ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕಿರುಚಿತ್ರವು ಒಂದು ಕವಿತೆಯಂತೆ, ಪ್ರತಿ ಸಲ ನೋಡಿದಾಗ ನೀವು ಒಂದು ಅದ್ಭುತವಾದದ್ದನ್ನು ಅನ್ವೇಷಿಸುತ್ತೀರಿ: ಅನ್ನಾ ಹೆನ್ಕೆಲ್ ಡೊನ್ನರ್ ರ್ಸ್ಮಾರ್ಕ್
ನಿಮ್ಮ ಕನಸಿಗೆ ಬೇರೆಯವರು ಹಣ ಹೂಡಲು ಸಾಧ್ಯವಿಲ್ಲ: ಸಮೀರ್ ಮೋದಿ
ಬಲವಾದ, ಅನನ್ಯ ಮತ್ತು ರೋಮಾಂಚಕಾರಿ ಕಥೆಯು ತನ್ನ ಪ್ರೇಕ್ಷಕರನ್ನು ತಲುಪುತ್ತದೆ: ಟಿಸ್ಕಾ ಚೋಪ್ರಾ
18ನೇ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ "ಕಿರುಚಿತ್ರಗಳ ಪ್ರಸರಣ: ನುಗ್ಗುವಿಕೆ, ತಲುಪುವಿಕೆ ಮತ್ತು ಮಾನ್ಯತೆ" ಕುರಿತು ಆಸಕ್ತಿದಾಯಕ ಚರ್ಚೆಯ ಆಯೋಜನೆ
Posted On:
20 JUN 2024 3:51PM by PIB Bengaluru
18ನೇ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವ (ಎಂಐಎಫ್ಎಫ್) ದಲ್ಲಿ ಇಂದು "ಕಿರುಚಿತ್ರಗಳ ಪ್ರಸರಣ: ನುಗ್ಗುವಿಕೆ, ತಲುಪುವಿಕೆ ಮತ್ತು ಮಾನ್ಯತೆ" ಎನ್ನುವ ವಿಷಯದ ಕುರಿತು ಒಳನೋಟವುಳ್ಳ ಪ್ಯಾನೆಲ್ ಚರ್ಚೆಯನ್ನು ಒಳಗೊಂಡಿತ್ತು, ಇದರಲ್ಲಿ ಹೆಸರಾಂತ ಚಲನಚಿತ್ರ ನಿರ್ಮಾಪಕರು ಮತ್ತು ಉದ್ಯಮ ತಜ್ಞರು ಭಾಗವಹಿಸಿದ್ದರು.
ನಿರ್ಮಾಪಕಿ ಮತ್ತು ಬರ್ಲಿನೇಲ್ ಶಾರ್ಟ್ಸ್ ನ ಮುಖ್ಯಸ್ಥರಾಗಿರುವ ಹೆನ್ಕೆಲ್ ಡೊನ್ನರ್ ರ್ಸ್ಮಾರ್ಕ್, ಚಲನಚಿತ್ರ ಕಿರು ಚಿತ್ರಗಳನ್ನು ಕಾವ್ಯಕ್ಕೆ ಹೋಲಿಸುವುದರೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದರು. “ಕಿರುಚಿತ್ರವು ಒಂದು ಕವಿತೆಯಂತೆ, ಪ್ರತಿ ಸಲ ನೋಡಿದಾಗ ನೀವು ಒಂದು ಅದ್ಭುತವಾದದ್ದನ್ನು ಅನ್ವೇಷಿಸುತ್ತೀರಿ" ಎಂದು ಅವರು ಹೇಳಿದರು. ಪ್ರಪಂಚದ ಅತಿ ದೊಡ್ಡ ಕಿರುಚಿತ್ರೋತ್ಸವಗಳಲ್ಲಿ ಒಂದಾದ ಬರ್ಲಿನೇಲ್ ಶಾರ್ಟ್ಸ್ ನ ಪ್ರಾಮುಖ್ಯತೆಯನ್ನು ಅವರು ಎತ್ತಿ ತೋರಿಸಿದರು. ಸೀಮಿತ ಬಂಡವಾಳ ಮತ್ತು ಸಂಪನ್ಮೂಲಗಳಂತಹ ನಿರ್ಬಂಧಗಳನ್ನು ಸೃಜನಶೀಲತೆಗೆ ಅವಕಾಶಗಳನ್ನಾಗಿ ಪರಿಗಣಿಸಲು ಅನ್ನಾ ಚಲನಚಿತ್ರ ನಿರ್ಮಾಪಕರನ್ನು ಪ್ರೋತ್ಸಾಹಿಸಿದರು. "ಒಂದು ಅದ್ಭುತ ಕಲ್ಪನೆಯಿದ್ದರೆ, ನೀವು ಐಫೋನ್ ಮೂಲಕವೂ ಸುಂದರವಾದ ಚಲನಚಿತ್ರವನ್ನು ಮಾಡಬಹುದು" ಎಂದು ಹೇಳಿದರು.
