ಉಪರಾಷ್ಟ್ರಪತಿಗಳ ಕಾರ್ಯಾಲಯ

ನಕಾರಾತ್ಮಕ ನಿರೂಪಣೆಗಳ ಹರಡುವಿಕೆ ಮತ್ತು ಮಾಧ್ಯಮದಿಂದ ರಚನಾತ್ಮಕ ಪ್ರಯತ್ನಗಳಿಗೆ ಸಾಕಷ್ಟು ಗಮನ ಕೊಡದಿರುವುದು ಆತಂಕಕಾರಿಯಾಗಿದೆ- ಉಪರಾಷ್ಟ್ರಪತಿ


ಪಕ್ಷಪಾತ ಹೆಚ್ಚಳ ಮತ್ತು ರಾಜಕೀಯ ಅಜೆಂಡಾಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ತಪ್ಪಿಸಬೇಕು:  ಮಾಧ್ಯಮಗಳಿಗೆ ಉಪರಾಷ್ಟ್ರಪತಿ ಕರೆ

ಸಂಸತ್ತಿನಲ್ಲಿ ಅಡ್ಡಿ ಮತ್ತು ಗದ್ದಲ, ಗೊಂದಲಗೂ ಅಪವಾದಗಳಿಗಿಂತ ರಾಜಕೀಯ ಸಾಧನಗಳಾಗಿವೆ- ಉಪರಾಷ್ಟ್ರಪತಿ

ಆತ್ಮವಿಮರ್ಶೆ ಸಮಯ ಇದಾಗಿದೆ: ಮಾಧ್ಯಮಗಳಿಗೆ ಸಲಹೆ

ವಿಶ್ವಕ್ಕೆ ಭಾರತದ ನಿಖರವಾದ ಚಿತ್ರಣವನ್ನು ಬಿಂಬಿಸಲು ಮಾಧ್ಯಮಗಳಿಗೆ ಸಲಹೆ

ಪತ್ರಿಕೋದ್ಯಮವು ದ್ವಂದ್ವ ನೀತಿ ಮತ್ತು ಅನೈತಿಕ ನಡವಳಿಕೆಯ ಬಗ್ಗೆ ಗಮನಹರಿಸಬೇಕು- ಉಪರಾಷ್ಟ್ರಪತಿ

Posted On: 18 JUL 2024 5:16PM by PIB Bengaluru

ಸೀಮಿತ ಪ್ರಭಾವದ ಘಟನೆಗಳಿಗೆ ಮಾಧ್ಯಮಗಳು ಹೆಚ್ಚು  ಪ್ರಚಾರ ನೀಡುತ್ತಿರುವ ಬಗ್ಗೆ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ, ಇದು ವಸ್ತುನಿಷ್ಠ ಮತ್ತು ದೀರ್ಘಾವಧಿಯ ಉಪಕ್ರಮಗಳನ್ನು ಮರೆಮಾಚುತ್ತದೆ ಎಂದು ಎಚ್ಚರಿಸಿದ್ದಾರೆ.

ಹಿಂದಿ ದೈನಿಕವೊಂದರ ನೇತೃತ್ವದಲ್ಲಿ ಸಂಸತ್ತಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಉಪರಾಷ್ಟ್ರಪತಿಗಳು, ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. ಮತ್ತು ಭಾರತದ ಬೆಳವಣಿಗೆಯ ಕಥೆಯ ಬಗ್ಗೆ ಹೆಚ್ಚು ಗಮನಹರಿಸುವಂತೆ ಮನವಿ ಮಾಡಿದರು.

ಪ್ರಚೋದಿತ ನಿರೂಪಣೆಗಳಿಗಾಗಿ ಮಾಧ್ಯಮದ ವಾಣಿಜ್ಯೀಕರಣ ಮತ್ತು ನಿಯಂತ್ರಣ ಆತಂಕಕಾರಿಯಾಗಿದೆ. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವಲ್ಲಿ ಪತ್ರಿಕೋದ್ಯಮ  ನಿರ್ಣಾಯಕ ಪಾತ್ರವಹಿಸುತ್ತದೆ ಎಂದು ಉಪರಾಷ್ಟ್ರಪತಿಗಳು ತಿಳಿಸಿದರು.ಮಾಧ್ಯಮಗಳು ಪಕ್ಷಪಾತದ ದೃಷ್ಟಿಕೋನಗಳಿಂದ ಹೊರಬರಬೇಕು. ಮತ್ತು ರಾಜಕೀಯ ಅಜೆಂಡಾಗಳು ಅಥವಾ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾದ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಕರೆ ನೀಡಿದರು.

"ಇದು ಆತ್ಮವಿಮರ್ಶೆಯ ಸಮಯ. ಬೆಳವಣಿಗೆಯಲ್ಲಿ ಪಾಲುದಾರರಾಗಲು ನಾನು ಮಾಧ್ಯಮಗಳಿಗೆ ಮನವಿ ಮಾಡುತ್ತೇನೆ. ಒಳ್ಳೆಯ ಕೆಲಸಗಳನ್ನು ಎತ್ತಿ ತೋರಿಸುವುದರ ಮೂಲಕ ಮತ್ತು ತಪ್ಪು ಸಂದರ್ಭಗಳು ಮತ್ತು ನ್ಯೂನತೆಗಳನ್ನು ಟೀಕಿಸುವ ಮೂಲಕ ಇದನ್ನು ಸರಿಪಡಿಸಬಹುದು" ಎಂದು ಅವರು ಹೇಳಿದರು.

