ಹಣಕಾಸು ಸಚಿವಾಲಯ

ಶ್ರೀ ಪಂಕಜ್ ಚೌಧರಿ ಅವರು ಹಣಕಾಸು ಸಚಿವಾಲಯದಲ್ಲಿ ಹಣಕಾಸು ಖಾತೆ ಸಚಿವರಾಗಿ ಸತತ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡರು

Posted On: 11 JUN 2024 7:14PM by PIB Bengaluru

ಶ್ರೀ ಪಂಕಜ್ ಚೌಧರಿ ಅವರು ಹಣಕಾಸು ಸಚಿವಾಲಯದಲ್ಲಿ ಸತತ ಎರಡನೇ ಅವಧಿಗೆ ಹಣಕಾಸು ಸಹಾಯಕ ಸಚಿವರಾಗಿ ಇಂದು ಹೊಸದಿಲ್ಲಿ ಅಧಿಕಾರ ವಹಿಸಿಕೊಂಡರು.

 

59 ವರ್ಷದ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಸತ್ ಸದಸ್ಯರಾಗಿ (ಎಂಪಿ) ಏಳನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು 18 ನೇ ಲೋಕಸಭಗೆ ಅವರು ಉತ್ತರ ಪ್ರದೇಶದ ಮಹಾರಾಜ್ ಗಂಜ್ ನಿಂದ ಆಯ್ಕೆಯಾಗಿದ್ದಾರೆ.

ಅಧಿಕಾರ ವಹಿಸಿಕೊಂಡ ನಂತರ ಶ್ರೀ ಚೌಧರಿ ಅವರು ಹಣಕಾಸು ಕಾರ್ಯದರ್ಶಿ ಡಾ. ಟಿ.ವಿ. ಸೋಮನಾಥನ್ ಮತ್ತು ಹಣಕಾಸು ಸಚಿವಾಲಯದ ಇತರ ಕಾರ್ಯದರ್ಶಿಗಳು ಹಾಗು ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರೊಂದಿಗೆ ಸಂಕ್ಷಿಪ್ತ ಸಂವಾದ ನಡೆಸಿದರು.

 

ಮೂರು ದಶಕಗಳಿಂದ ಸಾರ್ವಜನಿಕ ಸೇವೆಯಲ್ಲಿ ಸಕ್ರಿಯರಾಗಿರುವ ಶ್ರೀ ಚೌಧರಿ ಅವರು ಈ ಹಿಂದೆ ಗೋರಖ್ ಪುರದ  ಉಪ ಮೇಯರ್ ಹುದ್ದೆಯನ್ನು  ಕೂಡ  ನಿರ್ವಹಿಸಿದ್ದಾರೆ. ಶ್ರೀ ಚೌಧರಿ ಅವರು ಗೋರಖ್ ಪುರ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.

ಕಳೆದ ಹಲವು ವರ್ಷಗಳಿಂದ, ಶ್ರೀ ಚೌಧರಿ ಅವರು ಅನೇಕ ಸಂಸದೀಯ ಸಮಿತಿಗಳ ಸದಸ್ಯರಾಗಿದ್ದಾರೆ, ಅವುಗಳಲ್ಲಿ ಗಮನಾರ್ಹವಾದವುಗಳೆಂದರೆ ಸಾರ್ವಜನಿಕ ಉದ್ಯಮಗಳ ಸಮಿತಿ; ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (ಎಂಪಿಎಲ್ಎಡಿಎಸ್) ಸಮಿತಿ; ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸ್ಥಾಯಿ ಸಮಿತಿ; ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸಮಾಲೋಚನಾ /ಸಲಹಾ ಸಮಿತಿ; ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸ್ಥಾಯಿ ಸಮಿತಿ; ಮತ್ತು ರೈಲ್ವೆ ಸ್ಥಾಯಿ ಸಮಿತಿ.

*****
 (Release ID: 2024968) Visitor Counter : 18