ಇಂಧನ ಸಚಿವಾಲಯ
ಕರ್ನಾಟಕ ಮತ್ತು ರಾಜಸ್ಥಾನಕ್ಕೆ ತಲಾ 4.5 ಗಿಗಾವ್ಯಾಟ್ ನವೀಕೃತ ಇಂಧನಕ್ಕಾಗಿ 13,595 ಕೋಟಿ ರೂ. ಮೌಲ್ಯದ ಹೊಸ ಪ್ರಸರಣಾ ಯೋಜನೆಗಳಿಗೆ ಭಾರತ ಸರ್ಕಾರದ ಅನುಮೋದನೆ
Posted On:
22 JUN 2024 10:43AM by PIB Bengaluru
ಭಾರತ ಸರ್ಕಾರ, ಕರ್ನಾಟಕ ಮತ್ತು ರಾಜಸ್ಥಾನಕ್ಕೆ 9 ಗಿಗಾವ್ಯಾಟ್ ನವೀಕೃತ ಇಂಧನಕ್ಕಾಗಿ ಹೊಸ ಅಂತರ ರಾಜ್ಯ ಪ್ರಸರಣಾ ಯೋಜನೆ (ಐಎಸ್‌ಟಿಎಸ್)ಗೆ ಅನುಮೋದನೆ ನೀಡಿದೆ. ಈ ಯೋಜನೆಗಳನ್ನು ಶುಲ್ಕ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ (ಟಿಬಿಸಿಬಿ) ವಿಧಾನದ ಮೂಲಕ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಗಳು 2030ರ ವೇಳೆಗೆ 500 ಗಿಗಾವ್ಯಾಟ್ ನವೀಕೃತ ಇಂಧನ ಸಾಮರ್ಥ್ಯ ಹೊಂದುವ ಭಾಗವಾಗಿದ್ದು, ಈಗಾಗಲೇ 200 ಗಿಗಾವ್ಯಾಟ್ ಸಂಪರ್ಕ ಸಾಧಿಸಲಾಗಿದೆ.
2. ಅನುಮೋದಿಸಿರುವ ಯೋಜನೆಯ ಸಂಕ್ಷಿಪ್ತ ವಿವರ ಹೀಗಿದೆ:
- ರಾಜಸ್ಥಾನ ನವೀಕರಿಸಬಹುದಾದ ಇಂಧನ ವಲಯ (ಆರ್ ಇ ಝಡ್) ನ ಇಂಧನ ಹೊರತೆಗೆಯುವ ಯೋಜನೆಯಡಿ ರಾಜಸ್ಥಾನದಿಂದ 4.5 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಹೊರತೆಗೆಯಲಾಗುವುದು. ಇದು ಫತೇಘರ್ ಕಾಂಪ್ಲೆಕ್ಸ್‌ನಿಂದ 1 ಗಿಗಾವ್ಯಾಟ್, ಬಾರ್ಮರ್ ಕಾಂಪ್ಲೆಕ್ಸ್‌ನಿಂದ 2.5 ಗಿಗಾವ್ಯಾಟ್ ಮತ್ತು ನಾಗೌರ್ (ಮೆರ್ಟಾ) ಕಾಂಪ್ಲೆಕ್ಸ್‌ನಿಂದ 1 ಗಿಗಾವ್ಯಾಟ್ ಅನ್ನು ಒಳಗೊಂಡಿದೆ. ಈ ಇಂಧನವನ್ನು ಮೈನ್‌ಪುರಿ ಪ್ರದೇಶ, ಫತೇಪುರ್ ಮತ್ತು ಉತ್ತರ ಪ್ರದೇಶದ ಓರೈಗೆ ವರ್ಗಾಯಿಸಲಾಗುತ್ತದೆ. ಯೋಜನೆಯ ಪೂರ್ಣಗೊಳ್ಳುವ ಅವಧಿ ಎರಡು ವರ್ಷಗಳು. ಯೋಜನೆಯ ವೆಚ್ಚ ಸುಮಾರು 12,241 ಕೋಟಿ ರೂ.
- ಕರ್ನಾಟಕದ ವ್ಯವಸ್ಥೆಯನ್ನು ಬಲಪಡಿಸುವ ಯೋಜನೆಯಲ್ಲಿ ಕೊಪ್ಪಳ ಮತ್ತು ಗದಗ ಪ್ರದೇಶದಿಂದ 4.5 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಹೊರತೆಗೆಯಲಾಗುವುದು. ಈ ಯೋಜನೆ 2027ರ ಜೂನ್ ಗೆ ಪೂರ್ಣಗೊಳ್ಳಲಿದೆ. ಯೋಜನೆಯ ವೆಚ್ಚ 1,354 ಕೋಟಿ ರೂ.
*****
(Release ID: 2028116)
Visitor Counter : 69