ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ.ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಡೆಂಗ್ಯೂ ಪರಿಸ್ಥಿತಿ ಮತ್ತು ಮಳೆಗಾಲದ ಆರಂಭ ಮತ್ತು ಡೆಂಗ್ಯೂ ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆಯ ಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆ ನಡೆಯಿತು


ಸಾಂಕ್ರಾಮಿಕ ರೋಗಗಳು ಆಗಾಗ್ಗೆ ವರದಿಯಾಗುವ ಹೆಚ್ಚಿನ ಹೊರೆಯ ರಾಜ್ಯಗಳು ಮತ್ತು ಪ್ರದೇಶಗಳ ಮೇಲೆ ಪ್ರಾಥಮಿಕವಾಗಿ ಗಮನ ಹರಿಸುವಂತೆ ಮತ್ತು ಡೆಂಗ್ಯೂ ತಡೆಗಟ್ಟುವಿಕೆಯ ಬಗ್ಗೆ ಸ್ಪಷ್ಟ ಫಲಿತಾಂಶಗಳನ್ನು ತರಲು ರಾಜ್ಯಗಳೊಂದಿಗೆ ಪೂರ್ವಭಾವಿಯಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಮನವಿ

ಡೆಂಗ್ಯೂ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಎಂ.ಓ.ಎಚ್‌.ಯು.ಎ, ಎಂ.ಓ.ಆರ್‌.ಡಿ, ಶಿಕ್ಷಣ ಸಚಿವಾಲಯ ಮತ್ತು ಮುನ್ಸಿಪಲ್‌ ಕಾರ್ಪೊರೇಷನ್‌ಗಳು ಮತ್ತು ಸ್ಥಳೀಯ ಸ್ವಯಮಾಡಳಿತವನ್ನು ಒಳಗೊಂಡ ಅಂತರ ಸಚಿವಾಲಯದ ಸಭೆಗೆ ಒಮ್ಮತ ಒತ್ತು

ಡೆಂಗ್ಯೂ ತಡೆಗಟ್ಟುವಿಕೆ ಮತ್ತು ಜಾಗೃತಿಗಾಗಿ 24/7 ಕೇಂದ್ರ ಸಹಾಯವಾಣಿ ಸಂಖ್ಯೆಯನ್ನು ರಚಿಸಲು ಅಧಿಕಾರಿಗಳಿಗೆ ನಿರ್ದೇಶನ; ಇದೇ ರೀತಿಯ ಬೆಂಬಲಕ್ಕಾಗಿ ಸಹಾಯವಾಣಿ ಸಂಖ್ಯೆಯನ್ನು ಕಾರ್ಯಗತಗೊಳಿಸಲು ರಾಜ್ಯಗಳಿಗೆ ಸಲಹೆ

ತರಬೇತಿ ಪಡೆದ ಮಾನವಶಕ್ತಿ, ಔಷಧಿಗಳು ಮತ್ತು ಇತರ ಲಾಜಿಸ್ಟಿಕ್ಸ್‌ಗಳೊಂದಿಗೆ ಮೀಸಲಾದ ಡೆಂಗ್ಯೂ ವಾರ್ಡ್‌ಗಳನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ ಎಂದು ಆಸ್ಪತ್ರೆಗಳು ಖಚಿತಪಡಿಸಿಕೊಳ್ಳಬೇಕು

Posted On: 10 JUL 2024 4:16PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್‌ ಪ್ರಕಾಶ್‌ ನಡ್ಡಾ ಅವರು ಇಂದು ದೇಶಾದ್ಯಂತ ಡೆಂಗ್ಯೂ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಮಳೆಗಾಲದ ಆರಂಭ ಮತ್ತು ಜಾಗತಿಕವಾಗಿ ಡೆಂಗ್ಯೂ ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಡೆಂಗ್ಯೂ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸನ್ನದ್ಧತೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷ ತೆ ವಹಿಸಿದ್ದರು.

