ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಏಷ್ಯಾದ ಮಹಿಳಾ ಚಲನಚಿತ್ರ ನಿರ್ಮಾಪಕರ ವಿಶೇಷ ಸಂಗ್ರಹ ಪ್ಯಾಕೇಜ್‌ನೊಂದಿಗೆ 18ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಚರಣೆ

Posted On: 17 JUN 2024 7:00PM by PIB Bengaluru

18ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಎಂಐಎಫ್ಎಫ್)ವು  ಹೆಮ್ಮೆಯಿಂದ "ಏಷ್ಯಾ ಮಹಿಳಾ ಚಲನಚಿತ್ರ ನಿರ್ಮಾಪಕರು" ಎಂಬ ಶೀರ್ಷಿಕೆಯಲ್ಲಿ ವಿಶೇಷ ಸಂಗ್ರಹ ಪ್ಯಾಕೇಜ್ ಅನ್ನು ಪ್ರಸ್ತುತಪಡಿಸುತ್ತದೆ, ಇದು ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಶಕ್ತಿ ಸಾಮರ್ಥ್ಯ, ಪ್ರಭಾವ ಮತ್ತು ಸೃಜನಶೀಲತೆಯನ್ನು ಕೊಂಡಾಡುತ್ತದೆ. ರೇಡಿಯೊ ಮತ್ತು ದೂರದರ್ಶನದಲ್ಲಿ ಇಂಟರ್ ನ್ಯಾಷನಲ್ ಅಸೋಸಿಯೇಷನ್ ​​​​ಆಫ್ ವುಮೆನ್ ಪ್ರಸ್ತುತಪಡಿಸಿದ ಈ ಅನನ್ಯ ಸಂಗ್ರಹವು ಮಹಿಳೆಯರ ಸಬಲೀಕರಣ, ಯಶಸ್ಸಿನ ಅನ್ವೇಷಣೆ ಮತ್ತು ಸಮಾನತೆಯ ಅನ್ವೇಷಣೆಯ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಅಲ್ಲದೆ, ಪ್ರೇಕ್ಷಕರಿಗೆ ವೈವಿಧ್ಯಮಯ ಮತ್ತು ಸ್ಪೂರ್ತಿದಾಯಕ ಕಥೆಗಳನ್ನು ನೀಡುತ್ತದೆ.

"ಏಷ್ಯಾದ ಮಹಿಳಾ ಚಲನಚಿತ್ರ ನಿರ್ಮಾಪಕರು" ಸಂಗ್ರಹ ಪ್ಯಾಕೇಜ್ ಏಷ್ಯಾದ್ಯಂತ 6 ಮಹಿಳಾ ನಿರ್ದೇಶಕರ ಅದ್ಭುತ ಪ್ರತಿಭೆ ಪ್ರದರ್ಶಿಸುವ 5 ಅಸಾಧಾರಣ ಚಲನಚಿತ್ರಗಳನ್ನು ಒಳಗೊಂಡಿದೆ. ಪ್ರತಿ ಚಲನಚಿತ್ರವು ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ಸವಾಲುಗಳು ಮತ್ತು ಮಹಿಳೆಯರ ಅದಮ್ಯ ಮನೋಭಾವದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಒದಗಿಸುತ್ತದೆ.

ಈ ವಿಶೇಷ ಪುಷ್ಪಗುಚ್ಛದಲ್ಲಿ ಒಳಗೊಂಡಿರುವ ಚಲನಚಿತ್ರಗಳು ಈ ಕೆಳಗಿನಂತಿವೆ:

1) ಡ್ಯುಯಟ್(ಯುಗಳ ಗೀತೆ)

