ರಕ್ಷಣಾ ಸಚಿವಾಲಯ
ಸರ್ಸಾವಾ ವಾಯುಪಡೆ ನಿಲ್ದಾಣದಲ್ಲಿ ಕಾರ್ಗಿಲ್ ವಿಜಯ್ ದಿವಸ್ ರಜತ್ ಜಯಂತಿ 2024 ಆಚರಣೆ
Posted On:
14 JUL 2024 10:05AM by PIB Bengaluru
1999 ರ ಕಾರ್ಗಿಲ್ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿದ ವೀರ ವಾಯು ಯೋಧರ ಧೈರ್ಯ ಮತ್ತು ತ್ಯಾಗದ ಹೆಮ್ಮೆಯ ಪರಂಪರೆಯನ್ನು ಭಾರತೀಯ ವಾಯುಪಡೆ ಹೊಂದಿದ್ದು, ಇದು ಮಿಲಿಟರಿ ವಾಯುಯಾನ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಕಾರ್ಗಿಲ್ ಯುದ್ಧದಲ್ಲಿ ಐಎಎಫ್ ಕಾರ್ಯಾಚರಣೆಗಳು (ಒಪಿ ಸಫೆದ್ ಸಾಗರ್) 16000 ಅಡಿಗಳಿಗಿಂತ ಹೆಚ್ಚಿನ ಕಡಿದಾದ ಪ್ರಪಾತ ಮತ್ತು ದಿಗ್ಭ್ರಮೆಗೊಳಿಸುವ, ತಲೆತಿರುಗುವಂತೆ ಮಾಡುವ ಎತ್ತರದಿಂದ ಶತ್ರುಗಳನ್ನು ಗುರಿಯಾಗಿಸಿ ವಿಶಿಷ್ಟ ಕಾರ್ಯಾಚರಣೆಯನ್ನು ನಡೆಸುವಲ್ಲಿ ಇರುವ ತೊಂದರೆಗಳನ್ನು ಕಷ್ಟಕರ ಸನ್ನಿವೇಶದ ಸವಾಲುಗಳನ್ನು ನಿವಾರಿಸುವ ಐಎಎಫ್ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ. ತ್ವರಿತ ತಾಂತ್ರಿಕ ಮಾರ್ಪಾಡುಗಳು ಮತ್ತು ಉದ್ಯೋಗ-ತರಬೇತಿಯು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ನಡೆದ ಈ ಯುದ್ಧವನ್ನು ಗೆಲ್ಲಲು ವಾಯುಶಕ್ತಿಯ ಬಳಕೆಯಲ್ಲಿ ಐಎಎಫ್ ನ್ನು ಅತ್ಯುನ್ನತ ಸ್ಥಾನದಲ್ಲಿರಿಸಿದೆ. ಒಟ್ಟಾರೆಯಾಗಿ, ಐಎಎಫ್ ಸುಮಾರು 5000 ಯುದ್ದ ಹಾರಾಟಗಳು (ಸ್ಟ್ರೈಕ್ ಮಿಷನ್ಗಳು), 350 ಬೇಹುಗಾರಿಕೆ / ವಿಚಕ್ಷಣ ಕಾರ್ಯಾಚರಣೆಗಳು ಮತ್ತು ಸುಮಾರು 800 ಬೆಂಗಾವಲು ವಿಮಾನಗಳ ಹಾರಾಟವನ್ನು ನಡೆಸಿದೆ. ಗಾಯಾಳುಗಳ ಸ್ಥಳಾಂತರ ಮತ್ತು ವಾಯು ಸಾರಿಗೆ ಕಾರ್ಯಾಚರಣೆಗಾಗಿ ಐಎಎಫ್ 2000 ಕ್ಕೂ ಹೆಚ್ಚು ಹೆಲಿಕಾಪ್ಟರ್ ಹಾರಾಟ ನಡೆಸಿದೆ.
ಕಾರ್ಗಿಲ್ ವಿಜಯದ 25 ನೇ ವರ್ಷಾಚರಣೆಯ ನೆನಪಿಗಾಗಿ, ಭಾರತೀಯ ವಾಯುಪಡೆಯು 24ರ ಜುಲೈ 12 ರಿಂದ ಜುಲೈ 26 ರವರೆಗೆ ಸರ್ಸಾವಾ ವಾಯು ನೆಲೆಯಲ್ಲಿ 'ಕಾರ್ಗಿಲ್ ವಿಜಯ್ ದಿವಸ್ ರಜತ್ ಜಯಂತಿ' ಆಚರಿಸುತ್ತಿದೆ.ರಾಷ್ಟ್ರಕ್ಕಾಗಿ ಸರ್ವೋಚ್ಛ ತ್ಯಾಗ ಮಾಡಿದ ವೀರ ಯೋಧರನ್ನು ಅದು ಸ್ಮರಿಸಿ ಗೌರವಿಸುತ್ತಿದೆ. ಸರ್ಸಾವಾ ವಾಯುಪಡೆ ನಿಲ್ದಾಣದ 152 ಹೆಲಿಕಾಪ್ಟರ್ ಘಟಕ, 'ದಿ ಮೈಟಿ ಆರ್ಮರ್' ಒಪಿ ಸಫೆದ್ ಸಾಗರ್ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 99ರ ಮೇ 28 ರಂದು, ಟೋಲೊಲಿಂಗ್ನಲ್ಲಿ ಶತ್ರು ನೆಲೆಗಳ ವಿರುದ್ಧ ನೇರ ದಾಳಿಗಾಗಿ 152 ಎಚ್ಯುನ ಸ್ಕ್ವಾಡ್ರನ್ ಲೀಡರ್ ಆರ್. ಪುಂಧೀರ್, ಫ್ಲೈಟ್ ಲೆಫ್ಟಿನೆಂಟ್ ಎಸ್ ಮುಹಿಲನ್, ಸಾರ್ಜೆಂಟ್ ಪಿವಿಎನ್ಆರ್ ಪ್ರಸಾದ್ ಮತ್ತು ಸಾರ್ಜೆಂಟ್ ಆರ್.