ರಾಷ್ಟ್ರವ್ಯಾಪಿ ಡೆಂಗ್ಯೂ ಪರಿಸ್ಥಿತಿ ಮತ್ತು ಸಚಿವಾಲಯದ ಸನ್ನದ್ಧತೆಯ ಬಗ್ಗೆ ಕೇಂದ್ರ ಆರೋಗ್ಯ ಸಚಿವರಿಗೆ ವಿವರಿಸಲಾಯಿತು. ಕೇಂದ್ರೀಕೃತ, ಸಮಯೋಚಿತ ಮತ್ತು ಸಹಯೋಗದ ಚಟುವಟಿಕೆಗಳ ಪರಿಣಾಮವಾಗಿ ಡೆಂಗ್ಯೂ ಪ್ರಕರಣದ ಸಾವಿನ ಪ್ರಮಾಣವು ಶೇ.3.3 (1996) ರಿಂದ 2024ರಲ್ಲಿಶೇ.0.1ಕ್ಕೆ ಇಳಿದಿದೆ ಎಂದು ತಿಳಿಸಲಾಯಿತು. ಮಾನ್ಸೂನ್‌ ಆಗಮನದಿಂದ ಎದುರಾಗುವ ಸವಾಲು ಮತ್ತು ಮಳೆಗಾಲದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳ ಬೆದರಿಕೆಯನ್ನು ಒತ್ತಿಹೇಳಿದ ಶ್ರೀ ಜೆ.ಪಿ. ನಡ್ಡಾ, ಡೆಂಗ್ಯೂ ವಿರುದ್ಧ ಸನ್ನದ್ಧರಾಗುವ ಮಹತ್ವವನ್ನು ಒತ್ತಿ ಹೇಳಿದರು. ಡೆಂಗ್ಯೂ ವಿರುದ್ಧ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣಾ ಕ್ರಮಗಳನ್ನು ಸಜ್ಜುಗೊಳಿಸಲು ಮತ್ತು ಬಲಪಡಿಸಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶ್ರೀ ಜೆ.ಪಿ.ನಡ್ಡಾ ಅವರು ಅಧಿಕಾರಿಗಳು ಮುಖ್ಯವಾಗಿ ಹೆಚ್ಚಿನ ಹೊರೆಯ ರಾಜ್ಯಗಳು ಮತ್ತು ಆಗಾಗ್ಗೆ ವರದಿಯಾಗುವ ಪ್ರದೇಶಗಳ ಮೇಲೆ ಗಮನ ಹರಿಸುವಂತೆ ಒತ್ತಾಯಿಸಿದರು. ಡೆಂಗ್ಯೂ ತಡೆಗಟ್ಟುವಿಕೆಯಲ್ಲಿ ಸ್ಪಷ್ಟ ಫಲಿತಾಂಶಗಳನ್ನು ತರಲು ರಾಜ್ಯಗಳೊಂದಿಗೆ ಪೂರ್ವಭಾವಿಯಾಗಿ ಕೆಲಸ ಮಾಡುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದರು. ಡೆಂಗ್ಯೂ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ತಮ್ಮ ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ ಸಂವೇದನಾಶೀಲತೆಗಾಗಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂಒಎಚ್‌ಯುಎ), ಗ್ರಾಮೀಣಾಭಿವೃದ್ಧಿ ಸಚಿವಾಲಯ (ಎಂಒಆರ್‌ಡಿ), ಶಿಕ್ಷಣ ಸಚಿವಾಲಯ ಮತ್ತು ಮುನ್ಸಿಪಲ್‌ ಕಾರ್ಪೊರೇಷನ್‌ಗಳು ಮತ್ತು ಸ್ಥಳೀಯ ಸ್ವಯಮಾಡಳಿತವನ್ನು ಒಳಗೊಂಡ ಅಂತರ ಸಚಿವಾಲಯದ ಒಮ್ಮತ ಸಭೆಯನ್ನು ಅವರು ವಿಶೇಷವಾಗಿ ಒತ್ತಿ ಹೇಳಿದರು.

