ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣೆ ವಿರುದ್ಧದ ಅಂತರಾಷ್ಟ್ರೀಯ ದಿನದ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ನವದೆಹಲಿಯ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜನೆ

Posted On: 26 JUN 2024 12:19PM by PIB Bengaluru

ಪ್ರತಿ ವರ್ಷ ಜೂನ್ 26 ರಂದು “ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣೆ ವಿರುದ್ಧದ ಅಂತರಾಷ್ಟ್ರೀಯ ದಿನ” ಆಚರಿಸಲಾಗುತ್ತಿದೆ. ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣೆ ವಿರುದ್ಧದ ಅಂತರಾಷ್ಟ್ರೀಯ ದಿನದ ಸ್ಮರಣಾರ್ಥ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನವದೆಹಲಿಯ ನಂ 15, ಜನಪಥ್ ನಲ್ಲಿರುವ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ [2024, ಜೂನ್ 26 ರಂದು] ಕಾರ್ಯಕ್ರಮ ಆಯೋಜಿಸಿತ್ತು. ಡಾ. ವಿರೇಂದ್ರ ಕುಮಾರ್ ಎಚ್.ಎಂ.ಎಸ್.ಜೆ.ಇ, ಎಂ.ಎಸ್.ಎಸ್ [ಎಸ್.ಜೆ.ಇ] ಹಾಗೂ ಇಲಾಖೆಯ ಇತರೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಚಿವಾಲಯ 20.06.2024 ರಿಂದ 26.06.2024 ರ ವರೆಗೆ “ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣೆ ವಿರುದ್ಧದ ಅಂತರಾಷ್ಟ್ರೀಯ ದಿನ”ದ ಹಿನ್ನೆಲೆಯಲ್ಲಿ ವಾರಪೂರ್ತಿ ಆನ್ ಲೈನ್ ಚಟುವಟಿಕೆಗಳನ್ನು ಸಂಘಟಿಸಿತ್ತು. ಪ್ರಬಂಧ ಸ್ಪರ್ಧೆ, ಯೋಗಕ್ಕೆ ಉತ್ತೇಜನ, ಧ್ಯಾನ ಮತ್ತು ಮಾದಕ ಮುಕ್ತ ಜೀವನ ಶೈಲಿಗಾಗಿ ಸಾವಧಾನತೆ, ಎನ್.ಎಂ.ಬಿ.ಎ ಅಡಿ ಉತ್ತಮ ಅಭ್ಯಾಸಗಳನ್ನು ಪ್ರದರ್ಶಿಸುವ, ಮಾದಕ ವಸ್ತುಗಳ ಮುಕ್ತ ಅಭಿಯಾನಕ್ಕೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ, ಕೊನೆಯಿಂದ ಮುನ್ನಡೆಯುವ, ಮಾದಕ ಮುಕ್ತ ಭಾರತ ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ, ಇತ್ಯಾದಿ ವಿಷಯಗಳ ಕುರಿತ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಅಭಿಯಾನದ ಮೂಲಕ ದೇಶದಲ್ಲಿ ಜನಾಂದೋಲನ ರೂಪಿಸಲು ಮುಂದಾಗಿದೆ.

ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಹಾಗೂ ಜಿಲ್ಲಾಧಿಕಾರಿಗಳು/ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳ ವ್ಯಾಪ್ತಿಯಲ್ಲಿ ಜಾಥಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಎನ್.ಎಂ.ಬಿ.ಎ ಅಡಿ ಪ್ರತಿಜ್ಞೆ ಸ್ವೀಕರಿಸುವ, ಸಾಮಾಜಿಕ ಜಾಲತಾಣಗಳಲ್ಲಿ ಮಾದಕ ದ್ರವ್ಯ ವಿರುದ್ಧ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲೂ ಸಹ ಆಯೋಜಿಸಲಾಗಿದೆ.

“ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣೆ ವಿರುದ್ಧದ ಅಂತರಾಷ್ಟ್ರೀಯ ದಿನ”ದ ಹಿನ್ನೆಲೆಯಲ್ಲಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿರುವ ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ[ಎನ್.ಐ.ಎಸ್.ಡಿ]ಯಡಿ 2024 ರ ಜೂನ್ 24 ರಿಂದ 28 ರ ವರೆಗೆ ರಸಪ್ರಶ್ನೆ, ಜಾಗೃತಿ ಕಾರ್ಯಕ್ರಮಗಳು, ತಜ್ಞರೊಂದಿಗೆ ಚರ್ಚೆ, ವ್ಯಕ್ತಿಗಳು ಮತ್ತು ಬಾಧಿಕ ಕುಟುಂಬಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳ್ಳುವ ಹಲವಾರು ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

ಸಂದರ್ಭವನ್ನು ಸೂಕ್ತವಾಗಿ ಬಳಸಿಕೊಳ್ಳಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಈ ಸಚಿವಾಲಯವು ಎನ್.ಎ.ಪಿ.ಡಿ.ಡಿ.ಆರ್ ಅಡಿ ಬೆಂಬಲಿತವಾಗಿರುವ ಎಲ್ಲಾ ಎನ್.ಜಿ.ಒಗಳು/ವಿ.ಓಗಳು, ಪ್ರತಿಜ್ಞೆ ಕೈಗೊಳ್ಳುವ, ಚಿತ್ರಕಲೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಗಿಡ ನೆಡುವ, ನಾಟಕ ಸ್ಪರ್ಧೆ, ಒಳಾಂಗಣ ಆಟಗಳ ಸ್ಪರ್ಧೆ, ಮ್ಯಾರಥಾನ್/ ವಾಕಥಾನ್/ ಸೈಕಲ್/ಬೈಕಥಾನ್ ಅನ್ನು ಸಹ ನಡೆಸಿದೆ/ಆಯೋಜಿಸಿವೆ. 2024 ರ ಜೂನ್ 20 ರಿಂದ 26 ರವರೆಗೆ ಎನ್.ಎಂ.ಬಿ.ಎ ಅಡಿಯಲ್ಲಿ ಮಾದಕ ವ್ಯಸನದ ವಿರುದ್ಧ ವ್ಯಾಪಕ ಪ್ರಚಾರದೊಂದಿಗೆ ಜಾಥ ಸಹ ಆಯೋಜಿಸಲಾಗಿತ್ತು.

ನಶಾಮುಕ್ತ ಭಾರತ್ ಅಭಿಯಾನ್ [ಎನ್.ಎಂ.ಬಿ.ಎ]

ಸಚಿವಾಲಯ ನಶಾಮುಕ್ತ ಭಾರತ್ ಅಭಿಯಾನ್ [ಎನ್.ಎಂ.ಬಿ.ಎ] ಅಡಿ ಮಹತ್ವಾಕಾಂಕ್ಷೆಯ ಉಪ್ರಕಮಗಳನ್ನು ಕೈಗೊಂಡಿದೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳು, ಶಾಲೆಗಳು ಮತ್ತು ಸಮುದಾಯವನ್ನು ತಲುಪುವ ಮತ್ತು ಸಮುದಾಯವನ್ನು ಒಳಗೊಳ್ಳುವಿಕೆ ಮತ್ತು ಮಾಲೀಕತ್ವವನ್ನು ಗಳಿಸುವ ಮೂಲಕ ಯುವಜನರಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಸ್ತುತ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನ ನಡೆಯತ್ತಿದೆ.

ಎನ್.ಎಂ.ಬಿ.ಎ ಸಾಧನೆಗಳು:

