ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ʻಜಿಇಎಂʼನ ಇ-ಕಲಿಕಾ ತರಬೇತಿ ಕೋರ್ಸ್‌ಗಳು ಈಗ 12 ಅಧಿಕೃತ ಭಾಷೆಗಳಲ್ಲಿ ಲಭ್ಯ

Posted On: 19 JUL 2024 1:58PM by PIB Bengaluru

ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಲಾದ ಹೊಸ ʻಸರ್ಕಾರಿ ಇ-ಮಾರುಕಟ್ಟೆ’(ಜಿಇಎಂ) ʻಕಲಿಕಾ ನಿರ್ವಹಣಾ ವ್ಯವಸ್ಥೆʼಯು ಒಂದು ಪ್ರವರ್ತಕ ಸರ್ಕಾರಿ-ಬೆಂಬಲಿತ ಪರಿಹಾರವಾಗಿದೆ. ಇದು ಬಹುಭಾಷಾ ಇಂಟರ್ಫೇಸ್ ಮತ್ತು ʻಸ್ಕೋರ್ಮ್ʼ ಬೆಂಬಲಿತ (SCORM Comliant) ಸಂವಾದಾತ್ಮಕ ಇ-ಕಲಿಕಾ ಕೋರ್ಸ್‌ಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ʻಜಿಇಎಂʼ ತನ್ನ ಸಂವಾದಾತ್ಮಕ ಮತ್ತು ಬಹುಭಾಷಾ ʻಎಲ್ಎಂಎಸ್ʼ ಅನ್ನು ಆರು ಹೆಚ್ಚುವರಿ ಅಧಿಕೃತ ಭಾಷೆಗಳಲ್ಲಿ ಪರಿಚಯಿಸಿದೆ, ಇದರಿಂದಾಗಿ ಈ ಬಳಕೆದಾರ ಸ್ನೇಹಿ ಕಲಿಕಾ ವೇದಿಕೆ ಈಗ ಭಾರತದ ಒಟ್ಟು ಹನ್ನೆರಡು ಅಧಿಕೃತ ಭಾಷೆಗಳಲ್ಲಿ ಲಭ್ಯವಿದೆ.

ಇ-ಕಲಿಕಾ ತರಬೇತಿ ಕೋರ್ಸ್‌ಗಳು ಈಗ ಹನ್ನೆರಡು ಅಧಿಕೃತ ಭಾಷೆಗಳಲ್ಲಿ ಲಭ್ಯವಿದ್ದು, ಅವುಗಳೆಂದರೆ - ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು ಮತ್ತು ತೆಲುಗು. ಬಳಕೆದಾರ ಸ್ನೇಹಿ ಇಂಟರ್ಫೇಸ್ ವಿಶೇಷ ಲೈಬ್ರೆರಿಗಳು ಮತ್ತು ಪ್ರಗತಿಯನ್ನು ಗುರುತಿಸಬಹುದಾದ ಡ್ಯಾಶ್‌ಬೋರ್ಡ್‌ನೊಂದಿಗೆ ಸುಧಾರಿತ ಬಳಕೆದಾರ ಅನುಭವವನ್ನು ಒದಗಿಸುತ್ತದೆ.

ಪ್ರಗತಿಪರ ಕಲಿಕೆ ಮತ್ತು ಮೌಲ್ಯಯುತ ಪ್ರಮಾಣೀಕರಣಗಳೊಂದಿಗೆ ಬಳಕೆದಾರರನ್ನು ಸಬಲೀಕರಣಗೊಳಿಸಲು ʻಎಲ್ಎಂಎಸ್ʼ ನಾಲ್ಕು ಹಂತದ ಖರೀದಿದಾರ ಪ್ರಮಾಣೀಕರಣ ಕಾರ್ಯಕ್ರಮವನ್ನು ಒದಗಿಸುತ್ಗತದೆ. ಇದಲ್ಲದೆ, ಈ ಕಲಿಕಾ ವೇದಿಕೆಯು, ಖರೀದಿದಾರರು ಮತ್ತು ಮಾರಾಟಗಾರರಿಗೆ ವಿಷಯಾಧಾರಿತವಾಗಿ ಅಥವಾ ಪ್ರಮಾಣೀಕರಣ ಮಟ್ಟದಿಂದ ತಮ್ಮ ಕಲಿಕೆಯ ಮಾರ್ಗವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ, ದಕ್ಷತೆಯನ್ನು ಹೆಚ್ಚಿಸುತ್ತದೆ.