ಡೆಂಗ್ಯೂ ಚಟುವಟಿಕೆಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಮಯೋಚಿತ ಕ್ರಮಗಳ ಬಗ್ಗೆ ಕೇಂದ್ರವು ರಾಜ್ಯಗಳೊಂದಿಗೆ ಪೂರ್ವಭಾವಿಯಾಗಿ ಸಂವಹನ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ. ಡೆಂಗ್ಯೂ ತಡೆಗಟ್ಟುವಿಕೆ ಮತ್ತು ನಿಯಂತ್ರಣದಲ್ಲಿ ಪಾಲುದಾರರು ಮತ್ತು ಸಚಿವಾಲಯಗಳು ತಮ್ಮ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಸಂವೇದನಾಶೀಲಗೊಳಿಸಲು ವಿವಿಧ ಅಂತರ-ವಲಯ ಸಭೆಗಳನ್ನು ನಡೆಸಲಾಗಿದೆ. ‘‘ಕೇಂದ್ರ ಸರ್ಕಾರವು ಕಾಲಾನಂತರದಲ್ಲಿತಾಂತ್ರಿಕ ಮತ್ತು ಬಜೆಟ್‌ ಬೆಂಬಲವನ್ನು ಒದಗಿಸುತ್ತಿದೆ, ಇದರ ಪರಿಣಾಮವಾಗಿ ಈ ಚಟುವಟಿಕೆಗಳು ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಬಲಗೊಳ್ಳಲಿವೆ,’’ ಎಂದು ಅವರು ಮಾಹಿತಿ ನೀಡಿದರು.

ಸಂವಹನ ಮತ್ತು ಜಾಗೃತಿ ವರ್ಧನೆ ಚಟುವಟಿಕೆಗಳ ಮಹತ್ವವನ್ನು ಬಿಂಬಿಸಿದ ಆರೋಗ್ಯ ಸಚಿವರು, ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುವ ಅಡೆಸ್‌ ಸೊಳ್ಳೆಯ ಬಗ್ಗೆ ಸಮುದಾಯಗಳನ್ನು ಸಂವೇದನಾಶೀಲಗೊಳಿಸುವ ಸಲುವಾಗಿ, ಶಾಲೆಗೆ ಹೋಗುವ ಮಕ್ಕಳು ಮತ್ತು ಇತರರಲ್ಲಿ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಬಟ್ಟೆಗಳನ್ನು ಧರಿಸಲು ಜಾಗೃತಿ ಅಭಿಯಾನವನ್ನು ಮತ್ತು ವಿವಿಧ ನೀರಿನ ಪಾತ್ರೆಗಳು, ಮಡಕೆಗಳು ಇತ್ಯಾದಿಗಳನ್ನು ನಿಂತ ನೀರಿನಿಂದ ಮುಕ್ತವಾಗಿಡಲು ಬೃಹತ್‌ ಪ್ರಮಾಣದಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಿದರು. ಟಿವಿ, ರೆಡಿಯೊ, ಸಾಮಾಜಿಕ ಮಾಧ್ಯಮ ಇತ್ಯಾದಿಗಳ ಮೂಲಕ ಜಾಗೃತಿಗಾಗಿ ರಾಷ್ಟ್ರವ್ಯಾಪಿ ಐಇಸಿ ಅಭಿಯಾನವನ್ನು ದೇಶಾದ್ಯಂತ ಕೈಗೊಳ್ಳಲಾಗುವುದು.

ಡೆಂಗ್ಯೂ ತಡೆಗಟ್ಟುವಿಕೆ ಮತ್ತು ಜಾಗೃತಿಗಾಗಿ 24/7 ಕೇಂದ್ರ ಸಹಾಯವಾಣಿ ಸಂಖ್ಯೆಯನ್ನು ರಚಿಸಲು ಮತ್ತು ರೋಗಲಕ್ಷಣಗಳು, ಚಿಕಿತ್ಸಾ ಶಿಷ್ಟಾಚಾರಗಳು ಮತ್ತು ತುರ್ತು ಪರಿಸ್ಥಿತಿಯಲ್ಲಿಸಹಾಯದ ಬಗ್ಗೆ ಪ್ರಶ್ನೆಗಳಿಗೆ ಬೆಂಬಲ ನೀಡುವಂತೆ ಕೇಂದ್ರ ಆರೋಗ್ಯ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದೇ ರೀತಿಯ ಸಹಾಯವಾಣಿ ಸಂಖ್ಯೆಗಳನ್ನು ಕಾರ್ಯಗತಗೊಳಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ.

