ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಭಾರತದ ಕೀರ್ತಿಯ ಅನ್ವೇಷಣೆ


2024 ರ ಒಲಿಂಪಿಕ್ ತಂಡವನ್ನು ಪರಿಚಯ ಮಾಡಿಕೊಳ್ಳಿ

Posted On: 25 JUL 2024 3:38PM by PIB Bengaluru

ಒಲಿಂಪಿಕ್ಸ್ 2024

ಭಾರತವು 2024ರ ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ, ರಾಷ್ಟ್ರವು ಪ್ರತಿಭಾವಂತ ಮತ್ತು ವೈವಿಧ್ಯಮಯ ಕ್ರೀಡಾಪಟುಗಳ ತಂಡದತ್ತ ಭರವಸೆಯಿಂದ ನೋಡುತ್ತಿದೆ. ಹಾಕಿ ಮತ್ತು ಅಥ್ಲೆಟಿಕ್ಸ್‌ ನಿಂದ ಕುದುರೆ ಸವಾರಿ ಮತ್ತು ದೋಣಿಯಾನದಂತಹ ಹೊಸ ಕ್ಷೇತ್ರಗಳವರೆಗೆ, ಟೀಮ್ ಇಂಡಿಯಾವು ಅಂತಾರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ದೇಶದ ಬೆಳೆಯುತ್ತಿರುವ ಪಾರಮ್ಯ ಮತ್ತು ಮಹತ್ವಾಕಾಂಕ್ಷೆಗೆ ಉದಾಹರಣೆಯಾಗಿದೆ. ಗಣನೀಯ ಧನಸಹಾಯ ಮತ್ತು ಸಮರ್ಪಿತ ತಯಾರಿ ಕಾರ್ಯಕ್ರಮದಿಂದ ಬೆಂಬಲಿತವಾಗಿರುವ ಈ ಕ್ರೀಡಾಪಟುಗಳು ಕೇವಲ ಪದಕಗಳಿಗಾಗಿ ಸ್ಪರ್ಧಿಸುತ್ತಿಲ್ಲ, ರಾಷ್ಟ್ರೀಯ ಹೆಮ್ಮೆ ಮತ್ತು ಕೀರ್ತಿಗಾಗಿಯೂ ಸ್ಪರ್ಧಿಸುತ್ತಿದ್ದಾರೆ! ಈ ವೈಶಿಷ್ಟ್ಯವು ಪ್ಯಾರಿಸ್‌ ನಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಮತ್ತು ಕ್ರೀಡೆಗಳಿಗೆ ಸಂಬಂಧಿಸಿದೆ, ಅವರ ಸಾಮರ್ಥ್ಯ ಮತ್ತು ರಾಷ್ಟ್ರವು ಅವರ ಮೇಲೆ ಇಟ್ಟಿರುವ ಭರವಸೆಗಳನ್ನು ಎತ್ತಿ ತೋರಿಸುತ್ತದೆ.

ಹಾಕಿ

2024 ರ ಒಲಿಂಪಿಕ್ಸ್‌ ಗಾಗಿ ಭಾರತೀಯ ಪುರುಷರ ಹಾಕಿ ತಂಡವು ಈ ಕೆಳಗಿನ ಆಟಗಾರರನ್ನು ಒಳಗೊಂಡಿದೆ:

