ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
“ 2024 ರ ಜೂನ್ 27 ರಂದು ಎಂ.ಎಸ್.ಎಂ.ಇ ದಿನ – ಉದ್ಯಮಿ ಭಾರತ್” ಸಭೆಯ ಅಧ್ಯಕ್ಷತೆ ವಹಿಸಿದ ಶ್ರೀ ಜಿತನ್ ರಾಮ್ ಮಾಂಝೀ
Posted On:
25 JUN 2024 6:24PM by PIB Bengaluru
ಕೇಂದ್ರದ ಸೂಕ್ಷ್ಮ, ಸಣ್ಣ, ಮತ್ತು ಮಧ್ಯಮ ಉದ್ಯಮ ಸಚಿವ ಶ್ರೀ ಜಿತಿನ್ ರಾಜ್ ಮಾಂಝೀ ಅವರು “ಎಂ.ಎಸ್.ಎಂ.ಇ ದಿನ – ಉದ್ಯಮಿ ಭಾರತ್” ಹಿನ್ನೆಲೆಯಲ್ಲಿ ಈ ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿದರು. ಸೂಕ್ಷ್ಮ, ಸಣ್ಣ, ಮತ್ತು ಮಧ್ಯಮ ಉದ್ಯಮ ಸಚಿವಾಲಯ [ಎಂ ಎಂ.ಎಸ್.ಎಂ.ಇ] 2024 ರ ಜೂನ್ 27 ರಂದು “ಉದ್ಯಮಿ ಭಾರತ್ - ಎಂ.ಎಸ್.ಎಂ.ಇ ದಿನ” ಆಚರಿಸುತ್ತಿದೆ.
ಎಂ.ಎಸ್.ಎಂ.ಇ ವಲಯದ ಸುಸ್ಥಿರತೆ ಮತ್ತು ಪ್ರಗತಿಗಾಗಿ ಎಂ.ಎಸ್.ಎಂ.ಇ.ಡಿ ಕಾಯ್ದೆಯ ಕಾನೂನು ಸುಧಾರಣೆಗಳ ಕುರಿತು ಆಲೋಚನೆಗಳ ವಿನಿಯಮ ಮಾಡಿಕೊಳ್ಳಲು ಮತ್ತು ಅಂತರರಾಷ್ಟ್ರೀಯ ಸಮುದಾಯ, ಪ್ರಮುಖ ಪಾಲುದಾರರು, ನೀತಿ ನಿರೂಪಕರು, ದೊಡ್ಡ ಕಂಪೆನಿಗಳು, ಹಣಕಾಸು ಸಂಸ್ಥೆಗಳ ಜೊತೆ ಚರ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕಾಯ್ದೆಯಲ್ಲಿ ಕಾನೂನು ಸುಧಾರಣೆಗಳು ಒಂದು ಭಾಗವಾಗಿದ್ದು, ಕಾಯ್ದೆ ಎಲ್ಲರನ್ನೊಳಗೊಳ್ಳುವ, ಸಮಗ್ರ ಮತ್ತು ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುವಂತೆ ಮಾಡಲು ಸಚಿವಾಲಯ ಬದ್ಧವಾಗಿದೆ. ಪ್ರಸ್ತಾವಿತ ಕಾನೂನು ಸುಧಾರಣೆಗಳು, 2006 ರಲ್ಲಿ ಎಂ.ಎಸ್.ಎಂ.ಇ.ಡಿ ಕಾಯಿದೆಯನ್ನು ಜಾರಿಗೊಳಿಸಿದಾಗಿನಿಂದ ಆರ್ಥಿಕ ಮತ್ತು ತಾಂತ್ರಿಕ ಭೂದೃಶ್ಯದಲ್ಲಿ ಸಂಭವಿಸಿದ ಪರಿವರ್ತಕ ಬದಲಾವಣೆಗಳೊಂದಿಗೆ ಜೋಡಿಸುವ ಗುರಿಯನ್ನು ಹೊಂದಿದೆ.