ಶ್ರೀ. ಜೆ.ಪಿ. ನಡ್ಡಾ ಅವರು ಏಮ್ಸ್‌ ಮತ್ತು ಎಲ್ಲಾ ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಮೀಸಲಾದ ಡೆಂಗ್ಯೂ ವಾರ್ಡ್‌ಗಳನ್ನು ತರಬೇತಿ ಪಡೆದ ಮಾನವಶಕ್ತಿ, ಔಷಧಿಗಳು ಮತ್ತು ಇತರ ಲಾಜಿಸ್ಟಿಕ್ಸ್‌ನೊಂದಿಗೆ ಸಂಪೂರ್ಣವಾಗಿ ಸಜ್ಜುಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ. ತಮ್ಮ ಕ್ಲಿನಿಕಲ್‌ ಸೌಲಭ್ಯಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ರೆಫರಲ್‌ ವ್ಯವಸ್ಥೆಯನ್ನು ರಚಿಸಲು ಅವರಿಗೆ ಸೂಚನೆ ನೀಡಲಾಗಿದೆ.

ಆರೋಗ್ಯ ಸೇವೆಗಳ ಮಹಾನಿರ್ದೇಶಕ (ಡಿಜಿಹೆಚ್‌ಎಸ್‌) ಡಾ.ಅತುಲ್‌ ಗೋಯೆಲ್‌ ಅವರು ಡೆಂಗ್ಯೂ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯಗಳಲ್ಲಿನ ಪುರಸಭೆಗಳನ್ನು ಸಂವೇದನಾಶೀಲಗೊಳಿಸುವ ಅಗತ್ಯವನ್ನು ಬಿಂಬಿಸಿದರು. ಸೊಳ್ಳೆ ಸಂತಾನೋತ್ಪತ್ತಿಯಿಂದ ಮುಕ್ತವಾಗಲು ಕಟ್ಟಡಗಳಲ್ಲಿನ ಕೂಲರ್‌ಗಳು ಮತ್ತು ಟ್ಯಾಂಕ್‌ಗಳನ್ನು ಸುಧಾರಿಸುವ ಬಗ್ಗೆಯೂ ಅವರು ಸಲಹೆ ನೀಡಿದರು.

ದೇಶಾದ್ಯಂತ ಡೆಂಗ್ಯೂ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ:

* ಡೆಂಗ್ಯೂ ಮತ್ತು ಚಿಕೂನ್‌ ಗುನ್ಯಾ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಸನ್ನದ್ಧತೆಯ ಬಗ್ಗೆ ರಾಜ್ಯಗಳಿಗೆ ಸಂವೇದನಾಶೀಲತೆಗಾಗಿ ಭಾರತ ಸರ್ಕಾರ 2024ರಲ್ಲಿ14 ಸಲಹೆಗಳನ್ನು ನೀಡಿದೆ. ಕಾಲಕಾಲಕ್ಕೆ ರಾಜ್ಯಗಳಿಗೆ ತಾಂತ್ರಿಕ ಮಾರ್ಗದರ್ಶನ ನೀಡಲು ವಿವಿಧ ಉನ್ನತ ಮಟ್ಟದ ಸಭೆಗಳನ್ನು ನಡೆಸಲಾಗಿದೆ.

* ಉಚಿತ ರೋಗನಿರ್ಣಯ ಮತ್ತು ರೋಗ ಕಣ್ಗಾವಲುಗಾಗಿ, ಸೆಂಟಿನೆಲ್‌ ಕಣ್ಗಾವಲು ಆಸ್ಪತ್ರೆಗಳು 2007ರಲ್ಲಿ110 ರಿಂದ 2024ರಲ್ಲಿ848 ಕ್ಕೆ ಏರಿದೆ.

*  ಮಾನ್ಸೂನ್‌ ಪೂರ್ವ ತಡೆಗಟ್ಟುವ ಚಟುವಟಿಕೆಗಳನ್ನು ಪ್ರಾರಂಭಿಸಲು ಮೇ 16ರಂದು ದೇಶಾದ್ಯಂತ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಲಾಗುತ್ತದೆ.