  • ಶ್ರೀಜೇಶ್ ಪಿಆರ್
  • ಹರ್ಮನಪ್ರೀತ್‌ ಸಿಂಗ್
  • ಜರ್ಮನಪ್ರೀತ್‌ ಸಿಂಗ್
  • ಅಮಿತ್ ರೋಹಿತದಾಸ್
  • ಸಂಜಯ್
  • ಸುಮಿತ್
  • ರಾಜ್ ಕುಮಾರ್ ಪಾಲ್
  • ಶಂಶೇರ್ ಸಿಂಗ್
  • ಮನ್‌ಪ್ರೀತ್ ಸಿಂಗ್
  • ಹಾರ್ದಿಕ್ ಸಿಂಗ್
  • ವಿವೇಕ್ ಸಾಗರ್ ಪ್ರಸಾದ್
  • ಸುಖಜೀತ್ ಸಿಂಗ್
  • ಗುರ್ಜಂತ್ ಸಿಂಗ್
  • ಲಲಿತ್ ಕುಮಾರ್ ಉಪಾಧ್ಯಾಯ
  • ಮನದೀಪ್ ಸಿಂಗ್
  • ಕೃಷ್ಣ ಬಿ ಪಾಠಕ್
  • ಜುಗರಾಜ್ ಸಿಂಗ್
  • ನೀಲಕಂಠ ಶರ್ಮ
  • ಅಭಿಷೇಕ್

ಈ ನುರಿತ ತಂಡವು ಮುಂಬರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಹೆಮ್ಮೆ ಮತ್ತು ದೃಢಸಂಕಲ್ಪದೊಂದಿಗೆ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದೆ.

ಜುಡೋ

ತುಲಿಕಾ ಮಾನ್ ಮಹಿಳೆಯರ +78 ಕೆಜಿ ಜೂಡೋ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಶಕ್ತಿ ಮತ್ತು ತಂತ್ರವನ್ನು ಸಂಯೋಜಿಸುವಲ್ಲಿ ನಿಪುಣರಾಗಿದ್ದಾರೆ, ಈ ಸವಾಲಿನ ಕ್ರೀಡೆಯಲ್ಲಿ ಭಾರತಕ್ಕೆ ಪದಕವನ್ನು ಖಚಿತಪಡಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ.

ರೋಯಿಂಗ್

ಪುರುಷರ ಸಿಂಗಲ್ಸ್ ಸ್ಕಲ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಪ್ರಮುಖ ಅಥ್ಲೀಟ್ ಬಲರಾಜ್ ಪನ್ವಾರ್. ಅವರು ತಮ್ಮ ಶಕ್ತಿ ಮತ್ತು ಸಹಿಷ್ಣುತೆಯನ್ನು ಈ ಜಲ ಕ್ರೀಡೆಯಲ್ಲಿ ಉತ್ತಮಗೊಳಿಸುವ ಗುರಿಯನ್ನು ಹೊಂದಿದ್ದಾರೆ ಮತ್ತು ಪದಕ ಪಡೆಯುವ ವೇದಿಕೆಯನ್ನೇರಲು ಶ್ರಮಿಸುತ್ತಾರೆ.

ದೋಣಿಯಾನ (ಸೈಲಿಂಗ್)

ಸರವಣನ್ ಮತ್ತು ನೇತ್ರಾ ಕುಮನನ್ ಭಾರತಕ್ಕಾಗಿ ಸೈಲಿಂಗ್ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ. ಇಬ್ಬರೂ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಉತ್ತಮ ಭರವಸೆಯನ್ನು ತೋರಿಸಿದ್ದಾರೆ ಮತ್ತು ತಮ್ಮ ಕೌಶಲ್ಯ ಮತ್ತು ಕಾರ್ಯತಂತ್ರದ ಜಾಣ್ಮೆಯನ್ನು ಪ್ರದರ್ಶಿಸುವ ಮೂಲಕ ಪದಕಗಳನ್ನು ಗಳಿಸುವ ಗುರಿಯನ್ನು ಹೊಂದಿದ್ದಾರೆ.

