ಸಹಕಾರ ಸಚಿವಾಲಯ

ಕೇಂದ್ರ ಸಹಕಾರ ಸಚಿವರಾಗಿ ಶ್ರೀ ಅಮಿತ್ ಶಾ ಅಧಿಕಾರ ಸ್ವೀಕಾರ


ಸಹಕಾರ ಸಚಿವಾಲಯವು 'ಸಹಕಾರ ಸೇ ಸಮೃದ್ಧಿ' ಮಂತ್ರವನ್ನು ಅನುಸರಿಸಿ ರೈತರನ್ನು ಸಬಲೀಕರಣಗೊಳಿಸುವ ಮೂಲಕ ಗ್ರಾಮೀಣ ಮತ್ತು ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸಲು ಕೆಲಸ ಮಾಡುತ್ತದೆ.

ಸಹಕಾರಿ ಸಂಘಗಳಿಗೆ ಸಂಬಂಧಿಸಿದ ಕೋಟ್ಯಂತರ ಜನರ ಜೀವನದಲ್ಲಿ ಹೊಸ ಅವಕಾಶಗಳನ್ನು ಒದಗಿಸುವ ಮೂಲಕ ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಸರ್ಕಾರ ಬದ್ಧವಾಗಿದೆ.

Posted On: 11 JUN 2024 7:01PM by PIB Bengaluru

ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯ ಅಟಲ್ ಅಕ್ಷಯ್ ಊರ್ಜಾ ಭವನದಲ್ಲಿ ಸಹಕಾರ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

IMG_0043.JPG

ಅಧಿಕಾರ ವಹಿಸಿಕೊಂಡ ನಂತರ ಶ್ರೀ ಅಮಿತ್ ಶಾ ಅವರು ಸಾಮಾಜಿಕ ಮಾಧ್ಯಮ X ನಲ್ಲಿ ಪೋಸ್ಟ್ ಮಾಡಿದ್ದಾರೆ. 

 

IMG_0026.JPG

 

“ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರ ‘ಸಹಕಾರ್ ಸೇ ಸಮೃದ್ಧಿ’ಯ ದೃಷ್ಟಿಯಂತೆ ರೈತರನ್ನು ಸಬಲೀಕರಣಗೊಳಿಸುವ ಮೂಲಕ ಗ್ರಾಮೀಣ ಆರ್ಥಿಕತೆಯ ಜೊತೆಗೆ ದೇಶದ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಹಕಾರ ಸಚಿವಾಲಯವು ಕೆಲಸ ಮಾಡುವುದನ್ನು ಮುಂದುವರಿಸುತ್ತದೆ. ಸಹಕಾರದ ಕಲ್ಪನೆಯನ್ನು ಸಶಕ್ತಗೊಳಿಸುವುದರೊಂದಿಗೆ ಈ ವಲಯಕ್ಕೆ ಸಂಬಂಧಿಸಿದ ಕೋಟ್ಯಂತರ ಜನರ ಜೀವನದಲ್ಲಿ ಅವರಿಗೆ ಹೊಸ ಅವಕಾಶಗಳನ್ನು ನೀಡುವ ಮೂಲಕ ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ನಮ್ಮ ಸರ್ಕಾರ ಬದ್ಧವಾಗಿದೆ. ಇಂದು ನನಗೆ ಮೋದಿ 3.0 ರಲ್ಲಿ ಮತ್ತೆ ಸಹಕಾರ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುವ ಭಾಗ್ಯ ಸಿಕ್ಕಿದೆ" ಎಂದು ಅಮಿತ್‌ ಶಾ ಸಂದೇಶ ನೀಡಿದ್ದಾರೆ.

*****



(Release ID: 2024792) Visitor Counter : 22