ಎಕಿನ್ ಇಲ್ಕ್‌ಬಾಗ್ ಮತ್ತು ಇಡಿಲ್ ಅಕ್ಕಸ್ ನಿರ್ದೇಶಿಸಿದ, "ಡ್ಯುಯೆಟ್" ಈಜು ಪಾಲುದಾರರು ಮತ್ತು ಆಪ್ತ ಸ್ನೇಹಿತರ 2 ಸಂಯೋಜಿತ ಕಥೆಯನ್ನು ಹೇಳುತ್ತದೆ. ಅವರು 2016ರಲ್ಲಿ ವಿಫಲರಾದ ನಂತರ 2020ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಪ್ರಯತ್ನಿಸುತ್ತಾರೆ. ಅವರ ಪ್ರಯಾಣವು ಸವಾಲುಗಳಿಂದ ತುಂಬಿರುತ್ತದೆ, ಅಸಮರ್ಥ ಒಕ್ಕೂಟ, ಕೋವಿಡ್-19 ಸಾಂಕ್ರಾಮಿಕ ಮತ್ತು ಮಹಿಳೆಯರು ಮತ್ತು ಎಲ್ ಜಿಬಿಟಿಕ್ಯುಐಎ+(ತೃತೀಯ ಲಿಂಗಿಗಳು ಅಥವಾ ಮಂಗಳ ಮುಖಿಯರು) ಸಮುದಾಯದ ಮೇಲೆ ದಬ್ಬಾಳಿಕೆ ನಡೆಯುತ್ತಿರುವ ಸಮಾಜದಲ್ಲಿ ವಾಸಿಸುತ್ತಿರುತ್ತಾರೆ. ಈ ಚಿತ್ರವು ವೀಕ್ಷಕರನ್ನು ನಿರ್ಣಯ ಮತ್ತು ಪ್ರಭಾವಗಳ ಅಡೆತಡೆಗಳನ್ನು ಜಯಿಸಲು ಪ್ರೋತ್ಸಾಹಿಸುತ್ತದೆ, ಪಾತ್ರಗಳ ಚೈತನ್ಯವನ್ನು ಸಾಕಾರಗೊಳಿಸುತ್ತದೆ.

 

 

ನಿರ್ದೇಶಕರ ಬಗ್ಗೆ:

• ಎಕಿನ್ ಇಲ್ಕ್‌ಬಾಗ್: ಲಂಡನ್‌ನ ಯುನಿವರ್ಸಿಟಿ ಆಫ್ ಆರ್ಟ್ಸ್ ಪದವೀಧರರಾದ ಎಕಿನ್ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲು ಇಸ್ತಾನ್‌ಬುಲ್‌ಗೆ ಮರಳಿದರು. "ಡ್ಯುಯೆಟ್" (2022), ಆಕೆಯ ಚೊಚ್ಚಲ ಚಲನಚಿತ್ರವಾಗಿದ್ದು, 59ನೇ ಅಂಟಲ್ಯ ಗೋಲ್ಡನ್ ಆರೆಂಜ್ ಚಲನಚಿತ್ರೋತ್ಸವದಲ್ಲಿ ವಿಶೇಷ ತೀರ್ಪುಗಾರರ ಪ್ರಶಸ್ತಿ ಗೆದ್ದುಕೊಂಡಿತು.

• ಇದಿಲ್ ಅಕ್ಕುಸ್: ಇಸ್ತಾನ್‌ಬುಲ್ ಮೂಲದ ಸ್ವತಂತ್ರ ನಿರ್ದೇಶಕ ಮತ್ತು ಚಲನಚಿತ್ರ ಸಂಪಾದಕ ಇದಿಲ್, ಇಸ್ತಾನ್‌ಬುಲ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಅವರು ಪ್ರಾಥಮಿಕವಾಗಿ ದೂರದರ್ಶನ ಸರಣಿಗಳು ಮತ್ತು ಸಾಕ್ಷ್ಯಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

 

2) ಟೆಕಿಲಾ ಸನ್ ಸೆಟ್(ಸೂರ್ಯಾಸ್ತ)

ಜಿನ್ಸುಯಿ ಸಾಂಗ್ ನಿರ್ದೇಶಿಸಿದ ಈ ಚಿತ್ರವು ಜಿಯಾ ಎಂಬ 70 ವರ್ಷದ ವೃದ್ಧೆಯ ಮೇಲೆ ಕಥಾಹಂದರವಿದೆ. ಅವರು ಬುದ್ಧಿಮಾಂದ್ಯ-ಪೀಡಿತ ಪತಿಯನ್ನು ನೋಡಿಕೊಳ್ಳುವ ಹೊರೆ ಅಥವಾ ಜವಾಬ್ದಾರಿ ನಿಭಾಯಿಸಲು ಸೃಜನಶೀಲ ಪರಿಹಾರಗಳನ್ನು ಕಲ್ಪಿಸುತ್ತಾರೆ. ಜಿಯಾ ಅವರ ಪ್ರಯಾಣವು ವೃದ್ಧೆಯರ ಹೋರಾಟಗಳು ಮತ್ತು ಕನಸುಗಳ ಕಟುವಾದ ಅನ್ವೇಷಣೆಯಾಗಿದೆ.