  • ಇಲ್ಲಿಯವರೆಗೆ ತಳಮಟ್ಟದಲ್ಲಿ ಕೈಗೊಂಡಿರುವ ವಿವಿಧ ಚಟುವಟಿಕೆಗಳ ಮೂಲಕ, 3.50 ಕೋಟಿಗೂ ಅಧಿಕ ಯುವಕರು ಮತ್ತು 2.32 ಕೋಟಿಗೂ ಹೆಚ್ಚಿನ ಮಹಿಳೆಯರು ಸೇರಿದಂತೆ 11 ಕೋಟಿಗೂ ಅಧಿಕ ಜನರಿಗೆ ಮಾದಕ ವಸ್ತುಗಳ ಬಳಕೆಯ ಬಗ್ಗೆ ಅರಿವು ಮೂಡಿಸಲಾಗಿದೆ.
  • ದೇಶದ 3.35 ಲಕ್ಷಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಲ್ಲಿ ಅಭಿಯಾನದ ಮೂಲಕ ದೇಶದ ಮಕ್ಕಳು ಮತ್ತು ಯುವ ಸಮೂಹಕ್ಕೆ ಸಂದೇಶ ತಲುಪಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ.
  • 8,000 ಕ್ಕೂ ಹೆಚ್ಚಿನ ಮುಖ್ಯ ಸ್ವಯಂ ಸೇವಕರು[ಎಂ.ವಿಗಳು]ಗಳನ್ನು ಗುರುತಿಸಲಾಗಿದೆ ಮತ್ತು ತರಬೇತುಗೊಳಿಸಲಾಗಿದೆ.
  • ಟ್ವಿಟ್ಟರ್, ಫೇಸ್ ಬುಕ್ ಮತ್ತು ಇನ್ಟ್ರಾಗ್ರಾಮ್ ಒಳಗೊಂಡಂತೆ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
  • ಎನ್.ಎಂ.ಬಿ.ಎ ಚಟುವಟಿಕೆಗಳ ಕುರಿತಾದ ದತ್ತಾಂಶ  ಕ್ರೋಢೀಕರಣಕ್ಕಾಗಿ ಎನ್.ಎಂ.ಬಿ.ಎ ಮೊಬೈಲ್ ಆಪ್ ಅನ್ನು ಅಭಿವೃದ್ದಿಪಡಿಸಲಾಗಿದೆ. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಎನ್.ಎಂ.ಬಿ.ಎ ಡ್ಯಾಶ್ ಬೋರ್ಡ್ ಸ್ಥಾಪಿಸಲಾಗಿದೆ.
  • ಎನ್.ಎಂ.ಬಿ.ಎ ವೆಬ್ ಸೈಟ್ (http://nmba.dosje.gov.in )ನಲ್ಲಿ ಸಮಗ್ರ ಮಾಹಿತಿ ಇದೆ ಮತ್ತು ಬಳಕೆ ಕುರಿತ ಒಳನೋಟ, ಅಭಿಯಾನದ ನೋಟ, ಆನ್ ಲೈನ್ ಚರ್ಚಾ ವೇದಿಕೆ, ಎನ್.ಎಂ.ಬಿ.ಎ ಡ್ಯಾಶ್ ಬೋರ್ಡ್, ಇ-ಪ್ರತಿಜ್ಞೆ ಕೈಗೊಳ್ಳಲಾಗುತ್ತಿದೆ.
  • ಮಾದಕ ವಸ್ತುಗಳ ಮುಕ್ತ ಅಭಿಯಾನದಡಿ 99,595 ಕಾಲೇಜುಗಳ 1.67 ಕೋಟಿಗೂ ಅಧಿಕ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಆನ್ ಲೈನ್ ಮೂಲಕ ಪ್ರತಿಜ್ಞೆ ಸ್ವೀಕರಿಸಿದ್ದಾರೆ.
  • “ನಶಾ ಸೆ ಆಜಾದಿ” – ನಶೆಯಿಂದ ಸ್ವಾತಂತ್ರ್ಯ, ರಾಷ್ಟ್ರೀಯ ಯುವ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. “ಎನ್.ಎಂ.ಬಿ.ಎ ಮೂಲಕ ಎನ್.ಸಿ.ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಯುವ ಜನಾಂಗ ಮತ್ತು ಪಾಲದಾರರನ್ನು ಸಂಪರ್ಕಿಸುವ, ಒಳಗೊಳ್ಳುವ, ನಿರಂತರವಾಗಿ ಕಾರ್ಯಕ್ರಮಗಳನ್ನು ಸಂಘಟಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
  • ಆರ್ಟ್ ಆಫ್ ಲೀವಿಂಗ್, ಬ್ರಹ್ಮ ಕುಮಾರಿಗಳು, ಸಂತ ನಿರಾಂಕರಿ ಮಿಷನ್, ರಾಮ್ ಚಂದ್ರ ಮಿಷನ್[ದಾಜಿ], ಇಸ್ಕಾನ್ ಮತ್ತು ಆಲ್ ವರ್ಲ್ಡ್ ಗಾಯತ್ರಿ ಪರಿವಾರ್ ನಂತಹ ಧಾರ್ಮಿಕ ಮತ್ತು ಸೇವಾ ಸಂಘಟನೆಗಳ ಜೊತೆ ಎನ್.ಎಂ.ಬಿ.ಎಗೆ ಬೆಂಬಲ ನೀಡುವ ಕುರಿತಾದ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಮತ್ತು ವ್ಯಾಪಕ ಸಾಮೂಹಿಕ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
  • ಫೇಸ್ ಬುಕ್, ಟ್ವಿಟ್ಟರ್ ಮತ್ತು ಇನ್ಸ್ಟ್ರಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ತಂತ್ರಜ್ಞಾನವನ್ನು ಬಳಸಿಕೊಂಡು ಆನ್ ಲೈನ್ ಮೂಲಕ ಸಂದೇಶಗಳನ್ನು ಬಿತ್ತರಿಸಲಾಗುತ್ತಿದೆ ಮತ್ತು ದೈನಂದಿನ ಚಟುವಟಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ.
  • ಜಿಲ್ಲಾ ಮತ್ತು ಮುಖ್ಯ ಸ್ವಯಂ ಸೇವಕರು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯುವ ತಳಮಟ್ಟದ ಚಟುವಟಿಕೆಗಳನ್ನು ನೈಜ ಸಮಯದಲ್ಲಿ ಹಂಚಿಕೊಳ್ಳಲು ಆಂಡ್ರಾಯ್ಡ್ ಆಧಾರಿತ ಮೊಬೈಲ್ ಆಪ್ ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ಈ ಆಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.
  • ಸಾರ್ವಜನಿಕರಿಗೆ ಎಲ್ಲಾ ನಶಾ ಮುಕ್ತ ಕೇಂದ್ರಗಳ ಸೌಲಭ್ಯಗಳು ಕೈಗೆಟುವಂತೆ ಮಾಡಲು ಜಿಯೋ ಟ್ಯಾಗ್ ಮಾಡಲಾಗಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದೇಶದಲ್ಲಿ ಔಷಧ ಬೇಡಿಕೆ ಕಡಿತದ ನೋಡಲ್ ಸಚಿವಾಲಯವಾಗಿದೆ, ಇದು ಮಾದಕ ವ್ಯಸನ ತಡೆಗಟ್ಟುವಿಕೆ, ಸಮಸ್ಯೆಯ ವ್ಯಾಪ್ತಿಯ ಮೌಲ್ಯಮಾಪನ, ನಿಯಂತ್ರಣ ಕ್ರಮ, ಚಿಕಿತ್ಸೆ ಮತ್ತು ಬಳಕೆದಾರರ ಪುನರ್ವಸತಿ, ಮಾಹಿತಿಯ ಪ್ರಸಾರದ ಎಲ್ಲಾ ಅಂಶಗಳನ್ನು ಸಂಘಟಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ.

