ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ರಾಷ್ಟ್ರಪತಿಯವರನ್ನು ಭೇಟಿ ಮಾಡಿದ ನೇಪಾಳದ ಪ್ರಧಾನಮಂತ್ರಿ
प्रविष्टि तिथि:
10 JUN 2024 6:12PM by PIB Bengaluru
ನೇಪಾಳದ ಪ್ರಧಾನಮಂತ್ರಿಯವರಾದ ಶ್ರೀ ಪುಷ್ಪ ಕಮಲ್ ದಹಲ್, 'ಪ್ರಚಂಡ' ಅವರು ಇಂದು (ಜೂನ್ 10, 2024ರಂದು) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.
ಈ ಭೇಟಿಯ ಅವಧಿಯಲ್ಲಿ, ಭಾರತದ 'ನೆರೆಹೊರೆಯವರು ಮೊದಲು' ನೀತಿಯ ಅಡಿಯಲ್ಲಿ ನೇಪಾಳವು ಮೊದಲ ಆದ್ಯತೆಯ ಪಾಲುದಾರನಾಗಿದೆ ಎಂದು ತಿಳಿಸಿದ ರಾಷ್ಟ್ರಪತಿಯವರು, ತಮ್ಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದು ಭಾರತದ ಬದ್ಧತೆಯಾಗಿದೆ ಎಂದು ಹೇಳಿದರು. ಉಭಯ ನಾಯಕರು ಎರಡೂ ದೇಶಗಳ ಜನರಿಗೆ ಪ್ರಯೋಜನಕಾರಿಯಾಗುವ ನೇಪಾಳದ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಉಪಕ್ರಮಗಳನ್ನು ಮುಂದುವರಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.
*****
(रिलीज़ आईडी: 2023864)
आगंतुक पटल : 72