ಜಲ ಶಕ್ತಿ ಸಚಿವಾಲಯ
azadi ka amrit mahotsav

ರಾಷ್ಟ್ರೀಯ “ಸ್ಟಾಪ್” ಅತಿಸಾರ ಅಭಿಯಾನದೊಂದಿಗೆ ಕೈಜೋಡಿಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 


2024, ಜುಲೈ 1ರಿಂದ “ಸ್ವಚ್ಛಗಾವ್, ಶುದ್ಧ್ ಜಲ್ – ಬೆಹತರ್ ಕಾಲ್” ಅಭಿಯಾನಕ್ಕೆ ಚಾಲನೆ: ಹಳ್ಳಿಗಳು ಮತ್ತು ಪಂಚಾಯತ್ ಹಂತಗಳಲ್ಲಿ ಸುರಕ್ಷಿತ ನೀರು ಮತ್ತು ನೈರ್ಮಲ್ಯ ಅಭ್ಯಾಸಗಳನ್ನು ಉತ್ತೇಜಿಸಲು ಆದ್ಯತೆ 

ಗ್ರಾಮೀಣ ನೈರ್ಮಲ್ಯ ಅಭಿಯಾನ ಮತ್ತು ರಾಷ್ಟ್ರೀಯ “ಸ್ಟಾಪ್” ಅತಿಸಾರ ಅಭಿಯಾನದ ನಡುವಿನ ಸಂಯೋಜನೆಯಿಂದ ಸಾರ್ವಜನಿಕ ಆರೋಗ್ಯಕ್ಕಾಗಿ ನಮ್ಮ ಅಚಲ ಸಮರ್ಪಣೆಯನ್ನು ಒತ್ತಿ ಹೇಳುತ್ತದೆ – ಶ್ರೀ ಸಿ.ಆರ್. ಪಾಟೀಲ್ 

Posted On: 05 JUL 2024 12:50PM by PIB Bengaluru

ರಾಷ್ಟ್ರೀಯ “ಸ್ಟಾಪ್” ಅತಿಸಾರ ಅಭಿಯಾನದೊಂದಿಗೆ ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ [ಡಿಡಿಡಬ್ಲ್ಯುಎಸ್] ಕೈಜೋಡಿಸಿದ್ದು,  ಕೇಂದ್ರ ಆರೋಗ್ಯ ಸಚಿವ ಶ್ರೀ ಜೆ.ಪಿ.ನಡ್ಡಾ ಅವರು ಕೇಂದ್ರ ಸಂಪುಟದ ರಾಜ್ಯ ಸಚಿವರು, ಹಿರಿಯ ಅಧಿಕಾರಿಗಳು, ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಅಭಿವೃದ್ದಿ ಪಾಲುದಾರ ಪ್ರತಿನಿಧಿಗಳೊಂದಿಗೆ 2024, ಜೂನ್ 24 ರಂದು ಅಭಿಯಾನಕ್ಕೆ ಚಾಲನೆ ನೀಡಿದರು.   

ಕೇಂದ್ರ ಜಲ ಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್ ಅವರು ಮಾತನಾಡಿ, “ಗ್ರಾಮೀಣ ನೈರ್ಮಲ್ಯ ಅಭಿಯಾನ ಮತ್ತು ರಾಷ್ಟ್ರೀಯ “ಸ್ಟಾಪ್” ಅತಿಸಾರ ಅಭಿಯಾನದ ನಡುವಿನ ಸಂಯೋಜನೆಯಿಂದ ಸಾರ್ವಜನಿಕ ಆರೋಗ್ಯಕ್ಕಾಗಿ ನಮ್ಮ ಅಚಲ ಸಮರ್ಪಣೆಯನ್ನು ಇದು ಬಲಪಡಿಸುತ್ತದೆ. ಈ ತಳಮಟ್ಟದ ಪ್ರಯತ್ನಗಳಿಂದಾಗಿ ನಾವು ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸುವುದಲ್ಲದೇ ಗ್ರಾಮೀಣ ಭಾರತದಲ್ಲಿ ಸ್ವಚ್ಛತೆ, ಆರೋಗ್ಯ ಸಂಸ್ಕೃತಿಯನ್ನು ತ್ವರಿತವಾಗಿ ಬೆಳೆಸಲು ಸಹಕಾರಿಯಾಗಿದೆ” ಎಂದು ಒತ್ತಿ ಹೇಳಿದರು. 