ಶೂಟಿಂಗ್

ಭಾರತೀಯ ಶೂಟಿಂಗ್ ತಂಡವು ಅನುಭವಿ ಮತ್ತು ಯುವ ಶೂಟರ್‌ಗಳಾದ ಮನು ಭಾಕರ್, ಇಶಾ ಸಿಂಗ್, ರಿದಮ್ ಸಾಂಗ್ವಾನ್, ಅನೀಶ್ ಭನ್ವಾಲಾ ಮತ್ತು ವಿಜಯವೀರ್ ಸಿಧು ಅವರನ್ನು ಒಳಗೊಂಡಿದೆ. ತಂಡವು ಶಾರ್ಪ್‌ ಶೂಟರ್‌ ಗಳಾದ ಸಿಫ್ಟ್ ಕೌರ್ ಸಮ್ರಾ, ಅಂಜುಮ್ ಮೌದ್ಗಿಲ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರು ವಿವಿಧ ರೈಫಲ್ ಮತ್ತು ಪಿಸ್ತೂಲ್ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಶೂಟಿಂಗ್‌ ನಲ್ಲಿ ಭಾರತವು ಇತಿಹಾಸವನ್ನು ನಿರ್ಮಿಸುವ ಗುರಿಯನ್ನು ಇವರು ಹೊಂದಿದ್ದಾರೆ.

ಈಜು

ಈಜು ಸ್ಪರ್ಧೆಗಳಲ್ಲಿ ಕ್ರಮವಾಗಿ ಧಿನಿಧಿ ದೇಸಿಂಗು ಮತ್ತು ಶ್ರೀಹರಿ ನಟರಾಜ್ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇಬ್ಬರೂ ಈಜುಗಾರರು ತಮ್ಮ ಸಮಯವನ್ನು ಸ್ಥಿರವಾಗಿ ಸುಧಾರಿಸಿಕೊಂಡಿದ್ದಾರೆ ಮತ್ತು ಹೊಸ ದಾಖಲೆಗಳನ್ನು ಸ್ಥಾಪಿಸುವ ಭರವಸೆ ಹೊಂದಿದ್ದಾರೆ.

ಟೇಬಲ್ ಟೆನ್ನಿಸ್

ಭಾರತದ ಟೇಬಲ್ ಟೆನಿಸ್ ತಂಡವು ಅನುಭವಿ ಶರತ್ ಕಮಲ್ ಮತ್ತು ಹರ್ಮೀತ್ ದೇಸಾಯಿ ಹಾಗೂ ಮಹಿಳೆಯರ ಸ್ಪರ್ಧೆಗಳಲ್ಲಿ ಮಣಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಅವರನ್ನು ಒಳಗೊಂಡಿದೆ. ಸತ್ಯನ್ ಜಿ ಮತ್ತು ಅಹಿಕಾ ಮುಖರ್ಜಿ ಅವರನ್ನೂ ಹೊಂದಿರುವ ತಂಡವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆಯ ಗುರಿಯನ್ನು ಹೊಂದಿದೆ.

ಟೆನ್ನಿಸ್‌

ರೋಹನ್ ಬೋಪಣ್ಣ, ಎನ್. ಶ್ರೀರಾಮ್ ಬಾಲಾಜಿ ಮತ್ತು ಸುಮಿತ್ ನಾಗಲ್ ಟೆನ್ನಿಸ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ. ಈ ಅನುಭವಿ ಕ್ರೀಡಾಪಟುಗಳು ತಮ್ಮ ವಿಭಾಗಗಳಲ್ಲಿ ಬಲವಾದ ಪ್ರದರ್ಶನಗಳನ್ನು ನೀಡುವ ಗುರಿಯನ್ನು ಹೊಂದಿದ್ದಾರೆ.

ವೇಟ್‌ ಲಿಫ್ಟಿಂಗ್‌

ಮಣಿಪುರದ ಮೀರಾಬಾಯಿ ಚಾನು 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಒಲಿಂಪಿಕ್ ಬೆಳ್ಳಿ ಪದಕ ವಿಜೇತೆಯಾಗಿರುವ ಅವರು ತಮ್ಮ ಅಸಾಧಾರಣ ಶಕ್ತಿ ಮತ್ತು ತಂತ್ರವನ್ನು ಪ್ರದರ್ಶಿಸುವ ಮೂಲಕ ಮತ್ತೊಂದು ಪದಕದ ಸಾಧನೆಗೆ ಸಿದ್ಧರಾಗಿದ್ದಾರೆ.

