ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾಗಿ ಶ್ರೀ ಹರ್ದೀಪ್ ಸಿಂಗ್ ಪುರಿ ಅಧಿಕಾರ ಸ್ವೀಕಾರ


2025ರ ವೇಳೆಗೆ 20% ಎಥೆನಾಲ್ ಮಿಶ್ರಣದ ಗುರಿ ಸಾಧಿಸಲು ಸರ್ಕಾರ ಹೊಂದಿರುವ ಬದ್ಧತೆ ಪುನರುಚ್ಚರಿಸಿದ ಸಚಿವರು

Posted On: 11 JUN 2024 6:37PM by PIB Bengaluru

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾಗಿ ಶ್ರೀ ಹರ್ದೀಪ್ ಸಿಂಗ್ ಪುರಿ ಅವರಿಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.


ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀ ಹರ್ದೀಪ್ ಸಿಂಗ್ ಪುರಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಇಂಧನ ಲಭ್ಯತೆ, ಸುಲಭವಾಗಿ ಕೈಗೆಟುಕುವಿಕೆ ಮತ್ತು ಸುಸ್ಥಿರ ಇಂಧನ ಲಭ್ಯತೆಯ 3 ದೃಷ್ಟಿಕೋನಗಳನ್ನು ಯಶಸ್ವಿಯಾಗಿ ಈಡೇರಿಸಿದೆ. ಅದೇ ನಮ್ಮ ನೆರೆಹೊರೆಯ ರಾಷ್ಟ್ರಗಳಲ್ಲಿ ಮತ್ತು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲೂ ಸಹ ಇಂಧನಕ್ಕಾಗಿ ಹೋರಾಟ ನಡೆಸುತ್ತಿವೆ. ಅಲ್ಲಿ ಇಂಧನ ಕೊರತೆ ಮತ್ತು ಇಂಧನ ಬೆಲೆ ಏರಿಳಿತಗಳು ಕಾಡುತ್ತಿವೆ. ಎರಡೂವರೆ ವರ್ಷಗಳ ಉಲ್ಲೇಖ ಅವಧಿಯಲ್ಲಿ ಇಂಧನ ಬೆಲೆಗಳು ಕಡಿಮೆಯಾದ ವಿಶ್ವದ ಏಕೈಕ ದೇಶ ಭಾರತ ಎಂದರು.

2014ರಲ್ಲಿ ನಮ್ಮ ಎಲ್‌ಪಿಜಿ ಸಂಪರ್ಕಗಳು ಕೇವಲ 14 ಕೋಟಿ ಇದ್ದವು, ಕೇವಲ 55% ಜನಸಂಖ್ಯೆ ಮಾತ್ರ ಎಲ್‌ಪಿಜಿ ಸಿಲಿಂಡರ್‌ಗಳನ್ನು ಹೊಂದಿತ್ತು. ಅದೀಗ 32 ಕೋಟಿಗೆ ತಲುಪಿದೆ. ನಮ್ಮ ಉಜ್ವಲ ಯೋಜನೆಯು ಅತ್ಯಂತ ಯಶಸ್ವಿಯಾಗಿರುವುದರಿಂದ ಎಲ್ಲಾ ತಾಯಂದಿರು ಮತ್ತು ಸಹೋದರಿಯರು ಈಗ ಎಲ್‌ಪಿಜಿಗೆ ಪ್ರವೇಶ ಹೊಂದಿದ್ದಾರೆ ಎಂದು ಸಚಿವರು ಹೇಳಿದರು.

ತೈಲ ಪರಿಶೋಧನೆ ಮತ್ತು ಉತ್ಪಾದನೆ ಕುರಿತು ಮಾತನಾಡಿದ ಶ್ರೀ ಪುರಿ, 98/2 ಬಾವಿಯಿಂದ ತೈಲ ಉತ್ಪಾದನೆಯು ದಿನಕ್ಕೆ 45,000 ಬ್ಯಾರೆಲ್‌ಗಳಿಗೆ ಅತಿಶೀಘ್ರವೇ ಏರಿಕೆ ಕಾಣಲಿದೆ, ಶೀಘ್ರದಲ್ಲೇ ಅನಿಲ ಉತ್ಪಾದನೆಯೂ ಪ್ರಾರಂಭವಾಗಲಿದೆ ಎಂದರು. "ಪಶ್ಚಿಮ ಕಡಲಾಚೆಯ ಭಾಗಕ್ಕೆ ಒಎನ್ ಜಿಸಿ ಈಗಾಗಲೇ ಅಂತಾರಾಷ್ಟ್ರೀಯ ತಂತ್ರಜ್ಞಾನ ಪಾಲುದಾರರನ್ನು ಪಡೆಯಲು ಟೆಂಡರ್ ಆಹ್ವಾನಿಸಿದೆ. 75 ಶತಕೋಟಿ ಡಾಲರ್ ಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಎಲ್ಲಾ ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ತಯಾರಿಕಾ ಕಂಪನಿಗಳನ್ನು ಈ ಟೆಂಡರ್‌ನಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು.