ಕಾರ್ಯದರ್ಶಿ [ಡಿಡಿಡಬ್ಲ್ಯುಎಸ್] ಶ್ರೀಮತಿ ವಾಣಿ ಮಹಾಜನ್ ಅವರು ಮಾತನಾಡಿ, “ಇಂತಹ ಉಪಕ್ರಮಗಳ ಮೂಲಕ ನಮ್ಮ ಮಕ್ಕಳು ಮತ್ತು ಸಮುದಾಯದ ಆರೋಗ್ಯ ರಕ್ಷಣೆಗೆ ಸಂಕಿರ್ಣದಾಯಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಮ್ಮ ಪ್ರಯತ್ನಗಳನ್ನು ರಾಷ್ಟ್ರೀಯ “ಸ್ಟಾಪ್” ಅತಿಸಾರ ಅಭಿಯಾನದೊಂದಿಗೆ ಅಂತರ್ಗತಗೊಳಿಸಲಾಗುತ್ತಿದೆ. ಅತಿಸಾರದದಂತಹ ತಡೆಗಟ್ಟಬಹುದಾದ ರೋಗಗಳಿಂದ ಮರಣ ಹೊಂದಬಾರದು ಎಂಬುದು ನಮ್ಮ ಧ್ಯೇಯವಾಗಿದೆ. ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ ನಮ್ಮ ಗುರಿ ಸಾಧನೆಗೆ ಅತ್ಯಂತ ಅಗತ್ಯವಾಗಿದೆ” ಎಂದು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. 

ಅತಿಸಾರದಿಂದ ಮಕ್ಕಳ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು ರಾಷ್ಟ್ರೀಯ “ಸ್ಟಾಪ್” ಅತಿಸಾರ ಅಭಿಯಾನದ ಗುರಿಯಾಗಿದೆ. ಎರಡು ತಿಂಗಳ ಅವಧಿಯಲ್ಲಿ ಬಹುಹಂತದ ವಿಧಾನವನ್ನು ಅನುಸರಿಸಲಾಗುತ್ತಿದೆ” ಎಂದರು. 

ಪ್ರಮುಖ ಕೇಂದ್ರೀಕೃತ ವಲಯಗಳು ಇವು:

• ಆರೋಗ್ಯ ಮೂಲ ಸೌಕರ್ಯ ಬಲವರ್ಧನೆ: ಆರೋಗ್ಯ ಸೌಲಭ್ಯಗಳ ನಿರ್ಹವಣೆ ಮತ್ತು ಅಗತ್ಯವಿರುವ ವೈದ್ಯಕೀಯ ಪೂರೈಕೆಯನ್ನು [ಒ.ಆರ್.ಎಸ್, ಜಿಂಕ್], ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಖಚಿತಪಡಿಸಿಕೊಳ್ಳುವುದು. 
• ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯವನ್ನು ಸುಧಾರಿಸುವುದು: ಕುಡಿಯುವ ನೀರು ಮತ್ತು ನೈರ್ಮಲ್ಯ ವಲಯದಲ್ಲಿ ಗುಣಮಟ್ಟ ನಿಯಂತ್ರಣ ಕ್ರಮಗಳು ಹಾಗೂ ಸುಸ್ಥಿರ ಅಭ್ಯಾಸಗಳನ್ನು ಅನುಷ್ಠಾನಗೊಳಿಸುವುದು. 
•  ಪೌಷ್ಟಿಕ ಕಾರ್ಯಕ್ರಮಗಳನ್ನು ಹೆಚ್ಚಿಸುವುದು: ಅತಿಸಾರ ನಿಯಂತ್ರಣಕ್ಕಾಗಿ ಅಪೌಷ್ಟಿಕತೆಯನ್ನು ನಿವಾರಿಸುವುದು. 
• ನೈರ್ಮಲ್ಯ ಶಿಕ್ಷಣಕ್ಕೆ ಉತ್ತೇಜನ: ಶಾಲೆಗಳಿಗೆ ಅಗತ್ಯವಿರುವ ಸೌಕರ್ಯ ಒದಗಿಸುವ ಮತ್ತು ಮಕ್ಕಳಲ್ಲಿ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸುವುದು.