 


ಸಂಸದೀಯ ಪ್ರಕ್ರಿಯೆಗಳು ಸಮಾನಾಂತರಗಳನ್ನು ಚಿತ್ರಿಸುತ್ತಾ, ಅಲ್ಲಿ ಪ್ರಜಾಪ್ರಭುತ್ವದ ಆದರ್ಶಗಳನ್ನು ಗೌರವಿಸಲಾಗುತ್ತದೆ. ಸಂಸತ್ತಿನ ಕಲಾಪಗಳಲ್ಲಿ ಹೆಚ್ಚುತ್ತಿರುವ ಅಡ್ಡಿ ಮತ್ತು ಗದ್ದಲ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. "ಸಂಸತ್‌ ಪ್ರಜಾಪ್ರಭುತ್ವದ ದೇವಾಲಯವಾಗಿದೆ, ಅಲ್ಲಿ ಪ್ರತಿ ಅಧಿವೇಶನವು ಯಾವುದೇ ಅಡಚಣೆಗಳಿಲ್ಲದೆ ನಮ್ಮ ರಾಷ್ಟ್ರದ ಅಡಿಪಾಯಕ್ಕೆ ಕೊಡುಗೆ ನೀಡಿದೆ. ಅಡ್ಡಿ ಮತ್ತು ಅಡಚಣೆಗಳು ರಾಜಕೀಯ ಸಾಧನಗಳಾಗಿವೆ ಎಂದು ಉಪರಾಷ್ಟ್ರಪತಿಗಳು ತಿಳಿಸಿದರು.

ಅಡ್ಡಿಪಡಿಸುವಿಕೆ, ಗದ್ದಲವನ್ನೇ ವೈಭವೀಕರಿಸುವ ಮಾಧ್ಯಮದ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀ ಜಗದೀಪ್‌ ಧನಕರ್‌, ಸಂಸತ್ತಿನ ಕಲಾಪಗಳನ್ನು ಪ್ರಸಾರ ಮಡುವ ತಮ್ಮ ಆದ್ಯತೆಗಳನ್ನು ಮರುಪರಿಶೀಲಿಸಬೇಕು ಎಂದು ಕರೆ ನೀಡಿದರು. ಅಡೆತಡೆಗಳು ಮುಖ್ಯಾಂಶಗಳಾದಾಗ ಮತ್ತು ಅಡ್ಡಿಪಡಿಸುವವರನ್ನೇ ಹೀರೋಗಳೆಂದು ಕೊಂಡಾಡಿದಾಗ, ಪತ್ರಿಕೋದ್ಯಮವು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ತನ್ನ ಕರ್ತವ್ಯದಲ್ಲಿ ವಿಫಲಗೊಳ್ಳುತ್ತದೆ ಎಂದು  ಹೇಳಿದರು.

ಭಾರತದ ಬಗ್ಗೆ ನಿಖರವಾದ ಚಿತ್ರಣವನ್ನು ಜಗತ್ತಿಗೆ ಬಿಂಬಿಸುವಲ್ಲಿ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯಬೇಕು. “ಹೊರಗಿನ ಜನರು ಭಾರತದ ಬಗ್ಗೆ  ನಿರ್ಣಯಿಸಲು ಸಾಧ್ಯವಿಲ್ಲ. ಅವರು ಅದನ್ನು ತಮ್ಮದೇ ಆದ ದೃಷ್ಟಿಕೋನದಿಂದ ಮಾಡುತ್ತಾರೆ. ನಮ್ಮ ಅನಿರೀಕ್ಷಿತ ಮತ್ತು ಊಹೆಗೂ ನಿಲುಕದ ಪ್ರಗತಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಅನೇಕ ಜನರು ದೇಶದಲ್ಲಿ ಕಡಿಮೆ ಮತ್ತು ಹೊರಗೆ ಹೆಚ್ಚಾಗಿದ್ದಾರೆ, ನಾವು ಮಹಾಶಕ್ತಿಯಾಗುತ್ತಿದ್ದೇವೆ ಎಂದು ಅವರು ಹೇಳಿದರು.

 

5000 ವರ್ಷಗಳ ಕಾಲ ಭಾರತದ ಆಳವಾದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಮತ್ತು ಅದರ ಪ್ರಜಾಪ್ರಭುತ್ವ ಸಂಸ್ಥೆಗಳ ಬಲದ ಬಗ್ಗೆ ಉಪರಾಷ್ಟ್ರಪತಿಗಳು ತಿಳಿಸಿದರು. ಇತ್ತೀಚಿನ ಚುನಾವಣೆಗಳನ್ನು ಪ್ರತಿಬಿಂಬಿಸುತ್ತಾ, ಭಾರತದ ಚುನಾವಣಾ ಪ್ರಕ್ರಿಯೆಯ ಶಕ್ತಿ ಸರ್ಕಾರಗಳನ್ನು ಬದಲಾಯಿಸುತ್ತವೆ. ಇದು ಪ್ರಜಾಪ್ರಭುತ್ವ. ದ್ವಂದ್ವ ನೀತಿ ಮತ್ತು ಅನೈತಿಕ ನಡವಳಿಕೆಯನ್ನು ತಿಳಿಸುವ ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಉಪರಾಷ್ಟ್ರಪತಿಗಳು ಕರೆ ನೀಡಿದರು.

 

*****



(Release ID: 2034190) Visitor Counter : 5