 

 

ನಿರ್ದೇಶಕರ ಬಗ್ಗೆ:

• ಜಿನ್ಸುಯಿ ಸಾಂಗ್: ಚೀನಾದ ಶೆನ್‌ಜೆನ್‌ನಲ್ಲಿ ಬೆಳೆದ ಜಿನ್ಸುಯಿ ಸಾಂಪ್ರದಾಯಿಕ ಮೌಲ್ಯಗಳು ಮತ್ತು ಆಧುನಿಕ ಆಕಾಂಕ್ಷೆಗಳ ನಡುವಿನ ಸಮತೋಲನವನ್ನು ಮುನ್ನಡೆಸಿದ್ದಾರೆ. ಅವರ ಚಲನಚಿತ್ರಗಳು ಚೀನಾ ಮತ್ತು ಚೀನಾ-ಅಮೆರಿಕ ಮಹಿಳೆಯರ ದಟ್ಟ ಅನುಭವಗಳ ಮೇಲೆ ಗಮನ ಕೇಂದ್ರೀಕರಿಸುತ್ತವೆ.

 

3) ಅಮೇರಿಕನ್ ಡ್ರೀಮ್

ರೆನೀ ಷಿ ಅವರ ಈ ಆನಿಮೇಷನ್ ಶಾಲೆಯ ಶೂಟಿಂಗ್‌ನಲ್ಲಿ ಸತ್ತಂತೆ ನಟಿಸುವ ಮೂಲಕ ಬದುಕುಳಿದ ಯುವತಿಯ ಕಥೆ ಹೇಳುತ್ತದೆ. ಚಲನಚಿತ್ರವು ಅಂತಹ ದುರಂತಗಳ ಎಲ್ಲಾ ಬಲಿಪಶುಗಳಿಗೆ ಅಥವಾ ಸಂತ್ರಸ್ತರಿಗೆ ಸಮರ್ಪಿಸಲಾಗಿದೆ. ಈ ರೀತಿಯ ಸನ್ನಿವೇಶಗಳಲ್ಲಿ ಬದುಕುಳಿದವರು ಅನುಭವಿಸುತ್ತಿರುವ ದೀರ್ಘಕಾಲದ ಆಘಾತವನ್ನು ಇದು ಪರಿಶೋಧಿಸುತ್ತದೆ.

 

 

ನಿರ್ದೇಶಕರ ಬಗ್ಗೆ:

• ರೆನೀ ಶಿ: ವರ್ಜೀನಿಯಾದ ಫೇರ್‌ಫ್ಯಾಕ್ಸ್‌ನಲ್ಲಿ ಜನಿಸಿದ ರೆನೀ ಅವರು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದು, ಡ್ರಾಯಿಂಗ್, ಆನಿಮೇಟಿಂಗ್, ಬರವಣಿಗೆ ಮತ್ತು ಕ್ರೋಚಿಟಿಂಗ್‌ನಲ್ಲಿ ಅಪಾರ ಉತ್ಸಾಹ ಹೊಂದಿದ್ದಾರೆ. "ಅಮೆರಿಕನ್ ಡ್ರೀಮ್" ಚಲನಚಿತ್ರವು ಶಾಲೆಯ ಗುಂಡಿನ ಬಲಿಪಶುಗಳಿಗೆ ಸಲ್ಲಿಸಿರುವ ಆಕೆಯ ಹೃತ್ಪೂರ್ವಕ ಶ್ರದ್ಧಾಂಜಲಿಯಾಗಿದೆ.