2024 ರ, ಆಗಸ್ಟ್ 31 ರಿಂದ ಜುಲೈ 1 ರವರೆಗೆ ಗ್ರಾಮೀಣ ಪ್ರದೇಶದಲ್ಲಿ  [ಡಿಡಿಡಬ್ಲ್ಯುಎಸ್] “ಸ್ವಚ್ಛಗಾವ್, ಶುದ್ಧ್ ಜಲ್ – ಬೆಹತರ್ ಕಾಲ್” ಜಾಗೃತಿ ಅಭಿಯಾನ ಜಾರಿಗೊಳಿಸಲಾಗಿದೆ. ಜಾಗೃತಿ ಮೂಡಿಸುವ ರೀತಿಯಲ್ಲಿ ಈ ಅಭಿಯಾನ ವಿನ್ಯಾಸಗೊಳಿಸಲಾಗಿದೆ ಮತ್ತು ಸುರಕ್ಷಿತ ನೀರು ಮತ್ತು ನೈರ್ಮಲ್ಯ ಅಭ್ಯಾಸಗಳನ್ನು ಹಳ್ಳಿಗಳು ಮತ್ತು ಗ್ರಾಮಮಟ್ಟದಲ್ಲಿ ಜಾರಿಗೊಳಿಲಾಗಿದೆ. 

ಈ ಪ್ರಯತ್ನಗಳಿಂದ “ರಾಷ್ಟ್ರೀಯ “ಸ್ಟಾಪ್” ಅತಿಸಾರ ಅಭಿಯಾನ ತನ್ನ ಗುರಿ ಸಾಧನೆಗೆ ಸಹಕಾರಿಯಾಗಲಿದ್ದು, ಇದರಿಂದ ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸಬಹುದು. ಗ್ರಾಮೀಣ ಭಾಗದಲ್ಲಿ ಸಂಪೂರ್ಣ ಸ್ವಚ್ಛತೆ ಮತ್ತು ಸ್ವಚ್ಛ ಭಾರತ್ ಅಭಿಯಾನದಿಂದ ಬಯಲು ಮಲವಿಸರ್ಜನೆ ಮುಕ್ತ ಪ್ಲಸ್ ಮಾದರಿ ಗುರಿ ಸಾಧನೆಗೆ, ಒಟ್ಟಾರೆ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಇದು ಸಹಕಾರಿಯಾಗಲಿದೆ. 

ಪ್ರಮುಖ ಅಭಿಯಾನದ ಚಟುವಟಿಕೆಗಳು: 

• ಸಮುದಾಯ ತೊಡಗಿಕೊಳ್ಳುವುದು: ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ, ನೀರಿನ ಸಮಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಮಾಲೀಕತ್ವವನ್ನು ಉತ್ತೇಜಿಸಲಿದೆ. 