ಮಾದಕ ವಸ್ತುಗಳ ಬಳಕೆಯು ಅಸ್ವಸ್ಥತೆಯು ಒಂದು ಸಮಸ್ಯೆಯಾಗಿದೆ, ಇದು ದೇಶದ ಸಾಮಾಜಿಕ  ಸಂರಚನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಯಾವುದೇ ವಸ್ತುವಿನ ಅವಲಂಬನೆಯು ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೇ ಅವರ ಕುಟುಂಬಗಳು ಮತ್ತು ಇಡೀ ಸಮಾಜವನ್ನು ಅಡ್ಡಿಪಡಿಸುತ್ತದೆ. ವಿವಿಧ ಮಾನಸಿಕ ಔಷಧಗಳ ನಿಯಮಿತ ಸೇವನೆಯು ವ್ಯಕ್ತಿಯ ಅವಲಂಬನೆಗೆ ಕಾರಣವಾಗುತ್ತದೆ. ಕೆಲವು ಪದಾರ್ಥಗಳ ಸಂಯೋಜನೆಗಳು ನರ-ಮಾನಸಿಕ ಅಸ್ವಸ್ಥತೆಗಳು, ಹೃದಯರಕ್ತನಾಳದ ಕಾಯಿಲೆಗಳು, ಹಾಗೆಯೇ ಅಪಘಾತಗಳು, ಆತ್ಮಹತ್ಯೆಗಳು ಮತ್ತು ಹಿಂಸೆಗೆ ಕಾರಣವಾಗಬಹುದು. ಆದ್ದರಿಂದ, ವಸ್ತುವಿನ ಬಳಕೆ ಮತ್ತು ಅವಲಂಬನೆಯನ್ನು ಮಾನಸಿಕ-ಸಾಮಾಜಿಕ-ವೈದ್ಯಕೀಯ ಸಮಸ್ಯೆಯಾಗಿ ನೋಡಬೇಕಾಗಿದೆ.

 

*****

 


(Release ID: 2028929) Visitor Counter : 211