ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕುಟುಂಬ ಪಿಂಚಣಿ ಕುಂದುಕೊರತೆಗಳ ಗುಣಾತ್ಮಕ ಪರಿಹಾರಕ್ಕೆ ಸಂಬಂಧಿಸಿದಂತೆ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (ಡಿಒಪಿಪಿಡಬ್ಲ್ಯೂ) ಕೈಗೊಂಡ ವಿಶೇಷ ಅಭಿಯಾನದ ಉತ್ತಮ ಕಾರ್ಯವಿಧಾನಗಳು ಮತ್ತು ಯಶೋಗಾಥೆಗಳು

Posted On: 05 JUL 2024 5:27PM by PIB Bengaluru

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ, ತನ್ನ 100 ದಿನಗಳ ಕ್ರಿಯಾ ಯೋಜನೆಯ ಭಾಗವಾಗಿ, ಕುಟುಂಬ ಪಿಂಚಣಿ ಕುಂದುಕೊರತೆಗಳ ಸಮಯೋಚಿತ ಮತ್ತು ಗುಣಾತ್ಮಕ ಪರಿಹಾರಕ್ಕಾಗಿ 2024 ಜುಲೈ 1ರಿಂದ 31ರವರೆಗೆ ಒಂದು ತಿಂಗಳ ಅಭಿಯಾನವನ್ನು ಪ್ರಾರಂಭಿಸಿದೆ. ಗೌರವಾನ್ವಿತ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ಸಹಾಯಕ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು 2024ರ ಜುಲೈ 1 ರಂದು ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಅಭಿಯಾನವು ಈಗ ವೇಗವನ್ನು ಪಡೆದುಕೊಂಡಿದ್ದು, ಆನ್‌ಲೈನ್‌ ವೇದಿಕೆಯಾದ ʻಪಿಂಚಣಿ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆʼಯ (CPENGRMAS) ಮೂಲಕ ಯಶಸ್ವಿಯಾಗಿ ಪರಿಹರಿಸಲಾದ ಕೆಲವು ಪ್ರಮುಖ ಕುಟುಂಬ ಪಿಂಚಣಿ ಕುಂದುಕೊರತೆ ಪ್ರಕರಣಗಳು ಈ ಕೆಳಗಿನಂತಿವೆ:

  1. ಬೀನಾ ತಮಾಂಗ್ ಅವರ ಕುಂದುಕೊರತೆ: "14 ವರ್ಷಗಳ ನಂತರ ಅವಿವಾಹಿತ ಮಗಳಿಗೆ ಬಾಕಿ ಇರುವ ಕುಟುಂಬ ಪಿಂಚಣಿ ಮಂಜೂರು" -

ʻಸಶಸ್ತ್ರ ಸೀಮಾ ಬಲʼದ(ಎಸ್‌ಎಸ್‌ಬಿ) ದಿವಂಗತ ಶ್ರೀ ಪೆಮಾ ತಮಾಂಗ್ ಅವರ ಪುತ್ರಿ ಕುಮಾರಿ ಬೀನಾ ತಮಾಂಗ್ ಅವರು 2010ರಲ್ಲಿ ತಮ್ಮ ತಂದೆಯ ಮರಣದ ನಂತರ ಪದೇಪದೇ ಎಷ್ಟೇ ಪ್ರಯತ್ನಿಸಿದರೂ ಕುಟುಂಬ ಪಿಂಚಣಿ ಪಡೆಯಲು ಸಾಧ್ಯವಾಗಿರಲಿಲ್ಲ. ಅವರು 06.06.2023ರಂದು ʻಪಿಂಚಣಿ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆʼಯ ಪೋರ್ಟಲ್‌ನಲ್ಲಿ ಕುಂದುಕೊರತೆಗಳನ್ನು ನೋಂದಾಯಿಸಿದರು. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಸಂಬಂಧಪಟ್ಟ ಸಂಸ್ಥೆಯೊಂದಿಗೆ ಭೌತಿಕ ಸಭೆಗಳು ಸೇರಿದಂತೆ ಸಕ್ರಿಯವಾಗಿ ಈ ಪ್ರಕರಣದ ಬೆನ್ನತ್ತಿತು. ಈ ಪ್ರಕರಣವನ್ನು ವಿಶೇಷ ಅಭಿಯಾನಕ್ಕೆ ಆಯ್ಕೆ ಮಾಡಲಾಯಿತು ಮತ್ತು ಎಸ್‌ಎಸ್‌ಬಿ, ಪಿಎಒ ಮತ್ತು ಸಿಪಿಎಒ ಜೊತೆಗಿನ ಸಕ್ರಿಯ ಸಮನ್ವಯದಿಂದಾಗಿ, 20.92 ಲಕ್ಷ ರೂ.ಗಳ ಬಾಕಿ ಪಾವತಿಯೊಂದಿಗೆ ಈ ಪ್ರಕರಣವನ್ನು ಯಶಸ್ವಿಯಾಗಿ ಇತ್ಯರ್ಥಗೊಳಿಸಲಾಯಿತು.