• ನೀರು ಗುಣಮಟ್ಟ ಪರೀಕ್ಷೆ: ನಿಯಮಿತವಾಗಿ ಕ್ಷೇತ್ರ ಮಟ್ಟದಲ್ಲಿ ನೀರಿನ ಪರೀಕ್ಷೆಗಾಗಿ ಕಿಟ್ ಗಳನ್ನು ಒದಗಿಸುವುದು, ಶಾಲೆಗಳು, ಆರೋಗ್ಯ ಸೌಕರ್ಯಗಳು ಮತ್ತು ಸಮುದಾಯ ಕೇಂದ್ರಗಳಲ್ಲಿ ಎಡಬ್ಲ್ಯುಸಿ ಪ್ರದರ್ಶಿಸುವುದು.

• ನೈರ್ಮಲ್ಯ ಕಾರ್ಯಾಗಾರಗಳು: ಜಿಲ್ಲಾ ನೀರು ಮತ್ತು ನೈರ್ಮಲ್ಯ ಅಭಿಯಾನಗಳು, ಸ್ಥಳೀಯ ಸಮುದಾಯಗಳು, ಸರ್ಕಾರಿ ಅಧಿಕಾರಿಗಳು ಮತ್ತು ಇತರೆ ನೀರು ನಿರ್ವಹಣೆ ಪಾಲುದಾರರನ್ನು ತೊಡಗಿಸಿಕೊಂಡು ನೈರ್ಮಲ್ಯ ಮತ್ತು ಶುಚಿತ್ವವನ್ನು ಉತ್ತೇಜಿಸುವುದು. 

ಸೋರಿಕೆ ಪತ್ತೆ ಮತ್ತು ದುರಸ್ತಿ ಅಭಿಯಾನ: ನೀರು ಮಲಿನಗೊಳ್ಳುವುದನ್ನು ತಡೆಗಟ್ಟಲು ತಪಾಸಣೆ ಮತ್ತು ದುರಸ್ತಿ ಕಾರ್ಯಕ್ರಮಗಳ ಮೂಲಕ ನೀರು ಸಂರಕ್ಷಣೆ ಮಾಡುವುದು. 

• ಸಾರ್ವಜನಿಕ ಜಾಗೃತಿ ಅಭಿಯಾನಗಳು: ನೀರಿನ ನೈರ್ಮಲ್ಯದ ಪ್ರಾಮುಖ್ಯತೆ, ಐಎಚ್ಎಚ್ಎಲ್/ಸಿಎಎಸ್ ಸಿಯ ಸ್ವಚ್ಛತೆ ಮತ್ತು ಬಳಕೆಗಾಗಿ ಸುರಕ್ಷಿತ ನೈರ್ಮಲ್ಯ ಅಭ್ಯಾಸ ಮತ್ತು ನೀರಿನಿಂದ ಹರಡುವ ರೋಗಗಳ ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸುವುದು. 

• ದುರ್ಬಲ ವರ್ಗಗಳ ವಿಶೇಷ ಕೇಂದ್ರೀಕರಣ: ಅತಿಸಾರ ಮತ್ತು ಇತರ ನೀರಿನಿಂದ ಹರಡುವ ರೋಗಗಳ ಸಂಭವವನ್ನು ಕಡಿಮೆ ಮಾಡಲು ಐದು ವರ್ಷದೊಳಗಿನ ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳುವುದು. 

• ಶೈಕ್ಷಣಿಕ ಕ್ರಮಗಳು: ಯುವ ತಾಯಂದಿರು ಮತ್ತು ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಮುಖ ಮತ್ತು ಕರಶುದ್ಧೀಕರಣದ ಸುಲಭ ತಂತ್ರಗಳ ಮೂಲಕ ಅಭ್ಯಾಸವನ್ನು ಕಲಿಸಲು, ಸೂಕ್ತ ನೈರ್ಮಲ್ಯ ಮತ್ತು ಸ್ವಚ್ಛತೆ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಕಾರ್ಯಾಗಾರಗಳು ಮತ್ತು ತರಬೇತಿ ಶಿಬಿರಗಳನ್ನು ನಡೆಸುವುದು. 