* ಪ್ರಕರಣ ನಿರ್ವಹಣೆಯ ನವೀಕರಿಸಿದ ರಾಷ್ಟ್ರೀಯ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವರು 2023ರ ಆಗಸ್ಟ್‌ 10ರಂದು ಬಿಡುಗಡೆ ಮಾಡಿದರು.

* ವೈದ್ಯಕೀಯ ಕಾಲೇಜುಗಳು ಮತ್ತು ಜಿಲ್ಲಾ ಆಸ್ಪತ್ರೆಗಳ ಮಾಸ್ಟರ್‌ ತರಬೇತುದಾರರಿಗೆ ಕ್ಲಿನಿಕಲ್‌ ನಿರ್ವಹಣೆಯನ್ನು ಸುಧಾರಿಸಲು ಮತ್ತು ಡೆಂಗ್ಯೂನಿಂದ ಉಂಟಾಗುವ ಸಾವುಗಳನ್ನು ತಪ್ಪಿಸಲು ನವೀಕರಿಸಿದ ಮಾರ್ಗಸೂಚಿಗಳ ಬಗ್ಗೆ ನಾಲ್ಕು ರಾಷ್ಟ್ರೀಯ ಮಟ್ಟದ ತರಬೇತಿಗಳಲ್ಲಿ ತರಬೇತಿ ನೀಡಲಾಯಿತು.

* ರೋಗ ಪರಿಸ್ಥಿತಿಯ ಪರಿಶೀಲನೆ, ರಾಜ್ಯಗಳು ಕೈಗೊಂಡ ಕ್ರಮಗಳು ಮತ್ತು ರೋಗ ನಿಯಂತ್ರಣಕ್ಕೆ ತಾಂತ್ರಿಕ ಮಾರ್ಗದರ್ಶನ ನೀಡಲು ಕೇಂದ್ರ ತಂಡಗಳನ್ನು ನಿಯಮಿತವಾಗಿ ರಾಜ್ಯಗಳಿಗೆ ನಿಯೋಜಿಸಲಾಗುತ್ತದೆ. ಡೆಂಗ್ಯೂ ಮತ್ತು ಚಿಕೂನ್‌ ಗುನ್ಯಾ ಎರಡಕ್ಕೂ ಸಾಕಷ್ಟು ರೋಗನಿರ್ಣಯ ಕಿಟ್‌ಗಳನ್ನು ಸಹ ರಾಜ್ಯಗಳಿಗೆ ಒದಗಿಸಲಾಗಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ; ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಆರಾಧನಾ ಪಟ್ನಾಯಕ್‌; ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಎಲ್‌.ಎಸ್‌. ಚಾಂಗ್ಸನ್‌; ಡಿಜಿಎಚ್‌ಎಸ್‌ನ ಡಾ.ಅತುಲ್‌ ಗೋಯೆಲ್‌, ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ವಂದನಾ ಜೈನ್‌; ನವದೆಹಲಿಯ ಏಮ್ಸ್‌ನ ನಿರ್ದೇಶಕ ಪ್ರೊ. ಎಂ.ಶ್ರೀನಿವಾಸ್‌; ಲೇಡಿ ಹಾರ್ಡಿಂಜ್‌ ವೈದ್ಯಕೀಯ ಕಾಲೇಜಿನ ನಿರ್ದೇಶಕಿ ಸರಿತಾ ಬೇರಿ; ಸಫ್ದರ್‌ ಜಂಗ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷ ಕಿ ಡಾ. ವಂದನಾ ತಲ್ವಾರ್‌; ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷ ಕ ಅಜಯ್‌ ಶುಕ್ಲಾ; ಆರೋಗ್ಯ ಸಚಿವಾಲಯದ ಎನ್‌ಸಿವಿಬಿಡಿಸಿ ನಿರ್ದೇಶಕ ಡಾ.ತನು ಜೈನ್‌ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿಉಪಸ್ಥಿತರಿದ್ದರು.

 

*****



(Release ID: 2032575) Visitor Counter : 17