ಪಾಕೆಟ್ ಫಿಲ್ಮ್ಸ್ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸಮೀರ್ ಮೋದಿ ಅವರು, ದೇಶದಲ್ಲಿ ಬಲವಾದ ಚಲನಚಿತ್ರ ಉದ್ಯಮದವಿದ್ದರೂ ಕಿರುಚಿತ್ರಗಳಿಗೆ ಭಾರತದಲ್ಲಿ ಒಳ್ಳೆಯ ಮಾರುಕಟ್ಟೆಯಿರುವ ಸಾಮರ್ಥ್ಯವನ್ನು ಒತ್ತಿಹೇಳಿದರು. "ಕಿರುಚಿತ್ರವು ಸರಳವಾದ ಆದರೆ ಶಕ್ತಿಯುತವಾದ ಕಥೆ ಹೇಳುವ ಮಾಧ್ಯಮವಾಗಿದೆ. ಇದು ನೀವು ವಾಸ್ತವವನ್ನು ಬಿಂಬಿಸುವ ಮಾಧ್ಯಮವಾಗಿದೆ" ಎಂದು ಸಮೀರ್ ಹೇಳಿದರು. ವಿಷಯವು ತನ್ನ ಪ್ರೇಕ್ಷಕರನ್ನು ಹುಡುಕಲು ಸಹಾಯ ಮಾಡುವಲ್ಲಿ ಡಿಜಿಟಲ್ ಕ್ರಾಂತಿಯ ಪಾತ್ರವನ್ನು ಅವರು ಚರ್ಚಿಸಿದರು, ಈ ಅನ್ವೇಷಣೆಯನ್ನು ಸುಲಭಗೊಳಿಸಲು ಸರಿಯಾದ ವೇದಿಕೆಗಳ ಅಗತ್ಯವನ್ನು ಒತ್ತಿ ಹೇಳಿದರು. ಸಮೀರ್ ಹಣಕಾಸಿನ ಸವಾಲುಗಳನ್ನು ಸಹ ಬಗ್ಗೆ ಮಾತನಾಡಿದರು, ಅವಕಾಶಗಳನ್ನು ಹುಡಕಲು ಮತ್ತು ಸ್ವತಃ ಮಾರ್ಗಗಳನ್ನು ಕಂಡುಕೊಳ್ಳಲು ಚಲನಚಿತ್ರ ನಿರ್ಮಾಪಕರಿಗೆ ಸಲಹೆ ನೀಡಿದರು. "ಬೇರೆಯವರು ನಿಮ್ಮ ಕನಸಿಗೆ ಎಂದಿಗೂ ಹಣ ಹೂಡಲು ಸಾಧ್ಯವಿಲ್ಲ" ಎಂದು ಅವರು ಪ್ರತಿಪಾದಿಸಿದರು.
ಖ್ಯಾತ ನಟಿ ಟಿಸ್ಕಾ ಚೋಪ್ರಾ ಅವರು ಕಿರುಚಿತ್ರಗಳು ಕೇವಲ ಚಲನಚಿತ್ರಗಳಿಗೆ ಮೆಟ್ಟಿಲುಗಳಷ್ಟೇ ಅಲ್ಲ ತಮ್ಮದೇ ಆದ ಮೌಲ್ಯವನ್ನು ಹೊಂದಿವೆ ಎಂದು ಹೇಳಿದರು. "ಕಿರು ಚಿತ್ರಗಳು ಕೇವಲ ಚಲನಚಿತ್ರಕ್ಕೆ ಮೆಟ್ಟಿಲು ಅಲ್ಲ. ಇದು ಸ್ವತಃ ಒಂದು ಚಿಕ್ಕ ಅಮೂಲ್ಯ ರತ್ನವಾಗಿದೆ, ಅದರ ಪ್ರತಿ ಕ್ಷಣವೂ ತನ್ನೊಳಗೆ ತಲ್ಲೀನವಾಗಿಸುತ್ತದೆ" ಎಂದು ಅವರು ಹೇಳಿದರು. ಚೋಪ್ರಾ ಅವರು ಭಾರತದ ಶ್ರೀಮಂತ ಕಥೆ ಹೇಳುವ ಸಂಪ್ರದಾಯದ ಬಗ್ಗೆ ಒತ್ತಿಹೇಳುತ್ತಾ "ಹೊಸ, ವಿಶಿಷ್ಟ ಮತ್ತು ರೋಮಾಂಚನಕಾರಿ ಕಥೆಯು ಯಾವಾಗಲೂ ತನ್ನದೇ ಆದ ಸಾಮರ್ಥ್ಯದ ಮೇಲೆ ತನ್ನ ಪ್ರೇಕ್ಷಕರನ್ನು ಕಂಡುಕೊಳ್ಳುತ್ತದೆ" ಎಂದು ಹೇಳಿದರು.
ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರ ನಿರ್ಮಾಪಕಿ ವಿಕೆಯೆನೊ ಜಾವೋ, ಕಿರುಚಿತ್ರಗಳಿಗೆ ಮಾರ್ಕೆಟಿಂಗ್ ಮತ್ತು ವಿತರಣೆಯಂತಹ ನಿರ್ಣಾಯಕ ಸಮಸ್ಯೆಗಳ ಬಗ್ಗೆ ಮಾತನಾಡಿದರು. " ಕಿರು ಚಿತ್ರಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಗಳು ಇರಬೇಕು" ಎಂದು ಹೇಳಿ ಸುಧಾರಿತ ಪ್ರದರ್ಶನದ ಅವಕಾಶಗಳ ಅಗತ್ಯದ ಬಗ್ಗೆ ಒತ್ತಿ ಹೇಳಿದರು.
ಮೀಡಿಯಾ ಎಂಟರ್ಟೈನ್ಮೆಂಟ್ ಮತ್ತು ಸ್ಕಿಲ್ ಕೌನ್ಸಿಲ್ ನ ಸಿಇಒ ಮೋಹಿತ್ ಸೋನಿ ಅವರು, ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಿಗೆ ಸರಿಯಾದ ತರಬೇತಿ ಮತ್ತು ಮಾರ್ಗದರ್ಶನದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಹೆಚ್ಚಿನ ಶೈಕ್ಷಣಿಕ ಸಂಸ್ಥೆಗಳು ಮತ್ತು ಚಲನಚಿತ್ರ ನಿರ್ಮಾಣದಲ್ಲಿ ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸಲು ಅವರು ಕರೆ ನೀಡಿದರು. ಸೋನಿ ಅವರು ಕಿರುಚಿತ್ರಗಳಿಗಾಗಿ ವಿಶೇಷ ಒಟಿಟಿ ಪ್ಲಾಟ್ಫಾರ್ಮ್ಗಳ ಅಗತ್ಯತೆಯ ಬಗ್ಗೆ ಹೇಳಿದರು, ಹೆಚ್ಚು ಸೃಜನಾತ್ಮಕ ಯೋಜನೆಗಳಿಗೆ ಹಣ ಹೊಂದಿಸಬಹುದಾದ ಆದಾಯವನ್ನು ಗಳಿಸಲು ವಾಣಿಜ್ಯ ಕಿರುಚಿತ್ರಗಳ ನಿರ್ಮಾಣದ ಬಗ್ಗೆ ಸೂಚಿಸಿದರು.
ಪ್ರಖ್ಯಾತ ಸಾಕ್ಷ್ಯಚಿತ್ರ ನಿರ್ಮಾಪಕ ಪಂಕಜ್ ಸಕ್ಸೇನಾ ಅವರು ಆಸಕ್ತಿದಾಯಕ ಅಧಿವೇಶನವನ್ನು ನಿರ್ವಹಿಸಿದರು.
ಎಲ್ಲಾ ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರು ತಮ್ಮ ಕನಸಿನ ಯೋಜನೆಗಳಿಗೆ ಜೀವ ತುಂಬಲು ಪ್ರೋತ್ಸಾಹಿಸುವ ಸ್ಪೂರ್ತಿಯೊಂದಿಗೆ ಚರ್ಚೆಯು ಮುಗಿಯಿತು. ಚರ್ಚೆಯು ಮುಕ್ತಾಯವಾದಾಗ, ಎಲ್ಲರ ಭಾವನೆಯು ಸ್ಪಷ್ಟವಾಗಿತ್ತು: "ನನ್ನೊಳಗೆ ನಾನು ಎಂದಿಗೂ ತಯಾರಿಸದ ಮತ್ತು ಪ್ರಸ್ತುತಪಡಿಸದ ಒಂದು ಅದ್ಭುತವಾದ ಚಲನಚಿತ್ರವಿದೆ." ಈ ಕಥನಗಳು ತಮ್ಮ ಪ್ರೇಕ್ಷಕರನ್ನು ಕಂಡುಕೊಳ್ಳುತ್ತವೆ ಎಂಬ ವಿಶ್ವಾಸದಿಂದ ಚಲನಚಿತ್ರ ನಿರ್ಮಾಪಕರು ತಮ್ಮ ವಿಶಿಷ್ಟ ಮತ್ತು ರೋಮಾಂಚಕಾರಿ ಕಥೆಗಳನ್ನು ಮುಂದುವರಿಸುವಂತೆ ಚರ್ಚೆಯಲ್ಲಿ ಭಾಗವಹಿಸಿದವರು ಪ್ರೋತ್ಸಾಹಿಸಿದರು.
*****
(Release ID: 2027217)
Visitor Counter : 45