ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಎಂಐಎಫ್ಎಫ್ 2024 ರ ರಾಷ್ಟ್ರೀಯ ಸ್ಪರ್ಧೆಯಲ್ಲಿ ಮಾನ್ಯತೆಗಾಗಿ 77 ಚಲನಚಿತ್ರಗಳು ಸ್ಪರ್ಧಿಸುತ್ತಿವೆ


ಸಾಕ್ಷ್ಯಚಿತ್ರ, ಕಿರುಚಿತ್ರ ಮತ್ತು ಅನಿಮೇಷನ್ ವಿಭಾಗದಲ್ಲಿ ಅತ್ಯುತ್ತಮ ಚಿತ್ರಗಳಿಗೆ ಬೆಳ್ಳಿಯ ಶಂಖ ಪ್ರಶಸ್ತಿ

18ನೇ ಎಂಐಎಫ್ಎಫ್ ನಲ್ಲಿ 'ಇಂಡಿಯಾ ಇನ್ ಅಮೃತ್ ಕಾಲ್' ಕಿರುಚಿತ್ರಕ್ಕೆ ವಿಶೇಷ ಪ್ರಶಸ್ತಿ

ತರಗತಿಗಳಿಂದ ಸ್ಪರ್ಧೆಯತ್ತ : ಎಂಐಎಫ್ಎಫ್ 2024 ರಲ್ಲಿ ರಾಷ್ಟ್ರೀಯ ಸ್ಪರ್ಧೆಯ ಅಡಿಯಲ್ಲಿ ಸ್ಪರ್ಧಿಸುತ್ತಿವೆ 12 ವಿದ್ಯಾರ್ಥಿ ಚಲನಚಿತ್ರಗಳು

Posted On: 16 JUN 2024 2:48PM by PIB Bengaluru

18 ನೇ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಎಂಐಎಫ್ಎಫ್) ಭಾರತೀಯ ಸಿನೆಮಾದ ರೋಮಾಂಚಕ ಚಿತ್ರಪಟವನ್ನು ಪ್ರದರ್ಶಿಸುವ ಮೂಲಕ ಸಿನಿಮೀಯ ಶ್ರೇಷ್ಠತೆಯ ಅನ್ವೇಷಣೆಯು ಹೊಸ ವೇದಿಕೆಯನ್ನು ಏರಲಿದೆ. ದಾಖಲೆಯ 840 ಸಲ್ಲಿಕೆಗಳೊಂದಿಗೆ, ಉತ್ಸವವು ರಾಷ್ಟ್ರೀಯ ಸ್ಪರ್ಧೆಯಲ್ಲಿ ಸ್ಪರ್ಧಿಸುವ 77 ಚಲನಚಿತ್ರಗಳ ನಿಖರವಾದ ಆಯ್ಕೆಯನ್ನು ಅನಾವರಣಗೊಳಿಸುತ್ತದೆ. ರಾಷ್ಟ್ರೀಯ ಸ್ಪರ್ಧೆಯ ಅಡಿಯಲ್ಲಿ ಸ್ಪರ್ಧಿಸುವ ಚಲನಚಿತ್ರಗಳನ್ನು ಭಾರತೀಯ ನಾಗರಿಕರು 2022 ರ ಜನವರಿ 01   ಮತ್ತು 2023 ರ ಡಿಸೆಂಬರ್ 31 ರ ನಡುವೆ ಭಾರತದಲ್ಲಿ ನಿರ್ಮಾಣ ಮಾಡಿದಂತಹವಾಗಿವೆ.

