬಜೆಟ್ ಸುಸ್ಥಿರ ಬೆಳವಣಿಗೆ, ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕಾಗಿ ಅಭೂತಪೂರ್ವ ಅವಕಾಶಗಳ ಸೃಷ್ಟಿ, ಕೌಶಲ್ಯ ವರ್ಧನೆ ಮತ್ತು ಸಾಮಾಜಿಕ ಕಲ್ಯಾಣದ ಕಡೆಗೆ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಅಭಿವೃದ್ಧಿ ಹೊಂದಿದ ಭಾರತಕ್ಕೆ ಬಲವಾದ ಬುನಾದಿಯನ್ನು ಹಾಕುತ್ತದೆ.

 

*****
 


(Release ID: 2037300) Visitor Counter : 85