ಕುಸ್ತಿ

ಭಾರತದ ಕುಸ್ತಿ ತಂಡವು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿರುವ ವಿನೇಶ್ ಫೋಗಟ್ ಮತ್ತು ಅಂಶು ಮಲಿಕ್ ಅವರಂತಹ ಉನ್ನತ ಅಥ್ಲೀಟ್‌ ಗಳನ್ನು ಒಳಗೊಂಡಿದೆ. ಕುಸ್ತಿಯಲ್ಲಿ ಭಾರತದ ಯಶಸ್ಸನ್ನು ಮುಂದುವರಿಸುವ ಗುರಿಯನ್ನು ಹೊಂದಿರುವ ತಂಡದಲ್ಲಿ ರೀತಿಕಾ ಹೂಡಾ, ನಿಶಾ ದಹಿಯಾ ಮತ್ತು ಅಮನ್ ಸೆಹ್ರಾವತ್ ಕೂಡ ಇದ್ದಾರೆ.

ಬಿಲ್ಲುಗಾರಿಕೆ (ಆರ್ಚರಿ)

ದೀಪಿಕಾ ಕುಮಾರಿ, ಭಜನ್ ಕೌರ್ ಮತ್ತು ಅಂಕಿತಾ ಭಕತ್ ಅವರನ್ನು ಒಳಗೊಂಡ ಭಾರತೀಯ ಆರ್ಚರಿ ತಂಡವು ಧೀರಜ್ ಬೊಮ್ಮದೇವರ, ಪ್ರವೀಣ್ ಜಾಧವ್ ಮತ್ತು ತರುಣದೀಪ್ ರೈ ಅವರೊಂದಿಗೆ ರಿಕರ್ವ್ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತದೆ. ಅವರು ಅನುಭವ ಮತ್ತು ಕೌಶಲ್ಯದೊಂದಿಗೆ ಶ್ರೇಷ್ಠತೆಯ ಗುರಿಯನ್ನು ಹೊಂದಿದ್ದಾರೆ.

ಅಥ್ಲೆಟಿಕ್ಸ್

ಭಾರತದ ಅಥ್ಲೆಟಿಕ್ಸ್ ತಂಡವು ಪ್ರಮುಖ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತು ರೇಸ್‌ ವಾಕಿಂಗ್, ಸ್ಟೀಪಲ್‌‌ ಚೇಸ್ ಮತ್ತು ರಿಲೇ ಸ್ಪರ್ಧೆಗಳಲ್ಲಿ ಇತರ ಅತ್ಯುತ್ತಮ ಕ್ರೀಡಾಪಟುಗಳನ್ನು ಒಳಗೊಂಡಿದೆ.

ಬ್ಯಾಡ್ಮಿಂಟನ್

ಬ್ಯಾಡ್ಮಿಂಟನ್ ತಂಡದಲ್ಲಿ ಪಿವಿ ಸಿಂಧು ಮತ್ತು ಎಚ್‌ಎಸ್ ಪ್ರಣಯ್ ಅವರಂತಹ ತಾರೆಯರು ಇದ್ದಾರೆ, ಜೊತೆಗೆ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ, ತನಿಶಾ ಕ್ರಾಸ್ಟೊ, ಅಶ್ವಿನಿ ಪೊನ್ನಪ್ಪ, ಲಕ್ಷ್ಯ ಸೇನ್ ಮತ್ತು ಚಿರಾಗ್ ಶೆಟ್ಟಿ ಅವರಂತಹ ಉತ್ತಮ ಆಟಗಾರರು ಇದ್ದಾರೆ. ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಭಾರತದ ಬಲವನ್ನು ಈ ತಂಡವು ಎತ್ತಿ ತೋರಿಸುತ್ತದೆ.