 

ಹಂತ ಹಂತಗಳಲ್ಲಿ ಅನುಷ್ಠಾನ:  

ವಾರಗಳು 1 ಮತ್ತು 2: ಅಭಿಯಾನ ಆರಂಭಿಸುವುದು, ಸಭೆಗಳನ್ನು ಆಯೋಜಿಸುವುದು, ನೀರಿನ ಪರೀಕ್ಷೆ ಮತ್ತು ನೈರ್ಮಲ್ಯ ಕಾರ್ಯಾಗಾರಗಳನ್ನು ಆಯೋಜಿಸುವುದು. 

•  ವಾರಗಳು 3 ಮತ್ತು 4: ಸೋರಿಕೆ ಪತ್ತೆ ಮತ್ತು ದುರಸ್ತಿ ಅಭಿಯಾನಗಳು,  ಸಾರ್ವಜನಿಕ ಜಾಗೃತಿ ಅಭಿಯಾನಗಳು, ಗ್ರಾಮೀಣ ಭಾಗದಲ್ಲಿ ಹಳ್ಳಿಗಳ ಸ್ವಚ್ಛತೆಗಾಗಿ ಸ್ವಚ್ಛತಾ ಅಭಿಯಾನ ಮತ್ತು ಸಂಸ್ಥೆಗಳಲ್ಲಿ ಸಾಬೂನಿನಿಂದ ಕೈತೊಳೆಯುವ ಸೌಲಭ್ಯವನ್ನು ಖಚಿತಪಡಿಸಿಕೊಳ್ಳುವುದು. 

• ವಾರಗಳು 5 ಮತ್ತು 6: ಉಳಿದಿರುವ ಕ್ಲೋರಿನ್ ಪರೀಕ್ಷೆ, ಸಾರ್ವಜನಿಕ ಜಾಗೃತಿ ಅಭಿಯಾನಗಳು ಮತ್ತು ಶಾಲೆಗಳು, ಅಂಗನವಾಡಿ ಕೇಂದ್ರಗಳಲ್ಲಿ ನೀರಿನ ಗುಣಮಟ್ಟದ ತಪಾಸಣೆ ಮತ್ತು ಗ್ರೇ ವಾಟರ್ ನಿರ್ವಹಣೆಯ ವಿಶೇಷ ಅಭಿಯಾನಗಳು ಮತ್ತು ಸಂಸ್ಥೆಗಳಲ್ಲಿ ನಿಷ್ಕ್ರಿಯ ಶೌಚಾಲಯಗಳನ್ನು ದುರಸ್ತಿಗೊಳಿಸಿ ಸ್ವಚ್ಛಗೊಳಿಸುವುದು. 

• ವಾರಗಳು 7 ಮತ್ತು 8: ಸ್ಥಳೀಯ ಸಮುದಾಯಗಳನ್ನು ಒಳಗೊಳ್ಳುವಂತೆ ಮಾಡುವುದು, ಮಳೆ ನೀರು ಸಂಗ್ರಹಣೆ ಮತ್ತು ಮನೆಗಳಲ್ಲಿ ವೈಯಕ್ತಿಕ ಶೌಚಾಲಯ, ಸಮುದಾಯ ನೈರ್ಮಲ್ಯ ಸಂಕಿರ್ಣ [ಸಿಎಸ್ ಸಿ]ಗಳನ್ನು ನಿರ್ಮಿಸುವುದು ಮತ್ತು ಮನೆ ಮನೆಗಳಿಗೆ ಕರಪತ್ರಗಳ ಮೂಲಕ ಆರೋಗ್ಯಕ್ಕಾಗಿ ಸುರಕ್ಷಿತ ಕುಡಿಯುವ ನೀರು ಪೂರೈಕೆ ಕುರಿತು ಜಾಗೃತಿ ಮೂಡಿಸುವುದು. 
 

*****


(Release ID: 2031136) Visitor Counter : 67