"ಎಲ್ಲಾ ಸರ್ಕಾರಿ ಸಂಸ್ಥೆಗಳು ಖರೀದಿಗಾಗಿ ʻಜಿಇಎಂʼ ಬಳಕೆಗೆ ಒತ್ತು ನೀಡುತ್ತಿವೆ. ಹೀಗಾಗಿ  ನೀತಿಗಳು, ಕಾರ್ಯವಿಧಾನಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಪೋರ್ಟಲ್ ಅನ್ನು ಸುಲಭವಾಗಿ ನಿಭಾಯಿಸಲು ನೆರವಾಗುವ ನಿಟ್ಟಿನಲ್ಲಿ ಮಧ್ಯಸ್ಥಗಾರರಿಗೆ ಸರಿಯಾದ ಕಲಿಕೆಯ ಮಾರ್ಗಗಳನ್ನು ಒದಗಿಸುವುದು ಅತ್ಯಗತ್ಯವಾಗಿದೆ. ಈ ಸಿದ್ಧಾಂತದೊಂದಿಗೆ, ಸಂವಾದಾತ್ಮಕ ಮತ್ತು ಬಹುಭಾಷಾ ʻಎಲ್ಎಂಎಸ್ʼ ಅನ್ನು 12 ಅಧಿಕೃತ ಭಾಷೆಗಳಲ್ಲಿ ಹೊರತರಲಾಗಿದೆ," ಎಂದು ʻಜಿಇಎಂʼನ ಸಿಇಒ ಶ್ರೀ ಪ್ರಶಾಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

"ಬಹುಭಾಷಾ ಕಲಿಕಾ ಸಾಧನದ ಬಿಡುಗಡೆಯು ಸಂಕೀರ್ಣವಾದ ಸಾರ್ವಜನಿಕ ಖರೀದಿ ಪ್ರಕ್ರಿಯೆಗಳ ಉತ್ತಮ ಗ್ರಹಿಕೆಯನ್ನು ಖಚಿತಪಡಿಸುತ್ತದೆ, ರಾಜ್ಯ/ಸ್ಥಳೀಯ ಸರ್ಕಾರಿ ಖರೀದಿದಾರರು ಮತ್ತು ಭಾರತದಾದ್ಯಂತದ ಕೊನೆಯ ಮೈಲಿ ಮಾರಾಟಗಾರರಲ್ಲಿ ʻಜಿಇಎಂʼ ಪೋರ್ಟಲ್‌ ಅಳವಡಿಕೆಯನ್ನು ಹೆಚ್ಚಿಸುತ್ತದೆ. ನಾಲ್ಕು ತಿಂಗಳ ಹಿಂದೆ ಪ್ರಾರಂಭವಾದಾಗಿನಿಂದ, ʻಜಿಇಎಂ ಎಲ್ಎಂಎಸ್ʼನ ಬಳಕೆದಾರರ ನೋಂದಣಿಯಲ್ಲಿ 32 ಪಟ್ಟು ಹೆಚ್ಚಳವಾಗಿದೆ. ವಿವಿಧ ಕೋರ್ಸ್‌ಗಳಲ್ಲಿ 4,000ಕ್ಕೂ ಹೆಚ್ಚು ಬಳಕೆದಾರರು ದಾಖಲಾಗಿದ್ದಾರೆ. ಈ ಅವಧಿಯಲ್ಲಿ 600ಕ್ಕೂ ಹೆಚ್ಚು ಖರೀದಿದಾರ ಪ್ರಮಾಣಪತ್ರಗಳನ್ನು ಸಹ ನೀಡಲಾಗಿದೆ," ಎಂದು ಶ್ರೀ ಸಿಂಗ್ ಹೇಳಿದರು.