ಬಾಕ್ಸಿಂಗ್

ಬಾಕ್ಸಿಂಗ್ ತಂಡದಲ್ಲಿ ವಿಶ್ವ ಚಾಂಪಿಯನ್ ನಿಖತ್ ಜರೀನ್ ಮತ್ತು ಇತರ ಪ್ರಬಲ ಸ್ಪರ್ಧಿಗಳಾದ ಲೊವ್ಲಿನಾ ಬೊರ್ಗೊಹೈನ್ ಮತ್ತು ಅಮಿತ್ ಪಂಗಲ್ ಇದ್ದಾರೆ. ಬಾಕ್ಸಿಂಗ್‌ ನಲ್ಲಿ ಭಾರತದ ಪ್ರಬಲ ಪರಂಪರೆಯನ್ನು ಮುಂದುವರಿಸಲು ತಂಡ ಸಜ್ಜಾಗಿದೆ.

ಕುದುರೆ ಸವಾರಿ (ಈಕ್ವೇಸ್ಟ್ರೀಯನ್)‌

ಅನುಷ್ ಅಗರ್ವಾಲಾ ಡ್ರೆಸ್ಸೇಜ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ, ಕುದುರೆ ಸವಾರಿ ಕ್ರೀಡೆಗಳಲ್ಲಿ ದೇಶದ ಹೆಚ್ಚುತ್ತಿರುವ ಆಸಕ್ತಿಯನ್ನು ಇವರು ಪ್ರದರ್ಶಿಸುತ್ತಾರೆ. ಅನುಷ್ ಈ ವಿಭಾಗದಲ್ಲಿ ಭಾರತದ ಸಾಮರ್ಥ್ಯವನ್ನು ಎತ್ತಿ ಹಿಡಿಯುವ ಗುರಿಯನ್ನು ಹೊಂದಿದ್ದಾರೆ.

ಗಾಲ್ಫ್

ಗಗನಜೀತ್ ಭುಲ್ಲರ್, ಶುಭಂಕರ್ ಶರ್ಮಾ, ಅದಿತಿ ಅಶೋಕ್ ಮತ್ತು ದೀಕ್ಷಾ ಡಾಗರ್ ಒಳಗೊಂಡಿರುವ ಭಾರತದ ಗಾಲ್ಫ್ ತಂಡವು ಸ್ಟ್ರೋಕ್‌ ಪ್ಲೇ ಈವೆಂಟ್‌ ಗಳಲ್ಲಿ ಪ್ರಬಲ ಪ್ರದರ್ಶನದೊಂದಿಗೆ ಅಂತಾರಾಷ್ಟ್ರೀಯ ಗಾಲ್ಫ್‌ ನಲ್ಲಿ ಗುರುತಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ತಮ್ಮ ಕೌಶಲ್ಯ, ದೃಢತೆ ಮತ್ತು ಲಕ್ಷಾಂತರ ಅಭಿಮಾನಿಗಳ ಬೆಂಬಲದೊಂದಿಗೆ ಟೀಮ್ ಇಂಡಿಯಾ ಪ್ಯಾರಿಸ್‌ ನಲ್ಲಿ ಸ್ಮರಣೀಯ ಸಾಧನೆ ಮಾಡಲು ಸಿದ್ಧವಾಗಿದೆ.

ಉಲ್ಲೇಖಗಳು

https://olympic.ind.in/athletes-hub

Pathway to Paris: Pathway to Paris final.pdf

https://pib.gov.in/PressReleseDetail.aspx?PRID=2035199

https://x.com/WeAreTeamIndia/status/1805546480792748136/photo/1

https://x.com/WeAreTeamIndia/status/1814305768683745319/photo/1

https://x.com/WeAreTeamIndia/status/1814626948426924348/photo/3

https://x.com/Media_SAI/status/1577931538435637249/photo/1

https://x.com/WeAreTeamIndia/status/1815787826359021945/photo/2

https://x.com/WeAreTeamIndia/status/1806294425985040564/photo/1

https://x.com/WeAreTeamIndia/status/1801537500000698632/photo/1

https://x.com/DDNational/status/936169759858503680/photo/2

 

*****



(Release ID: 2037051) Visitor Counter : 10


Read this release in: English , Hindi , Telugu