  1. ಶ್ರೀಮತಿ ಫುಲ್ಮತಿ ದೇವಿ ಅವರ ಕುಂದುಕೊರತೆ: "12.5 ವರ್ಷಗಳ ನಂತರ ಸಂಗಾತಿಗೆ ಪರಿಷ್ಕೃತ ಕುಟುಂಬ ಪಿಂಚಣಿ ಮಂಜೂರು"-

ಶ್ರೀಮತಿ ಫುಲ್ಮತಿ ದೇವಿ 2011ರಲ್ಲಿ ಪತಿಯನ್ನು ಕಳೆದುಕೊಂಡರು ಮತ್ತು ಅವರಿಗೆ ಕುಟುಂಬ ಪಿಂಚಣಿ ಮಂಜೂರು ಮಾಡಲಾಯಿತು. ಆದಾಗ್ಯೂ, 6 ಮತ್ತು 7ನೇ ʻಸಿಪಿಸಿʼ ಪ್ರಕಾರ ಕುಟುಂಬ ಪಿಂಚಣಿ ಪಾವತಿಯಾಗಿರಲಿಲ್ಲ. ಇದಕ್ಕಾಗಿ, ʻಪಿಂಚಣಿ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆʼಯ ಪೋರ್ಟಲ್‌ನಲ್ಲಿ ಅವರು 20.05.2024ರಂದು ತಮ್ಮ ಕುಂದುಕೊರತೆಯನ್ನು ನೋಂದಾಯಿಸಿದರು. ಪ್ರಕರಣವನ್ನು ಬ್ಯಾಂಕಿಗೆ ರವಾನಿಸಲಾಯಿತು ಮತ್ತು ವಿಶೇಷ ಅಭಿಯಾನದಲ್ಲಿ ಸೇರಿಸಲಾಯಿತು. ಆ ಬಳಿಕ ನಂತರ, ಪಿಂಚಣಿ ಪರಿಷ್ಕರಣೆಯೊಂದಿಗೆ ಅವರಿಗೆ 16.30 ಲಕ್ಷ ರೂ.ಗಳ ಬಾಕಿಯನ್ನು ಪಾವತಿಸಲಾಗಿದೆ.

  1. ಶ್ರೀಮತಿ ಸುಶೀಲಾ ದೇವಿ ಅವರ ಕುಂದುಕೊರತೆ: "07 ವರ್ಷಗಳ ನಂತರ ಪರಿಷ್ಕೃತ ಪಿಂಚಣಿ ಮಂಜೂರು"-

ರೈಲ್ವೆ ಸಚಿವಾಲಯದಲ್ಲಿ ಪಿಂಚಣಿದಾರರಾಗಿದ್ದ ಶ್ರೀಮತಿ ಸುಶೀಲಾ ದೇವಿ ಅವರು 2017ರಲ್ಲಿ ತಮ್ಮ ಪತಿಯನ್ನು ಕಳೆದುಕೊಂಡರು. ನಂತರ, ಅವರ ಕುಟುಂಬ ಪಿಂಚಣಿಯನ್ನು ಪ್ರಾರಂಭಿಸಲಾಯಿತು, ಇದನ್ನು 7ನೇ ʻಸಿಪಿಸಿʼ ಪ್ರಕಾರ ಪರಿಷ್ಕರಿಸಲಾಗಿಲ್ಲ. ಈ ಕುರಿತ ಕುಂದುಕೊರತೆಯನ್ನು 01.06.2024 ರಂದು ಕುಂದುಕೊರತೆ ಪರಿಹಾರ ವ್ಯವಸ್ಥೆಯ ಪೋರ್ಟಲ್‌ನಲ್ಲಿ ನೋಂದಾಯಿಸಲಾಯಿತು. ಜೊತೆಗೆ ಈ ಪ್ರಕರಣವನ್ನು ವಿಶೇಷ ಅಭಿಯಾನಕ್ಕೆ ಸೇರಿಸಲಾಯಿತು. ಪರಿಣಾಮವಾಗಿ, 8.24 ಲಕ್ಷ ರೂ.ಗಳ ಬಾಕಿ ಪಾವತಿಯೊಂದಿಗೆ ಕುಂದುಕೊರತೆಯನ್ನು ಯಶಸ್ವಿಯಾಗಿ ಪರಿಹರಿಸಲಾಗಿದೆ.