ಜೂನ್ 15 ರಿಂದ 21 ರವರೆಗೆ ನಡೆಯಲಿರುವ ಈ ವರ್ಷದ ಎಂಐಎಫ್ಎಫ್ ಭಾರತೀಯ ಸಿನೆಮಾದ ಭವಿಷ್ಯವನ್ನು ಪ್ರಚುರಪಡಿಸುತ್ತದೆ. ಚೊಚ್ಚಲ ನಿರ್ದೇಶಕರ ಗಮನಾರ್ಹ 30 ಚಲನಚಿತ್ರಗಳು ಮತ್ತು 12 ವಿದ್ಯಾರ್ಥಿ ಕೃತಿಗಳು ಸ್ಪರ್ಧೆಗಳಲ್ಲಿ ಸ್ಥಾನ ಪಡೆದಿವೆ. ಅನ್ವೇಷಿಸಲು/ಅನಾವರಣಗೊಳ್ಳಲು ಕಾಯುತ್ತಿರುವ ಹೊಸ ದೃಷ್ಟಿಕೋನಗಳು ಮತ್ತು ಕಥೆಗಳಿಂದ ಆಕರ್ಷಿತರಾಗಲು ಸಿದ್ಧರಾಗಿ. ರಾಷ್ಟ್ರೀಯ ಸ್ಪರ್ಧೆಯ ಅಡಿಯಲ್ಲಿ ಇರುವ ಚಲನಚಿತ್ರಗಳ ಸಂಪೂರ್ಣ ಪಟ್ಟಿಯನ್ನು ನೀವು ಇಲ್ಲಿ ಕಾಣಬಹುದು. https://miff.in/wp-content/uploads/2024/06/National-Competition-MIFF-2024.pdf

ರಾಷ್ಟ್ರೀಯ ಸ್ಪರ್ಧೆಯ ಅಡಿಯಲ್ಲಿ ಮೂರು ವಿಭಾಗಗಳಲ್ಲಿ ಚಲನಚಿತ್ರಗಳು ಸ್ಪರ್ಧಿಸುತ್ತಿವೆ:

ರಾಷ್ಟ್ರೀಯ ಸಾಕ್ಷ್ಯಚಿತ್ರ ಸ್ಪರ್ಧೆ: ಈ ವಿಭಾಗವು 30 ಚಿಂತನಶೀಲ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುತ್ತದೆ.
ರಾಷ್ಟ್ರೀಯ ಸ್ಪರ್ಧೆ: ಕಿರು ಕಥಾ/ ಕಾದಂಬರಿ ಮತ್ತು ಅನಿಮೇಷನ್: ಸಣ್ಣ ಕಾದಂಬರಿ ಮತ್ತು ಅನಿಮೇಷನ್ ಪ್ರಕಾರಗಳನ್ನು ಒಳಗೊಂಡ 41 ಚಲನಚಿತ್ರಗಳೊಂದಿಗೆ ಕಥೆ ಹೇಳುವ ಶಕ್ತಿಯನ್ನು ವೀಕ್ಷಿಸಬಹುದು. 
ರಾಷ್ಟ್ರೀಯ ಸ್ಪರ್ಧೆ: "ಅಮೃತ್ ಕಾಲ್ ನಲ್ಲಿ ಭಾರತ”: ಈ ವಿಷಯದ ಸುತ್ತ ಕೇಂದ್ರೀಕೃತವಾದ ಆರು ವಿಶೇಷ ಚಲನಚಿತ್ರಗಳ ಮೂಲಕ ರಾಷ್ಟ್ರದ ಭವಿಷ್ಯವನ್ನು ಅನ್ವೇಷಿಸಿ.

ವಿಜೇತ ಚಲನಚಿತ್ರಗಳು ಮತ್ತು ಚಲನಚಿತ್ರ ನಿರ್ಮಾಪಕರಿಗೆ ಕಾಯುತ್ತಿರುವ ಪ್ರತಿಷ್ಠಿತ ಪ್ರಶಸ್ತಿಗಳು (ಕೆಳಗೆ ಪಟ್ಟಿ ಮಾಡಲಾಗಿದೆ) ಅವರ ಭಾಗೀದಾರಿಕೆಯನ್ನು ಮತ್ತಷ್ಟು ಎತ್ತರಿಸುತ್ತವೆ, ಎಂಐಎಫ್ಎಫ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುವುದು ನಿಜವಾಗಿಯೂ ಸ್ಪೂರ್ತಿಯುತ ಹಬ್ಬದಂತೆ.

