ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
azadi ka amrit mahotsav

ಮುಂಭಾಗದ ವಿಂಡ್ ಷೀಲ್ಡ್ ನಲ್ಲಿ ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಗೆ ದುಪ್ಪಟ್ಟು ಟೋಲ್ ವಿಧಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರ

Posted On: 18 JUL 2024 5:53PM by PIB Bengaluru

ರಾಷ್ಟ್ರೀಯ ಹೆದ್ದಾರಿಯ ಬಳಕೆದಾರರು ಉದ್ದೇಶ ಪೂರ್ವಕವಾಗಿ ವಾಹನದ ವಿಂಡ್ಸ್ಕ್ರೀನಿನ ಮೇಲೆ ಫಾಸ್ಟ್ ಟ್ಯಾಗ್ ಅನ್ನು ಅಂಟಿಸದೇ ಇರುವುದನ್ನು ತಡೆಯಲು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ ಎಚ್ಎಐ) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಪ್ರಕಾರ, ಟೋಲ್ ಬೂತ್ ದಾಟುವಾಗ ವಿಂಡ್ ಶೀಲ್ಡ್ ಒಳಭಾಗದಲ್ಲಿ ಫಾಸ್ಟ್ ಟ್ಯಾಗ್ ಅನ್ನು ಅಂಟಿಸದೇ ಇರುವ ವಾಹನಗಳಿಗೆ ಟೋಲ್ ಶುಲ್ಕವನ್ನು ದುಪ್ಪಟ್ಟು ವಿಧಿಸಲು ಸೂಚಿಸಲಾಗಿದೆ.  ವಿಂಡ್ಸ್ಕ್ರೀನ್ನಲ್ಲಿ ಉದ್ದೇಶ ಪೂರ್ವಕವಾಗಿ ಫಾಸ್ಟ್ ಟ್ಯಾಗ್ ಅನ್ನು ಅಳವಡಿಸದಿರುವುದು ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬಗಳಿಗೆ ಕಾರಣವಾಗುತ್ತದೆ ಹಾಗು ಇದು ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ.

ಮುಂಭಾಗದ ವಿಂಡ್ ಷೀಲ್ಡ್ ನಲ್ಲಿ ಫಾಸ್ಟ್ ಟ್ಯಾಗ್ ಅಂಟಿಸದೇ ಇದ್ದಲ್ಲಿ ಬಳಕೆದಾರರ ಶುಲ್ಕವನ್ನು ದುಪ್ಪಟ್ಟು ವಿಧಿಸಲು ಎಲ್ಲಾ ಬಳಕೆದಾರ ಶುಲ್ಕ ಸಂಗ್ರಹ ಏಜೆನ್ಸಿಗಳು ಮತ್ತು ರಿಯಾಯಿತಿದಾರರಿಗೆ ವಿವರವಾದ ಪ್ರಮಾಣಿತ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು(ಎಸ್ಒಪಿ) ನೀಡಲಾಗಿದೆ. ಮುಂಭಾಗದ ವಿಂಡ್ ಷೀಲ್ಡ್ ನಲ್ಲಿ ಫಾಸ್ಟ್ ಟ್ಯಾಗ್ ಇಲ್ಲದೆ ಟೋಲ್ ಲೇನ್ಗೆ ಪ್ರವೇಶಿಸಿದರೆ ದಂಡ ತೆರಬೇಕಾಗುವುದರ ಬಗ್ಗೆ ಹೆದ್ದಾರಿ ಬಳಕೆದಾರರಿಗೆ ತಿಳಿಸಲು ಎಲ್ಲಾ ಬಳಕೆದಾರರ ಶುಲ್ಕ ಪ್ಲಾಜಾಗಳಲ್ಲಿ ಮಾಹಿತಿಯನ್ನು ಎದ್ದು ಕಾಣುವಂತೆ ಪ್ರದರ್ಶಿಸಲಾಗುತ್ತದೆ.