ʻಜಿಇಎಂʼ ಬಳಕೆದಾರರಿಗೆ ತರಬೇತಿ ಮತ್ತು ಅವರ ಸಾಮರ್ಥ್ಯವನ್ನು ಹೆಚ್ಚಿಸುವುದರ ಮಹತ್ವವನ್ನು ಗುರುತಿಸಿ, ವೇದಿಕೆಯು ಅಂತರರಾಷ್ಟ್ರೀಯ ಕಲಿಕೆ ಮತ್ತು ಅಭಿವೃದ್ಧಿ ಮಾನದಂಡಗಳನ್ನು ಅಳವಡಿಸಿಕೊಂಡಿದೆ. ಇದೇ ವೇಳೆ, ಇದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ವೈವಿಧ್ಯಮಯ ಭಾಷಾ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸುತ್ತದೆ.

ಸರ್ಕಾರಿ ಖರೀದಿದಾರರು, ಮಾರಾಟಗಾರರು / ಸೇವಾ ಪೂರೈಕೆದಾರರು ಮತ್ತು ಎಲ್ಲಾ ʻಜಿಇಎಂʼ ಬಳಕೆದಾರರಿಗಾಗಿ ನಿಖರವಾಗಿ ವಿನ್ಯಾಸಗೊಳಿಸಲಾದ ಎಲ್ಲಾ ಹೊಸ ತರಬೇತಿ ಕೋರ್ಸ್‌ಗಳು ಇದರಲ್ಲಿದ್ದು, ಇವು ಭಾಗವಹಿಸುವವರ ನಿರ್ದಿಷ್ಟ ಅಗತ್ಯಗಳು ಮತ್ತು ಕೌಶಲ್ಯ ಮಟ್ಟಗಳನ್ನು ಪೂರೈಸುವ ಗುರಿಯನ್ನು ಹೊಂದಿವೆ. ಇದು ʻಜಿಇಎಂʼ ಪರಿಸರ ವ್ಯವಸ್ಥೆಯನ್ನು ತಮ್ಮದೇ ಆದ ವೇಗದಲ್ಲಿ ಅನಾವರಣಗೊಳಿಸಲು ಮತ್ತು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ʻಜಿಇಎಂನ ಎಲ್ಎಂಎಸ್ʼ ವೇದಿಕೆಯು ಸರ್ಕಾರಿ ಕಲಿಕೆ ಮತ್ತು ಸಾಮರ್ಥ್ಯ ವರ್ಧನೆ ವೇದಿಕೆಗಳಿಗೆ ಹೊಸ ಮಾನದಂಡವನ್ನು ನಿಗದಿಪಡಿಸುತ್ತದೆ. ಸಂವಾದಾತ್ಮಕ, ಬಹುಭಾಷಾ ಕೋರ್ಸ್‌ಗಳು, ಸ್ಥಳ ಅಥವಾ ಭಾಷಾ ಪ್ರಾವೀಣ್ಯತೆಯನ್ನು ಲೆಕ್ಕಿಸದೆ, ಎಲ್ಲಾ ಬಳಕೆದಾರರು ʻಜಿಇಎಂʼ ಅನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಅಗತ್ಯವಾದ ಕೌಶಲ್ಯಗಳನ್ನು ಕಲಿಯುವಂತೆ ಖಚಿತಪಡಿಸುತ್ತದೆ.

ಆಕರ್ಷಕ ಮತ್ತು ಬಹುಭಾಷಾ ಕಲಿಕೆಯ ಅನುಭವವನ್ನು ನೀಡುವ ಮೂಲಕ, ʻಜಿಇಎಂʼ ತನ್ನ ಬಳಕೆದಾರರನ್ನು ಬೆಂಬಲಿಸುವುದಲ್ಲದೆ, ಅವರ ವಿಶ್ವಾಸವನ್ನು ಬೆಳೆಸುತ್ತಿದೆ ಮತ್ತು ವ್ಯಾಪಕ ಅಳವಡಿಕೆಯನ್ನು ಪ್ರೋತ್ಸಾಹಿಸುತ್ತಿದೆ.

 

*****



(Release ID: 2034345) Visitor Counter : 6