ಪ್ರಶಸ್ತಿಗಳ ವಿಭಜನೆವಾರು ವಿವರ ಇಲ್ಲಿದೆ

ರಾಷ್ಟ್ರೀಯ ಸ್ಪರ್ಧಾ  ಪ್ರಶಸ್ತಿಗಳು:

ಅತ್ಯುತ್ತಮ ಭಾರತೀಯ ಸಾಕ್ಷ್ಯಚಿತ್ರ: ಬೆಳ್ಳಿ ಶಂಖ ಮತ್ತು 5 ಲಕ್ಷ ರೂ.ಗಳ ನಗದು ಬಹುಮಾನವನ್ನು ಪಡೆಯುತ್ತದೆ.
ಅತ್ಯುತ್ತಮ ಭಾರತೀಯ ಕಿರುಚಿತ್ರ (30 ನಿಮಿಷಗಳವರೆಗೆ): ಬೆಳ್ಳಿ ಶಂಖ ಮತ್ತು 3 ಲಕ್ಷ ರೂ.ಗಳ ನಗದು ಬಹುಮಾನವನ್ನು ಪಡೆಯುತ್ತದೆ.
ಅತ್ಯುತ್ತಮ ಭಾರತೀಯ ಅನಿಮೇಷನ್ ಚಿತ್ರ: ಬೆಳ್ಳಿ  ಶಂಖ ಮತ್ತು 3 ಲಕ್ಷ ರೂಪಾಯಿ ನಗದು ಬಹುಮಾನ.
ಅತ್ಯುತ್ತಮ ಚೊಚ್ಚಲ ಚಿತ್ರ (ಪ್ರಾಯೋಜಿತ ಪ್ರಶಸ್ತಿ): ಟ್ರೋಫಿ ಮತ್ತು 1 ಲಕ್ಷ ರೂ.ಗಳ ನಗದು ಬಹುಮಾನವನ್ನು ಪಡೆಯುತ್ತದೆ.
ಅತ್ಯುತ್ತಮ ವಿದ್ಯಾರ್ಥಿ ಚಲನಚಿತ್ರ (ಪ್ರಾಯೋಜಿತ ಪ್ರಶಸ್ತಿ): ಟ್ರೋಫಿ ಮತ್ತು 1 ಲಕ್ಷ ರೂ.ಗಳ ನಗದು ಬಹುಮಾನವನ್ನು ಪಡೆಯುತ್ತದೆ.
 "ಇಂಡಿಯಾ ಇನ್ ಅಮೃತ್ ಕಾಲ್" ಕುರಿತ ಅತ್ಯುತ್ತಮ ಕಿರುಚಿತ್ರಕ್ಕಾಗಿ ವಿಶೇಷ ಪ್ರಶಸ್ತಿ (15 ನಿಮಿಷಗಳವರೆಗೆ): ಭಾರತೀಯ ಚಲನಚಿತ್ರ ನಿರ್ಮಾಪಕರಿಗೆ ಮಾತ್ರ ಮುಕ್ತವಾಗಿರುವ ಈ ಪ್ರಶಸ್ತಿಯು ಟ್ರೋಫಿ ಮತ್ತು 1 ಲಕ್ಷ ರೂ.ಗಳ ನಗದು ಬಹುಮಾನವನ್ನು ಒಳಗೊಂಡಿದೆ.

 

ತಾಂತ್ರಿಕ ಪ್ರಶಸ್ತಿಗಳು (ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗೆ ಸಾಮಾನ್ಯ):
ಛಾಯಾಗ್ರಹಣ: ಪ್ರಮಾಣಪತ್ರ ಮತ್ತು 3 ಲಕ್ಷ ರೂ.ಗಳ ನಗದು ಬಹುಮಾನವನ್ನು ಪಡೆಯುತ್ತದೆ.
ಸಂಕಲನ/ ಎಡಿಟಿಂಗ್: ಪ್ರಮಾಣಪತ್ರ ಮತ್ತು 3 ಲಕ್ಷ ರೂ.ಗಳ ನಗದು ಬಹುಮಾನವನ್ನು ಪಡೆಯುತ್ತದೆ.
 ಧ್ವನಿ ವಿನ್ಯಾಸ: ಪ್ರಮಾಣಪತ್ರ ಮತ್ತು 3 ಲಕ್ಷ ರೂ.ಗಳ ನಗದು ಬಹುಮಾನವನ್ನು ಪಡೆಯುತ್ತದೆ.