ಟೋಲ್ ಪ್ಲಾಜಾದಲ್ಲಿ ವಾಹನ ನೋಂದಣಿ ಸಂಖ್ಯೆ (ವಿಆರ್ಎನ್) ಸಮೇತ  ಸಿಸಿಟಿವಿ ಫೂಟೇಜ್ ಅನ್ನು ಫಾಸ್ಟ್ ಟ್ಯಾಗ್ ಅಂಟಿಸದೆ ಇರುವ ಪ್ರಕರಣಗಳನ್ನು ರೆಕಾರ್ಡ್ ಮಾಡಲಾಗುತ್ತದೆ. ಟೋಲ್ ಲೇನ್‌ ನಲ್ಲಿ  ವಾಹನದ ಉಪಸ್ಥಿತಿ ಮತ್ತು ಶುಲ್ಕದ ಬಗ್ಗೆ ಸರಿಯಾದ ದಾಖಲೆಯನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ.

ಈಗಾಗಲೇ ಇರುವ ನಿಯಮಗಳಿಗೆ ಅನುಸಾರವಾಗಿ, ಎನ್ಎಚ್ಎಐ ವಾಹನದ ಮುಂಭಾಗದ ವಿಂಡ್ ಷೀಲ್ಡ್ ನಲ್ಲಿ ಫಾಸ್ಟ್ ಟ್ಯಾಗ್ ಅನ್ನು ಒಳಗಿನಿಂದ ಅಂಟಿಸಲು ಪ್ರಮಾಣಿತ ಕಾರ್ಯವಿಧಾನದ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಗುರಿಯನ್ನು ಹೊಂದಿದೆ. ಪ್ರಮಾಣಿತ ಮಾರ್ಗಸೂಚಿಯ ಪ್ರಕಾರ ವಾಹನದಲ್ಲಿ ಫಾಸ್ಟ್ ಟ್ಯಾಗ್ ಅಂಟಿಸದ ಯಾವುದೇ  ಬಳಕೆದಾರರು ಟೋಲ್ ಪ್ಲಾಜಾದಲ್ಲಿ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಇಟಿಸಿ) ವಹಿವಾಟು ನಡೆಸಲು ಅರ್ಹತೆ ಹೊಂದಿರುವುದಿಲ್ಲ ಮತ್ತು ದುಪ್ಪಟ್ಟು ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಜೊತೆಗೆ ಆ ವಾಹನವನ್ನು ಕಪ್ಪು ಪಟ್ಟಿಗೆ ಸೇರಿಸಬಹುದು. ವಿವಿಧ ಪಾಯಿಂಟ್-ಆಫ್-ಸೇಲ್ (ಪಿಒಎಸ್) ನಿಂದ ವಿತರಿಸುವ ಸಮಯದಲ್ಲಿ ಮುಂಭಾಗದ ವಿಂಡ್ ಷೀಲ್ಡ್ ನಲ್ಲಿ ಸೂಚಿಸಿದಂತೆ  ವಾಹನಕ್ಕೆ ಫಾಸ್ಟ್ ಟ್ಯಾಗ್ ಅನ್ನು ಸರಿಪಡಿಸಲು ಅದನ್ನು ವಿತರಿಸುವ ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹಣೆ) ನಿಯಮಗಳು, 2008 ರ ಪ್ರಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕವನ್ನು ಎನ್ಎಚ್ಎಐ ಸಂಗ್ರಹಿಸುತ್ತದೆ. ಈಗ, ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಸುಮಾರು 1,000 ಟೋಲ್ ಪ್ಲಾಜಾಗಳಲ್ಲಿ ಸುಮಾರು 45,000 ಕಿಮೀ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ ವೇ ಗಳಿಗೆ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. 

ಸುಮಾರು 98 ಪ್ರತಿಶತ ಮತ್ತು 8 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವುದರೊಂದಿಗೆ, ಫಾಸ್ಟ್ ಟ್ಯಾಗ್ ದೇಶದಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಹೊಸ ಬದಲಾವಣೆ ತಂದಿದೆ. ಫಾಸ್ಟ್ ಟ್ಯಾಗ್ ಅನ್ನು ಅಂಟಿಸದೆ ಇರುವ ಬಳಕೆದಾರರಿಗೆ ಶುಲ್ಕವನ್ನು ದುಪ್ಪಟ್ಟು ವಿಧಿಸುವ ಈ ಉಪಕ್ರಮವು ಟೋಲ್ ಕಾರ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ತಡೆರಹಿತ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

 

*****




(Release ID: 2034189) Visitor Counter : 58