 

4) ಹ್ಯಾಪಿ ಇಂಡಿಪೆಂಡೆನ್ಸ್ ಡೇ(ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು)

ಕ್ಯಾಮಿಲಾ ಸಗಿಂಟ್ಕನ್ ನಿರ್ದೇಶಿಸಿದ ಈ ಚಲನಚಿತ್ರವು ಕಝಾಕಿಸ್ತಾನ್‌ನ ಹೊಸ ಗುರುತಿನ ಹುಡುಕಾಟದ ರೂಪಕ ಅನ್ವೇಷಣೆಯಾಗಿದೆ. ಇದು ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳ ನಡುವೆ ತನ್ನ ಪ್ರೀತಿ ಕಳೆದುಕೊಂಡ ನಂತರ ಜೀವನದ ಅರ್ಥ ಕಂಡುಕೊಳ್ಳಲು ಹೆಣಗಾಡುತ್ತಿರುವ ಮಧ್ಯವಯಸ್ಕ ವ್ಯಕ್ತಿ ಮರಾಟ್ ಮೇಲೆ ಕಥೆ ಹೆಣೆಯಲಾಗಿದೆ.

 

 

 

 

ನಿರ್ದೇಶಕರ ಬಗ್ಗೆ:

ಕ್ಯಾಮಿಲಾ ಸಗಿಂಟ್ಕಾನ್: ಅಲ್ಮಾಟಿಯ ಕಥೆಗಾರ, ಕ್ಯಾಮಿಲಾ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಕಾನೂನು ಪದವಿ ಗಳಿಸಿದ ನಂತರ ಕಝಾಕಿಸ್ತಾನ್ ಗೆ ಮರಳಿದರು. ಅವರು ಸಹಾಯಕ ನಿರ್ದೇಶಕ, ನಿರ್ಮಾಪಕ, ಬರಹಗಾರ ಮತ್ತು ಸ್ಕ್ರಿಪ್ಟ್ ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದಾರೆ.

 

5) ಟ್ರ್ಯಾಂಗಲ್(ತ್ರಿಕೋನ)

ಝಿನೋ ಹಾಡಿ ನಿರ್ದೇಶಿಸಿದ "ಟ್ರಯಾಂಗಲ್", ಪ್ರತ್ಯೇಕವಾಗಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಇಬ್ಬರು ಮಹಿಳೆಯರ ನಡುವಿನ ಸಂಕೀರ್ಣ ಕ್ರಿಯಾತ್ಮಕೆಯನ್ನು ಪರಿಶೋಧಿಸುತ್ತದೆ. ಅವರ ಮಾರ್ಗಗಳು ದಾಟುತ್ತವೆ, ಅವರ ಸನ್ನಿವೇಶಗಳನ್ನು ಸಂಕೀರ್ಣಗೊಳಿಸುತ್ತವೆ ಮತ್ತು ಅವರ ಅನುಭವಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಎತ್ತಿ ತೋರಿಸುತ್ತವೆ.

 

 

ನಿರ್ದೇಶಕರ ಬಗ್ಗೆ:

• ಝಿನೊ ಹದಿ: ಸುಲೈಮಾನಿಯಾದಲ್ಲಿ ಜನಿಸಿದ ಝಿನೋ ಪತ್ರಿಕೋದ್ಯಮದಲ್ಲಿ ಪದವಿ ಪಡೆದರು, ನಂತರ ಸುಲೈಮಾನಿಯಾ ವಿಶ್ವವಿದ್ಯಾಲಯದಿಂದ ಸಿನಿಮಾ ವಿಷಯದಲ್ಲಿ ಪದವಿ ಪಡೆದರು.

"ಏಷ್ಯನ್ ವುಮೆನ್ ಫಿಲ್ಮ್ ಮೇಕರ್ಸ್" ಪ್ಯಾಕ್ ಸಿನಿಮಾದಲ್ಲಿನ ಮಹಿಳೆಯರ ಧ್ವನಿಯ ಶಕ್ತಿ ಮತ್ತು ಸಮಾನತೆಯು ಅವರ ಅನ್ವೇಷಣೆಗೆ ಸಾಕ್ಷಿಯಾಗಿದೆ. ಈ ಚಲನಚಿತ್ರಗಳು ಮಹಿಳೆಯರಿಗಾಗಿ ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ಕಣ್ಣುಗಳ ಮೂಲಕ ಜಗತ್ತನ್ನು ನೋಡಲು ಪ್ರೇರೇಪಿಸುತ್ತವೆ ಮತ್ತು ಸವಾಲು ಹಾಕುತ್ತವೆ.

*****


(Release ID: 2026354) Visitor Counter : 63