ಹೆಚ್ಚುವರಿ ಪರಿಗಣನೆ/ಗುರುತಿಸುವಿಕೆ:
ಫಿಪ್ರೆಸ್ಸಿ ಜ್ಯೂರಿ ಪ್ರಶಸ್ತಿ: ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಫಿಲ್ಮ್ ಕ್ರಿಟಿಕ್ಸ್ (ಎಫ್.ಐ.ಪಿ.ಆರ್.ಇ ಎಸ್.ಸಿ.ಐ.)ನ್ನು ಪ್ರತಿನಿಧಿಸುವ ಮೂವರು ಪ್ರಖ್ಯಾತ ಚಲನಚಿತ್ರ ವಿಮರ್ಶಕರು ರಾಷ್ಟ್ರೀಯ ಸ್ಪರ್ಧೆಯಲ್ಲಿ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ರಾಷ್ಟ್ರೀಯ ಸ್ಪರ್ಧೆಯ ತೀರ್ಪುಗಾರರು

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರ ದಿಗ್ಗಜರ ಪ್ರತಿಷ್ಠಿತ ಸಮಿತಿಯು ರಾಷ್ಟ್ರೀಯ ಸ್ಪರ್ಧೆಯ ತೀರ್ಪುಗಾರರ ಜವಾಬ್ದಾರಿಯನ್ನು ನಿಭಾಯಿಸಲಿದೆ. ಅವರ ಪರಿಣತಿ ಮತ್ತು ಅನುಭವವು ವಿವೇಚನಾಶೀಲ ಆಯ್ಕೆ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ.
ಜರ್ಮನ್ ಚಲನಚಿತ್ರ ನಿರ್ಮಾಪಕ ಅಡೆಲೆ ಸೀಲ್ಮನ್ (ದಾಸ್ ವೀಬೆ ರೌಶೆನ್, ಅಲೆಸ್ ಔಫ್ ಡೈ ಸೀಬ್ಜೆನ್), ಚಲನಚಿತ್ರ ನಿರ್ಮಾಪಕ ಡಾ.ಬಾಬಿ ಶರ್ಮಾ ಬರುವಾ (ಮಿಶಿಂಗ್, ಸೋನಾರ್ ಬರನ್ ಪಾಖಿ), ಆನಿಮೇಟರ್ ಮುಂಜಾಲ್ ಶ್ರಾಫ್ (ಕ್ರಿಶ್, ಟ್ರಿಶ್ ಮತ್ತು ಬಾಲ್ಟಿಬಾಯ್), ಚಲನಚಿತ್ರ ನಿರ್ಮಾಪಕ ಅಪೂರ್ವ ಬಕ್ಷಿ (ದಿಲ್ಲಿನ್ ಕ್ರೈಮ್) ಮತ್ತು ಜರ್ಮನ್ ಚಲನಚಿತ್ರ ನಿರ್ಮಾಪಕಿ ಅನ್ನಾ ಹೆಂಕೆಲ್-ಡೊನರ್ಸ್ಮಾರ್ಕ್ ಈ ವರ್ಷದ ರಾಷ್ಟ್ರೀಯ ಸ್ಪರ್ಧೆಯ ತೀರ್ಪುಗಾರ ಮಂಡಳಿಯ ಸದಸ್ಯರಾಗಿದ್ದಾರೆ. 

ಅತ್ಯುತ್ತಮ ಭಾರತೀಯ ಸಾಕ್ಷ್ಯಚಿತ್ರ, ಕಿರುಚಿತ್ರ, ಅನಿಮೇಷನ್, ಅತ್ಯುತ್ತಮ ಚೊಚ್ಚಲ ಚಿತ್ರ, ಅತ್ಯುತ್ತಮ ವಿದ್ಯಾರ್ಥಿ ಚಲನಚಿತ್ರ ಮತ್ತು ತಾಂತ್ರಿಕ ಪ್ರಶಸ್ತಿಗಳು ಸೇರಿದಂತೆ ರಾಷ್ಟ್ರೀಯ ಸ್ಪರ್ಧೆ ಪ್ರಶಸ್ತಿಗಳನ್ನು ತೀರ್ಪುಗಾರರು ಪ್ರದಾನ ಮಾಡಲಿದ್ದಾರೆ. "ಇಂಡಿಯಾ ಇನ್ ಅಮೃತ್ ಕಾಲ್" ಕುರಿತ ಅತ್ಯುತ್ತಮ ಕಿರುಚಿತ್ರಕ್ಕಾಗಿ ವಿಶೇಷ ಪ್ರಶಸ್ತಿಯ ವಿಜೇತರನ್ನು ಸಹ ಅವರು ಆಯ್ಕೆ ಮಾಡಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ http://www.miff.in ಗೆ ಲಾಗ್ ಆನ್ ಮಾಡಿ.

*****



(Release ID: 2025802) Visitor Counter : 15