ಈ ಕಾರ್ಯಕ್ರಮ ನಾಲ್ಕು ಅಧಿವೇಶನಗಳನ್ನು ಹೊಂದಿದ್ದು, ಎಂ.ಎಸ್.ಎಂ.ಇಗಳ ವ್ಯಾಜ್ಯ ವೆಚ್ಚ ತಗ್ಗಿಸುವ, ಐಐಎಸಿ ಪ್ರದರ್ಶನ [ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ಮಧ್ಯಸ್ಥಿಕೆಯ ನಡಾವಳಿ], ಎಂ.ಎಸ್.ಇ ಮಧ್ಯಸ್ಥಿಕೆಗೆ ಭಾಷಿಣಿ ಕೃತಕ ಬುದ್ದಿಮತ್ತೆ ತಂತ್ರಾಂಶ ಬಳಕೆ ಕುರಿತಂತೆ ಪ್ರಾತ್ಯಕ್ಷಿಕೆ ನೀಡುವ, ಎಂ.ಎಸ್.ಎಂ.ಇ.ಡಿ ಕಾಯ್ದೆ -2006 ಕಾನೂನು ಸುಧಾರಣೆಗಳ ಬಗ್ಗೆ ಸಮಗ್ರ ಅಧಿವೇಶನ ನಡೆಸಲಾಗುತ್ತಿದೆ.
ಕೇಂದ್ರದ ಸೂಕ್ಷ್ಮ, ಸಣ್ಣ, ಮತ್ತು ಮಧ್ಯಮ ಉದ್ಯಮ ಸಚಿವ ಶ್ರೀ ಜಿತಿನ್ ರಾಜ್ ಮಾಂಝೀ, ಎಂ.ಎಸ್.ಎಂ.ಇ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಕಾನೂನು ಮತ್ತು ನ್ಯಾಯ ಖಾತೆ [ಸ್ವತಂತ್ರ ನಿರ್ವಹಣೆ] ರಾಜ್ಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘ್ವಾಲ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಣ್ಯರು ಮತ್ತು ಸಭಿಕರನ್ನುದ್ದೇಶಿಸಿ ಮಾತನಾಡಿಲಿದ್ದಾರೆ. ಎಂ.ಎಸ್.ಎಂ.ಇ ಸಚಿವರು ಮತ್ತು ಎಂ.ಎಸ್.ಎಂ.ಇ ಖಾತೆ ರಾಜ್ಯ ಸಚಿವರು ಇದೇ ಸಂದರ್ಭದಲ್ಲಿ ಎಂ.ಎಸ್.ಎಂ.ಇ ತಂಡದ ಉಪಕ್ರಮ ಮತ್ತು ರಾಷ್ಟ್ರಕ್ಕಾಗಿ ಯಶಸ್ವಿನಿ ಅಭಿಯಾನವನ್ನು ಸಮರ್ಪಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಂ.ಎಸ್.ಎಂ.ಇ ಸಚಿವಾಲಯ ಮತ್ತು ಗೋವಾ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ನಡುವೆ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತಿದೆ. ಅಲ್ಲದೇ ಐಐಎಸಿ ಮತ್ತು ಭಾಷಿಣಿ, ಎನ್.ಎಸ್.ಐ.ಸಿ ಹಾಗೂ ಒ.ಎನ್.ಡಿ.ಸಿ, ಸಿಡ್ಬಿ, ಹಣಕಾಸು ಸಂಸ್ಥೆಗಳ ಜೊತೆ ತಿಳಿವಳಿಕೆ ಒಪ್ಪಂದಗಳ ವಿನಿಯಮ ಮಾಡಿಕೊಳ್ಳಲಾಗುತ್ತಿದೆ. ಸುಸ್ಥಿರ ಪರಿಸರ ಸ್ನೇಹಿ ಎಂ.ಎಸ್.ಎಂ.ಇ ಸ್ಥಾಪನೆಗಾಗಿ ಉದ್ಯಮಿ ಭಾರತ್ ದಿನದಂದು ಸದೃಢತೆಯನ್ನು ಬೆಳೆಸಿಕೊಳ್ಳುವ ಸಂಬಂಧ ಸಚಿವಾಲಯ ಸಾಮೂಹಿಕ ಬದ್ಧತೆಯನ್ನು ಪ್ರದರ್ಶಿಸಲಿದೆ.
*****
(Release ID: 2028926)
Visitor Counter : 52