ಕೆ. ಸಾಹು ಅವರನ್ನು 'ನುಬ್ರಾ' (ಕಾರ್ಗಿಲ್ ಯುದ್ಧದಲ್ಲಿ ನುಸುಳುಕೋರರ ವಿರುದ್ಧ ಮೊದಲು ಕಾರ್ಯಾಚರಣೆಗೆ ಇಳಿಸಿದ ತಂಡ) ರಚನೆಯಾಗಿ ಹಾರಾಟಕ್ಕೆ ನಿಯೋಜಿಸಲಾಯಿತು. ದಾಳಿಯನ್ನು ಯಶಸ್ವಿಯಾಗಿ ಸಂಘಟಿಸಿದ ನಂತರ, ಅವರ ಹೆಲಿಕಾಪ್ಟರ್ ಮರಳಿ ಬರುವ ಸಮಯದಲ್ಲಿ ಶತ್ರುವಿನ ಸ್ಟಿಂಗರ್ ಕ್ಷಿಪಣಿಗೆ ಬಡಿಯಿತು, ಇದು ನಾಲ್ಕು ಅಮೂಲ್ಯ ಜೀವಗಳನ್ನು ಕಳೆದುಕೊಳ್ಳಲು ಕಾರಣವಾಯಿತು. ಅಸಾಧಾರಣ ಧೈರ್ಯದ ಈ ಕಾರ್ಯಕ್ಕಾಗಿ, ಅವರಿಗೆ ಮರಣೋತ್ತರವಾಗಿ ವಾಯು ಸೇನಾ ಪದಕ (ಶೌರ್ಯ) ನೀಡಲಾಯಿತು. ಅವರ ಸರ್ವೋಚ್ಚ ತ್ಯಾಗವು ಅವರ ಹೆಸರುಗಳು ಐಎಎಫ್ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವುದನ್ನು ಖಚಿತಪಡಿಸಿತು.
24ರ ಜುಲೈ 13ರಂದು, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರು ಹಿರಿಯ ಗಣ್ಯರು, ಧೈರ್ಯಶಾಲಿ ಕುಟುಂಬಗಳು, ಹಿರಿಯರು ಮತ್ತು ಸೇವೆಯಲ್ಲಿರುವ ಐಎಎಫ್ ಅಧಿಕಾರಿಗಳೊಂದಿಗೆ ವಾಯು ನೆಲೆಯಲ್ಲಿರುವ ಯುದ್ಧ ಸ್ಮಾರಕ (ಸ್ಟೇಷನ್ ವಾರ್ ಮೆಮೋರಿಯಲ್)ದಲ್ಲಿ ರಾಷ್ಟ್ರದ ಸೇವೆಯಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ವಾಯು ಯೋಧರಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಎಎಸ್ ವತಿಯಿಂದ ಹುತಾತ್ಮರ ಹತ್ತಿರದ ಸಂಬಂಧಿಕರನ್ನು ಸನ್ಮಾನಿಸಲಾಯಿತು ಮತ್ತು ಅವರೊಂದಿಗೆ ಸಂವಾದ ನಡೆಸಲಾಯಿತು.
ಆಕಾಶ್ ಗಂಗಾ ತಂಡದಿಂದ ಪ್ರದರ್ಶನ ಮತ್ತು ಜಾಗ್ವಾರ್, ಎಸ್.ಯು-30 ಎಂಕೆಎಲ್ ಹಾಗು ರಫೇಲ್ ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನಗಳನ್ನು ಒಳಗೊಂಡ ಅದ್ಭುತ ವಾಯು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಹುತಾತ್ಮರಾದ ವೀರರ ನೆನಪಿಗಾಗಿ ಎಂಐ -17 ವಿ 5 ನಿಂದ "ಕಾಣೆಯಾದ ಮನುಷ್ಯ ರಚನೆ" ಯನ್ನು ಹಾರಿಸಲಾಯಿತು. ಏರ್ ವಾರಿಯರ್ ಡ್ರಿಲ್ ತಂಡ ಮತ್ತು ಏರ್ ಫೋರ್ಸ್ ಬ್ಯಾಂಡ್ ಪ್ರದರ್ಶನಗಳ ಜೊತೆಗೆ ಐಎಎಫ್ ಹೆಲಿಕಾಪ್ಟರ್ ಗಳಾದ ಎಂಐ -17 ವಿ 5, ಚೀತಾ, ಚಿನೂಕ್ ಗಳ ಸ್ಥಿರ ಪ್ರದರ್ಶನವನ್ನು ಸಹ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳು, ಸಹರಾನ್ಪುರ ಪ್ರದೇಶದ ಸ್ಥಳೀಯ ನಿವಾಸಿಗಳು, ಹಿರಿಯರು, ನಾಗರಿಕ ಗಣ್ಯರು ಮತ್ತು ರೂರ್ಕಿ, ಡೆಹ್ರಾಡೂನ್ ಹಾಗು ಅಂಬಾಲಾದ ರಕ್ಷಣಾ ಪಡೆಗಳ ಸಂಸ್ಥೆಗಳ ಸಿಬ್ಬಂದಿ ಸೇರಿದಂತೆ 5000 ಕ್ಕೂ ಹೆಚ್ಚು ಪ್ರೇಕ್ಷಕರು ಸಾಕ್ಷಿಯಾದರು.
*****
(Release ID: 2033204)
Visitor Counter : 71