2025ರ ವೇಳೆಗೆ 20% ಎಥೆನಾಲ್ ಮಿಶ್ರಣ ಗುರಿ ಸಾಧಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವರು, "ಮೇ ತಿಂಗಳಲ್ಲಿ ಮಾತ್ರ ನಾವು 15% ಎಥೆನಾಲ್ ಮಿಶ್ರಣವನ್ನು ದಾಟಲು ಸಾಧ್ಯವಾಯಿತು". ನಿಮಗೆ ತಿಳಿದಿರುವಂತೆ, 2030ರ ವೇಳೆಗೆ ಪ್ರಧಾನ ಮಂತ್ರಿ ಅವರೇ ಮೂಲತಃ 20% ಎಥೆನಾಲ್ ಮಿಶ್ರಣ ಗುರಿ ಹೊಂದಿದ್ದರು. ನಾನು ನೋಡಿದ ಆಧಾರದ ಮೇಲೆ ಮತ್ತು ಪ್ರಗತಿಯಲ್ಲಿರುವ ಕೆಲಸಗಳ ಆಧಾರದ ಮೇಲೆ, 20% ಮಿಶ್ರಣವನ್ನು ನಾನು ಸಮಂಜಸವಾಗಿ ನಂಬುತ್ತೇನೆ. 2030ರಿಂದ 2025ರ ವರೆಗೆ ಮುಂದಕ್ಕೆ ತಂದ ಗುರಿಯನ್ನು 2025ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಶುದ್ಧೀಕರಣ ಪ್ರಕ್ರಿಯೆಯಲ್ಲಿ ಹಸಿರು ಹೈಡ್ರೋಜನ್ ಸಂಯೋಜಿಸುವ ಸರ್ಕಾರದ ಸಮರ್ಪಣೆಯನ್ನು ಪ್ರಸಾತ್ಪಿಸಿದ ಶ್ರೀ ಪುರಿ, ಪಾಣಿಪತ್ (10 ಕೆಟಿಎ), ಮಥುರಾ (5 ಕೆಟಿಎ) ಮತ್ತು ಪರದೀಪ್(10 ಕೆಟಿಎ) ಸಂಸ್ಕರಣಾಗಾರಗಳಲ್ಲಿ ಹಸಿರು ಹೈಡ್ರೋಜನ್ ಘಟಕಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಹೇಳಿದರು. “ಮೊದಲ ಹಸಿರು ಹೈಡ್ರೋಜನ್ ಸ್ಥಾವರವನ್ನು(10 ಮೆವ್ಯಾ) 2024 ಮೇ 27ರಂದು ಚುನಾವಣೆ ನಡೆಯುತ್ತಿದ್ದರೂ ಕಾರ್ಯಾರಂಭ ಮಾಡಲಾಯಿತು. ನಮ್ಮ ಹಲವು ತೈಲ ಪಿಎಸ್‌ಯುಗಳು ಹಸಿರು ಹೈಡ್ರೋಜನ್ ಪೂರೈಕೆಗಾಗಿ ಟೆಂಡರ್ ನೀಡುವ ಪ್ರಕ್ರಿಯೆಯಲ್ಲಿವೆ. ಕೊಚ್ಚಿಯಲ್ಲಿ ಹಸಿರು ಹೈಡ್ರೋಜನ್ ನಿಲ್ದಾಣವನ್ನು ಕೊಚ್ಚಿ ವಿಮಾನ ನಿಲ್ದಾಣದಿಂದ ಬಸ್ ಸಂಚಾರಕ್ಕೆ ನಿಯೋಜಿಸಲಾಗಿದೆ.

ಸಂಸ್ಕರಣಾ ವಲಯದ ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದ ಶ್ರೀ ಪುರಿ, ಗ್ರೀನ್‌ಫೀಲ್ಡ್ ಸಂಸ್ಕರಣಾಗಾರಗಳನ್ನು ಸ್ಥಾಪಿಸಲು ಬಿಪಿಸಿಎಲ್ ಸುಧಾರಿತ ಹಂತದಲ್ಲಿದೆ. ಗೇಲ್ ಪೆಟ್ರೋಕೆಮಿಕಲ್‌ಗಳಿಗಾಗಿ ಈಥೇನ್ ಕ್ರ್ಯಾಕರ್ ಘಟಕ ಸ್ಥಾಪನೆಯ ಬಗ್ಗೆ ಯೋಜಿಸಲಾಗುತ್ತಿದೆ. ಬಿಪಿಸೆಲ್ ನ ಬಿನಾ ಸಂಸ್ಕರಣಾಗಾರ ಬರುತ್ತಿದೆ ಮತ್ತು ಕಾವೇರಿ ಜಲಾನಯನ ಸಂಸ್ಕರಣಾಗಾರವು ಐಒಸಿಎಲ್ ನಿಂದ ಚೆನ್ನೈನಲ್ಲಿ ಬರುತ್ತಿದೆ" ಎಂದು ಸಚಿವರು ಹೇಳಿದರು.

*****



(Release ID: 2024948) Visitor Counter : 14