ಹಣಕಾಸು ಸಚಿವಾಲಯ
azadi ka amrit mahotsav

ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳುವ ಭೂ ಸುಧಾರಣೆ ಮತ್ತು‌ ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ


ಸಾಲದ ಹರಿವು ಮತ್ತು ಇತರ ಕೃಷಿ ಸೇವೆ ಸೌಲಭ್ಯಕ್ಕೆ ಗ್ರಾಮೀಣ ಭೂಮಿ ಸಂಬಂಧಿತ ಕ್ರಿಯೆಗಳು

ನಗರ ಪ್ರದೇಶಗಳ ಭೂ ದಾಖಲೆಗಳಿಗೆ ಜಿ ಐ ಎಸ್ ಮ್ಯಾಪಿಂಗ್ ಸಹಿತ ಡಿಜಿಟಲೀಕರಣ

Posted On: 23 JUL 2024 12:57PM by PIB Bengaluru

ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಭೂಮಿ ಸಂಬಂಧಿತ ಸುಧಾರಣೆಗಳು ಮತ್ತು ಚಟುವಟಿಕೆಗಳನ್ನು ಕೈಗೊಂಡು ಸೂಕ್ತ ಹಣಕಾಸು ನೆರವಿನೊಂದಿಗೆ ಮುಂದಿನ ಮೂರು ವರ್ಷಗಳೊಳಗಿನ ಪೂರ್ಣಗೊಳಿಸುವಿಕೆಗೆ ಪ್ರೋತ್ಸಾಹಕ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು ಕೇಂದ್ರ ಬಜೆಟ್ 2023- 24 ಮಂಡಿಸುತ್ತಾ ಹೇಳಿದರು. ಭೂಮಿ ಆಡಳಿತ ನಿರ್ವಹಣೆ, ಯೋಜನೆ ಮತ್ತು ನಿರ್ವಹಣೆ, ನಗರ ಯೋಜನೆ, ಬಳಕೆ ಮತ್ತು ಕಟ್ಟಡ ಉಪವಿಧಿಗಳನ್ನು ಈ ಸುಧಾರಣೆ ಒಳಗೊಳ್ಳುತ್ತದೆ.

ವಿಶಿಷ್ಟ ಭೂಮಿ ಭಾಗ ಗುರುತು ಸಂಖ್ಯೆ (ಯು ಎಲ್ ಪಿ ಐ ಎನ್) ಅಥವಾ ಭೂ-ಆಧಾರ್ ಅನ್ನು ಎಲ್ಲಾ ಭೂಮಿಗಳಿಗೂ ನೀಡುವುದು, ಕ್ಯಾಡಾಸ್ಟ್ರಲ್ ನಕ್ಷೆ, ಪ್ರಸ್ತುತದ ಭೂಮಿ ಒಡೆತನದ ಆಧಾರದಲ್ಲಿ ನಕ್ಷೆ ಉಪವಿಭಾಗಗಳ ಸಮೀಕ್ಷೆ, ಭೂಮಿ ನೋಂದಣಿ ಕಚೇರಿ ಮತ್ತು ರೈತರ ನೋಂದಣಿಗೆ ಸಂಪರ್ಕ ಮೊದಲಾದವುಗಳು ಗ್ರಾಮೀಣ ಭೂಮಿ ಸಂಬಂಧಿತ ಕ್ರಿಯೆಗಳ ಪೈಕಿ ಸೇರುತ್ತದೆ ಎಂದು ಶ್ರೀಮತಿ.ಸೀತಾರಾಮನ್ ವಿಷದವಾಗಿ ತಿಳಿಸಿದ್ದಾರೆ. ಈ ಕ್ರಿಯೆಗಳು ಸಾಲ ಹಣದ ಹರಿವಿಗೆ ಮತ್ತು ಇತರ ಕೃಷಿ ಸೇವೆಗಳಿಗೆ ಅನುವು ಮಾಡಿಕೊಡಲಿದೆ.

ನಗರ ಪ್ರದೇಶಗಳಲ್ಲಿನ ಭೂಮಿ ದಾಖಲೆಗಳನ್ನು ಜಿಐಎಸ್ ಮ್ಯಾಪಿಂಗ್ ನೊಂದಿಗೆ ಡಿಜಿಟಲೀಕರಣ ಮಾಡಲಾಗುವುದು ಎಂದು ಹಣಕಾಸು ಸಚಿವರು ನಗರ ಭೂಮಿ ಸಂಬಂಧಿತ ಕ್ರಿಯೆಗಳ ಬಗ್ಗೆ ವಿವರಿಸಿದರು. ಆಸ್ತಿ ದಾಖಲೆಗಳ ನಿರ್ವಹಣೆಗೆ, ಮಾಹಿತಿ ಅಪ್ಡೇಟ್  (ಸೇರ್ಪಡೆ, ತಿದ್ದುಪಡಿ, ನವೀಕರಣ ಇತ್ಯಾದಿ) ಮಾಡುವುದು ಮತ್ತು ತೆರಿಗೆ ಆಡಳಿತ ನಿರ್ವಹಣೆಗೆ ಮಾಹಿತಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಸ್ಥಾಪಿಸಲಾಗುವುದು. ಈ ಸೌಲಭ್ಯಗಳು ನಗರ ಸ್ಥಳೀಯ ಸಂಸ್ಥೆಗಳ ಹಣಕಾಸು ಸ್ಥಿತಿಗತಿಯನ್ನು ಸುಧಾರಿಸಲು ಅನುವು ಮಾಡಿಕೊಡಲಿದೆ ಎಂದು ಸಚಿವರು ತಿಳಿಸಿದರು.

 

*****
 


(Release ID: 2036295) Visitor Counter : 74