  1. ಶ್ರೀಮತಿ ಸಂಜೀರಾ ದೇವಿ ಅವರ ಕುಂದುಕೊರತೆ: "5 ವರ್ಷಗಳ ನಂತರ ಹಿಂಬಾಕಿಯೊಂದಿಗೆ ಪರಿಷ್ಕೃತ ಪಿಂಚಣಿ ಮಂಜೂರು"-

ದಿವಂಗತ ಸೈನಿಕ ಶ್ರೀ ರಾಮ್ ಕೃಪಾಲ್ ಸಿಂಗ್ ಅವರ ಪತ್ನಿ ಶ್ರೀಮತಿ ಸಂಜೀರಾ ದೇವಿ ಅವರು ಹಿರಿಯ ಪಿಂಚಣಿದಾರರಾಗಿದ್ದಾರೆ. ʻಇ-ಪಿಪಿಒʼನಲ್ಲಿ ಮಂಜೂರಾದ ಕುಟುಂಬ ಪಿಂಚಣಿ ಮತ್ತು ಹೆಚ್ಚುವರಿ ಪಿಂಚಣಿ ಅವರಿಗೆ ಸಿಗುತ್ತಿರಲಿಲ್ಲ. ಆದ್ದರಿಂದ, ಅವರು 01.03.2024ರಂದು , ʻಪಿಂಚಣಿ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆʼಯ ಪೋರ್ಟಲ್‌ನಲ್ಲಿ ಕುಂದುಕೊರತೆಯನ್ನು ನೋಂದಾಯಿಸಿದರು. ಇದನ್ನು ಸಂಬಂಧಪಟ್ಟ ಸಚಿವಾಲಯದ ಗಮನಕ್ಕೆ ತಂದು ಸಕ್ರಿಯವಾಗಿ ಅನುಸರಿಸಲಾಯಿತು. ವಿಶೇಷ ಅಭಿಯಾನದ ಭಾಗವಾಗಿ ಈ ಪ್ರಕರಣವನ್ನು ಸೇರಿಸಲಾಯಿತು. ಹೆಚ್ಚುವರಿ ಪಿಂಚಣಿ ಸೇರಿದಂತೆ 6.02 ಲಕ್ಷ ರೂ.ಗಳ ಬಾಕಿ ಪಾವತಿಯೊಂದಿಗೆ ಈ ಕುಂದುಕೊರತೆಯನ್ನು ಯಶಸ್ವಿಯಾಗಿ ಪರಿಹರಿಸಲಾಗಿದೆ.

  1. ಶ್ರೀಮತಿ ಸಂತೋಷ್ ದೇವಿ ಅವರ ಕುಂದುಕೊರತೆ: "1.5 ವರ್ಷಗಳ ನಂತರ ಒಆರ್‌ಒಪಿ ಅಡಿಯಲ್ಲಿ ಬಾಕಿ ಇರುವ ಪರಿಷ್ಕೃತ ಪಿಂಚಣಿ ಮಂಜೂರು"-

ದಿವಂಗತ ಸೈನಿಕ ಶ್ರೀ ಕೇಸರ್ ಸಿಂಗ್ ಅವರ ಶ್ರೀಮತಿ ಸಂತೋಷ್ ದೇವಿ ಅವರು ದಿನಾಂಕ 20.01.2023ರ ʻಪಿಸಿಡಿಎʼ ಸುತ್ತೋಲೆ ಸಂಖ್ಯೆ 666ರ ಪ್ರಕಾರ ಪರಿಷ್ಕೃತ ಕುಟುಂಬ ಪಿಂಚಣಿಯನ್ನು ಪಡೆಯುತ್ತಿಲ್ಲ. ಇದಕ್ಕಾಗಿ, ಅವರು 18.04.2024ರಂದು ʻಪಿಂಚಣಿ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆʼಯ ಪೋರ್ಟಲ್‌ನಲ್ಲಿ ಕುಂದುಕೊರತೆಯನ್ನು ನೋಂದಾಯಿಸಿದರು. ಅವರ ಪ್ರಕರಣವನ್ನು ವಿಶೇಷ ಅಭಿಯಾನಕ್ಕೆ ಸೇರಿಸಲು ಆಯ್ಕೆ ಮಾಡಲಾಯಿತು ಮತ್ತು ಅದನ್ನು ಮೇಲ್ವಿಚಾರಣೆ ಮಾಡಲಾಯಿತು. ಪರಿಣಾಮವಾಗಿ, 5.1 ಲಕ್ಷ ರೂ.ಗಳ ಬಾಕಿ ಪಾವತಿಯೊಂದಿಗೆ ಈ ಪ್ರಕರಣ ಪರಿಹಾರಗೊಂಡಿದೆ.

 

*****



(Release ID: 2031164) Visitor Counter : 6


Read this release in: English , Urdu , Hindi , Tamil