ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ವಿಂಗ್ಸ್‌ ಟು ಅವರ್‌ ಹೋಪ್ಸ್‌, ಆಶಾನ್‌ ಕಿ ಉಡಾನ್; ಕಹಾನಿ ರಾಷ್ಟ್ರಪತಿ ಭವನ್‌ ಕಿ; ಮತ್ತು ರಾಷ್ಟ್ರಪತಿ ಭವನ: ಹೆರಿಟೇಜ್ ಮೀಟ್ಸ್‌ ದ ಪ್ರೆಸೆಂಟ್‌; ಪುಸ್ತಕಗಳ ಮೊದಲ ಪ್ರತಿಯನ್ನು ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಸ್ವೀಕರಿಸಿದರು


ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ  ಪುಸ್ತಕಗಳನ್ನು ಬಿಡುಗಡೆ ಮಾಡಿದರು

Posted On: 18 JUL 2024 6:35PM by PIB Bengaluru

ರಾಷ್ಟ್ರಪತಿ ಭವನದಲ್ಲಿ ಇಂದು (ಜುಲೈ 18, 2024)  ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು 'ವಿಂಗ್ಸ್ ಟು ಅವರ್ ಹೋಪ್ಸ್'; ‘ಆಶಾನ್ ಕಿ ಉಡಾನ್’; ‘ಕಹಾನಿ ರಾಷ್ಟ್ರಪತಿ ಭವನ್‌ ಕಿ: ಮತ್ತು ರಾಷ್ಟ್ರಪತಿ ಭವನ: ಹೆರಿಟೇಜ್‌ ಮೀಟ್ಸ್‌ ದ ಪ್ರೆಸೆಂಟ್‌’ ಎಂಬ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಈ ನಾಲ್ಕು ಪುಸ್ತಕಗಳ ಮೊದಲ ಪ್ರತಿಗಳನ್ನು ಪಡೆದರು. 

ಈ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ.ಎಲ್. ಮುರುಗನ್, ಪ್ರಕಟಣೆಗಳ ನಿರ್ದೇಶನಾಲಯ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಪ್ರಕಟಣೆಗಳ ನಿರ್ದೇಶನಾಲಯವು ಪ್ರಕಟಿಸಿದ ಈ ಪುಸ್ತಕಗಳನ್ನು ಇಂದು ಮುಂಜಾನೆ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ.ಎಲ್. ಮುರುಗನ್ ಮತ್ತು ವಾರ್ತಾ ಮತ್ತು ಪ್ರಸಾರ ಇಲಾಖೆ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಬಿಡುಗಡೆ ಮಾಡಿದರು.

‘ವಿಂಗ್ಸ್ ಟು ಅವರ್ ಹೋಪ್ಸ್’ ಮತ್ತು ‘ಆಶಾನ್ ಕಿ ಉಡಾನ್’ ಪುಸ್ತಕಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಗಳಾದ ಮೊದಲ ವರ್ಷದಲ್ಲಿ ಮಾಡಿದ ಆಯ್ದ ಭಾಷಣಗಳ ಸಂಗ್ರಹವಾಗಿದೆ. ‘ಕಹಾನಿ ರಾಷ್ಟ್ರಪತಿ ಭವನ್ ಕಿ’ ಎಂಬುದು ಮಕ್ಕಳಿಗಾಗಿ ಇರುವ ಪುಸ್ತಕವಾಗಿದ್ದು, ರಾಷ್ಟ್ರಪತಿ ಭವನ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಆಸಕ್ತಿದಾಯಕ ರೀತಿಯಲ್ಲಿ ಮತ್ತು ಸರಳ ಭಾಷೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ. 

‘ರಾಷ್ಟ್ರಪತಿ ಭವನ: ಹೆರಿಟೇಜ್ ಮೀಟ್ಸ್ ದ ಪ್ರೆಸೆಂಟ್’ ಎಂಬುದು ರಾಷ್ಟ್ರಪತಿ ಭವನದ ಇತಿಹಾಸ ಮತ್ತು ವಾಸ್ತುಶಿಲ್ಪದ ಚಿತ್ರಾತ್ಮಕ ನಿರೂಪಣೆಯಾಗಿದೆ ಮತ್ತು ಎಲ್ಲಾ ಮಾಜಿ ರಾಷ್ಟ್ರಪತಿಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಸ್ತುತ ಪ್ರಮುಖ ಘಟನೆಗಳ ಚಿತ್ರಗಳು ಈ ಪುಸ್ತಕದಲ್ಲಿವೆ.

 

*****


(Release ID: 2034192) Visitor Counter : 69